ಖೋಟಾಚಿ ವಾಡಿ

ವಿಕಿಪೀಡಿಯ ಇಂದ
Jump to navigation Jump to search

'Khotaci Wadi'[ಬದಲಾಯಿಸಿ]

ಮುಂಬಯಿನ ಹೃದಯದ ಮಧ್ಯೆ, ಸೆಂಟ್ರೆಲ್ ನಲ್ಲಿ, ಅತ್ಯಂತ ಹೆಸರುವಾಸಿಯಾಗಿರುವ ಮಂಡಿಪೇಟೆಗಳ ನಡುವೆ, ಚಿಕ್ಕ-ಚಿಕ್ಕ ಕಾಟೇಜ್ ಗಳು, ಹಾಗೂ ಆರ್ಚರ್ಡ್ ಗಳಿವೆ. ಅವನ್ನು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಸ್ಥಾನೀಯರು ’ವಾಡಿ,’ ಗಳೆಂದು ಕರೆಯುತ್ತಾರೆ. ಕೆಲವು, ’ಫನಸ್ ವಾಡಿಗಳು,’ , ಮತ್ತೆ ಕೆಲವು ’ಅಂಬೇ ವಾಡಿಗಳು’, ಆದರೆ ಪ್ರಾಚೀನ ಬೊಂಬಾಯಿಯ ಹಳೆಯ ಮೆರುಗನ್ನು ಮತ್ತು ಜೀವನ ಶೈಲಿಯನ್ನೂ ಇಂದಿಗೂ ತಮ್ಮ ತನವನ್ನು ಉಳಿಸಿಕೊಂಡಿವೆ. ಅಂತಹ ಚಾರಿತ್ರ್ಯಿಕ ತಾಣ, ಮುಂಬಯಿನಗರದಲ್ಲಿರುವ ಅತಿ-ಪ್ರಾಚೀನ ವಾಸ್ತವ್ಯದ ನಿವಾಸಿ-ಸ್ಥಾನ-'ಖೋಟಾಚಿ ವಾಡಿ,'

೧೫೦ ವರ್ಷಗಳ ಹಿಂದಿನ ಲೋಕಕ್ಕೆ ಸಾಗುತ್ತೇವೆ[ಬದಲಾಯಿಸಿ]

೨೧ ನೆಯ ಶತಮಾನದ ನವ-ಯುವಜನರು ಇಲ್ಲಿಗೆ ಬಂದರೆ, ಸುಮಾರು ೧೦೦-೧೫೦ ವರ್ಷಗಳ ಪುರಾತನ ವಿಶ್ವದ ಲೋಕವೊಂದಕ್ಕೆ ಹೋಗಿಬಿಡುತ್ತಾರೆ. ವರ್ಷವಿಡೀ ಬರುವ ಪರ್ಯಟಕರಿಗೆ, ಇಲ್ಲಿ ಒಂದು ಅನನ್ಯ ಅನುಭವ ಸಿಗುತ್ತದೆ. ವಾಸದ ಮನೆಗಳ ಎರಡು ಪಕ್ಕದಲ್ಲೂ, ದಾರಿತಪ್ಪಿಸುವ, ಅಂಕು-ಡೊಂಕಾದ ಕಾಲುದಾರಿಗಳು, ಇಂದಿಗೂ ಕಾಣಬರುವ ಹಳೆಯ ಮಾದರಿಯ ಸುಂದರ ಬಂಗಲೆಗಳು, ’ಅಮ್ಚೀ ಮುಂಬಯಿನವಾಸಿ,’ ಗಳಾದ, ಮುಂಬಯಿಕರ್ ಗಳು, ಗೋವ ನಗರದ ಮಾದರಿಯ ಜೀವನವನ್ನು ಇಷ್ಟಪಡುವವರು,ಇಲ್ಲಿ ಬೀಡು ಬಿಟ್ಟಿದ್ದಾರೆ. ಗಣಪತಿ, ದೀಪಾವಳಿ, ಹಾಗೂ ಕ್ರಿಸ್ಮಸ್ ಹಬ್ಬದ, ಸಮಯಕ್ಕೆ ಇಲ್ಲಿಗೆ ಬಂದರೆ,ಒಂದು ಅಲೌಕಿಕ ಅನುಭವ ನಮ್ಮನ್ನು ಎದುರಾಗುತ್ತದೆ.'ಖೋಟಾಚಿ ವಾಡಿ' ಯ ’ಮಾಹೊಲ್,’ ’ನಿಸರ್ಗ-ಪ್ರೇಮಿ,’ ಯಾಗಿದೆ. ಯಾರಿಗೂ ಗಟ್ಟಿಮರದ ದಿಮ್ಮಿಗಳಿಂದ ನಿರ್ಮಿಸಿದ ಬಂಗಲೆ-ಮನೆಗಳನ್ನು ಕಳೆದುಕೊಳ್ಳಲು ಇಚ್ಛೆಯಿಲ್ಲ. ಎಷ್ಟೋ ಜನ, ಇಲ್ಲಿ ಇನ್ನೂ ಬಾಡಿಗೆ ಮನೆಯಲ್ಲೇ ವಾಸವಾಗಿದ್ದಾರೆ. ಅವರೆಲ್ಲ ಒಕ್ಕೊರಲಿನಿಂದ ಹೇಳುವ ಮಾತು,'ಖೋಟಾಚಿ ವಾಡಿ,' ದಾಸಿಸಲು ಅತ್ಯಂತ-ಯೋಗ್ಯವಾದದ್ದು. " ನಮಗೆ 'ಸ್ಕೈ ಸ್ಕ್ರಾಪರ್,' ಕಟ್ಟಡಗಳು ಬೇಡ ; ಈ ಸ್ಥಳವೇ ನಮಗೆ ಅತ್ಯಂತ ಪ್ರಶಸ್ತವಾಗಿದೆ. ದಯಮಾಡಿ ನಮ್ಮ ಶಾತಿಗೆ ಭಂಗ ತರಬೇಡಿ "

