ವಿಷಯಕ್ಕೆ ಹೋಗು

ಕ್ರೈಸ್ತ ಧರ್ಮದ ಸಂಸ್ಕಾರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Seven Sacraments Rogier
Seven Sacraments - Eucharist I (1637-1640) Nicholas Poussin

ಸಂಸ್ಕಾರ[ಬದಲಾಯಿಸಿ]

 • ನಮಗೆ ದೈವೀಕ ಜೀವವನ್ನು ಕೊಡಲು ಅಥವಾ ಅದನ್ನು ನಮ್ಮಲ್ಲಿ ಹೆಚ್ಚಿಸಲು ಯೇಸುಕ್ರಿಸ್ತರು ಸ್ಥಾಪಿಸಿದ ಪವಿತ್ರ ಆಚರಣೆಯೇ ಸಂಸ್ಕಾರ. ಯೇಸುಸ್ವಾಮಿ ಇಂದು ನಮ್ಮ ಮದ್ಯದಲ್ಲಿ ಸಂಸ್ಕಾರಗಳ ಮುಖಾಂತರ ಉಪಸ್ಥಿತರಾಗಿದ್ದಾರೆ. ಅವುಗಳ ಮುಖಾಂತರ ಯೇಸು ಧರ್ಮಸಬೆಯಲ್ಲಿ ಕಾರ್ಯನಿರತರಾಗಿರುತ್ತರೆ. ಹಾಗೂ ಎಲ್ಲಾ ಮಾನವರ ಉದ್ದಾರವನ್ನು ಫಲದಾಯಕವಾಗಿಸುತ್ತಾರೆ. ಸಂಸ್ಕಾರಗಳು, ನಮಗೆ ಕೃಪೆಯನ್ನು ದೊರಕಿಸಿಕೊಡಲು ಕ್ರಿಸ್ತರಿಂದಲೆ, ಸ್ಥಾಪಿತವಾದ ತಿಳುವಳಿಕೆಯು ತರುವ ಗುರುತುಗಳಿಗಿವೆ. * ಅವು ನಮ್ಮನ್ನು ದೇವರ ಮಕ್ಕಳನ್ನಾಗಿಸುತ್ತವೆ ಮತ್ತು ಸ್ವರ್ಗದ ವಾರಸುವುದರರನ್ನಾಗಿ ಮಾಡುತ್ತವೆ. ನಮ್ಮ ನೈಸ್ವರ್ಗೀಕ ಜೀವನವು ಪ್ರೌಢರಾಗಿ ಅನೇಕ ಹಂತಗಳ ಸರಣಿಯ ಮೂಲಕಹಾದು ಹೋಗುತ್ತದೆ. ನಮ್ಮ ಜೀವನವನ್ನು ಜೀವಿಸಲು ಸಾಧ್ಯವಾಗುವಲ್ಲಿ ಯವರೆಗೆ ಹುಟ್ಟಿದ ನಾವು ಬೆಳೆಯುತ್ತೇವೆ. ಏಳು ಸಂಸ್ಕಾರಗಳನ್ನು ಸ್ಥಾಪಿಸುವುದರಲ್ಲಿ ಯೇಸು ನಾವು ಹುಟ್ಟಿ ಅಸಾಮಾನ್ಯ ಜೀವನದ ಪ್ರೌಢತೆಗೆ ಬೆಳೆಯಲು ಸಹಾಯ ನೀಡುತ್ತಾರೆ.[೧]

ಸಂಸ್ಕಾರಗಳು ಏಳು[ಬದಲಾಯಿಸಿ]

 1. ದೀಕ್ಷಾಸ್ನಾನ (ಜ್ಞಾನಸ್ನ್ನಾನ)
 2. ಧೃಢೀಕರಣ
 3. ಪಶ್ಚಾತ್ತಾಪ
 4. ಪರಮ ಪ್ರಸಾದ
 5. ವ್ಯಾಧಿಷ್ಟರ ಅಭ್ಯಂಗ
 6. ಯಾಜಕಾಭೀಷೇಕ
 7. ವಿವಾಹ

ದೀಕ್ಷಾಸ್ನಾನ[ಬದಲಾಯಿಸಿ]

