ಕ್ರೋಮ್ ಬ್ರೌಸರ್‌

ವಿಕಿಪೀಡಿಯ ಇಂದ
Jump to navigation Jump to search

ಜಿ-ಟಾಕ್ ಯಾರಿಗೆ ಗೊತ್ತಿಲ್ಲ? ಗೂಗಲ್ (ಜಿಮೇಲ್) ಖಾತೆ ಹೊಂದಿದ್ದವರಿಗೆ ತಿಳಿದಿರುವ ಕ್ಷಿಪ್ರ ಸಂದೇಶವಾಹಕ, ಅಂದರೆ ಚಾಟಿಂಗ್ (ಇನ್‌ಸ್ಟೆಂಟ್ ಮೆಸೇಜಿಂಗ್) ತಂತ್ರಾಂಶವಿದು. ಕೆಲವೇ ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ ಜಿ-ಟಾಕ್ ಆ್ಯಪ್ ಇತ್ತಾದರೂ ಅದನ್ನು ಬಲವಂತವಾಗಿ ಹ್ಯಾಂಗೌಟ್ಸ್‌ಗೆ ಗೂಗಲ್ ಬದಲಿಸಿತ್ತು. ಆದರೆ, ಫೆ.16ರಂದು ಈ ಜನಪ್ರಿಯ ಜಿ-ಟಾಕ್ ಎಂಬ ಸಂವಹನ ತಂತ್ರಾಂಶದ ಅವಸಾನವಾಗಲಿದ್ದು, ಓರ್ಕುಟ್ ಎಂಬ ಸಾಮಾಜಿಕ ಜಾಲತಾಣದಂತೆಯೇ ಇತಿಹಾಸ ಸೇರಿಹೋಗಲಿದೆ.

GTalk ಎಂಬ ಹಗುರವಾದ, ಬಳಕೆಗೆ ಸುಲಭ ತಂತ್ರಾಂಶ ಬಳಸುತ್ತಿದ್ದವರೆಲ್ಲರೂ ಕೆಲವು ದಿನಗಳಿಂದ ಈ ಕುರಿತ ಸಂದೇಶವನ್ನು ಪಡೆಯುತ್ತಿದ್ದಾರೆ. ಜಿ-ಟಾಕ್‌ಗೆ ಲಾಗಿನ್ ಆದ ತಕ್ಷಣ "ವಿಂಡೋಸ್‌ಗಾಗಿ ಇರುವ ಗೂಗಲ್ ಟಾಕ್ ಆ್ಯಪ್ 2015ರ ಫೆ.16ರಂದು ಕಾರ್ಯ ಸ್ಥಗಿತಗೊಳಿಸಲಿದೆ. ಅದರ ಸ್ಥಾನದಲ್ಲಿ ಹ್ಯಾಂಗೌಟ್ಸ್ ಕ್ರೋಮ್ ಆ್ಯಪ್ ಬರಲಿದ್ದು, ಇನ್‌ಸ್ಟಾಲ್ ಮಾಡಿಕೊಳ್ಳಿ" ಎಂಬ ಜಿಮೇಲ್‌ನಿಂದ ಬಂದಿರುವ ಸಂದೇಶದೊಂದಿಗೆ ಹ್ಯಾಂಗೌಟ್ಸ್ ಆ್ಯಪ್‌ನ ಲಿಂಕ್ ಕೂಡ ನೀಡಲಾಗಿದೆ.


ಜಿಮೇಲ್‌ಗೆ ಲಾಗಿನ್ ಆಗಿ, ಅದರೊಳಗಿಂದ ಸಂವಹನ ನಡೆಸುವ ಬದಲಾಗಿ, ಈ ಕಿರು ತಂತ್ರಾಂಶವನ್ನು ಮಾತ್ರವೇ ಲಾಂಚ್ ಮಾಡಿ, ಸದಾ ಕಾಲ ಸ್ನೇಹಿತರೊಂದಿಗೆ, ಸಹೋದ್ಯೋಗಿಗಳೊಂದಿಗೆ ಸಂದೇಶ ವಿನಿಮಯ ಮಾಡಿಕೊಳ್ಳಲು ಜಿ-ಟಾಕ್ ಅನುಕೂಲ ಕಲ್ಪಿಸುತ್ತಿತ್ತು. ಆನ್‌ಲೈನ್ ಇದ್ದರೆ ಹಸಿರು ಬಣ್ಣದ ಗುಂಡಿ, ಬ್ಯುಸಿ ಇದ್ದರೆ ಕೆಂಪು, ಸ್ವಲ್ಪ ಹೊತ್ತು ಕಂಪ್ಯೂಟರ್ ಮುಟ್ಟದಿದ್ದರೆ ಕಿತ್ತಳೆ ಬಣ್ಣ ಹಾಗೂ ಆಫ್‌ಲೈನ್ ಇದ್ದರೆ ಬೂದು ಬಣ್ಣದ ಗುಂಡಿ ಕಾಣಿಸುತ್ತಿತ್ತು. ಇಷ್ಟಲ್ಲದೆ, ಇತರ ಸ್ನೇಹಿತರಿಗೆ ಆಫ್‌ಲೈನ್ ಕಾಣಿಸುವಂತೆಯೂ ಕಣ್ಣಾಮುಚ್ಚಾಲೆಯಾಗಿರಬಹುದಾಗಿತ್ತು. ನಮ್ಮ ಜಿಮೇಲ್ ಖಾತೆಗೆ ಯಾವುದಾದರೂ ಇಮೇಲ್ ಬಂದಲ್ಲಿ, ತಕ್ಷಣವೇ ನೋಟಿಫಿಕೇಶನ್ ಪಾಪ್ ಅಪ್ ವಿಂಡೋ ಮೂಲಕ ಕಾಣಿಸುತ್ತಿತ್ತು ಹಾಗೂ ಆ್ಯಪ್‌ನಲ್ಲಿರುವ ಒಂದು ಬಟನ್ ಕ್ಲಿಕ್ ಮಾಡಿದರೆ, ಸ್ವಯಂಚಾಲಿತವಾಗಿ ಇಮೇಲ್ ತೆರೆದುಕೊಳ್ಳುತ್ತಿತ್ತು.