ಗಢ್ ಪಂಚ್‍ಕೋಟ್
ಗಢ್ ಪಂಚ್‍ಕೋಟ್ ಭಾರತದ ಪೂರ್ವ ಭಾಗದ ಪಶ್ಚಿಮ ಬಂಗಾಳ ರಾಜ್ಯದ ಪುರುಲಿಯಾ ಜಿಲ್ಲೆಯಲ್ಲಿನ ಪಂಚೇತ್ ಗುಡ್ಡದ ತಪ್ಪಲಿನಲ್ಲಿ ಸ್ಥಿತವಾಗಿರುವ ಒಂದು ಪಾಳುಬಿದ್ದ ಕೋಟೆಯಾಗಿದೆ. ಪಂಚ್‍ಕೋಟ್ ಅರಮನೆಯ ಅವಶೇಷಗಳು ೧೮ನೇ ಶತಮಾನದಲ್ಲಿ ನಡೆದ ಬಾರ್ಗಿ ದಾಳಿಗೆ ಮೂಕ ಪ್ರಮಾಣವಾಗಿವೆ.
ಕೋಟೆಯ ನಿರ್ಮಾಣದಲ್ಲಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ಸಂಪನ್ಮೂಲಗಳ ಸಂಯೋಗವನ್ನು ಬಳಸಲಾಗಿತ್ತು.
ಲಕ್ಷಣಗಳು
[ಬದಲಾಯಿಸಿ]ದೇವಾಲಯಗಳು
[ಬದಲಾಯಿಸಿ]ದೇವಾಲಯಗಳು ವೈಷ್ಣವ ಪಂಥದ ಕಡೆ ರಾಜನ ಒಲವನ್ನು ಪ್ರತಿಬಿಂಬಿಸುತ್ತವೆ. ದೇವಾಲಯಗಳಿಂದ ಸ್ಪಷ್ಟವಾಗಿರುವ ಎರಡು ವಿಶಿಷ್ಟ ವಾಸ್ತುಕಲಾ ಶೈಲಿಗಳೆಂದರೆ ಬಿಷ್ಣುಪುರಿ ಶೈಲಿ ಮತ್ತು ಕಲ್ಲಿಬಂಡೆಗಳನ್ನು ಬಳಸುವ ಹೆಚ್ಚು ಹಳೆಯದಾದ ವಾಸ್ತುಕಲಾ ಶೈಲಿ.
ಕಾವಲುಗಾರನ ವಸತಿ
[ಬದಲಾಯಿಸಿ]ಇದು ಸಮುದ್ರ ಮಟ್ಟಕ್ಕಿಂತ ೬೦೦ ಅಡಿ ಮೇಲೆ ಪಂಚ್‍ಕೋಟ್ ಗುಡ್ಡದ ಮಧ್ಯದಲ್ಲಿದೆ.
ರಕ್ಷಣಾ ಅಗಳು
[ಬದಲಾಯಿಸಿ]ಸಿಂಘ ದ್ವಾರ ಈ ಪ್ರದೇಶಕ್ಕೆ ಏಕೈಕ ಪ್ರವೇಶದ್ವಾರವಾಗಿತ್ತು. ಇಂದು ಈ ಅಗಳು ಕೇವಲ ಒಂದು ಕೊಳವಾಗಿ ಉಳಿದುಕೊಂಡಿದೆ.
ಅರಮನೆ – ರಾನಿ ಮೆಹೆಲ್
[ಬದಲಾಯಿಸಿ]ಇದರ ಬಗ್ಗೆ ಬಹಳ ಮಾಹಿತಿ ಲಭ್ಯವಿಲ್ಲ ಆದರೆ ಸುಮಾರು ೨೦,೦೦೦ ಚದರಡಿಯುದ್ದಕ್ಕೆ ಹರಡಿರುವ ಕಮಾನುಗಳು ಮತ್ತು ಕಂಬಗಳನ್ನು ಪರಿಗಣಿಸಿದರೆ ಅರಮನೆಯು ಬೃಹತ್ ರಚನೆಯಾಗಿದ್ದಿರಬೇಕು.
ಛಾಯಾಂಕಣ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]ಹೊರಗಿನ ಕೊಂಡಿಗಳು
[ಬದಲಾಯಿಸಿ]- See pictures of Garh Panchakot
- See video of Garh Panchakot