ಗಜಕ್
ಗೋಚರ
ಮೂಲ | |
---|---|
ಮೂಲ ಸ್ಥಳ | ಮೊರೇನಾ, ಮಧ್ಯ ಪ್ರದೇಶ |
ವಿವರಗಳು | |
ಸೇವನಾ ಸಮಯ | ಸಿಹಿತಿನಿಸು, ಮಿಠಾಯಿ |
ನಮೂನೆ | ಭಿದುರ ಮಿಠಾಯಿ |
ಮುಖ್ಯ ಘಟಕಾಂಶ(ಗಳು) | ಎಳ್ಳಿನ ಬೀಜಗಳು, ಬೆಲ್ಲ, ಕಡಲೇಕಾಯಿ |
ಪ್ರಭೇದಗಳು | ಗೋಂದ್ ಗಜಕ್, ಚಾಕಲೇಟ್ ಗಜಕ್, ಒಣಫಲದ ಗಜಕ್, ಗಜಕ್ ಬರ್ಫಿ |
ಗಜಕ್ (ಗಚಕ್ ಎಂದೂ ಕರೆಯಲ್ಪಡುತ್ತದೆ) ಉತ್ತರ-ಮಧ್ಯ ಭಾರತದಲ್ಲಿ ಹುಟ್ಟಿಕೊಂಡ ಒಂದು ಸುಪರಿಚಿತ ಸಿಹಿತಿನಿಸು ಅಥವಾ ಮಿಠಾಯಿ. ಇದು ಎಳ್ಳು ಅಥವಾ ಕಡಲೆಕಾಯಿ ಮತ್ತು ಬೆಲ್ಲದಿಂದ ತಯಾರಿಸಲ್ಪಡುವ ಒಂದು ಒಣ ಸಿಹಿತಿನಿಸು. [೧] ಎಳ್ಳನ್ನು ಕಚ್ಚಾ ಸಕ್ಕರೆಯ ಪಾಕದಲ್ಲಿ ಬೇಯಿಸಿ ತೆಳುವಾದ ಪದರಗಳಲ್ಲಿ ಹೊಂದಿಸಲಾಗುತ್ತದೆ. ಇದನ್ನು ತಿಂಗಳುಗಟ್ಟಲೆ ಸಂಗ್ರಹಿಸಿಡಬಹುದು.
ತಯಾರಿಕೆ
[ಬದಲಾಯಿಸಿ]ಗಜಕ್‍ನ್ನು ಎಳ್ಳು ಮತ್ತು ಬೆಲ್ಲದೊಂದಿಗೆ ತಯಾರಿಸಲಾಗುತ್ತದೆ. ಈ ತಯಾರಿಕಾ ವಿಧಾನವು ಬಹಳ ಸಮಯ ತೆಗೆದುಕೊಳ್ಳುತ್ತದೆ. 5–8 ಕಿಲೋಗ್ರಾಂಗಳಷ್ಟು ಗಜಕ್‌ನ್ನು ತಯಾರಿಸಲು ಸುಮಾರು 10–15 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಎಲ್ಲಾ ಎಳ್ಳುಗಳು ಒಡೆದು ಅವುಗಳ ಎಣ್ಣೆಯು ಹಿಟ್ಟಿನಲ್ಲಿ ಬಿಡುಗಡೆಯಾಗುವವರೆಗೆ ಹಿಟ್ಟನ್ನು ಕುಟ್ಟಲಾಗುತ್ತದೆ.
ವೈವಿಧ್ಯಗಳು
[ಬದಲಾಯಿಸಿ]- ಬೆಲ್ಲ-ಎಳ್ಳಿನ ಗಜಕ್
- ತಿಲ್-ರೇವಾಡಿ ಗಜಕ್
- ಖಾಸ್ ಗಜಕ್
ಉಲ್ಲೇಖಗಳು
[ಬದಲಾಯಿಸಿ]- ↑ https://books.google.com/books?id=YYXNIzbhySIC&pg=PA106&lpg=PA106&dq=gazak+sugar&source=bl&ots=MvBVNk8pTb&sig=eKLEB_fzvI9zGI9c2QTPDQY1rfw&hl=en&sa=X&ei=UApOUN7_Gsnv0gGRroGIAQ&ved=0CEQQ6AEwBA#v=onepage&q=gajak%20sugar&f=false - Once I stole a brass faucet from the tapstand in the garden, exchanging it for a kilo of gajak, a kind of candy made from sesame seeds and raw sugar.