ಪ್ರಥಮ ಸಂಸ್ಕಾರ ದೀಕ್ಷಾಸ್ನಾನ. ಏಕೆಂದರೆ ಅದು ನಮ್ಮ ಆತ್ಮದಲ್ಲಿ ದೈವೀಕ ಜೀವ ಹುಟ್ಟುವಂತೆ ಮಾಡುತ್ತದೆ. ಜನ್ಮ ಪಾಪವನ್ನೂ ಪರಿಹರಿಸಿ, ನಮಗೆ ದೈವೀಕ ಜೀವವನ್ನು ಕೊಟ್ಟು ನಮ್ಮನ್ನು ದೇವರ ಮತ್ತು ಧರ್ಮಸಭೆಯ ಮಕ್ಕಳನ್ನಾಗಿ ಮಾಡುವ ಸಂಸ್ಕಾರವೇ ದೀಕ್ಷಾಸ್ನಾನ. ಕ್ರಿಸ್ತರು ತನ್ನ ಧರ್ಮಸಭೆಯಲ್ಲಿ ಕೃಪೆ ತುಂಬಿದ ಹೊಸ ಜೀವನವನ್ನು ಕರುಣಿಸುತ್ತಾರೆ. ದೇವರ ಮಕ್ಕಳಾಗಿ ವಿಶ್ವಾಸಕ್ಕೆ ನಮ್ಮ ಜನನವನ್ನು 'ಪಾಪಕ್ಕೆ ನಮ್ಮ ಮರಣವನ್ನು ನಾವು ಆಚರಿಸಿಕೊಂಡಾಡುತ್ತೇವೆ. ಜಲ ಮತ್ತು ಆತ್ಮರ ಮುಖಾಂತರ ಪುನರ್ಜನನ

 1. "ನಾನು ನಿಮ್ಮ ಮೇಲೆ ನಿರ್ಮಲೋದಕವನ್ನು ಪ್ರೋಕ್ಷಿಸುವೆನು. ನೀವು ನಿರ್ಮಲರಾಗುವಿರಿ"................."ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸಿ, ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸುವೆನು" ಯೆಜೆಕಿಯೇಲ್ ೩೬:೨೫-೨೭
 2. "ನೀರಿನಿಂದಲೂ ಪವಿತ್ರಾತ್ಮರಿಂದಲೂ ಹುಟ್ಟದ ಹೊರತು ಯಾವನೂ ದೇವರ ರಾಜ್ಯವನ್ನು ಪ್ರವೇಶಿಸಲಾರನು " ಯೋವಾನ್ನ ೩:೫ ದೀಕ್ಷಾಸ್ನಾನ ಎಂದರೆ ಪುನಃ ಜನಿಸುವುದು, ದೇವರ ನಿಗೂಢ ಜೀವದಿಂದ ತುಂಬಲ್ಪಡುವುದು. ಇದು ಜೀವಜಲವನ್ನು ಪಡೆಯುವುದಾಗಿದೆ.
 3. "ಆ ಜೀವಜಲವು ಪಡೆದವರಲ್ಲಿ ಉಕ್ಕಿ ಹರಿಯುವ ಬುಗ್ಗೆಯಾಗಿ ನಿತ್ಯಜೀವವನ್ನು ತರುತ್ತದೆ. ಯೋವಾನ್ನ ೪:೧೪
 4. ನಮ್ಮ ಮೇಲೆ ಪುಷ್ಪಳವಾಗಿ ಸುರಿಯಲ್ಪಟ್ಟ ನೀರು ಬರೇ ಶುದ್ಧೀಕರಿಸುವ ಬುಗ್ಗೆಯಲ್ಲ. ಬದಲು ಪವಿತ್ರಾತ್ಮರಾಗಿದ್ದಾರೆತೀತನ ಪತ್ರ ೩:೫-೬. ನಾವು ಆತ್ಮರಲ್ಲಿ ಪುನರ್ಜನನ ಪಡೆಯುತ್ತೇವೆ. ಪವಿತ್ರಾತ್ಮರಾದ ಜ್ಯೋತಿಯೂ, ಪ್ರೀತಿಯೂ ನಮ್ಮ ಮೇಲೆ ಸುರಿಯಲ್ಪಟ್ಟು, ನಮ್ಮೊಳಗೆ ನವಜೀವದ ಜ್ವಾಲೆಯನ್ನು ಊದಿ ಉಕ್ಕಿಸುತ್ತವೆ. ಹೊಸದಾಗಿ ದೀಕ್ಷಾಸ್ನಾನ ಪಡೆಯುವವರ ಕೈಗಳಲ್ಲಿರುವ ಉರಿಯುವ ಮೇಣದಬತ್ತಿಯ ಜ್ಯೋತಿಯಾದ ಪವಿತ್ರಾತ್ಮರ ಆಗಮನ ಸಂಕೇತ. ದೀಕ್ಷಾಸ್ನಾನ ಕೊಡುವಾಗ ಮಗುವಿನ ಅಥವಾ ಅಭ್ಯರ್ಥಿಗೆ ಇಡಬೇಕಾದ ಹೆಸರನ್ನು ಹೇಳಿ, ಹಣೆಯ ಮೇಲೆ ನೀರನ್ನು ಹೊಯ್ಯುವಾಗಲೇ ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ನಿನಗೆ ದೀಕ್ಷಾಸ್ನಾನ ನಾನು ಕೊಡುತ್ತೇನೆ ಎಂದು ತಾನೆ ಹೇಳಬೇಕು.[೨]

