ಖಾಜಾ
ಗೋಚರ
ಖಾಜಾ ಒಂದು ಭಾರತೀಯ ಡಿಜ಼ರ್ಟ್ ಮತ್ತು ಒರಿಸ್ಸಾದ ಸಿಹಿ ಖಾದ್ಯವಾಗಿದೆ.
ಮಾನಸೋಲ್ಲಾಸದಲ್ಲಿ ಉಲ್ಲೇಖಿತವಾದ ಸಾದಾ ಅಥವಾ ಸಿಹಿ ಖಜ್ಜಕವು ತುಪ್ಪದಲ್ಲಿ ಕರಿಯಲಾದ ಗೋಧಿ ಹಿಟ್ಟಿನ ತಯಾರಿಕೆಯಾಗಿತ್ತು.[೧] ಖಾಜಾ ಪೂರ್ವ ಅವಧ್ ರಾಜ್ಯದ ಪೂರ್ವ ಭಾಗಗಳಿಂದ ಮತ್ತು ಪೂರ್ವದ ಆಗ್ರಾ ಹಾಗೂ ಔಧ್ ಸಂಯುಕ್ತ ಪ್ರಾಂತ್ಯದ ಹುಟ್ಟಿಕೊಂಡಿತು ಎಂದು ನಂಬಲಾಗಿದೆ. ಇದು ಒಡಿಶಾ ರಾಜ್ಯ ಮತ್ತು ಕಚ್‍ನಂತಹ ಪ್ರದೇಶಗಳು ಹಾಗೂ ಆಂಧ್ರಪ್ರದೇಶಕ್ಕೆ ಸ್ಥಳೀಯವಾಗಿದೆ.[೨][೩] ಮೈದಾಕ್ಕೆ ಸಕ್ಕರೆಯನ್ನು ಸೇರಿಸಿ ಪದರಗಳಿರುವ ಕಣಕವಾಗಿ ಮಾಡಲಾಗುತ್ತದೆ. ಒಳಗೆ ಒಣಫಲ ಅಥವಾ ಇತರ ಹೂರಣವನ್ನು ತುಂಬಿಸಬಹುದು ಅಥವಾ ತುಂಬಿಸದಿರಬಹುದು ಮತ್ತು ಎಣ್ಣೆಯಲ್ಲಿ ಸ್ವಲ್ಪ ಕರಿಯಲಾಗುತ್ತದೆ.[೪] ಇದು ಒಡಿಶಾದ ಅತಿ ಪ್ರಸಿದ್ಧ ಸಿಹಿ ಖಾದ್ಯಗಳಲ್ಲಿ ಒಂದಾಗಿದೆ ಮತ್ತು ಎಲ್ಲ ಒಡಿಯಾ ಜನರ ಭಾವನೆಗಳಿಗೆ ಸಂಬಂಧಿಸಿದೆ. ಇದನ್ನು ಜಗನ್ನಾಥ ದೇವಾಲಯದಲ್ಲಿ ನೈವೇದ್ಯವಾಗಿಯೂ ಅರ್ಪಿಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Full text of "Indian Food Tradition A Historical Companion Achaya K. T."". archive.org. Retrieved 2019-01-30.
- ↑ Gopinath Mohanty; Jeeban Kumar Patnaik; Santosha Kumāra Ratha. Cultural heritage of [Orissa]. State Level Vyasakabi Fakir Mohan Smruti Samsad.
- ↑ Orissa Review. Home Department, Government of Orissa. 1990.
- ↑ Elizabeth Fernandez, Sugar and spice and all things nice, ISBN 978-1409287223