ಕ್ಲಚ್
ಕ್ಲಚ್ ಶಕ್ತಿ, ಪ್ರಸರಣವನ್ನು, ವಿಶೇಷವಾಗಿ ಚಾಲಕ ಮೂಕಿಯಿಂದ ಚಾಲಿತ ಮೂಕಿಗೆ, ತೊಡಗಿಸುವ ಮತ್ತು ಬೇರ್ಪಡಿಸುವ ಒಂದು ಯಾಂತ್ರಿಕ ಸಾಧನ. ಕ್ಲಚ್‍ಗಳನ್ನು ಶಕ್ತಿ ಅಥವಾ ಚಲನೆಯ ಪ್ರಸರಣವನ್ನು ಪ್ರಮಾಣದಲ್ಲಿ ಅಥವಾ ಕಾಲಾನಂತರದಲ್ಲಿ ನಿಯಂತ್ರಿಸಬೇಕಾದಾಗ ಬಳಸಲಾಗುತ್ತದೆ (ಕ್ಲಚ್‍ಗಳು ಮೋಟಾರು ವಾಹನಗಳು ಇಂಜಿನ್ ಶಕ್ತಿಯನ್ನು ಗಾಲಿಗಳಿಗೆ ಪ್ರಸರಿಸುತ್ತವೆಯೇ ಎಂಬುದನ್ನು ನಿಯಂತ್ರಿಸುತ್ತವೆ).[೧] ಅತ್ಯಂತ ಸರಳ ಅನ್ವಯದಲ್ಲಿ, ಕ್ಲಚ್‍ಗಳು ಎರಡು ತಿರುಗುವ ಮೂಕಿಗಳನ್ನು ಜೋಡಿಸುತ್ತವೆ ಮತ್ತು ಬೇರ್ಪಡಿಸುತ್ತವೆ. ಈ ಸಾಧನಗಳಲ್ಲಿ, ಸಾಮಾನ್ಯವಾಗಿ ಒಂದು ಮೂಕಿ ಇಂಜಿನ್ ಅಥವಾ ಇತರ ಶಕ್ತಿ ಘಟಕಕ್ಕೆ (ಚಾಲಕ ಸದಸ್ಯ) ಜೋಡಿಸಲ್ಪಟ್ಟಿರುತ್ತದಾದರೆ, ಇನ್ನೊಂದು ಮೂಕಿಯು (ಚಾಲಿತ ಸದಸ್ಯ) ಕಾರ್ಯಕ್ಕಾಗಿ ಹುಟ್ಟುವರಿ ಶಕ್ತಿಯನ್ನು ಒದಗಿಸುತ್ತದೆ. ವಾಹನಗಳಲ್ಲಿ ಬಳಸಲಾಗುವ ಕ್ಲಚ್‍ಗಳು ಕ್ಲಚ್‍ಗಳ ಒಂದು ಅನ್ವಯಿಕೆ.[೨]
ಮೋಟರ್‍ಸೈಕಲ್‍ಗಳು ಸಾಮಾನ್ಯವಾಗಿ ಆರ್ದ್ರ ಕ್ಲಚ್ಅನ್ನು ಉಪಯೋಗಿಸುತ್ತವೆ. ಇದರಲ್ಲಿ ಕ್ಲಚ್ ಪ್ರಸರಣದಲ್ಲಿ ಬಳಸುವ ತೈಲದಲ್ಲಿ ತೇಲುತ್ತಿರುತ್ತದೆ. ಮೋಟರ್‍ಸೈಕಲ್‍ಗಳಲ್ಲಿ ಕ್ಲಚ್‍ಗಳನ್ನು ಎಡ ಕೈಗಂಬಿಯ ಮೇಲಿನ ಕೈ ಹಿಡಿಕೆಯಿಂದ ನಡೆಸಲಾಗುತ್ತದೆ.[೩]
ಉಲ್ಲೇಖನಗಳು
[ಬದಲಾಯಿಸಿ]- ↑ "ಡ್ಯೂಯಲ್ ಕ್ಲಚ್ ತಂತ್ರಜ್ಞಾನ". kannadadunia.com accessdate 24 October 2016. Archived from the original on 28 ಅಕ್ಟೋಬರ್ 2016. Retrieved 24 ಅಕ್ಟೋಬರ್ 2016.
- ↑ "Clutches" (PDF). www.uni.edu accessdate 24 October 2016.
- ↑ "Clutch Introduction" (PDF). nptel.ac.in accessdate 24 October 2016.