ಧೃಢೀಕರಣ[ಬದಲಾಯಿಸಿ]

ನಮ್ಮನ್ನು ಸತ್ಯ ಧರ್ಮದಲ್ಲಿ ಬಲಪಡಿಸುವುದುಕ್ಕಾಗಿ ಪವಿತ್ರಾತ್ಮರನ್ನೂ ಅವರ ವರಗಳನ್ನೂ ನಮಗೆ ಕೊಡುವ ಸಂಸ್ಕ್ಕಾರವೇ ಧೃಡೀಕರಣವನ್ನು ಸ್ವೀಕರಿಸುವುದಕ್ಕೆ ನಾವು ಮೊಟ್ಟ ಮೊದಲು ಪವಿತ್ರಾತ್ಮರನ್ನು ಪ್ರಾರ್ಥಿಸಿ, ಧರ್ಮದ ಮುಖ್ಯ ಸತ್ಯಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಅನಂತರ ಪಾಪವಿಜ್ಞಾಪನೆ ಮಾಡಿ, ಸಾದ್ಯವಾದರೆ ಪರಮ ಪ್ರಸಾದವನ್ನು ಸ್ವೀಕರಿಸಬೇಕು.

 1. ಅಗ್ನಿ ಜ್ವಾಲೆಯ ಕೆನ್ನಾಲಿಗೆಯಂತೆ ಕಾಣಿಸಿಕೊಂಡುವು...............ಅವರೆಲ್ಲರೂ ಪವಿತ್ರಾತ್ಮಭರಿತರಾದರು ಪ್ರೇ.ಕಾ.ಕ.೨:೩-೪
  Seven Sacraments - Confirmation I (1637-1640) Nicolas Poussin
 2. ಪಂಚಾಶತ್ತಮ ದಿನದಂದು ಪವಿತ್ರಾತ್ಮರು ಪ್ರಾರ್ಥಿಸುತ್ತಿದ್ದ ಶಿಷ್ಯಂದಿರಲ್ಲಿ ಇಳಿದು ಬಂದಾಗ, ಅದು ಬೀಸುಗಾಳಿಯಂತೆಯೂ ಅಗ್ನಿಜ್ವಾಲೆಯ ಕೆನ್ನಾಲಿಗೆಯಂತೆಯೂ ಇತ್ತು. ಅಗ್ನಿ ಜ್ವಾಲೆಯ ಕೆನ್ನಾಲಿಗೆಯು ಪ್ರೀತಿಯ ಆತ್ಮರ ಉಪಸ್ಥಿತಿಗಾಗಿ ದೇವರೇ ಸ್ವಯಂ ಆರಿಸಿಕೊಂಡ ಲಕ್ಷಣವಾಗಿದೆ. ಈ ಪ್ರೀತಿಯ ಅಗ್ನಿಯು ದೇವರ ಹೃದಯದಲ್ಲಿದೆ ಎಂದು ಯೇಸು ಹೇಳಿದ್ದರು.
 3. ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿ ಹೊತ್ತಿಸಲೆಂದು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ ಲೂಕ ೧೨:೪೯
 4. ಯೇಸುವಿನ ಕುರಿತು ಹೇಳುತ್ತಾ ಸ್ನಾನಿಕ ಯೋವಾನ್ನನು ನುಡಿದನು: "ಅವರು ನಿಮಗೆ ಪವಿತ್ರಾತ್ಮರಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನವನ್ನು ಕೊಡುವರು"ಲೂಕ ೩:೧೬
