ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಕ್ಷಗಾನ ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಒಂದು ಕಲೆ. ಯಕ್ಷಗಾನ ಗೀತೆ- ವಾದ್ಯ- ನೃತ್ಯಗಳ ಸಮ್ಮಿಶ್ರವಾದ ಕಲೆ. ಯಕ್ಷಗಾನ ಭಕ್ತಿ ಚಳುವಳಿಯ ಸಮಯದಲ್ಲಿ ಪೂರ್ವ ಶಾಸ್ತ್ರೀಯ ಸಂಗೀತ ಮತ್ತು ರಂಗಭೂಮಿಯಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗಿದೆ[೧]. ಯಕ್ಷಗಾನದಲ್ಲಿ ಮೂಡಲಪಾಯ ಹಾಗೂ ಪಡುವಲುಪಾಯ ಎಂಬ ಎರಡು ವಿಧಗಳಿದೆ. ಪಡುವಲುಪಾಯದಲ್ಲಿ ತೆಂಕುತಿಟ್ಟು ಹಾಗೂ ಬಡಗತಿಟ್ಟು ಎಂಬ ಎರಡು ಪ್ರಭೇದಗಳಿವೆ. ಧರ್ಮಸ್ಥಳ ಯಕ್ಷಗಾನ ಮೇಳವು ತೆಂಕುತಿಟ್ಟು ಪದ್ಧತಿಗೆ ಸೇರುತ್ತದೆ.

ಡಾ. ರಾಮಕೃಷ್ಣ ಜೋಶಿಯವರು ವ್ಯಾಖ್ಯಾನಿಸುವಂತೆ "ಸಂಗೀತ ನೃತ್ಯ, ಅಭಿನಯ, ಚಿತ್ರ ಮತ್ತು ಮಾತುಗಾರಿಕೆಗಳೆಂಬ ಕಲಾತ್ಮಕ ಸಮ್ಮಿಲನವೇ ಯಕ್ಷಗಾನ". ವ್ಯುತ್ಪತ್ತಿಯ ಪ್ರಕಾರ ಯಕ್ಷಗಾನ ಎಂದರೆ ದೇವಮಾನವರ ಹಾಡುಗಳು[೨]. ದಕ್ಷಿಣಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಸುಮಾರು ಹತ್ತು, ಹನ್ನೇರಡು ಆಟದ ಮೇಳಗಳು ಇದೆ. ಅವುಗಳಲ್ಲಿ ಧರ್ಮಸ್ಥಳ ಯಕ್ಷಗಾನ ಮೇಳವು ಒಂದು. ಪುತ್ತೂರಿನಲ್ಲಿ ನೆಡೆದಿರುವ ಪೌರಾಣಿಕ ಯಕ್ಷಗಾನ, ಅಲ್ಲಿ ನೇಡೆದಿರುವ ಪ್ರಸಂಗ: ಸುದರ್ಶನ ವಿಜಯ- ಮಾಯಾ ಸೀತೆ. ಇದನ್ನು ರಾತ್ರಿ ಹೊತ್ತು ನಾಲ್ಕೂವರೆ ಗಂಟೆ ನಡೆದ ಪ್ರಸಂಗವನ್ನು ೨೦ ಸಾವಿರ ಪ್ರೇಕ್ಷಕರು ವೀಕ್ಷಿಸಿದ್ದು, ಇದು ಯಕ್ಷಗಾನ ಮೇಳಗಳ ಇತಿಹಾಸದಲ್ಲೇ ಒಂದು ಹೊಸ ದಾಖಲೆಯಾಗಿದೆ[೩]. ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನವು ೨೦೨೩ರ ಫೆಬ್ರವರಿ ೧೧, ೧೨ ರಂದು ಕುಂಜಿಬೆಟ್ಟುವಿನ ಎಂಜಿಎಂ ಕಾಲೇಜು ಮೈದಾನದಲ್ಲಿಉದ್ಘಾಟನೆಗೊಂಡಿತು[೪]. ೨೦೨೪ ರಲ್ಲಿ ಡಿಸಂಬರ್‌ ೪ರವರೆಗೆ ಧರ್ಮಸ್ಥಳ ಕ್ಷೇತ್ರದಲ್ಲೆಸೇವಾ, ಹರಕೆ ಬಯಾಲಾಟ ಪ್ರದರ್ಶನಗಳು ನೇಡೆದಿದೆ.[೫]

