ಗಿಲ್ಲಿಯನ್ ಆಲ್ನಾಟ್
ಗಿಲ್ಲಿಯನ್ ಆಲ್ನಾಟ್
ಜನನ : ೧೫ ಜನವರಿ ೧೯೪೯ (ವಯಸ್ಸು ೬೮), ಲಂಡನ್, ಯುನೈಟೆಡ್ ಕಿಂಗ್ಡಮ್
ಶಿಕ್ಷಣ : ಸಸೆಕ್ಸ್ ವಿಶ್ವವಿದ್ಯಾಲಯ
ಗಿಲ್ಲಿಯನ್ ಆಲ್ನಾಟ್
[ಬದಲಾಯಿಸಿ]ಗಿಲ್ಲಿಯನ್ ಆಲ್ನಾಟ್ ರವರು ೧೫ ಜನವರಿ ೧೯೪೯ ರಂದು ಲಂಡನ್ನಿನಲ್ಲಿ ಜನಿಸಿದರು. ಆಲ್ನಾಟ್ ಲಂಡನ್ನಲ್ಲಿ ಜನಿಸಿದರೂಸಹಾ ಅವರು ನ್ಯೂಕ್ಯಾಸಲ್ ಅಪಾನ್ ಟೈನ್ನಲ್ಲ ಅರ್ಧದಷ್ಟು ಬಾಲ್ಯವನ್ನು ಕಳೆದರು ಮತ್ತು ಇವರು ತಮ್ಮ ಬಾಲ್ಯದ ವಿಧ್ಯಾಭ್ಯಾಸವನ್ನು ಸಹ ಅಲ್ಲಿಯೇ ಮುಗಿಸಿದರು. ನಂತರ ಇವರು ಸಸೆಕ್ಸ್ ವಿಶ್ವವಿಧ್ಯಲಯದಲ್ಲಿ ತಮ್ಮ ಓದನ್ನು ಮುಂದುವರಿಸಿದರು. ಇವರು ಬಲು ಪ್ರಸಿದ್ದವಾದ ಕೇಂಬ್ರಿಜ್ನಲ್ಲಿನ ನ್ಯೂನ್ಹ್ಯಾ ಮ್ ಕಾಲೇಜ್ಗೆ ಸೇರಿ ತಮ್ಮ ವಿಧ್ಯಭ್ಯಾಸವನ್ನು ಪುರ್ಣಗೊಳಿಸಿದರು. ೧೯೮೮ರಲ್ಲಿ ಉತ್ತರ ಪೂರ್ವಕ್ಕೆ ಹಿಂದಿರುಗಿದರು. ಈಗ ಪ್ರಸ್ತುತವಾಗಿ ಇವರು ಕೌಂಟಿ ಡರ್ಹಾಮ್ನ ಈಶ್ ವಿನ್ನಿಂಗ್ನಲ್ಲಿ ವಾಸಿಸುತ್ತಿದ್ದಾರೆ.
ಕೃತಿಗಳು,ಪುಸ್ತಕಗಳು
[ಬದಲಾಯಿಸಿ]ಇವರು ತಮ್ಮ ಕವಿತೆಗಳನ್ನು ಬರಿಯುವುದರ ಮೂಲಕ ಪ್ರಸಿದ್ಧರಾದರು. ಅವರು ಕವಿಯತ್ರಿಯಾಗಿದ್ದು, ಅವರ ಕವನಕ್ಕಾಗಿ ಕ್ವೀನ್ಸ್ ಚಿನ್ನದ ಪದಕಕ್ಕೆ ಇವರ ಹೆಸರು ನೇಮಕವಾಗಿದೆ. ಗಿಲ್ಲಿಯನ್ ಆಲ್ನಾಟ್ ರವರು ೧೯೭೩ರಲ್ಲಿ ಲಂಡನ್ನ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ನಲ್ಲಿ ಬರವಣಿಗೆಯ ಕಲೆ ಹಾಗು ಬರವಣಿಗೆಯಲ್ಲಿ ಇರಬೇಕದ ಸ್ವಾರಸ್ಯ ಬಗ್ಗೆ ವಿಶ್ವವಿದ್ಯಾಲಯದಲ್ಲಿ ಆಧ್ಯಾಪಕರಾಗಿ ಹೇಳಿಕೊಡುತ್ತಿದ್ದರು ಮತ್ತು ಇವರು ಯೆಡಿಟಿಂಗ್ ತಂತ್ರದ ಬಗ್ಗೆಯು ಸಹ ಅರಿತ್ತಿದ್ದಾರೆ. ಇವರು ಶೀಬಾ ಫೆಮಿನ್ಸಿಟ್ ಮುದ್ರರ್ಣಾಲಯದ ಒರ್ವ ಪ್ರಮುಖ ವ್ಯಕ್ತಿ ಆಗಿದ್ದಾರೆ ಮತ್ತು ಹೀಗೆ ಇವರು ಬರವಣಿಗೆಯಲ್ಲದೆ ಇತರ ಮುಖ್ಯ ಕೆಲಸಗಳನ್ನು ಮಾಡಿದ್ದಾರೆ.
