ಗರ್ಲಾಫ್ಕ

ವಿಕಿಪೀಡಿಯ ಇಂದ
Jump to navigation Jump to search

ಸೋವಿಯೆತ್ ಸಮಾಜವಾದಿ ಗಣರಾಜ್ಯ ಒಕ್ಕೂಟ 1991ರ ಡಿಸೆಂಬರ್ 21 ರಂದು ವಿಘಟನೆ ಹೊಂದಿ ಉಕ್ರೇನಿಯನ್ ಗಣರಾಜ್ಯ ಸೋವಿಯೆತ್ ಒಕ್ಕೂಟ ಸೇರಿತು. ಡನೆಟ್ಸ್ ಆಬ್ಲಾಸ್ಟ್ ನಲ್ಲಿ (ಆಡಳಿತ ವಿಭಾಗ) ಇರುವ ಒಂದು ಪಟ್ಟಣ. ಡನೆಟ್ಸ್ಕ್ ನದೀಕಣಿವೆಯ ಕೈಗಾರಿಕಾ ಪ್ರದೇಶದ ಮಧ್ಯಭಾಗದಲ್ಲಿದೆ. ಡನೆಟ್ಸ್ಕ್ ನಗರಕ್ಕೆ 40 ಕಿಮೀ ದೂರದಲ್ಲಿದೆ. 1867ರಲ್ಲಿ ಇದನ್ನು ಗಣಿವಸತಿಯಾಗಿ ಸ್ಥಾಪಿಸಲಾಯಿತು. 1932ರಲ್ಲಿ ಇದು ಪಟ್ಟಣವಾಯಿತು; ಈಗ ಈ ಪ್ರದೇಶದ ಅತ್ಯಂತ ದೊಡ್ಡ ಕಲ್ಲಿದ್ದಲು ಗಣಿ ಕೇಂದ್ರಗಳಲ್ಲೊಂದಾಗಿದೆ. ವಿಶ್ವದಲ್ಲೆ ಅತ್ಯಂತ ಆಳವಾದ ಕಲ್ಲಿದ್ದಲು ಕುಳಿಗಳ ಪೈಕಿ ಕೆಲವು ಇಲ್ಲಿವೆ. ಕಲ್ಲಿದ್ದಲು ಗಣಿ ಯಂತ್ರ ತಯಾರಿಸುವ ದೊಡ್ಡ ಎಂಜಿನಿಯರಿಂಗ್ ಕೈಗಾರಿಕೆಯೂ ರಸಾಯನ ಕೈಗಾರಿಕೆಯೂ ಇಲ್ಲಿ ಬೆಳೆದಿವೆ. ಅನೇಕ ರೈಲುಮಾರ್ಗಗಳು ನಗರಕ್ಕೂ ಸುತ್ತಮುತ್ತಲಿನ ನಗರಗಳಿಗೂ ಸಂಪರ್ಕ ಕಲ್ಪಿಸಿವೆ.