 5. ದೇವರ ಅಗ್ನಿಯಾದ ಪವಿತ್ರಾತ್ಮರು ನಾವು ದೇವರತ್ತ ಸಮರ್ಪಿಸಿ ತಿರುಗಿ ಕೊಂಡಿದ್ದಕ್ಕಾಗಿ ಪುನಃ ಸಮೃದ್ಧಿಯಾಗಿ ನಮ್ಮಲ್ಲಿ ಬರುವರು. ಈ ನವೀನ ಶಕ್ತಿಯು ನಮ್ಮ ಹೃದಯದ ಆಳದಲ್ಲಿ ಪ್ರವಹಿಸುತ್ತಿರುವ ಅರಿವು ನಮಗಿದೆಯೋ ಇಲ್ಲವೋ, ಆದರೆ ವಾಸ್ತ್ತವವಾಗಿ ನೈಜತೆಯನ್ನೇ ವಿವರಿಸಲಾಗಿದೆ. ಅಗ್ನಿ ನಾಲಿಗೆಯಾದ ಪವಿತ್ರಾತ್ಮರೇ, ಸದಾಕಾಲ ಉರಿಯುತ್ತಿರುವವರೇ, ನಿಮ್ಮ ಪ್ರೀತಿಯ ಅಗ್ನಿಯನ್ನು ನಮ್ಮಲ್ಲಿ ಹೊತ್ತಿಸಿ ಉರಿಸಿರಿ.

ಪಶ್ಚಾತ್ತಾಪ[ಬದಲಾಯಿಸಿ]

 • ಜ್ಞಾನಸ್ನಾನವನ್ನು ಪಡೆದ ಮೇಲೆ ಮಾಡಿರುವ ಎಲ್ಲಾ ಪಾಪಗಳನ್ನು ಪರಿಹರಿಸಿ, ದೈವೀಕ ಜೀವವನ್ನು ಪುನಃ ಕೊಡುವ ಸಂಸ್ಕಾರವೇ ಪಶ್ಚಾತ್ತಾಪ. ಒಳ್ಳೆಯ ಪಾಪನೀವೆದನೆಗಾಗಿ ನಾವು ಮಾಡಬೇಕಾದ ಐದು ಕಾರ್ಯಗಳು, ಒಳ್ಳೆಯ ಪಾಪ ನಿವೇದನೆಗಾಗಿ ಪವಿತ್ರಾತ್ಮರ ಸಹಾಯವನ್ನು ಬೇಡಿಕೊಳ್ಳವುದು. ಮಾಡಿದ ಎಲ್ಲಾ ಪಾಪಗಳನ್ನು ನೆನಸಿ ಜ್ಞಾಪಕ ಮಾಡಿಕೊಳ್ಳುವುದು.
 • ಅವುಗಳಿಗಾಗಿ ದುಃಖಪಟ್ಟು ಇನ್ನು ಮುಂದೆ ಪಾಪಮಾಡುವುದೇ ಇಲ್ಲವೆಂದು ದೃಢ ಪ್ರತಿಜ್ಞೆ ಮಾಡುವುದು, ಮಾಡಿದ ಎಲ್ಲಾ ಮಹಾ ಪಾಪಗಳನ್ನಾದರು ಗುರುಗಳಿಗೆ ಹೇಳುವುದು, ಗುರುಗಳು ಕೊಟ್ಟ ಪ್ರಾಯಶ್ಚಿತ್ತವನ್ನು ನೆರವೇರಿಸುವುದು. ಈ ಐದು ಕಾರ್ಯಗಳಲ್ಲಿ ನಮ್ಮ ಪಾಪಗಳಿಗೆ ಪೂರ್ಣ ಮನಸ್ಸಿನಿಂದ ದುಃಖ ಪಡುವುದೇ ಮುಖ್ಯವಾದ ಕಾರ್ಯ.
 • ನಮ್ಮ ತಂದೆಯಾದ ದೇವರನ್ನು ಪ್ರೀತಿಸದೆ, ನಮ್ಮ ಪಾಪಗಳಿಂದ ಅವರನ್ನು ದುಃಖ ಪಡಿಸಿರುವ ಕಾರಣ ನಾವು ಅವುಗಳಿಗಾಗಿ ದುಃಖ ಪಡಬೇಕು. ಇದನ್ನು 'ಪೂರ್ಣ ಪಶ್ಚಾತ್ತಾಪ' ಎಂದು ಕರೆಯುತ್ತೇವೆ. ಪಶ್ಚಾತ್ತಾಪದಲ್ಲಿ ದುಃಖವಲ್ಲದೆ ಪಾಪವನ್ನು ಪಾಪದ ಸಂದರ್ಭಗಳನ್ನು ತಪ್ಪಿಸಿಕೊಂಡು ಒಳ್ಳೆಯವರಾಗಿ ನಡೆಯುವೆನು ಎಂಬ ನಿರ್ಣಯವು ಆಡಗಿದೆ. ಅದನ್ನೂ ಧೃಢಪ್ರತಿಜ್ಞೆ ಎಂದು ಕರೆಯುತ್ತೇವೆ.