ಆಲ್ನಾಟ್ ರವರು ಹಲವರು ಪದ್ಯಗಳು, ಕವಿತೆಗಳು ಹಾಗು ಪುಸ್ತಕಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಯು ಬಹಳ ಸುಲಭ ಹಾಗು ಸರಳ ರೀತಿಯಲ್ಲಿರುತ್ತದೆ ಏಕೆಂದರೆ ಸಮಾನ್ಯ ಜನರಿಗೂ ಕೋಡ ತಿಳಿಯಬೇಕೆಂಬುದು ಇವರ ಅಭಿಪ್ರಾಯ. ಇದರಿಂದಲೇ ಇವರು ಇಷ್ಟು ಪ್ರಸಿದ್ದಿ ಪಡೆದಿರುವುದು. ಆಲ್ನಾಟ್ ರವರು ಪುಸ್ತಕಗಳಾದ ನ್ಸಾಂಟುಕೆಟ್ ಮತ್ತು ಏಂಜೆಲ್ ಮತ್ತು ಲಿಂಟೆಲ್ ಈ ಪುಸ್ತಕಗಳು ಟಿ.ಎಸ್. ಎಲಿಯಟ್ ಪ್ರಶಸ್ತಿಗಾಗಿ ಆಯ್ಕೆಯಾದವು. ಇದು ನಿಜಕ್ಕು ಇವರಿಗೆ ಹೆಮ್ಮೆಯ ವಿಶಯ. ಇದರಲ್ಲಿಯೇ ತಿಳಿದುಬರುತ್ತದೆ ಇವರು ಎಂತಹ ಅಧ್ಬುತ ಕವಯತ್ರಿ ಎಂದು
ಆಲ್ನಾಟ್ ರವರು ತಮ್ಮ ಪದ್ಯದಲ್ಲಿ ಸತ್ಯಂಶವನ್ನು ಎತ್ತಿಹಿಡಿಯುತ್ತಾರೆ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಶೊಶಣೆಗಳನ್ನು ಸಹ ತಮ್ಮ ಪದ್ಯಗಳಲ್ಲಿ ತೋರಿಸುತ್ತಾರೆ. ಇವರು ಇವರ ಪದ್ಯದಲ್ಲಿ ದೈವಿಕ ಅಂಶವನ್ನು ತೋರಿಸುತ್ತಾರೆ ಏಕೆಂದರೆ ಸಮಾನ್ಯರಲ್ಲಿಯು ಸಹ ಇದು ಕೊಂಚ ಆರ್ಥಭೀರಲಿ ಎಂದು.
ಆಲ್ನಾಟ್ ರವರ ಕೆಲಸವು ಹೆಚ್ಚಿನ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಮತ್ತು ಇವರು ಆಗಾಗ್ಗೆ ಬಲು ಮನಸೋಲುವ ಟಿಪ್ಪಣಿಗಳನ್ನು ಬರಿಯುವರು. ಅದರಲ್ಲಿ ಆಧ್ಯಾತ್ಮದ ಭಾವನೆಯನ್ನು ತೋರುತ್ತಾರೆ.
