ಖಲೀದ್ ಮಸೂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಲೀದ್ ಮಸೂದ್
ಜನನ೨೫ ಡಿಸೆಂಬರ್ ೧೯೬೪
ಕೆಂಟ್, ಇಂಗ್ಲೆಂಡ್
ಮರಣ (aged 52)
ಲಂಡನ್, ಇಂಗ್ಲೆಂಡ್
Alias(es)ಖಲೀದ್ ಮಸೂದ್
Conviction(s)ಕ್ರಿಮಿನಲ್ ಹಾನಿ (೧೯೮೩)

ಚಾಕು ಒಡೆತನ (೨೦೦೩)

ಇತರೆ ಹಲ್ಲೆಗಳು, ಗಂಭೀರ ದೈಹಿಕ ಹಾನಿ, ಸಾರ್ವಜನಿಕ ಅಪರಾಧಗಳು
ಮಕ್ಕಳುuಒಂದು ಅಥವಾ ಮೂರು[೧]

ಖಲೀದ್ ಮಸೂದ್ ಅಲಿಯಾಸ್ ಖಲೀದ್ ಚೌಧರಿಯನ್ನು ೨೦೧೭ರ ಲಂಡನ್ನಿನ ವೆಸ್ಟ್ಮಿನ್ಸ್ಟರ್ ಮೇಲಿನ ಮಾರಣಾಂತಿಕ ದಾಳಿಯ ಏಕೈಕ ದೋಷಿಯೆಂದು ಗುರುತಿಸಲಾಗಿದೆ. ಈ ದಾಳಿಯ ಸಂದರ್ಭದಲ್ಲಿ ಈತನು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.[೨]

ಹಿನ್ನೆಲೆ[ಬದಲಾಯಿಸಿ]

ದೇಶದ ದೇಶೀಯ ಗುಪ್ತಚರ ಸಂಸ್ಥೆಯಾದ MI5 ನಡೆಸಿರುವ ಪ್ರಾಥಮಿಕ ತನಿಖೆಗಳ[೩] ಮೂಲಕ ಈತನು ಹಿಂದೊಮ್ಮೆ ಹಿಂಸಾತ್ಮಕ ಉಗ್ರಗಾಮಿತ್ವವನ್ನು ಹೊಂದಿದ್ದ[೪] ಎನ್ನುವ ಅಂಶವು ಬೆಳಕಿಗೆ ಬಂದಿದೆ. ಹಲವಾರು ಪತ್ರಿಕಾವರದಿಗಳು ಸೂಚಿಸುವಂತೆ ಈತನು ಇನ್ನೂ ಹಲವಾರು ಹೆಸರುಗಳಿಂದ ಕರೆಯಲ್ಪಟ್ಟಿದ್ದಿರಬಹುದು.[೫]

ಮಸೂದ್ ಎಸಗಿದ್ದ ಹಲವಾರು ಕ್ರಿಮಿನಲ್ ಆರೋಪಗಳಿಂದಾಗಿ ಪೊಲೀಸರಿಗೆ ಈ ಮೊದಲೇ ಪರಿಚಿತನಾಗಿದ್ದನು. ಹಳೆಯ ಕ್ರಿಮಿನಲ್ ಆರೋಪವೆಂದರೆ ೧೯೮೩ರ ಕ್ರಿಮಿನಲ್ ಹಾನಿ ಹಾಗೂ ಇತ್ತೀಚಿನ ಆರೋಪವೆಂದರೆ ಡಿಸೆಂಬರ್ ೨೦೦೩ರಲ್ಲಿ ಅನಧಿಕೃತ ಚಾಕುವಿನ ಒಡೆತನವಾಗಿವೆ.[೬] ಅವುಗಳೊಂದಿಗೆ, ಹಲ್ಲೆಗಳಿಗೆ ಸಂಬಂಧಿಸಿದ ಆರೋಪಗಳು, ಗಂಭೀರ ದೈಹಿಕ ಹಾನಿ ಮತ್ತು ಇತರ ಸಾರ್ವಜನಿಕ ಅಪರಾಧಗಳ ಮೇಲಿನ ಆರೋಪಗಳೂ ಸೇರಿವೆ.[೭]