ಪರಮ ಪ್ರಸಾದ[ಬದಲಾಯಿಸಿ]

 • ಯೇಸುಕ್ರಿಸ್ತರು ತಾವು ಮರಣ ಹೊಂದಿದ ಹಿಂದಿನ ದಿನ ಕಡೆಯ ರಾತ್ರಿ ಭೋಜನ ಸಮಯದಲ್ಲಿ ಪರಮ ಪ್ರಸಾದವನ್ನು ಸ್ಥಾಪಿಸಿದರು. ರೊಟ್ಟಿ ಮತ್ತು ದ್ರಾಕ್ಷಾರಸಗಳ ಗುಣಗಳಲ್ಲಿ ಯೇಸುಕ್ರಿಸ್ತರು ಶರೀರವೂ, ರಕ್ತವೂ, ಆತ್ಮವೂ, ದೈವಸ್ವಭಾವವೂ ಅಡಗಿರುವ ಸಂಸ್ಕಾರವೇ ಪರಮ ಪ್ರಸಾದ. ಕಡೆಯ ರಾತ್ರಿ ಭೋಜನದ ಸಮಯದಲ್ಲಿ ಯೇಸುಕ್ರಿಸ್ತರು ಮಾಡಿದ ಕ್ರಿಯೆಗಳನ್ನೂ ಆಡಿದ ಮಾತುಗಳನ್ನೂ ಗುರುಗಳ ಮುಖಾಂತರ ಪುನರಾವರ್ತಿಸುವುದೇ "ದಿವ್ಯ ಬಲಿಪೂಜೆ".
 • ಗುರುಗಳು ಜೀವಂತವರಿಗಾಗಿಯೂ, ಮೃತರಿಗಾಗಿಯೂ ಬಲಿಪೂಜೆಯನ್ನು ಅರ್ಪಿಸುತ್ತಾರೆ. ಕ್ರೈಸ್ತ ಪೂಜೆಯಲ್ಲಿ 'ಸಿದ್ದತೆ ಮತ್ತು ಬಲಿ' ಎಂಬ ಎರಡು ಭಾಗಗಳಿವೆ. 'ಸಿದ್ದತೆ 'ಭಾಗದಲ್ಲಿ ಬಲಿಯನ್ನು ಒಪ್ಪಿಸಲು ನಮ್ಮ ಆತ್ಮವನ್ನು ತಯಾರಿಸುವುದಕ್ಕಾಗಿ ನಾವು ದೇವರ ಸಹಾಯವನ್ನು ಬೇಡುತ್ತೇವೆ, ದೇವರ ಬೋಧನೆಯನ್ನು ಕೇಳುತ್ತೇವೆ. 'ಬಲಿ' ಭಾಗದಲ್ಲಿ ಕಾಣಿಕೆ, ಬಲಿಯ ಅರ್ಪಣೆ, ಬಲಿಯ ಭೋಜನ, ಎಂಬ ಮೂರು ಉಪಭಾಗಗಳನ್ನಾಗಿ ವಿಂಗಡಿಸಬಹುದು.
 • ಕಾಣಿಕೆಯ ಸಮಯದಲ್ಲಿ ಬಲಿಗೆ ಬೇಕಾದ ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಗುರುಗಳ ಸಂಗಡ ಒಪ್ಪಿಸುತ್ತೇವೆ, ಅವು ನಮ್ಮಲ್ಲಿ ಪ್ರತಿಯೊಬ್ಬರ ಶರೀರಿ ಆತ್ಮಗಳ ಸಮರ್ಪಣೆಯನ್ನು ಸೂಚಿಸುತ್ತವೆ. ಬಲಿ ಅರ್ಪಣೆ ಸಮಯದಲ್ಲಿ ಯೇಸುಕ್ರಿಸ್ತರು ಪೀಠದ ಮೇಲೆ ಬಂದು, ತಮ್ಮನ್ನು ತಾವೇ ತಂದೆಯಾದ ದೇವರಿಗೆ ಬಲಿಯನ್ನಾಗಿ ಅರ್ಪಿಸುತ್ತಾರೆ. ನಾವು ಅವರೊಂದಿಗೆ ಸೇರಿ ಅದೇ ಬಲಿಯನ್ನು ಅರ್ಪಿಸುತ್ತೇವೆ.