'ದಿ ಸಿಂಗಿಂಗ್ ಫೈನ್ಲ್ಸ್ ಮತ್ತು ಡಾರ್ಕ್ ಸಂಮರ್ ಡೇಸ್ ಮಂಬಲ್ ಮತ್ತು ಇನ್ನೂ ಹಲವರು ಹಾಡುಗಳನ್ನು ರಚಿಸಿದ್ದಾರೆ. ಇವರು ಈ ಎಲ್ಲಾ ಹಾಡುಗಳನ್ನು ರಾತ್ರಿಯವರೆಗು ಹಾಡುತ್ತಾಯಿದ್ದರು. ಹೀಗೆ ಇವರು ತಮ್ಮನ್ನು ತಾವು ಯಾವಾಗಲು ಕವಿತೆಗಳನ್ನು ಬರೆಯುವುದರಲ್ಲಿ ತೋಡಗಿಸಿಕೊಳ್ಳುತ್ತಿದ್ದರು
ಆಲ್ನಾಟ್ ರವರು ೨೦ ವರ್ಷಗಳು ಲಂಡನ್ ನಲ್ಲಿದ್ದು ನಂತರ ಅವರು ಟೈನಿಸೈಡ್ ಮನೆಗೆ ಬರುವ ಮುನ್ನವೆ ಅವರಿಗೆ ಬರವಣಿಗೆಯಲ್ಲಿ ಆಸಕ್ತಿ ಮೂಡಿರುತ್ತದೆ. ಹಾಗು ಇವರು ಸಿಟಿ ಲಿಮಿಟ್ ಎಂಬ ಮಾಸಿಕಪತ್ರಕ್ಕೆ ಕೆಲಸವೂ ಮಾಡಿರುತ್ತಾರೆ. ಇವರು ೧೯೭೮ ರಲ್ಲಿ ಧರಾಗ ಮತ್ತು ಬೋನ್ ಮ್ಯೆನ್ಸ್ ಡಾಟರ್ ಇಮ್ಯಾಗಿಂನ್ಸ ಅ ಫ್ಯಾಮಿಲಿ ೧೯೮೧; ಸ್ಪಿಟಿಂಗ ಧ ಪೈಪರ್ ಔಟ, ೧೯೮೭ ರಲ್ಲಿ ಧ ಅವಾಕಾಡೂ. ಇನ್ನು ಮುಂತಾದವು ಇವರ ಪ್ರಸಿದ್ದ ಪ್ರಕಟಣೆಗಳಾಗಿವೆ. ಇವುಗಳನ್ನು ಎಂದು ಸಂಚಲನವನೇ ಮೂಡಿಸಿವೆ. ಜನರಲ್ಲಿ ಮನ ಮಾತಾಗಿವೆ. [೧]
ಆಲ್ನಾಟ್ ರವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಅದರಲ್ಲಿ ನಾರ್ಧನ್ ರಾಕ್ ಫೌಂಡೇಶನ್ ಅವಾರ್ಡ್ ೨೦೦೫ ರಲ್ಲಿ ಲಭಿಸಿದೆ, ಟಿ.ಎಸ್ ಯಿಲಿಯೆಟ್ ಪ್ರಶಸ್ತಿಯೂ ಸಹ ೨೦೦೧ರಲ್ಲಿ ಲಭಿಸಿದೆ. ಇವರಿಗೆ ಈ ಪ್ರಶಸ್ತಿ ೧೯೯೮ ರಲ್ಲಿ ಯುಸಹ ಒಮ್ಮೆ ಲಭಿಸಿತ್ತು. ಹೀಗೆ ಹಲವಾರು ಪ್ರಶಸ್ತಿ ಹಾಗು ಬಿರುದುಗಳು ಇವರ ಮುದಿಗೀರಿದೆ. ಇವರು ಬರೆದಿರುವ 'ಧ ಅವಕಾಡು' ಕೃತಿ ಬಲು ಅರ್ಥಪೋರ್ಣವಾಗಿದೆ. ಹಾಗು