ವಿಷಯಕ್ಕೆ ಹೋಗು

ಗಿಲಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೬ನೇ ಮತ್ತು ೧೭ನೇ ಶತಮಾನದ ಗಿಲಿಕೆಗಳು

ಗಿಲಿಕೆಯು ಶಬ್ದಮಾಡುವ ಒಂದು ಆಟಿಕೆ. ಇದನ್ನು ನಿರ್ದಿಷ್ಟವಾಗಿ ಒಂದು ಶಿಶುವಿನ ಮೋಜಿಗಾಗಿ ಉತ್ಪಾದಿಸಲಾಗುತ್ತದೆ. ಗಿಲಿಕೆಗಳನ್ನು ಪ್ರಾಚೀನ ಕಾಲದಿಂದ ಈ ಉದ್ದೇಶಕ್ಕಾಗಿ ಬಳಸಲಾಗಿದೆ, ಮತ್ತು ಇವು ಇಂದ್ರಿಯಗಳನ್ನು ಉದ್ರೇಕಿಸಿ ಶಿಶುವಿನ ಕೈ ಹಾಗೂ ಕಣ್ಣಿನ ನಡುವಿನ ಸಮನ್ವಯವನ್ನು ಸುಧಾರಿಸುತ್ತವೆ ಎಂದು ಮಕ್ಕಳ ಬೆಳವಣಿಗೆಯ ತಜ್ಞರು ನಂಬುತ್ತಾರೆ.[೧][೨]

ಗಿಲಿಕೆಗಳನ್ನು ಕಟ್ಟಿಗೆ, ಪ್ಲಾಸ್ಟಿಕ್ ಅಥವಾ ಬಟ್ಟೆಯಿಂದ ತಯಾರಿಸಬಹುದು. ಅನೇಕ ಗಿಲಿಕೆಗಳು ಹೊಳೆಯುವ ಬಣ್ಣಗಳನ್ನು ಹೊಂದಿದ್ದು ಪ್ರಾಣಿ ಅಥವಾ ಹೂವಿನ ಆಕಾರಗಳಲ್ಲಿ ಇರುತ್ತವೆ, ಮತ್ತು ಅಲುಗಾಡಿಸಿದಾಗ ಸಾಮಾನ್ಯವಾಗಿ ಶಬ್ದಮಾಡುತ್ತವೆ. ಈ ಶಬ್ದಗಳು ಕಟ್ಟಿಗೆಯ ಗಿಲಿಕೆಗಳಿಗೆ ಸಾಮಾನ್ಯವಾದ ನೀರಸ ಶಬ್ದಗಳಿಂದ ಹಿಡಿದು ಲೋಹದ ಗಿಲಿಕೆಗಳು ಮಾಡುವ ಕಿಂಕಿಣಿ ಅಥವಾ ಗಂಟೆಯಂಥ ಶಬ್ದಗಳವರೆಗೆ ವ್ಯಾಪಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Davies, Douglas (2010). Child Development, Third Edition: A Practitioner's Guide. Guilford Press. p. 144. ISBN 9781606239100.
  2. Smith, Barbara A. (2011). From Rattles to Writing: A Parent's Guide to Hand Skills. Therapro. ISBN 9781933940182.
"https://kn.wikipedia.org/w/index.php?title=ಗಿಲಿಕೆ&oldid=977414" ಇಂದ ಪಡೆಯಲ್ಪಟ್ಟಿದೆ