ವಿಷಯಕ್ಕೆ ಹೋಗು

ಗಾಬಿ ಚುಕ್ಕೆ (ಕುರುಡು ತಾಣ ,ಬ್ಲೈಂಡ್ಸ್ಪಾಟ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾಬಿ ಚುಕ್ಕೆ (ಕುರುಡು ತಾಣ (ಬ್ಲೈಂಡ್ಸ್ಪಾಟ್)[ಬದಲಾಯಿಸಿ]

ಕಣ್ಣಿನ ದೃಷ್ಟಿಪಟಲದಲ್ಲಿ (ರೆಟಿನ) ಅದರ ಕೇಂದ್ರದಿಂದ ಸುಮಾರು ಅರ್ಥ ಮಿಮೀ. ಕೆಳಗಡೆ ಮತ್ತು 3 ಮಿಮೀ. ಒಳಕ್ಕೆ ಇರುವ ಸುಮಾರು 3 ಮಿ.ಮೀ. ವ್ಯಾಸವುಳ್ಳ ಸ್ವಲ್ಪ ಅಂಡಾಕಾರವಾಗಿರುವ ಭಾಗ ಕುರುಡುತಾಣ-(ಬ್ಲೈಂಡ್ಸ್ಟಾಟ್). ಈ ಭಾಗದಲ್ಲಿ ದೃಷ್ಟಿಪಟಲದ ಎಲ್ಲ ಕಡೆಗಳಿಂದಲೂ ನರತಂತುಗಳು ಬಂದು ಕೂಡಿಕೊಂಡು ದೃಕ್ (ಆಪ್ಟಿಕ್) ನರವಾಗುತ್ತದೆ ಮತ್ತು ಇಲ್ಲಿ ಬೆಳಕಿಗೆ ಪ್ರತಿಕ್ರಿಯೆ ತೋರಬಲ್ಲ ಜೀವಾಣುಗಳಾಗಲಿ ನರಕೋಶ ಗಳಾಗಲಿ ಇರುವುದಿಲ್ಲ. ಹೊರ ವಸ್ತುಗಳು ಈ ಸ್ಥಳದಲ್ಲಿ ಬಿಂಬವನ್ನು ಉಂಟುಮಾಡಿದರೆ ಅದು ದೃಷ್ಟಿಪಟಲದಲ್ಲಿ ಯಾವ ಪ್ರತಿಕ್ರಿಯೆಯನ್ನೂ ಉಂಟುಮಾಡುವುದಿಲ್ಲ ಮತ್ತು ಸಹಜವಾಗಿ ಆ ವಸ್ತು ದೃಷ್ಟಿಗೋಚರಕ್ಕೆ ಬರಲಾರದು. ಆದರೆ ಎರಡು ಕಣ್ಣುಗಳ ಕುರುಡುತಾಣಗಳು ಪರಸ್ಪರ ಸಮಾನ ಸ್ಧಳಗಳಲ್ಲಿ ಇಲ್ಲದಿರುವುದರಿಂದ ವಸ್ತು ಇನ್ನೊಂದು ಕಣ್ಣಿನಲ್ಲಿ ಪ್ರತಿಬಿಂಬ ವನ್ನು ಬೇರೆ ಸ್ಧಳದಲ್ಲಿ ಉಂಟುಮಾಡಿ ಆ ಕಣ್ಣಿನ ಮೂಲಕ ದೃಷ್ಟಿಗೋಚರಕ್ಕೆ ಬರುತ್ತದೆ. ಈ ಕಾರಣದಿಂದ ಸಾಮಾನ್ಯವಾಗಿ ಎರಡು ಕಣ್ಣುಗಳ ಏಕಕಾಲಿಕ ದೃಷ್ಟಿ ಲಾಭವುಳ್ಳವರಲ್ಲಿ ಕುರುಡುತಾಣದಿಂದ ಯಾವ ಅನನುಕೂಲತೆಯೂ ಇರುವುದಿಲ್ಲ. ಕಾರಣಾಂತರದಿಂದ ವ್ಯಕ್ತಿಯಲ್ಲಿ ಒಂದು ಕಣ್ಣಿನಲ್ಲಿ ಮಾತ್ರ ದೃಷ್ಟಿ ಇದ್ದರೆ ಆಗ ವಸ್ತುಗಳು ಒಂದೊಂದು ಸಲ ಕಾಣಿಸಿದೆ ಇರುವ ಸಾಧ್ಯತೆ ಉಂಟು. ಆದರೆ ದೃಷ್ಟಿಸುವಾಗ ಕಣ್ಣು ಯಾವಾಗಲೂ ಸ್ವಲ್ಪ ಚಲಿಸುತ್ತಲೇ ಇರುವುದರಿಂದ ಇದೂ ಗಮನಕ್ಕೆ ಬರುವುದಿಲ್ಲ.