'ಖೋಟಾಚಿ ವಾಡಿ' ತಲುಪಲು ಸಹಾಯ[ಬದಲಾಯಿಸಿ]

'ಖೋಟಾಚಿ ವಾಡಿ' ಗಿರ್ಗಾಮ್ ಹತ್ತಿರವಿರುವ, (ಗಿರ್ಗಾವ್) 'ಚರ್ನಿ ರೋಡ್,' (ಪೂ) ರೈಲ್ವೆ ಸ್ಟೇಶನ್ ಬಳಿಯೇ ಇದೆ. ಮೊದಲನೆ ಬಾರಿಗೆ ಅಲ್ಲಿಗೆ ಹೋಗುವವರಿಗೆ, ಒಂದು ಕಿವಿಮಾತೆಂದರೆ, ಚರ್ನಿ ರೋಡ್ ರೈಲ್ವೆ-ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಹೋದರೆ ಉತ್ತಮ.ದಾರಿ, ಅಂಕು-ಡೊಂಕು, ಹಾಗೂ ವಾಹನಗಳು ಅತಿ ಹೆಚ್ಚು. ಮುಂಬಯಿ ನ ’ಗಿರ್ಗಾಮ್,’ ಪ್ರದೇಶದಲ್ಲಿ, 'ಖೊಟಾಚಿವಾಡಿ ಹೆರಿಟೇಜ್ ಗ್ರಾಮ,' ವಾಗಿ ಹೆಸರಾಗಿದೆ.ಇಲ್ಲಿ ನಿರ್ಮಿಸಿದ ಮನೆಗಳು, ಆಗಿನಕಾಲದ ಪೋರ್ಚುಗೀಸರ ಮನೆಗಳ ವಾಸ್ತು-ವಿನ್ಯಾಸದ ಶೈಲಿಯಲ್ಲಿವೆ. ಪಥಾರೆ-ಪ್ರಭು ಪಂಗಡದ 'ಖೋಟ್,' ಯೆಂಬಾತ, ೧೮ ನೇ ಶತಮಾನದ ಮೊದಲಿನಲ್ಲಿ, ತನ್ನ ಜಮೀನುಗಳು, ಹಾಗೂ ೬೫ ಮನೆಗಳನ್ನು 'ಈಸ್ಟ್ ಇಂಡಿಯನ್ ಪರಿವಾರ,' ಗಳಿಗೆ ಮಾರಿದ್ದನಂತೆ. ಈಗ ಅಲ್ಲಿರುವ ಮನೆಗಳ ಸಂಖ್ಯೆ, ೨೮ ಕ್ಕಿಂತಾ ಕಡಿಮೆಯಾಗಿದೆ. ಮುಂಬಯಿನ ಎಲ್ಲೆಡೆಗಳಂತೆ, ಹಳೆಯ ಹೀನಾವಸ್ಥೆಯಲ್ಲಿರುವ ಕಟ್ಟಡಗಳನ್ನು ಕೆಡವಿ, ಹೊಸ ಬಹುಮಹಡಿಯ-ಕಟ್ಟಡಗಳು ಬರುತ್ತಿವೆ.

ಮನೆಗಳ ವಾಸ್ತುಶಿಲ್ಪ[ಬದಲಾಯಿಸಿ]

ಹಳೇ ಪೋರ್ಚುಗೀಸ್ ನಾಗರಿಕರ ವಾಸದ ಶೈಲಿಯ ಮನೆಗಳು ; ಗಟ್ಟಿಯಾದ ಬರ್ಮಾಟೀಕ್ ಮರದಲ್ಲಿ ಮಾಡಿದ್ದು. ಅಚ್ಚುಕಟ್ಟಾದ ಬಾಲ್ಕನಿಗಳು, ಸ್ಪ್ರಿಂಗ್ ಆಕಾರದ ಕಬ್ಬಿಣದ ಸುಂದರ ವಿನ್ಯಾಸದ ವೃತ್ತಾಕಾರದಲ್ಲಿ ಮೇಲಕ್ಕೇರುವ ಮೆಟ್ಟಿಲುಗಳು, ಮನೆಯ ಮುಂದೆ ಹಾಗೂ ಹೊರಗೆ ವಿಶಾಲವಾದ ವರಾಂಡ, ಹೊರೇಚ್ಛೆಯಾಗಿರುವ ವಾತಾವರಣ, ಮುಂತಾದವನ್ನು ವೀಕ್ಷಿಸಲು ಚೆನ್ನಾಗಿರುತ್ತದೆ. ಅಲ್ಲಿರುವ ವಾಸಿಗಳು ನೂರಾರುವರ್ಷಗಳಿಂದ ವಾಸ್ತವ್ಯಮಾಡುತ್ತಿರುವವರು, ಬೊಂಬಾಯಿನ ಮೂಲ ನಿವಾಸಿಗಳ ವಂಶೀಯರು. ಚೆನ್ನಾಗಿ ಬದುಕಿ ಬಾಳಿದವರು. ಕೆಲವರು ಅಲ್ಲಿಂದ ಹೊರಗೆ ಹೋದಮೇಲೆ, ಗುಜರಾತಿಗಳು, ಮಾರ್ವಾಡಿಗಳು, ಇಲ್ಲಿ ಹೆಚ್ಚಾಗಿ ಕಾಣಿಸುತ್ತಾರೆ.

ಸಂಪರ್ಕ ಕೊಂಡಿಗಳು[ಬದಲಾಯಿಸಿ]

http://www.karmayog.com/ngos/kwht.htm