 • ಬಲಿಭೋಜನದ ಸಮಯದಲ್ಲಿ ನಮ್ಮ ಆತ್ಮದ ದಿವ್ಯ ಆಹಾರವಾಗಿರುವ ಯೇಸುವಿನ ಶರೀರವನ್ನು ಸ್ವೀಕರಿಸಿ, ನಾವೆಲ್ಲರು ಅವರೊಡನೆ ಒಂದಾಗುತ್ತೇವೆ. 'ದಿವ್ಯ ಭೋಜನದಿಂದ ಯೇಸು ಕ್ರಿಸ್ತರು ನಮ್ಮ ಆತ್ಮವನ್ನು ತಮ್ಮೊಡನೆ ಒಂದುಗೂಡಿಸುತ್ತಾರೆ., ನಮ್ಮ ಆತ್ಮವನ್ನು ದೈವೀಕ ಜೀವನದಿಂದ ತುಂಬಿಸುತ್ತಾರೆ. ನಮ್ಮ ಆತ್ಮದಲ್ಲಿ ಪಾಪದ ಗಾಯಗಳನ್ನೂ ಗುಣ ಪಡಿಸುತ್ತಾರೆ.
 • ನಾವು ಒಳ್ಳೆಯ ಕ್ರೈಸ್ತರಾಗಿ ಜೀವಿಸಲು ಬೇಕಾದ ಒತ್ತಾಸೆಯನ್ನು ನಮ್ಮ ಆತ್ಮಕ್ಕೆ ಕೊಡುತ್ತಾರೆ. ಪರಮ ಪ್ರಸಾದವನ್ನು ಯೋಗ್ಯವಾಗಿ ಸ್ವೀಕರಿಸಲು ಪಾಪಗಳಿಂದ ನಮ್ಮ ಆತ್ಮವನ್ನು ಶುದ್ದಗೊಳಿಸಿ, ವಿಶ್ವಾಸ, ಪ್ರೀತಿ, ಭರವಸೆ ಮುಂತಾದ ಸದ್ಗುಣಗಳಿಂದ ಅದನ್ನು ಅಲಂಕರಿಸಬೇಕು. ಪರಮ ಪ್ರಸಾದವನ್ನು ಯೋಗ್ಯವಾಗಿ ಸ್ವೀಕರಿಸಲು ನಮ್ಮ ಶರೀರವನ್ನು ಸಿದ್ದಪಡಿಸುವುದಕ್ಕೆ ನಾವು ಒಂದು ಗಂಟೆ ವೇಳೆಯಾದರೂ ಯಾವ ಆಹಾರ ಪದಾರ್ಥಗಳನ್ನು ತಿನ್ನದೆ ನೀರನ್ನೂ ಬಿಟ್ಟು ಮತ್ತೇನನ್ನು ಸಹ ಕುಡಿಯದೆ, ಉಪವಾಸ ಮಾಡಬೇಕು.
 • "ಇದು ನಿಮಗಾಗಿ;ಒಪ್ಪಿಸಲಾಗುವ ನನ್ನ ಶರೀರ; ಇದನ್ನು ನನ್ನ ಸ್ಮರಣೆಗಾಗಿ ಮಾಡಿರಿ............ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸಒಡಂಬಡಿಕೆ. ಇದನ್ನು ನೀವು ಪಾನಮಾಡುವಾಗಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ" ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವತನಕ ಅವರ ಮರಣವನ್ನು ಸಾರುತ್ತೀರಿ.ಕೋರಿಂಥಿಯ ಪತ್ರ ೧೧:೨೩-೨೬ ಯಾವಾಗ ಬೇಕಾದರು ಪರಮಪ್ರಸಾದವನ್ನು ಸ್ವೀಕರಿಸಲು ರೋಗಿಗಳಿಗೆ ಅವಕಾಶ ಕೊಡುವುದಕ್ಕು , ಯೇಸು ಕ್ರಿಸ್ತರನ್ನು ಸದಾ ನಮ್ಮ ಮಧ್ಯದಲ್ಲಿ ಇರಿಸಿಕೊಳ್ಳುವುದಕ್ಕು, ಧರ್ಮಸಭೆಯ ಪರಮಪ್ರಸಾದವನ್ನು ಪೀಠದ ಸಂಪುಟದಲ್ಲಿ ಇಡುತ್ತದೆ.

