ಗಿಜಿಗಿಜಿ ಗಿಡ
ಗೋಚರ
ಬೀಳುಭೂಮಿ , ಪಾಳುಜಾಗ, ರಸ್ತೆಬದಿಗಳಲ್ಲಿ ಬೆಳೆಯುವ ಕಳೆಗಿಡದಂತೆ ಕಾಣುವ ಸಸ್ಯ , ಕ್ರೋಟಾರಿಯ ಪಲ್ಲಿಡ (Crotalaria pallida) ಇದರ ಸಸ್ಯಶಾಸ್ತ್ರೀಯ ಹೆಸರು . ಇದನ್ನು rattlepod ಎಂದು ಇಂಗ್ಲೀಷಿನಲ್ಲಿ ಕರೆಯುತ್ತಾರೆ .
ಮೂಲ
[ಬದಲಾಯಿಸಿ]ಆಫ್ರಿಕಾದಿಂದ ಈ ಸಸ್ಯ ಭಾರತಕ್ಕೆ ಬಂದಿದೆ.
ವಿವರಣೆ
[ಬದಲಾಯಿಸಿ]ಇದರ ಒಣ ಕಾಯಿಗಳಿಂದ ಗಿಜಿಗಿಜಿ ಶಬ್ದ ಉಂಟಾಗುತ್ತದೆ.
ಪ್ರತಿ ಎಲೆಯು ಅಂಡಾಕಾರವಾಗಿದ್ದು ಬುಡದಲ್ಲಿ ಮೂರು ಕಿರು ಎಲೆಗಳಿರುತ್ತವೆ. ಕಾಂಡದ ತುದಿಯಲ್ಲಿ ಗೋಪುರದಂತೆ ಹಲದಿ ಹೂಗಳು ಇರುತ್ತವೆ. ಕಾಯಿಗಳು ಗೊಂಚಲುಗಳಲ್ಲಿದ್ದು ಪ್ರತಿ ಕಾಯಿಯು ೪-೫ ಸೆ.ಮೀ. ಉದ್ದ ಇದ್ದು ಒಳಗೆ ಗಾಳಿಯೂ ೨೦-೩೦ ಬೀಜಗಳೂ ಇರುತ್ತವೆ.
ಸಸ್ಯದ ಉದ್ದ ೨-೩ ಅಡಿ. ಹೂವುಗಳು ಮತ್ತು ಕಾಯಿಗಳ ಕಾಲ ಜುಲೈನಿಂದ ಜನವರಿವರೆಗೆ.
ಉಪಯೋಗ
[ಬದಲಾಯಿಸಿ]ಕಜ್ಜಿ ರೋಗವನ್ನು ವಾಸಿ ಮಾಡುತ್ತದೆ