ಸಾಹಿತ್ಯ ಲೋಕದಲ್ಲಿ ಅದು ಒಂದು ಮೈಲಿಗಲ್ಲಾಗಿದೆ . ಈ ಕೃತಿಯಲ್ಲಿ ಇವರು ಪ್ರೀತಿಯ ಬಗ್ಗೆ ಹೇಳಿದ್ದಾರೆ. ಹಾಗು ಪ್ರೀತಿಸುವುದರ ಬಗ್ಗೆ ರಚಿಸಿದ್ದಾರೆ. ಇದು ಒಂದು ಮೈಲಿಗಲ್ಲಾಗಿದೆ ಮತ್ತು ಇವರ ನೋತನ ರಚಿತವಾಗಿದೆ. ಇನ್ ಡ್ವೆಲಿಂಗ್ ಸಹ ಇವರ ನೂತನ ಪದ್ಯವಾಗಿದೆ. ಇವರು ರಚನೆ ಹಾಗು ಬರವಣಿಗೆಯಲ್ಲದೆ ಸಮಾಜ ಸೇವೆಯಲ್ಲೂ ಸಹ ತಮ್ಮನ್ನು ತಾವು ತೋಡಗಿಸಿಕೊಂಡಿದ್ದಾರೆ. ಇಂಗ್ಲಿಷ್ ಕವಯತ್ರಿ ಆಗಿದ್ದು, ಅವರ ಕವನವು ಕ್ವೀನ್ಸ್ ಚಿನ್ನದ ಪದಕಕ್ಕಾಗಿ ನೆಮಕವಾಗಿತ್ತು.
ಆಲ್ನಾಟ್ ರವರು ೨೦೦೯-೨೦೧೦ ರಲ್ಲಿ ಒಂದು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿದ್ದ ಜನರನ್ನು ನೋಡಿಕೊಳ್ಳುತಾ ಹಾಗು ಅವರಿಗೂಸಹ ಬರವಣಿಗೆಯ ಮಹತ್ವಗಳು ಮತ್ತು ಹೆಗೆ ಬರೆಯಬೇಕೆಂಬುದನ್ನು ತಿಳಿಸುತ್ತಾಯಿದ್ದರು. ಇವರು ಧೃಹಮ್ ವಿಶ್ವವಿದ್ಯಾಲದಲ್ಲಿ ಇಂಗ್ಲೀಷ್ ವಿಭಾಗದ ಒಬ್ಬ ಆಧ್ಯಾಪಕರಾಗಿ ತಮ್ಮ ಕೆಲಸವನ್ನು ಸಲ್ಲಸಿಧಿದ್ದಾರೆ ಮತ್ತು ಇವರಿಗೆ ಕ್ಪೋನ್ಸ್ ಗೋಡ್ಲ್ ಮೆಡಲ್ ನೀಡಿ ಗೌರವ ಸಲ್ಲಿಸಿದ್ದರು. ಇವರು ಒಂದು ಪದ್ಯ ಪ್ರಯೋಗ ಪುಸ್ತಕವನ್ನು ಸಹ ಪ್ರಕಟಿಸಿದ್ದಾರೆ. ಇವರ ಪದ್ಯಗಳು ಒಮ್ಮೆ ಹಾಡಿದರೆ ಭಾಯಿಪಾಟು ಆಗಿಬಿಡುತ್ತದ್ದೆ ಏಕೆಂದರೆ ಅವರು ತಮ್ಮ ಪದ್ಯಗಳಿಗೆ ಪ್ರತ್ಯಕವಾಗಿ ರಾಗಗಳನ್ನು ಬಳಸಿ ರಚಿಸಿ ಹೇಳುತ್ತಾರೆ. ಹೀಗಾಗಿ ಇವು ಕೇಳಲು ಬಲು ಇಂಪಾಗಿರುತ್ತವೆ ಹಾಗು ಸಾಮಾನ್ಯರಲ್ಲಿ ಸಮಾನ್ಯರಿಗೂ ಸಹ ಬಲು ಇಷ್ಟವಾಗುತ್ತವೆ. ಇವರು ತಮ್ಮ ಪದ್ಯಗಳಲ್ಲಿ ಜಾತಿಯ ಬಗೆಯು ಸಹ ಬರೆದಿದ್ದಾರೆ. ಹೀಗೆ ಜನರು ಅನ್ಯ ಜಾತಿಗಳನ್ನು ಧೂಷಿಸುವರು ಮತ್ತು ತಾವು ಮಾಡಬೇಕಿರುವ ಸಾಮಾಚಿಕ ಕೆಲಸಗಳನ್ನು ಮರೆತು ಈ ಜಾತಿಯ ವಿವಾಧವನ್ನು ಹೇಳುವ ಬಗ್ಗೆ ಬಹಳ ಚೆನ್ನಾಗಿ ತಮ್ಮ ಪದ್ಯದಲ್ಲಿ ಹೇಳಿದ್ದಾರೆ ಹಾಗು ಇವರು ಬಳಸುವ ಪದಗಳು ಬಲು ಸೂಕ್ಷ್ಮ ವಾಗಿರುತ್ತದೆ, ಮನಸಿಗೆ ನಾಟುವಂತೆ ಇರುತ್ತದೆ. ಹಿಗಾಗಿ ಅವರು ಬಳಸುವ ಪದಗಳೇ ಅವರ ಪದ್ಯಕ್ಕೆ ಅಲಂಕಾರದಂತೆ. ಇವರು ತಮ್ಮ ಬಿಡುವಿನ ಸಮಯವನ್ನು ಬಹಳವಾಗಿ ಬೇರೆ ಬೇರೆ ಕೃತಿಗಳನ್ನು ಓದುವುದರ ಮೂಲಕವೇ ಕಳಿಯುವರು ಹಾಗು ಅದರ ಸರಿ ತಪ್ಪುಗಳನ್ನು ಸಹ ಪ್ರಶ್ನಿಸುವರು.
ಆಲ್ನಾಟ್ ರವರಿಗೆ ೬೮ ವರ್ಷವಾಗಿದ್ದರು ಅವರು ತಮ್ಮ ಕೆಲಸವನ್ನು ತಾವೆ ಮಾಡಿಕೊಳ್ಳಲು ಬಯಸುವರು. ಈ ಅಭ್ಯಾಸ ಬಾಲ್ಯದಿಂದಲೇ ಇತ್ತು. ಇವರು ತಮ್ಮ ಮೊದಲ ಪದ್ಯವನ್ನು ರಚಿಸಿದ್ದು ಅವರ ೧೫ನೇ ವಯಸಿನಲ್ಲಿ ಹಾಗೂ ಇವರು ತಾನು ಪದ್ಯ ಬರೆಯಲೇ ಬೇಕು ಎಂದು ನಿರ್ಧರಿಸಿದ್ದು ತಮ್ಮ ೭ನೇ ವಯಸಿನಲ್ಲಿ ಎಂಬುದು ಆಶ್ಚರ್ಯಕರ ಸಂಗತಿ. ಹೀಗೆ ಇವರು ಹಲವಾರು ಪದ್ಯಗಳನ್ನು ರಚಿಸಿದ್ದಾರೆ. ಇನ್ನು ರಚಿಸುತ್ತಾಯಿರುವರು ಮತ್ತು ಹಲವಾರು ಗಣ್ಯ ಕವಿಗಳು ಸಹ ಇವರ ಕೆಲಸಗಳನ್ನು ನೋಡಿ ಶ್ಲಾಗಿಸಿದ್ದಾರೆ. ಹಲವಾರು ಪತ್ರಿಗೆಳಲ್ಲಿ ಹಾಗು ಮಾಸಿಕ ಪತ್ರಿಕೆಗಳಲ್ಲಿಯೂ ಇವರ ಬಗ್ಗೆ ಬರೆದಿದ್ದಾರೆ. [೨]
ಉಲೇಖಗಳು
[ಬದಲಾಯಿಸಿ]