ವಿಷಯಕ್ಕೆ ಹೋಗು

ಗರಿನಕ್ಷತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗರಿನಕ್ಷತ್ರಗಳು ಕಂಟಕಚರ್ಮಿಗಳ ವಂಶದ ಪೆಲ್ಮಟೋಜೋ಼ವ ಉಪವಂಶದ ಕ್ರೈನಾಯ್ಡಿಯ ವರ್ಗಕ್ಕೆ ಸೇರಿದ ಸಮುದ್ರವಾಸಿಗಳಿಗಿರುವ ಸಾಮಾನ್ಯ ಹೆಸರು (ಫೆದರ್ ಸ್ಟಾರ್, ಸೀ ಲಿಲ್ಲಿ). ಸು. 3500 ಮೀ ಆಳದಲ್ಲಿ ಯಾವುದಾದರೂ ಅಧಃಸ್ತರಕ್ಕೆ (ಸಬ್ಸ್ಟ್ರಾಟಮ್) ಅಂಟಿಕೊಂಡಿ ರುತ್ತದೆ. ಇದಕ್ಕೆಂದೇ ಅಧೋಭಾಗದಲಿ ಉದ್ದವಾದ ತೊಟ್ಟಿದೆ. ರೈಜೊ಼ಕ್ರೈನಸ್ ಮತ್ತು ಪೆಂಟ್ರಾಕ್ರೈನಸ್ ಈ ತೆರನ ಪ್ರಾಣಿಗಳು. ಅದರೆ ಆಂಟೆಡಾನ್ ಮಾತ್ರ ಕಾಂಡದಿಂದ ತುಂಡಾಗಿ ತನ್ನ ಬಾಹುಗಳ ಸಹಾಯದಿಂದ ಸಮುದ್ರದಲ್ಲಿ ಈಜಬಲ್ಲದು.

ಬಾಹ್ಯ ಲಕ್ಷಣ

[ಬದಲಾಯಿಸಿ]

ಪೆಡಸು ನಕ್ಷತ್ರ ಮತ್ತು ನಕ್ಷತ್ರಗಳಲ್ಲಿರುವಂತೆ ಇದರಲ್ಲಿಯೂ ಮಧ್ಯತಟ್ಟೆ ಮತ್ತು ಅದರಿಂದ ಹೊರಡುವ ಐದು ಬಾಹುಗಳಿವೆ. ಮಧ್ಯತಟ್ಟೆಗೆ ಕೇಲಿಕ್ಸ್ ಎಂದು ಹೆಸರು. ಪ್ರತಿ ಬಾಹುವೂ ಬುಡದಲ್ಲಿ ಎರಡಾಗಿ ಕವಲೊಡೆದಿರುವುದರಿಂದ ಹತ್ತು ನೀಳವಾದ, ನಮ್ಯವಾದ ಮತ್ತು ಉದ್ದವಾದ ಬಾಹುಗಳಿ ರುವಂತೆ ಭಾಸವಾಗುತ್ತದೆ. ಪ್ರತಿಯೊಂದು ಕವಲಿನಲ್ಲೂ ಪಿನ್ಯೂಲುಗಳೆಂಬ ಸಣ್ಣ ಸಣ್ಣ ಕವಲುಗಳಿವೆ. ಬಾಹುಗಳಿಗೂ ಹಕ್ಕಿಯ ಗರಿಗಳಿಗೂ ಹೋಲಿಕೆ ಇರುವುದರಿಂದಲೇ ಗರಿನಕ್ಷತ್ರವೆಂದು ಹೆಸರು. ಕೇಲಿಕ್ಸನ ಊರ್ದ್ವಭಗದಲ್ಲಿ ಬಾಯಿ ಮತ್ತು ಆಸನ ದ್ವಾರಗಳಿವೆ. ಇವಲ್ಲದೆ ಬಾಯಿಯಿಂದ ಐದು ಆಂಬುಲ್ಯಾಕ್ರಲ್ ಕೊರಕಲುಗಳು ತ್ರಿಜ್ಯಕ್ಕೆ ಹೊರಡುತ್ತವೆ. ಈ ಕೊರಕಲುಗಳು ಶಿಲಕೆಯುಕ್ತವಾಗಿವೆ ಮತ್ತು ಪರಿಧಿಯಲ್ಲಿ ಸಾಲಾಗಿ ಜೋಡಿಸಲ್ಪಟ್ಟ ಟೆಂಟಕಲ್ ಅಥವಾ ಪೋಡಿಯಗಳನ್ನು (ಮಾರ್ಪಾಟಾದ ನಳಿಕೆಪಾದ) ಹೊಂದಿವೆ. ಆಂಟೆಡಾನ್ನಲ್ಲಿ ಕೇಲಿಕ್ಸನ್ ಅಧೋಭಾಗದಲ್ಲಿ ಒಂದು ದೊಡ್ಡ ಆಸಿಕಲ್ ಇದೆ. ಇದು ಮುಂಚೆ ಇದ್ದ ತೊಟ್ಟು ಅಥವಾ ಕಾಂಡದ ಮೂಲಬಿಂದು. ಇದಲ್ಲದೆ ಸಿರ್ರೈ ಎಂಬ ಸಣ್ಣ ಸಣ್ಣ ಆಸಿಕಲ್ಗಳೂ ಉಂಟು. ಇವು ಅಧಃಸ್ತರಕ್ಕೆ ಅಂಟಿಕೊಳ್ಳಲು ಸಹಾಯಕ. ದೇಹದ ಅಸ್ಥಿಪಂಜರ ಆಸಿಕಲ್ಗಳಿಂದಾಗಿದೆ. ಜೀರ್ಣಾಂಗವ್ಯೂಹ ಬಾಯಿ, ಅಗಲವಾದ ಅನ್ನನಾಳ, ದೊಡ್ಡ ದಾದ ಜಠರ, ಸುರುಳಿಯಾಕಾರದ ಕರುಳು ಮತ್ತು ಆಸನದ್ವಾರಗಳನ್ನೊಳಗೊಂಡಿದೆ. ಹೀಮಲ್ ವ್ಯವಸ್ಥೆ ಮತ್ತು ನರವ್ಯೂಹ ಇತರ ಕಂಟಕಚರ್ಮಿಗಳಂತಿವೆ. ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ಗಳ ವಿನಿಮಯವಾಗುವುದು ಪೋಡಿಯಗಳಲ್ಲಿ. ಗರಿನಕ್ಷತ್ರಗಳು ಏಕಲಿಂಗಿಗಳು. ಮೊಟ್ಟೆಗಳೊ ಡೆದು ಡಾಲಿಯೋಲೇರಿಯ ಎಂಬ ಲಾರ್ವಗಳು ಹೊರಬರುತ್ತವೆ. ಇವು ನೀರಿನಲ್ಲಿ ಈಜಾಡುತ್ತ ಸ್ವಲ್ಪ ದಿವಸಗಳಲ್ಲೆ ಕಾಂಡಯುಕ್ತ ಪೆಂಟಾಕ್ರೈನಾಯಿಡ್ ಎಂಬ ಲಾರ್ವಗಳಾಗುತ್ತವೆ. ಇವುಗಳು ಅಧಃಸ್ತರಕ್ಕೆ ಅಂಟಿಕೊಂಡಿರುತ್ತವೆ. ರೂಪಪರಿವರ್ತನೆ ಹೊಂದಿ ಬೆಳೆದ ಗರಿನಕ್ಷತ್ರಗಳಾಗುತ್ತವೆ.