ಖುಷ್ಬೀರ್ ಕೌರ್
ವೈಯುಕ್ತಿಕ ಮಾಹಿತಿ | ||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತೀಯರು | |||||||||||||||||||
ಜನನ | ಪಂಜಾಬ್, ಭಾರತ | ೯ ಜುಲೈ ೧೯೯೩|||||||||||||||||||
ಶಿಕ್ಷಣ | ಗುರು ನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ | |||||||||||||||||||
ಉದ್ಯೋಗ | ಅಥ್ಲೆಟ್, ಪಂಜಾಬ್ ಪೋಲಿಸ್ | |||||||||||||||||||
Sport | ||||||||||||||||||||
ದೇಶ | ಭಾರತ | |||||||||||||||||||
ಕ್ರೀಡೆ | ಅಥ್ಲೆಟಿಕ್ಸ್ | |||||||||||||||||||
ಸ್ಪರ್ಧೆಗಳು(ಗಳು) | ಓಟದ ನಡಿಗೆ | |||||||||||||||||||
Achievements and titles | ||||||||||||||||||||
ವೈಯಕ್ತಿಕ ಪರಮಶ್ರೇಷ್ಠ | ೫ ಕಿ.ಮೀ ನಡಿಗೆ: ೨೫:೩೦.೨೭ (ಸಿಂಗಾಪುರ ೨೦೧೦) ೧೦ ಕಿ.ಮೀ ನಡಿಗೆ: ೪೯:೨೧.೨೧ (ಬೆಂಗಳೂರು ೨೦೧೦) ೨೦ ಕಿ.ಮೀ ನಡಿಗೆ: ೧:೩೩:೦೭ (ಇಂಚಿಓನ್ ೨೯೧೪) | |||||||||||||||||||
ಪದಕ ದಾಖಲೆ
|
ಖುಷ್ಬೀರ್ ಕೌರ್ (ಜನನ ೯ ಜುಲೈ ೧೯೯೩) ಒಬ್ಬ ಭಾರತೀಯ ಅಥ್ಲೀಟ್ ಹಾಗೂ ೨೦ - ಕಿಲೋಮೀಟರ್ ಓಟದ ನಡಿಗೆಗಾರ್ತಿ. ಶ್ರೀಲಂಕಾದ ಕೊಲೊಂಬೋದಲ್ಲಿ ನಡೆದ ೨೦೧೨ರ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ [೧] ೧೦,೦೦೦ - ಮೀಟರ್ (೬.೨ ಮಿ) ಓಟದಲ್ಲಿ ಕಂಚಿನ ಪದಕವನ್ನು ಗೆದ್ದ ನಂತರ ಇವರು ಮೊದಲು ಬೆಳಕಿಗೆ ಬಂದರು. ಅವರು ೨೦೧೩ ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ, ೨೦ ಕಿಮೀ ನಡಿಗೆ ವಿಭಾಗದಲ್ಲಿ ಭಾಗವಹಿಸಿದರು. ಅವರು ೧:೩೪:೨೮ ಸೆಕೆಂಡಿನೊಂದಿಗೆ ೩೯ ನೇ ಸ್ಥಾನವನ್ನು ಪೂರ್ಣಗೊಳಿಸಿದರು. ೨೦೧೪ ರ ಜಪಾನ್‌ನಲ್ಲಿ ನಡೆದ ಏಷ್ಯನ್ ವಾಕಿಂಗ್ ಚಾಂಪಿಯನ್‌ಶಿಪ್‌ನಲ್ಲಿ, ಅವರು ೧:೩೩:೦೭ ಸೆಕೆಂಡಿನೊಂದಿಗೆ ಎರಡನೇ ಸ್ಥಾನ ಪಡೆದರು ಮತ್ತು ೧:೩೩:೩೭ ರ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿದರು. [೨] ಅದೇ ವರ್ಷ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸತತ ವಿಜಯಗಳ ನಂತರ ಅವರು ೨೦೧೭ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು. [೩]
ಖುಷ್ಬೀರ್ ಕೌರ್ ಅವರನ್ನು ಆಂಗ್ಲಿಯನ್ ಮೆಡಲ್-ಹಂಟ್ ಕಂಪನಿ ಬೆಂಬಲಿಸುತ್ತದೆ. [೪]
ಆರಂಭಿಕ ಜೀವನ
[ಬದಲಾಯಿಸಿ]ಕೌರ್ ಅಮೃತಸರ ಬಳಿಯ ರಸೂಲ್‌ಪುರ್ ಕಲಾನ್ ಎಂಬ ಹಳ್ಳಿಯಿಂದ ಬಂದವರು. [೫] ಅವರ ಕುಟುಂಬವು ರೈತ ಸಮುದಾಯದಲ್ಲಿ ಬೇರುಗಳನ್ನು ಹೊಂದಿದೆ. ಅವರ ತಾಯಿ ಜಸ್ಬೀರ್ ಕೌರ್ ಅವರು ಕ್ರೀಡೆಯನ್ನು ವೃತ್ತಿಪರವಾಗಿ ತೆಗೆದುಕೊಳ್ಳಲು ಪ್ರೋತ್ಸಾಹಿಸಿದರು. ಆರನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರು ತಾಯಿಯ ಆಶ್ರಯದಲ್ಲಿ ಬೆಳೆದರು.