ಇತಿಹಾಸ[ಬದಲಾಯಿಸಿ]

ಕ್ಷೇತ್ರದ ಧರ್ಮಸ್ಥಳ ಯಕ್ಷಗಾನ ಮೇಳಕ್ಕೆ ಎರಡು ಶತಮಾನಗಳ ಹಿನ್ನೆಲೆಯಿದೆ. ಕ್ರಿ.ಶ. ೧೮೧೨ರಲ್ಲಿ ಅಂದಿನ ಕಾಲದ ಧರ್ಮಾಧಿಕಾರಿಗಳಾದ ಶ್ರೀ ಕುಮಾರಯ್ಯ ಹೆಗಡೆಯವರು ಮೈಸೂರು ಸಂಸ್ಥಾನದ ಅರಸರಾಗಿದ್ದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಸನ್ನಿಧಾನಕ್ಕೆ ದಶಾವತಾರ ಮೇಳವೊಂದನ್ನು ಕಳುಹಿಸಿ ಕೊಟ್ಟಿದ್ದರೆಂದು ತಾರೀಕು ೧೨-೧೧-೧೮೬೭ ರಲ್ಲಿ ಆಗ ಧರ್ಮಾಧಿಕಾರಿಗಳಾದ ಮಂಜಯ್ಯ ಹೆಗಡೆಯವರಿಗೆ ಬರೆದ ಪತ್ರ ಒಂದರಿಂದ ತಿಳಿದು ಬಂದಿದೆ. ರಾಜ ಮುದ್ರಾಂಕಿತವಾದ ಈ ಪತ್ರದ ಆಧಾರದ ಮೇಲೆ ನಾವು ಧರ್ಮಸ್ಥಳದಲ್ಲಿ ೧೮೧೨ನೇ ಇಸವಿಗಿಂತ ಮೊದಲು ಯಕ್ಷಗಾನ ಮೇಳ ಅಸ್ಥಿತ್ವದಲ್ಲಿ ಇತ್ತು ಎಂದು ಖಚಿತಪಡಿಸಿಕೊಳ್ಳಬಹುದು. ೧೯೩೨ರಲ್ಲಿ ಧರ್ಮಸ್ಥಳ ಮೇಳದ ಆಟವು ಮೋದಲ ತಿರುಗಾಟವನ್ನು ಶುರು ಮಾಡಿತು. ಶ್ರೀ ಮಂಜಯ್ಯ ಹೆಗಡೆಯವರ ನಂತರ ಧರ್ಮಾಧಿಕಾಗಳಾದ ಶ್ರೀ ರತ್ನವರ್ಮ ಹೆಗಡೆಯವರು ಧರ್ಮಸ್ಥಳ ಯಕ್ಷಗಾನ ಮೇಳವು ಸ್ವತಂತ್ರವಾಗಿ ಕ್ಷೇತ್ರದಿಂದ ಹೋರಡುವಂತೆ ಮಾಡಿದರು. ಅದಕ್ಕಿಂತ ಮೊದಲು ದೇವರ ಹೆಸರಿನಲ್ಲಿ ಮೇಳವನ್ನು ಬೇರೆಯವರು ನೆಡೆಸುತ್ತಿದ್ದರು. ಜಿಲ್ಲೆಯ ಹೆಸರಾಂತ ಕಲಾವಿದರನ್ನೇಲ್ಲ ಆಹ್ವಾನಿಸಿ ಧರ್ಮಸ್ಥಳ ಮೇಳದಲ್ಲಿ ಕಲೆ ಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಪೂಜ್ಯ ವೀರೇಂದ್ರ ಹೆಗಡೆಯವರು ಧರ್ಮಾಧಿಕಾರಿಗಳಾದ ಬಳಿಕ ಧರ್ಮಾಸ್ಥಳ ಮೇಳ ಸರ್ವಾಂಗ ಸುಂದರವಾಗಿ ರೂಪತಾಳಿತು. ಅವರು ಈ ಮೇಳದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದರು. "ಯಕ್ಷಗಾನದ ಮೂಲ ಸ್ವರೂಪ ಅಳಿಯಬಾರದೆಂದು ವಿಭಿನ್ನ ಪಾತ್ರಗಳ ಸಂಪ್ರದಾಯಕ್ಕೆ ಅನುಗುಣವಾಗಿ ಮರದ ಕಿರೀಟಗಳನ್ನು, ಆಭರಣಗಳನ್ನು ಅಣಿಗೋಳಿಸುವಂತೆ ಮಾಡಿದರು. ಯಕ್ಷಗಾನ ರಂಗದಿಂದ ಇಂದು ಮಾಯವಾಗಿರುವ ಬಣ್ಣದ ವೇಷದ ಕಿರೀಟಗಳು , ಹನುಮಂತನ ಕರೀಟಗಳು, ಹೆಣ್ಣು ವೇಷದ ಕಿರೀಟಗಳು ಇತ್ಯಾದಿಗಳನ್ನು ಮಾಡಿಸಿ ಕಿರೀಟಗಳನ್ನು ಇಟ್ಟುಕೋಳ್ಳಲೇಬೇಕು, ಆಭರಣಗಳನ್ನು ಕಟ್ಟಿಕೋಳ್ಳಲೇಬೇಕು ಎಂಬ ಕಟ್ಟಪ್ಪಣೆಯನ್ನು ಮಾಡಿದರು. ಪೌರಾಣಿಕವನ್ನು ಹೊರತು ಪಡಿಸಿ ಬೇರೆ ಆಟ ಆಡುವಂತಿಲ್ಲ ಎಂದು ಆಜ್ಞೆ ಹೊರಡಿಸಿದರು. ಇದಕ್ಕೆ ಪೂರಕವಾಗಿ ವಿದ್ವಾಂಸರಾದ ಶ್ರೀ ಅಮೃತ ಸೋಮೇಶ್ವರರ ಮೂಲಕ ಧರ್ಮಸ್ಥಳದ ಮೇಳಕ್ಕೇಂದೆ ಹಲವಾರು ಶುದ್ಧ ಪೌರಾಣಿಕ ನಾಟಕಗಳನ್ನು ರಚಿಸಲಾಯಿತು. ತೆಂಕುತಿಟ್ಟು ಸಂಪ್ರದಾಯ ವಿನಾಶದ ಅಂಚಿನಲ್ಲಿದ್ದಾಗ ಶ್ರೀ ಹೆಗ್ಗಡೆಯವರು ಧರ್ಮಸ್ಥಳದ ಮೇಳದ ಮೂಲಕ ಅದಕ್ಕೋಂದು ಹೊಸ ಭರವಸೆಯನ್ನು ತಂದುಕೊಟ್ಟರು. ಈ ಮೇಳ ೧೦,೦೦೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ, ಈ ಪ್ರದರ್ಶನವು ಭಾರತದಲ್ಲಿ ಮಾತ್ರವಲ್ಲದೆ ಯುಎಸ್ಎ, ಇಂಗ್ಲೆಂಡ್, ಸ್ಪೇನ್, ಬಹ್ರೇನ್, ಫ್ರಾನ್ಸ್, ಚೀನಾ, ನೇಪಾಳ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿ, ಸ್ಥಳೀಯ ಕಥೆಗಳು ಮತ್ತು ಸಂಸ್ಕೃತಿಯ ರುಚಿಗಳನ್ನು ಹರಡಿದೆ[೬]. ಧರ್ಮಸ್ಥಳ ಮೇಳದಲ್ಲಾದ ಬದಲಾವಣೆಯಿಂದ ಜಿಲ್ಲೆ ಹಾಗೂ ರಾಜ್ಯಾದಾದ್ಯಂತ ಯಕ್ಷಗಾನ ಪ್ರೇಕ್ಷಕ ವರ್ಗವನ್ನು ಹೊಂದಿದೆ.

