ವಿಷಯಕ್ಕೆ ಹೋಗು

ಗಣಕೀಕೃತ ಸುಸ್ಥಿತಿಕಾರಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಬೇಳೆಕಾಳುಗಳನ್ನು ಸುಸ್ಥಿತಿಗೆ ತರುವುದು ಅವುಗಳನ್ನು ಕುಟ್ಟಿ ವಿಭಜನೆ ಮಾಡುವ ಮುನ್ನ ಕೈಗೊಳ್ಳಬೇಕಾದ ಒಂದು ಮುಖ್ಯ ಪ್ರಕ್ರಿಯೆ. ಸುಸ್ಥಿತಿಕಾರಕವು ಗಣಕೀಕೃತ ಆಹಾರ ಸಂಸ್ಕರಣ ವ್ಯವಸ್ಥೆಯ ಒಂದು ಭಾಗ. ತೇವಾಂಶ ಹೀರುವಿಕೆ/ವಿಸರ್ಜನೆ, ಉತ್ಪನ್ನವನ್ನು ಸಿದ್ಧಗೊಳಿಸಲು ಬೇಕಾಗುವ ಸಾಂಕಲ್ಯಗಳನ್ನು ಸಂಯೋಗಿಸುವುದು ಮೊದಲಾದ ಕ್ರಿಯೆಗಳಲ್ಲಿ ಇದರ ಬಳಕೆ ಇರುವುದು.

ಶಕ್ತಿ ಸಂಪನ್ಮೂಲಗಳು ಮತ್ತು ಪರಿಸರ ಸಂರಕ್ಷಣೆಗಳ ದೃಷ್ಟಿ ಕೋನಗಳಿಂದ ಹಾಗೂ ವೃದ್ಧಿಸುತ್ತಿರುವ ಜನಸಂಖ್ಯೆಗೆ ಆಹಾರ ಪೂರೈಕೆಯ ಜಾಗತಿಕ ಅವಶ್ಯಕತೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು DFRL/DRDO ಸಂಸ್ಥೆಯವರು ಒಂದು ಗಣಕೀಕೃತ ಸುಸ್ಥಿತಿಕಾರಕವನ್ನು ವಿನ್ಯಾಸಗೊಳಿಸಿದ್ದಾರೆ. ಗಂಟೆಗೆ ೭೫೦ ಕೆ.ಜಿ. ಸಾಮರ್ಥ್ಯವಿರುವ ಈ ಉಪಕರಣವು ಕೃಷಿ-ಉತ್ಪನ್ನಗಳ ಸುಸ್ಥಿತಿಯನ್ನು ಕಾಪಾಡಲು ನೆರವಾಗುವ ಕೌಶಲ್ಯಗಳನ್ನು ಸುಧಾರಿಸುವುದಲ್ಲದೆ ಉತ್ಪನ್ನಗಳ ಪ್ರದೂಷಣೆಯನ್ನು ಕಡಿಮೆಗೊಳಿಸಿ ಅವುಗಳ ಸುಸ್ಥಿತಿಕಾರಕ ಗುಣಗಳನ್ನು ಹೆಚ್ಚಿಸುತ್ತದೆ.

ನಿರ್ವಾಹಕ-ಸ್ನೇಹಿಯಾದ ಈ ಸ್ವಯಂ-ಚಾಲಿತ ಉಪಕರಣವನ್ನು ನಿಯಂತ್ರಿತ ತಾಪ, ವಾಯು ಗತಿ, ಉತ್ಪನ್ನ ಚಲನೆ ಮತ್ತು ಸ್ವಯಂ-ಚಾಲಿತ ಭಾರಾರೋಹಣ ಮತ್ತು ಪ್ರದಾನ ವ್ಯವಸ್ಥೆಗಳಿಂದ ವಿನ್ಯಾಸಗೊಳಿಸಲಾಗಿದೆ. ಆಹಾರ ಉತ್ಪನ್ನಗಳು ನಿರಂತರವಾಗಿ ಒಂದು ಆವೃತ ವಾಹಕ-ಪಟ್ಟಿಯ ಮೂಲಕ ಚಲಿಸುವುವು. ವಸ್ತುಗಳು ಅತ್ಯಂತ ತ್ವರಿತವಾಗಿ ಒಣಗುವುದರಿಂದ ಉಷ್ಣ-ಸಂವೇದಿ ಸಾಮಗ್ರಿಗಳನ್ನು ನಿರ್ವಹಿಸುವುದು ತುಂಬಾ ಸುಲಭವಾಗುತ್ತದೆ ಹಾಗೂ ಅವುಗಳ ಉಷ್ಣತಾ-ಸಾಮರ್ಥ್ಯವೂ ಸಹ ಅಧಿಕಗೊಳ್ಳುವುದು. ವ್ಯವಸ್ಥೆಯ ನಿರ್ವಹಣೆಯು ಅಡೆತಡೆಗಳಿಲ್ಲದೆ ನಡೆಯುತ್ತದೆ ಮತ್ತು ಸ್ಥಾಪನವೂ ಸಹ ಅಡಕವಾಗಿರುತ್ತದೆ. ಈ ವ್ಯವಸ್ಥೆಯನ್ನು ಬೇಳೆ ಮತ್ತು ಅಕ್ಕಿಯಂತಹ ಧಾನ್ಯಗಳನ್ನು ಅವುಗಳ ಹೊಟ್ಟು ತೆಗೆಯುವ ಮುನ್ನ ಸುಸ್ಥಿತಿಗೆ ತರಲು ಬಳಸಬಹುದು. ಸಾಂಪ್ರದಾಯಿಕವಾದ ನಿರ್ಜಲೀಕರಣ ಕ್ರಿಯೆಯಿಂದ ತರಕಾರಿ ಅಥವಾ ಧಾನ್ಯಗಳನ್ನು ಒಣಗಿಸುವಾಗ ಒದಗಬಹುದಾದ ಉಷ್ಣತೆಯ ಅಪಬಳಕೆಯನ್ನು ತಪ್ಪಿಸಲೂ ಸಹ ಇದನ್ನು ಉಪಯೋಗಿಸಬಹುದು. ಭಾರತೀಯ ಆಹಾರ ಸಂಸ್ಕರಣ ಉದ್ಯಮಗಳಿಗೆ ಅನುಗುಣವಾಗಿ ಸ್ಥಳೀಯವಾಗಿ ವಿನ್ಯಾಸಗೊಳಿಸಿ ರೂಪಿಸಲಾಗಿರುವ ಈ ಯಂತ್ರವು ಅದರ ಶ್ರೇಣಿಯಲ್ಲಿ ಪ್ರಪ್ರಥಮವಾದುದು.