ಗಣಕ ನೆರವಿನ ಉತ್ಪಾದನೆ (CAM)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
CAD model ಮತ್ತು CNC machined part

ಉತ್ಪಾದನಾ ಪ್ರಕ್ರಿಯೆಯಲ್ಲಿ ಮೆಶಿನ್ ಟೂಲ್ ಗಳ ಕಾರ್ಯಚಟುವಟಿಕೆ ಹಾಗೂ ನಿಯಂತ್ರಣದಲ್ಲಿ ತಂತ್ರಾಂಶಗಳ ಬಳಕೆಗೆ ಗಣಕ ನೆರವಿನ ಉತ್ಪಾದನೆ ಅಥವಾ ಕಂಪ್ಯೂಟರ್ ಏಡೆಡ್ ಮ್ಯಾನ್ಯುಫಾಕ್ಚರಿಂಗ್ (CAM) ಎನ್ನಲಾಗುತ್ತದೆ. ಆದರೆ CAM ಎಂದರೆ ಕೇವಲ ಇದು ಮಾತ್ರ ಅಲ್ಲದೇ ಒಂದು ಉತ್ಪಾದನಾ ವ್ಯವಸ್ಥೆಯ/ಕಾರ್ಖಾನೆಯ ಇನ್ನಿತರ ಚಟುವಟೆಗಳಾದ ಯೋಜನೆ, ನಿರ್ವಹಣೆ, ಸಾಗಾಟ ಮತ್ತು ಶೇಖರಣೆಗಳಲ್ಲಿ ಕಂಪ್ಯೂಟರುಗಳ ಬಳಕೆಗೆ ಅನ್ವಯವಾಗುತ್ತದೆ. ಉತ್ಪಾದನಾ ಪ್ರಕ್ರಿಯೆಯ ವೇಗ ಹೆಚ್ಚಿಸಲು, ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಲು, ಮತ್ತು ಗುಣಮಟ್ಟ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. CAM ಎನ್ನುವುದು ಸಾಮಾನ್ಯವಾಗಿ ಗಣಕ ನೆರವಿನ ವಿನ್ಯಾಸ (CAD) ಮತ್ತು ಗಣಕ ನೆರವಿನ ಎಂಜಿನಿಯರಿಂಗ್ (CAE) ಪ್ರಕ್ರಿಯೆಗಳ ಅನಂತರದ ವ್ಯವಸ್ಥೆಯಾಗಿರುತ್ತದೆ. ಅಂದರೆ CADನಲ್ಲಿ ಮಾಡೆಲ್ ಮಾಡಿ, CAEನಲ್ಲಿ ಅದನ್ನು ಪರಿಶೀಲಿಸಿ ಅನಂತರ CAM ತಂತ್ರಾಂಶಕ್ಕೆ ಅದನ್ನು ಊಡಿಸಿ ಅದರ ಮೂಲಕ ಮೆಶಿಲ್ ಟೂಲ್ ನಡೆಸಲಾಗುತ್ತದೆ.