ತರಬೇತಿ ಕೇಂದ್ರ[ಬದಲಾಯಿಸಿ]

ಯಕ್ಷಗಾನ ಕಲೆಯು ಕ್ಷೀಣಿಸುತ್ತಿದ್ದ ಕಾಲದಲ್ಲಿ ಕಲ್ಲಾಡಿ ಕೊರಗ ಶೆಟ್ಟಿಯನ್ನುವವರು ಆ ಕಲೆಗೆ ಹೊಸ ಆಯಾಮವನ್ನು ನೀಡಿದರು. ತೆಂಕುತಿಟ್ಟು ಯಕ್ಷಗಾನವು ಬರಿ ಬಯಲಾಟವಾಗಿದ್ದ ಕಾಲದಲ್ಲಿ ಅದನ್ನು ಟೆಂಟಿನ ಆಟವಾನ್ನಾಗಿ ಮಾಡಿ ನಾಟಕದ ಸ್ವರೂಪವನ್ನು ಆಕರ್ಷಕಗೊಳಿಸಿದರು. ಇದರ ಪರಿಣಾಮವಾಗಿ ವಿಮರ್ಶಕರಿಂದ ಕಲೆಯ ಮೂಲ ಸ್ವರೂಪವು ಕೆಟ್ಟಿತು ಎನ್ನುವ ಆರೋಪ ಕೇಳಿಬಂತು. ಆದರೆ ಪ್ರೇಕ್ಷಕರ ಸಬಿಅಭಿರುಚಿಗೆ ತಕ್ಕಂತೆ ಬದಲಾವಣೆ ಅನಿವಾರ್ಯವಾಗಿತ್ತು. ಸ್ರೀ ಪಾತ್ರಕ್ಕೆ ಬೇರೆ ಬೇರೆ ನೃತ್ಯಗಳನ್ನು ಅಳವಡಿಸಲಾಯಿತು. ಕಾಲಾಂತರದಲ್ಲಿ ತನ್ನ ನೈಜ ಸ್ವರೂಪವನ್ನು ಕಳೆದುಕೊಂಡಿತು. ಪ್ರಾಚೀನ ಕಲೆಯಾದ ಯಕ್ಷಗಾನದ ಪರಂಪರೆಯನ್ನು ಹಾಗೂ ಮೌಲ್ಯಗಳನ್ನು ಉಳಿಸಬೇಕೇಂದು ಅವರು ಪೂಜ್ಯ ಹೆಗ್ಗಡೆಯವರಲ್ಲಿ ವಿನಂತಿಸಿಕೊಂಡರು. ಪರಿಣಾಮವಾಗಿ ಯಕ್ಷಗಾನ ಪರಂಪರೆ ಮೌಲ್ಯಗಳನ್ನು ಹಾಗೂ ಹೊಸ ತಲೆಮಾರಿನ ಕಲಾವಿದರನ್ನು ಹುಟ್ಟು ಹಾಕುವ ಸದುದ್ದೇಶದಿಂದ ಹೆಗ್ಗಡೆಯವರು ೧೯೭೨ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರವನ್ನು ಆರಂಭಿಸಿದರು.

ಕವನಗಳು[ಬದಲಾಯಿಸಿ]

  1. ಮೈಸೂರು ಮಲ್ಲಿಗೆ
  2. ರಕ್ತಾಕ್ಷಿ

ಕಾದಂಬರಿಗಳು[ಬದಲಾಯಿಸಿ]

  • ಕವಲು
  • ಚೋಮನ ದುಡಿ
  • ಕಾನೂರು ಹೆಗ್ಗಡತಿ
  • ಆವರಣ

ಉಲ್ಲೇಖಗಳು[ಬದಲಾಯಿಸಿ]