ವ್ಯಾಧಿಷ್ಟರ ಅಭ್ಯಂಗ[ಬದಲಾಯಿಸಿ]

Seven Sacraments - Extreme Unction I (1637-1640) Nicolas Poussin
 • ರೋಗಿಗಳಲ್ಲಿ ಉಳಿದ ಪಾಪಗಳನ್ನು ಪರಿಹರಿಸಿ, ದೇವರ ಚಿತ್ತದಂತೆ ಅವರಿಗೆ ದೇಹಾರೋಗ್ಯವನ್ನು ಅಥಾವ ಒಳ್ಳೆಯ ಮರಣವನ್ನು ಹೊಂದಲು ಕೃಪವರವನ್ನು ಕೊಡುವ ಸಂಸ್ಕಾರವೇ ವ್ಯಾಧಿಷ್ಟರ ಅಭ್ಯಂಗ. ಕಠಿಣ ರೋಗದಲ್ಲಿರುವ ಪ್ರತಿಯೊಬ್ಬ ಕ್ರೈಸ್ತನು ಅಂತಿಮ ಅಭ್ಯಂಗವನ್ನು ಸ್ವೀಕರಿಸಬೇಕು. ಪ್ರಾರ್ಥನೆಯಿಂದಲೂ, ಪರಮಪ್ರಸಾದದ ಸ್ವೀಕಾರದಿಂದಲೂ, ಕ್ರೈಸ್ತರು ಅಂತಿಮ ಅಭ್ಯಂಗಕ್ಕೆ ಸಿದ್ದರಾಗಿರಬೇಕು.
 • ರೋಗಗಳನ್ನು ಹಾಗೂ ಮರಣವನ್ನು ಧೈರ್ಯವಾಗಿ ಎದುರಿಸಲು ನಮ್ಮ ಆತ್ಮವನ್ನು ಯೇಸು ಶಕ್ತರಾಗಿಸುತ್ತಾರೆ. ನಿತ್ಯವಾದ ಜೀವನದಲ್ಲಿ ನಾವು ಕ್ರೈಸ್ತರ ಭರವಸೆಯನ್ನು ಆಚರಿಸುತ್ತೇವೆ. ಸ್ವಸ್ಥ ಪಡಿಸುವ ಸಂಸ್ಕಾರದಲ್ಲಿ ಅದರ ಸಂತೈಸುವ ಮತ್ತು ಸ್ವಸ್ಥ ಪಡಿಸುವ ಗುