ವಿಷಯಕ್ಕೆ ಹೋಗು

ಗಂಗಾ ಪಾದೇಕಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಂಗಾ ಪಾದೇಕಲ್ಲು

[ಬದಲಾಯಿಸಿ]

ಜನನ: ೦೧-೦೯-೧೯೪೮, ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ) ವೃತ್ತಿ: ಲೇಖಕಿ ರಾಷ್ಟ್ರೀಯತೆ: ಭಾರತೀಯ ಪ್ರಕಾರ/ಶೈಲಿ: ಸಣ್ಣಕಥೆ, ಕಾದಂಬರಿ, ಸಂಪಾದಿತ ಕೃತಿಗಳು ವಿಷಯ:ಕನ್ನಡ

ಜನನ,ಜೀವನ:

[ಬದಲಾಯಿಸಿ]

೦೧-೦೯-೧೯೪೮ರಲ್ಲಿ ಜನಿಸಿದ ಗಂಗಾ ಪಾದೇಕಲ್ಲು (ಮೂಲ ಹೆಸರು: ಗಂಗಾರತ್ನ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಇವರ ತಂದೆ ಮುಳಿಯ ಕೇಶವ ಭಟ್ಟ, ತಾಯಿ ಸರಸ್ವತೀ ಅಮ್ಮ. ೭ನೇ ತರಗತಿಯವರೆಗಿನ ವಿದ್ಯಾಭ್ಯಾಸ. ತಮ್ಮ ೧೬ನೇ ವಯಸ್ಸಿನಲ್ಲಿ ಬಂಟ್ವಾಳ ಪಾಲ್ಲೂಕಿನ ಕನ್ಯಾನ ಸಮೀಪದ ಪಾದೇಕಲ್ಲಿನ ಕೃಷಿಕ ಮನೆತನದ 'ಮಾಧವ' ಎನ್ನುವವರೊಂದಿಗೆ ವಿವಾಹ. ಸವಿತಾ, ಅರುಣಾ ಎಂಬ ಇಬ್ಬರು ಹೆಣ್ಣು ಮಕ್ಕಳು. ತಮ್ಮ ೩೪ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರು. ಗಂಗಾ ಪಾದೇಕಲ್ ಅವರ ಸಾಹಿತ್ಯ ಕೃತಿಗಳು:

ಕಥಾ ಸಂಕಲನಗಳು

[ಬದಲಾಯಿಸಿ]
  • ಪುಲಪೇಡಿ ಮತ್ತು ಇತರ ಕಥೆಗಳು
  • ಹೆಜ್ಜೆ ಮೂಡದ ಹಾದಿಯಲ್ಲಿ
  • ಹೊಸಹೆಜ್ಜೆ
  • ವಾಸ್ತವ
  • ಕ್ಷಮಯಾ ಧರಿತ್ರಿ
  • ನೆಲೆ ತಪ್ಪಿದ ಹಕ್ಕಿ
  • ಮನ್ನಣೆಯ ದಾಹ
  • ಈ ಪ್ರಜಾರಾಜ್ಯದೊಳಗೆ
  • ಸಂಕ್ರಮಣ

ಕಾದಂಬರಿಗಳು:

[ಬದಲಾಯಿಸಿ]
  • ಹೊನ್ನಳ್ಳಿಯಲ್ಲೊಮ್ಮೆ
  • ಸೆರೆಯಿಂದ ಹೊರಗೆ
  • ಪಯಣದ ಹಾದಿಯಲ್ಲಿ
  • ಮೌನರಾಗಗಳು
  • ಬಂಗಾರದ ಜಿಂಕೆಯ ಹಿಂದೆ
  • ಇನ್ನೊಂದು ಅಧ್ಯಾಯ
  • ಅದೃಷ್ಟ ರೇಖೆಗಳು
  • ಕನಕಾಂಬರಿ
  • ಮೂರು ಕಿರುಕಾದಂಬರಿಗಳು
  • ಸೆರಗಿನ ಕೆಂಡ

'ಸಂಪಾದಿತ ಕೃತಿಗಳು:

[ಬದಲಾಯಿಸಿ]
  • ೧೯೯೪ - ಆಯ್ದ ಕತೆಗಳು (ಕಸಾಪ)
  • ಪ್ರತಿಬಿಂಬ - ಮುಳಿಯ ಕೃಷ್ಣಭಟ್ಟ - ಬದುಕು ಬರಹ
  • ಮುಳಿಯ ಮೂಕಾಂಬಿಕ
  • ಏರ್ಯ ಚಂದ್ರಭಾಗೀ ರೈ

ಪ್ರಶಸ್ತಿಗಳು

[ಬದಲಾಯಿಸಿ]

[]

  1. 'ಸೆರೆಯಿಂದ ಹೊರಗೆ' ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ
  2. ವನಿತಾ ಕಾದಂಬರಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ - 'ಇನ್ನೊಂದು ಅಧ್ಯಾಯ' ಕಾದಂಬರಿಗೆ
  3. ಅಕ್ಷಯ, ತುಷಾರ ಮಾಸಿಕಗಳಲ್ಲಿ ಬಹುಮಾನಗಳು - ವಿವಿಧ ಕತೆಗಳಿಗೆ
  4. ಪುಲಪೇಡಿ ಕತೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ
  5. ತಾಲ್ಲೂಕು, ಜಿಲ್ಲಾ ಮಟ್ಟದ ಹಲವು ಸಭೆ-ಸಮಾರಂಭಗಳಲ್ಲಿ ಪುರಸ್ಕಾರ.
  6. ರಾಜ್ಯೋತ್ಸವ ಪ್ರಶಸ್ತಿ
  7. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ []

ಇತರೆ ವಿಷಯಗಳು

[ಬದಲಾಯಿಸಿ]
  • ಇವರ ಕತೆಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.
  • ಇವರ 'ಹೊಸಹೆಜ್ಜೆ' ಕಥಾಸಂಕಲನ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ.
  • 'ಪುಲಪೇಡಿ' ಕತೆ ಇಂಗ್ಲಿಷ್ ಹಾಗೂ ತೆಲುಗಿಗೆ ಅನುವಾದವಾಗಿ ಪ್ರಕಟವಾಗಿದೆ.
  • 'ಪುಲಪೇಡಿ' ಕತೆ ರಂಗನಾಟಕವಾಗಿ ಪ್ರಯೋಗವಾಗಿದ್ದು, ಚಲನಚಿತ್ರಕ್ಕೂ ಆಯ್ಕೆಯಾಗಿದೆ.[]

ಉಲ್ಲೇಖ

[ಬದಲಾಯಿಸಿ]
  1. ೧.೦ ೧.೧ ೧.೨ ಚಂದ್ರಗಿರಿ, ನಾಡೋಜ ಡಾ.ಸಾರಾ ಅಬೂಬಕ್ಕರ್ ಅವರ ಅಭಿನಂದನ ಗ್ರಂಥ, ಸಂ.ಡಾ.ಸಬಿಹಾ, ಸಿರಿವರ ಪ್ರಕಾಶನ, ಬೆಂಗಳೂರು, ೨೦೦೯, ಪು.೩೩೮-೩೪೬