೨೦೦೮ ರಲ್ಲಿ, ಅವರು ಶೂಗಳನ್ನು ಖರೀದಿಸಲು ಸಾಧ್ಯವಾಗದ ಕಾರಣ ಬರಿಗಾಲಿನಲ್ಲಿ ಓಟವನ್ನು ಪೂರ್ಣಗೊಳಿಸಿದರು.[೬] ಇದಲ್ಲದೆ, ಇವರು ೫ ಕಿ.ಮೀ ಹಾಗೂ ೧೦ ಕಿ.ಮೀ ಗಳಲ್ಲೂ ಸಹ ಕಿರಿಯ ರಾಷ್ಟೀಯ ದಾಖಲೆ ಪಡೆದರು. ರಾಷ್ಟ್ರೀಯ ಜೂನಿಯರ್ ಸರ್ಕ್ಯೂಟ್‌ನಲ್ಲಿ ಯಶಸ್ವಿ ಪ್ರದರ್ಶನದ ನಂತರ, ಅವರು ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು - ಯೂತ್ ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಸ್ಥಾನ ಮತ್ತು ಜೂನಿಯರ್ ಏಷ್ಯನ್ ಗೇಮ್ಸ್‌ನಲ್ಲಿ (೨೦೧೨) ಮೂರನೇ ಸ್ಥಾನ ಪಡೆದರು. ಅವರು ಜಪಾನ್‌ನಲ್ಲಿ ನಡೆದ ಸೀನಿಯರ್ ವಾಕಿಂಗ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಬಲ ೫ ನೇ ಸ್ಥಾನದ ಪ್ರದರ್ಶನವನ್ನು ಹೊಂದಿದ್ದರು.
ಅವರು ತಮ್ಮ ತರಬೇತಿಯ ಆರಂಭಿಕ ವರ್ಷಗಳಲ್ಲಿ ತರಬೇತುದಾರ ಬಲದೇವ್ ಸಿಂಗ್ ಅವರಿಂದ ಮಾರ್ಗದರ್ಶನ ಪಡೆದರು. [೬] ತರಬೇತುದಾರರಾದ ಅಲೆಕ್ಸಾಂಡರ್ ಆರ್ಟ್ಸಿಬಶೇವ್ ಮತ್ತು ಅಜಯ್ ರಾತಿ ಅವರು ನಂತರದ ಸ್ಪರ್ಧೆಗಳಲ್ಲಿ ಮಾರ್ಗದರ್ಶನ ನೀಡಿದರು. [೭]
೨೦೧೩ ಮಾಸ್ಕೋ ವಿಶ್ವ ಚಾಂಪಿಯನ್‌ಶಿಪ್
[ಬದಲಾಯಿಸಿ]ಕೌರ್ ಮಹಿಳೆಯರ ೨೦ ರಲ್ಲಿ ತಮ್ಮದೇ ಆದ ವೈಯಕ್ತಿಕ ಅತ್ಯುತ್ತಮ ಮತ್ತು ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿದರು. ೨೦ ಕಿಮೀ ಮಾಸ್ಕೋ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (೨೦೧೩) ೧:೩೪:೨೮ ಸಮಯದಲ್ಲಿ ನಡೆದು [೮] [೯] ೩೯ ನೇ ಸ್ಥಾನ ಪಡೆದರು.
೨೦೧೪ ಏಷ್ಯನ್ ಗೇಮ್ಸ್, ಇಂಚಿಯಾನ್ (ಪಿಆರ್‌ಕೆ)
[ಬದಲಾಯಿಸಿ]ರೇಸ್ ವಾಕ್ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ತಮ್ಮ ವೈಯಕ್ತಿಕ ಶ್ರೇಷ್ಠತೆಯನ್ನು ಉತ್ತಮಗೊಳಿಸುವ ಮೂಲಕ ಮತ್ತು ಪ್ರಕ್ರಿಯೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸುವ ಮೂಲಕ ಕೌರ್ ೨೦ ಕಿಮೀ ರ ಗಡಿ ದಾಟಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ಅಮೃತಸರದ ೨೧ ವರ್ಷ ವಯಸ್ಸಿನವರ ೧:೩೩:೦೭ ಸಮಯದ ತಮ್ಮ ಹಿಂದಿನ ವೈಯಕ್ತಿಕ ಅತ್ಯುತ್ತಮವನ್ನು ಸುಧಾರಿಸಿದರು, ಇದು ರಾಷ್ಟ್ರೀಯ ದಾಖಲೆಯಾಗಿದೆ, ಮ್ಯಾರಥಾನ್ ಕೋರ್ಸ್‌ನಲ್ಲಿ ಎರಡನೇ ಸ್ಥಾನವನ್ನು ಗಳಿಸಿದೆ.
೨೦೧೬ ರಿಯೊ ಒಲಿಂಪಿಕ್ಸ್
[ಬದಲಾಯಿಸಿ]೨೦೧೬ ರ ಒಲಿಂಪಿಕ್ಸ್‌ನಲ್ಲಿ, ಅವರು ೨೦ ಕಿಮೀ ನಲ್ಲಿ ೫೪ ನೇ ಸ್ಥಾನವನ್ನು ಪಡೆದರು. ಓಟದ ನಡಿಗೆಯ ಮೂಲಕ ಪ್ರತಿಷ್ಠಿತ ಅಂತರಾಷ್ಟ್ರೀಯ ಕ್ರೀಡಾ ಚಾಂಪಿಯನ್‌ಶಿಪ್‌ನಲ್ಲಿ ಗುರುತಿಸಿಕೊಂಡರು. [೧೦] ಅವರ ಹಿಂದಿನ ರಾಷ್ಟ್ರೀಯ ದಾಖಲೆಗಳಿಂದ ದೂರವಿರುವ ಓಟದ ದೂರವನ್ನು ಪೂರ್ಣಗೊಳಿಸಲು ಅವರು ೧ ಗಂಟೆ, ೪೦ ನಿಮಿಷ ಮತ್ತು ೩೦ ಸೆಕೆಂಡುಗಳನ್ನು ತೆಗೆದುಕೊಂಡರು. [೧೧]
೨೦೧೮ ಕಾಮನ್‌ವೆಲ್ತ್ ಗೇಮ್ಸ್
[ಬದಲಾಯಿಸಿ]ಆಸ್ಟ್ರೇಲಿಯಾದಲ್ಲಿ ನಡೆದ ೨೧ ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಮಹಿಳೆಯರ ೨೦ ಕಿಲೋಮೀಟರ್ ರೇಸ್‌ವಾಕ್ ಸ್ಪರ್ಧೆಯಲ್ಲಿ ಅವರು ೧ ಗಂಟೆ ೩೯ ನಿಮಿಷಗಳು ಮತ್ತು ೨೧ ಸೆಕೆಂಡ್‌ಗಳಲ್ಲಿ ಕ್ರಮಿಸಿ ನಾಲ್ಕನೇ ಸ್ಥಾನ ಪಡೆದರು.
ಉಲ್ಲೇಖಗಳು
[ಬದಲಾಯಿಸಿ]- ↑ Kaur, Khushbir. "Profile". IAAF. Retrieved 17 September 2013.
- ↑ "AFI". indianathletics.in.
- ↑ Choudhury, Angikaar. "Know your Arjuna awardee: Khushbir Kaur, an Asiad silver-medallist, has walked her way to glory". Scroll.in (in ಅಮೆರಿಕನ್ ಇಂಗ್ಲಿಷ್). Retrieved 2018-08-25.
- ↑ Anglian Medal Hunt Company. "Profile". Official website of AMHC.
- ↑ Singh, Navneet. "Why Asiad medallist Khushbir Kaur's family is living in a cowshed". Hindustan Times. Retrieved 25 September 2021.
- ↑ ೬.೦ ೬.೧ Choudhury, Angikaar. "Know your Arjuna awardee: Khushbir Kaur, an Asiad silver-medallist, has walked her way to glory". Scroll.in (in ಅಮೆರಿಕನ್ ಇಂಗ್ಲಿಷ್). Retrieved 2018-08-25.Choudhury, Angikaar. "Know your Arjuna awardee: Khushbir Kaur, an Asiad silver-medallist, has walked her way to glory". Scroll.in. Retrieved 25 August 2018.
- ↑ "Athletics | Athlete Profile: Khushbir KAUR - Gold Coast 2018 Commonwealth Games". results.gc2018.com (in ಆಸ್ಟ್ರೇಲಿಯನ್ ಇಂಗ್ಲಿಷ್). Archived from the original on 2018-08-25. Retrieved 2018-08-25.
- ↑ Kaur, Khushbir. "Khushbir Kaur finishes 39th in 20km walk, betters national record". NDTV Sports. Archived from the original on 17 August 2013. Retrieved 13 August 2013.
- ↑ Kaur, Khushbir (14 August 2013). "Khushbir Kaur finishes 39th but creates national record in 20-kilometre walk". Mid Day.
- ↑ "From Living In A Cowshed To Winning Silver At 2014 Asian Games, Meet Khushbir Kaur". The Logical Indian (in ಅಮೆರಿಕನ್ ಇಂಗ್ಲಿಷ್). 2018-08-15. Retrieved 2018-08-25.
- ↑ "Rio 2016: India's Khushbir Kaur finishes 54th in women's 20km Race Walk". India Today (in ಇಂಗ್ಲಿಷ್). Retrieved 2018-08-25.