ವೈಯಕ್ತಿಕ ಜೀವನ[ಬದಲಾಯಿಸಿ]

ಮಸೂದ್ ಡಿಸೆಂಬರ್ ೨೫, ೧೯೬೪ರಲ್ಲಿ ಇಂಗ್ಲೆಡಿನ ಕೆಂಟ್‍ನಲ್ಲಿ ಜನಿಸಿದ. ಈತನ ಹುಟ್ಟುಹೆಸರು ಇನ್ನೂ ತಿಳಿದಿಲ್ಲದೇ ಇರಬಹುದೆದು ಪೊಲೀಸರು ಶಂಕಿಸಿದ್ದಾರೆ.[೮]

ಮಸೂದ್ ಒಬ್ಬ ಪರಿವರ್ತಿತ ಮುಸಲ್ಮಾನನಾಗಿದ್ದ. ಈತನಿಗೆ ಮದುವೆಯಾಗಿದ್ದು[೯] ಒಂದು ಅಥವಾ ಮೂರು ಮಕ್ಕಳ ತಂದೆಯಾಗಿದ್ದ[೧೦]. ಈತನಿಗೆ ದೇಹದಾರ್ಢ್ಯದಲ್ಲಿ ಆಸಕ್ತಿಯಿತ್ತೆಂದೂ[೧೧][೧೨][೧೩], ವಿನ್‍ಸನ್‍ ಗ್ರೀನ್‍ನ ಹೇಗ್ಲಿ ರಸ್ತೆಯ ರೆಸ್ಟೋರೆಂಟೊಂದರ ಮೇಲೆ ವಾಸವಿದ್ದನೆಂದೂ, ಸಾಮಾನ್ಯವಾಗಿ ಸಾಂಪ್ರದಾಯಿಕ ಇಸ್ಲಾಂ ಬಿಳಿ ನಿಲುವಂಗಿಯನ್ನು ಧರಿಸುತ್ತಿದ್ದನೆಂದೂ ತಿಳಿದುಬಂದಿದೆ. ಹಿಂದಿನ ನೆರೆಹೊರೆಯವರ ಪ್ರಕಾರ ಮಸೂದ್ "ತನ್ನ ತೋಟದ ಆರೈಕೆ ಮಾಡಲಿಚ್ಛಿಸುವ ಯಾವುದೇ ಸಾಮಾನ್ಯ ಕೌಟುಂಬಿಕ ವ್ಯಕ್ತಿಯಂತೆ ಕಾಣುತ್ತಿದ್ದ[೧೪]" ಎಂದೂ, "ಸಂಜೆಯಾದ ಬಳಿಕ ವಿರಳವಾಗಿ ಹೊರನಡೆಯುತ್ತಿದ್ದ" ಎಂದು, ಮತ್ತು "ಮಸೂದ್ ತನ್ನ ಮಕ್ಕಳನ್ನು ಶಾಲೆಗೆ ನಡೆದೇ ಕರೆದುಕೊಂಡು ಹೋಗುತ್ತಿದ್ದ" ಎಂದೂ ತಿಳಿದುಬಂದಿದೆ.

ಉಲ್ಲೇಖಗಳು[ಬದಲಾಯಿಸಿ]

 1. "London terror attack: Killer identified as 52-year-old Khalid Masood".
 2. "Khalid Masood named by London police as man behind terror attack".
 3. "London attack: 8 arrests as police probe attacker's links".
 4. "London Attacker Identified as Khalid Masood".
 5. "U.K. attacker ID'd as Khalid Masood, British-born man once investigated for 'violent extremism'".
 6. "London attack: Terrorist named as Khalid Masood by police".
 7. "London attack: Khalid Masood named as perpetrator".
 8. "Khalid Masood: London attacker was known to MI5 but had no terror convictions".
 9. "Everything we know about Khalid Masood, the London attacker".
 10. "Birmingham neighbour: Khalid Masood seemed calm and reserved".
 11. "London attack: 75-year-old man dies in hospital becoming fourth victim of terror outrage – as police name attacker as British-born Khalid Masood".
 12. "Who was London terror attacker Khalid Masood?".
 13. "Live: Kent-born man, 52, named as Westminster attacker".
 14. "Khalid Masood Identified as London Parliament Attacker".