ಖಾಜಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Baleswari khaja pheni Oriya cuisine.jpg

ಖಾಜಾ ಒಂದು ಭಾರತೀಯ ಡಿಜ಼ರ್ಟ್ ಮತ್ತು ಒರಿಸ್ಸಾದ ಸಿಹಿ ಖಾದ್ಯವಾಗಿದೆ.

ಮಾನಸೋಲ್ಲಾಸದಲ್ಲಿ ಉಲ್ಲೇಖಿತವಾದ ಸಾದಾ ಅಥವಾ ಸಿಹಿ ಖಜ್ಜಕವು ತುಪ್ಪದಲ್ಲಿ ಕರಿಯಲಾದ ಗೋಧಿ ಹಿಟ್ಟಿನ ತಯಾರಿಕೆಯಾಗಿತ್ತು.[೧] ಖಾಜಾ ಪೂರ್ವ ಅವಧ್ ರಾಜ್ಯದ ಪೂರ್ವ ಭಾಗಗಳಿಂದ ಮತ್ತು ಪೂರ್ವದ ಆಗ್ರಾ ಹಾಗೂ ಔಧ್ ಸಂಯುಕ್ತ ಪ್ರಾಂತ್ಯದ ಹುಟ್ಟಿಕೊಂಡಿತು ಎಂದು ನಂಬಲಾಗಿದೆ. ಇದು ಒಡಿಶಾ ರಾಜ್ಯ ಮತ್ತು ಕಚ್‍ನಂತಹ ಪ್ರದೇಶಗಳು ಹಾಗೂ ಆಂಧ್ರಪ್ರದೇಶಕ್ಕೆ ಸ್ಥಳೀಯವಾಗಿದೆ.[೨][೩] ಮೈದಾಕ್ಕೆ ಸಕ್ಕರೆಯನ್ನು ಸೇರಿಸಿ ಪದರಗಳಿರುವ ಕಣಕವಾಗಿ ಮಾಡಲಾಗುತ್ತದೆ. ಒಳಗೆ ಒಣಫಲ ಅಥವಾ ಇತರ ಹೂರಣವನ್ನು ತುಂಬಿಸಬಹುದು ಅಥವಾ ತುಂಬಿಸದಿರಬಹುದು ಮತ್ತು ಎಣ್ಣೆಯಲ್ಲಿ ಸ್ವಲ್ಪ ಕರಿಯಲಾಗುತ್ತದೆ.[೪] ಇದು ಒಡಿಶಾದ ಅತಿ ಪ್ರಸಿದ್ಧ ಸಿಹಿ ಖಾದ್ಯಗಳಲ್ಲಿ ಒಂದಾಗಿದೆ ಮತ್ತು ಎಲ್ಲ ಒಡಿಯಾ ಜನರ ಭಾವನೆಗಳಿಗೆ ಸಂಬಂಧಿಸಿದೆ. ಇದನ್ನು ಜಗನ್ನಾಥ ದೇವಾಲಯದಲ್ಲಿ ನೈವೇದ್ಯವಾಗಿಯೂ ಅರ್ಪಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Full text of "Indian Food Tradition A Historical Companion Achaya K. T."". archive.org. Retrieved 2019-01-30.
  2. Gopinath Mohanty; Jeeban Kumar Patnaik; Santosha Kumāra Ratha. Cultural heritage of [Orissa]. State Level Vyasakabi Fakir Mohan Smruti Samsad.
  3. Orissa Review. Home Department, Government of Orissa. 1990.
  4. Elizabeth Fernandez, Sugar and spice and all things nice, ISBN 978-1409287223
"https://kn.wikipedia.org/w/index.php?title=ಖಾಜಾ&oldid=990764" ಇಂದ ಪಡೆಯಲ್ಪಟ್ಟಿದೆ