ಗಸಗಸೆ ಹಣ್ಣಿನ ಮರ

ವಿಕಿಪೀಡಿಯ ಇಂದ
Jump to navigation Jump to search
ಗಸಗಸೆ ಹಣ್ಣಿನ ಮರ
Singapur cherry (Muntingia calabura) in Hyderabad, AP W IMG 9597.jpg
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Angiosperms
(unranked): Eudicots
(unranked): Rosids
ಗಣ: Malvales
ಕುಟುಂಬ: Muntingiaceae
ಕುಲ: Muntingia
L.
ಪ್ರಭೇದ: M. calabura
ದ್ವಿಪದ ಹೆಸರು
Muntingia calabura
L.

ಗಸಗಸೆ ಹಣ್ಣಿನ ಮರಟೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮಧ್ಯಮಗಾತ್ರದ ಮರ. ಇದರ ಹಣ್ಣಿನಲ್ಲಿ ಗಸಗಸೆ ಬೀಜವನ್ನು ಹೋಲುವ ನೂರಾರು ಬೀಜಗಳು ಇರುವುದರಿಂದ ಇದಕ್ಕೆ ಈ ಹೆಸರು. ಇದನ್ನು ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಸಿಂಗಪುರ ಚೆರಿ ಅಥವಾ ಜಪಾನೀಸ್ ಚೆರಿ ಎನ್ನಲಾಗುತ್ತದೆ. ಮುಂಟಿಂಜಿಯ ಕ್ಯಾಲಬುರ ಶಾಸ್ತ್ರೀಯ ನಾಮ. ಇದು ಮೂಲತಃ ದಕ್ಷಿಣ ಅಮೆರಿಕದ್ದು. ಉಷ್ಣವಲಯ ದೇಶಗಳಲ್ಲೆಲ್ಲ ಇದನ್ನು ಹಣ್ಣಿಗಾಗಿ ಮತ್ತು ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಎಲ್ಲ ದಿಕ್ಕುಗಳಲ್ಲಿಯೂ ಹರಡಿ ಬೆಳೆಯುವ ಕೊಂಬೆಗಳು, ಭರ್ಜಿಯಾಕಾರದ ಹಾಗೂ ಗರಗಸ ಅಂಚುಳ್ಳ ಎಲೆಗಳು ಮತ್ತು ಸಣ್ಣಗಾತ್ರದ ಬಿಳಿಯಬಣ್ಣದ ಹೂಗಳು ಇದರ ಮುಖ್ಯ ಲಕ್ಷಣಗಳಲ್ಲಿ ಕೆಲವು. ಹಣ್ಣು ಬೆರಿ ಮಾದರಿಯದು. ಇದು ಗುಂಡಾಗಿಯೂ ನುಣುಪಾಗಿಯೂ ಇದೆ. ಇದರ ಬಣ್ಣ ಕೆಂಪು. ರುಚಿ ಸಿಹಿ. ಹಣ್ಣಿನಲ್ಲಿ ರಸಭರಿತ ತಿರುಳಿದೆ. ಇದರಿಂದ ಮುರಬ್ಬ ತಯಾರಿಸಬಹುದು. ಗಸಗಸೆ ಹಣ್ಣಿನ ಮರವನ್ನು ಕಾಂಡತುಂಡುಗಳಿಂದ ವೃದ್ಧಿಸುತ್ತಾರೆ. ಮರಳುಭೂಮಿ ಇದರ ಬೆಳವಣಿಗೆಗೆ ಉತ್ತಮ. ಈ ಮರದ ಎಲೆಗಳಿಂದ ಒಂದು ಬಗೆಯ ಕಷಾಯ ಮಾಡುವುದುಂಟು. ಹೂಗಳನ್ನು ತಲೆನೋವು ಮತ್ತು ನೆಗಡಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಇದರ ತೊಗಟೆಯಿಂದ ನಾರು ತೆಗೆದು ಹಗ್ಗಗಳನ್ನು ತಯಾರಿಸುವುದಿದೆ.

leaves and fruits

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]