ಗಗನ್‍ಬಾವಡಾ

ವಿಕಿಪೀಡಿಯ ಇಂದ
Jump to navigation Jump to search

ಗಗನ್‍ಬಾವಡಾ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ್ ಜಿಲ್ಲೆಯಲ್ಲಿ (ಜಿಲ್ಲೆಯಿಂದ ೫೫ ಕಿ.ಮಿ. ದೂರದಲ್ಲಿದೆ) ಸ್ಥಿತವಾಗಿರುವ ಒಂದು ಪಟ್ಟಣವಾಗಿದೆ. ಇದು ತಾಲ್ಲೂಕು ಮುಖ್ಯಕೇಂದ್ರವಾಗಿದೆ.

ಗಗನ್‍ಬಾವಡಾ ಸಹ್ಯಾದ್ರಿ ಬೆಟ್ಟಗಳು ಅಥವಾ ಪಶ್ಚಿಮ ಘಟ್ಟಗಳಲ್ಲಿ ಸ್ಥಿತವಾಗಿದೆ ಮತ್ತು ಇದರ ಹತ್ತಿರ ಬಹಳ ಪ್ರಸಿದ್ಧವಾದ ಗಗನ್‍ಗಡ್ ಕೋಟೆಯಾಗಿದೆ. ಗಗನ್‍ಬಾವಡಾ ಜಿಲ್ಲೆಯ ಗುಡ್ಡಗಾಡು ಪ್ರದೇಶವಾಗಿದ್ದು ಅಭಿವೃದ್ಧಿಯಾಗಿಲ್ಲ. ಗಗನ್‍ಬಾವಡಾ ಮಳೆಗಾಲದಲ್ಲಿ ಗರಿಷ್ಠ ಮಳೆಯನ್ನು ಪಡೆಯುತ್ತದೆ.

ಮರಾಠರು ಮತ್ತು ಬ್ರಿಟಿಷ್ ರಾಜ್‍ನ ಆಳ್ವಿಕೆಯ ಕಾಲದಲ್ಲಿ, ಬಾವಡಾ ಜಹಗೀರು ವಿಸ್ತೀರ್ಣದಲ್ಲಿ ೨೪೩ ಚದರ. ಮೈ ಇತ್ತು.[೧]

[೨]

ಭೇಟಿ ಕೊಡಬೇಕಾದ ಆಸಕ್ತಿಯ ತಾಣಗಳು[ಬದಲಾಯಿಸಿ]

ಗಗನ್‍ಬಾವಡಾದಲ್ಲಿ ಪಶ್ಚಿಮ ಘಟ್ಟಗಳ ಭಾರೀ ಪರ್ವತಶ್ರೇಣಿಗಳ ರಮಣೀಯ ನೋಟಗಳಿವೆ. ಗಗನ್‍ಬಾವಡಾ ಸಂಪದ್ಭರಿತ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿನ ಕಾಡುಗಳಲ್ಲಿರುವ ಸಸ್ಯಗಳು ಹಾಗೂ ಪ್ರಾಣಿಗಳು ಯಾವುದೇ ನಿಸರ್ಗಪ್ರೇಮಿಯನ್ನು ಸಮ್ಮೋಹನಗೊಳಿಸುತ್ತವೆ.

•ಕಾರುಲ್ ಘಾಟ್ ಮತ್ತು ಭೂಯಿಬಾವಡಾ ಘಾಟ್ - ಈ ಎರಡು ಘಾಟ್‍ಗಳು ಅತ್ಯಂತ ರಮಣೀಯ ಮಾರ್ಗಗಳಲ್ಲಿ ಒಂದಾಗಿವೆ.

ಕಾರುಲ್ ಘಾಟ್‍ನಿಂದ ನೋಟ

ಗಗನ್‍ಗಡ್ ಕೋಟೆ ಮತ್ತು ಗಗನ್‍ಗಿರಿ ಆಶ್ರಮ - ಇಲ್ಲಿ ಗಗನ್‍ಗಡ್ ಕೋಟೆಯ ಅವಶೇಷಗಳಿವೆ ಮತ್ತು ಶ್ರೀ ಗಗನಗಿರಿ ಮಹಾರಾಜರ ಭಕ್ತರ ಆಶ್ರಮವಿದೆ.

ಗಗನ್‍ಗಡ್

ಮೋರ್ಜಾಯ್ ದೇವಸ್ಥಾನ ಮತ್ತು ಪ್ರಸ್ಥಭೂಮಿ - ದೂರ ನಡಿಗೆ ಉತ್ಸಾಹಿಗಳಿಗೆ ಇದು ಹೇಳಿಮಾಡಿಸಿದಂಥಿದೆ. ಗುಡ್ಡದ ಮೇಲೆ ಮೋರ್ಜಾಯ್ ದೇವಿಯ ಅನನ್ಯ ಗುಹಾ ದೇವಾಲಯವಿದೆ.

ಮೋರ್ಜಾಯ್ ಪ್ರಸ್ಥಭೂಮಿ
ಮೋರ್ಜಾಯ್ ದೇವಸ್ಥಾನ

•ಲಖ್ಮಾಪುರ್ ಅಣೆಕಟ್ಟು - ಮೊರ್ಜಾಯ್‍ಗೆ ಹೋಗುವ ದಾರಿಯಲ್ಲಿದೆ.

ಲಖ್ಮಾಪುರ್ ಅಣೆಕಟ್ಟು

ಪಾಂಡವ ಗುಹೆಗಳು - ಈ ಗುಹೆಗಳು ಭೀಮನಿಂದ ಕೆತ್ತಲ್ಪಟ್ಟವು ಎಂದು ನಂಬಲಾಗಿದೆ.

ಪಾಂಡವ ಗುಹೆಗಳು
ಪಾಂಡವ ಗುಹೆಗಳಲ್ಲಿರುವ ಶಿವಲಿಂಗ
ಪಾಂಡವ ಗುಹೆಗಳು

ಜೀವವೈವಿಧ್ಯ - ಗಗನ್‍ಬಾವಡಾದ ಕಾಡುಗಳಲ್ಲಿ ೧೨೦ ಕ್ಕಿಂತ ಹೆಚ್ಚು ಜಾತಿಗಳ ಪಕ್ಷಿಗಳು, ೫೦ ಜಾತಿಗಳ ಚಿಟ್ಟೆಗಳು, ೨೧ ಜಾತಿಗಳ ಸಸ್ತನಿಗಳಿವೆ.

Karvi.jpg
Malabar Giant Suirrel.jpg
Garden Lizard1.jpg
Wild Turmeric.jpg
Cobra Lily.jpg
Rustic1.jpg

ಉಲ್ಲೇಖಗಳು[ಬದಲಾಯಿಸಿ]

  1. R. V. Solomon,J. W. Bond (1922). Indian States: A Biographical, Historical, and Administrative Survey. Asian Educational Services. p. 110.
  2. Naik, Devadatta. "Places Of Interest". www.thecamp.in. The Camp. Retrieved 3 September 2017.