ವಿಷಯಕ್ಕೆ ಹೋಗು

ಗಾರ್ಪೈಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾರ್ಪೈಕ್ - ಆಸ್ಟಿಯಿಕ್ತಿಸ್ ವರ್ಗದ ಲೆಪಿಸಾಸ್ಟಿಯೈಫಾರ್ಮೀಸ್ ಗಣದ ಲೆಪಿಸಾಸ್ಟಿಡೀ ಕುಟುಂಬಕ್ಕೆ ಸೇರಿದ ಮೀನುಗಳಿಗಿರುವ ಸಾಮಾನ್ಯ ಹೆಸರು.

ಇವುಗಳು ಹೋಲಾಸ್ಟಿಯನ್ ಗುಂಪಿಗೆ ಸೇರಿದ ಮೀನುಗಳು. ಇವು ಬಲು ಪ್ರಾಚೀನ ಬಗೆಯವು. ಮೀಸೋಜೋಯಿಕ್ ಕಾಲದಿಂದಲೂ ಅಸ್ತಿತ್ವದಲ್ಲಿವೆ ಯೆಂದು ಹೇಳಲಾಗಿದೆ. ವಿಕಸನ ಪಥದಲ್ಲಿ ಅತ್ಯಂತ ಮುಂದುವರೆದ ಎಲುಬು ಮೀನುಗಳಾದ ಟೀಲಾಸ್ಟಿಯನ್ ಮೀನುಗಳ ಪುರ್ವಜ ಮೀನುಗಳು. ಪ್ರಸ್ತುತ 10 ಪ್ರಭೇದಗಳು ಮಾತ್ರ ಈ ಗುಂಪಿನಲ್ಲಿವೆ.

ಕಂಡು ಬರುವ ಪ್ರದೇಶ

[ಬದಲಾಯಿಸಿ]

ಗಾರ್ಪೈಕ್ಗಳು ಉತ್ತರ ಅಮೆರಿಕ ಮತ್ತು ಮಧ್ಯ ಅಮೆರಿಕದ ಸಿಹಿ ನೀರು ಮತ್ತು ಅಳಿವೆಗಳಲ್ಲಿ ಕಾಣಸಿಗುತ್ತವೆ.

ದೇಹ ವಿವರಣೆ ಮತ್ತು ಆಹಾರ

[ಬದಲಾಯಿಸಿ]

ಗಾರ್ಪೈಕ್ಗಳಿಗೆ ತೆಳುವಾದ, ಕೊಳವೆಯಂಥ ದೇಹ, ಕೊಕ್ಕಿನಂತೆ ಉದ್ದವಾದ ಮತ್ತು ಹಲವಾರು ಸಾಲು ಹಲ್ಲುಗಳುಳ್ಳ ಮೂತಿ, ನುಣುಪಾದ, ಹೊಳೆಯುವ ದೃಢವಾದ ಗನಾಯ್್ಡ ಆಕೃತಿಯ ಹುರುಪೆಗಳು, ಚಿಕ್ಕ ಈಜುರೆಕ್ಕೆಗಳು, ಬಾಲದ ರೆಕ್ಕೆಗೆ ಹತ್ತಿರವಿರುವ ಬೆನ್ನಿನ ಈಜುರೆಕ್ಕೆ, ಇವು ಈ ಮೀನುಗಳ ಪ್ರಮುಖ ಲಕ್ಷಣಗಳು.

ಇವು ಮಾಂಸಾಹಾರಿ ಮೀನುಗಳು. ಸಾಮಾನ್ಯವಾಗಿ ನಿಧಾನ ಪ್ರವೃತ್ತಿಯ ಮೀನುಗಳಾಗಿದ್ದು ತನ್ನ ಬೇಟೆ ಕಂಡಾಗ ಚುರುಕಾಗಿ ಮೇಲೆರೆಗಿ ಕಬಳಿಸುತ್ತವೆ. ಅತ್ಯಂತ ದೊಡ್ಡದಾದ ಗಾರ್ಪೈಕ್ ದೈತ್ಯ ಅಲಿಗೇಟರ್ ಗಾರ್ (ಲೆಪಿಸೊಸ್ಟಿಯಸ್ ಟ್ರಿಸ್ಟೋಯಿಕಸ್) ಮೀನು ಸುಮಾರು 3.5 ಮೀಟರಿಗೂ ಉದ್ದವಾಗಿ ಬೆಳೆಯುತ್ತದೆ. ಇನ್ನೊಂದು ಪ್ರಭೇದ ಲೆ. ಆಸಿಯಸ್ (ಲಾಂಗ್ನೋಸ್ ಗಾರ್).

ಗಾರ್ಪೈಕ್ ಗಳಿಗೆ ಶತ್ರುಗಳು ಕಡಿಮೆ. ಇವುಗಳ ಗಡುಸಾದ ಗ್ಯಾನಾಯ್ಡ ಹುರುಪೆಗಳ ಹೊದಿಕೆ ತುಂಬಾ ಗಟ್ಟಿಯಾಗಿರುವುದರಿಂದ ಇವನ್ನು ಬೇರೆ ಮೀನುಗಳು ತಿನ್ನಲಾರವು. ಅಲ್ಲದೆ ಇವುಗಳ ಮೊಟ್ಟೆಗಳು ಸಹ ಬಹಳ ವಿಷಪುರಿತವಾಗಿರುವುದರಿಂದ ಯಾವ ಪ್ರಾಣಿಗಳು ಇವನ್ನು ತಿನ್ನುವುದಿಲ್ಲ. ಇದರಿಂದಾಗಿ ಕೆಲವು ಸಲ ಇವು ಸಂಖ್ಯೆಯಲ್ಲಿ ವೃದ್ಧಿಗೊಂಡು ಬೇರೆ ಮೀನುಗಳಿಗೆ ಹಾನಿಕಾರಕವಾಗುವುದುಂಟು.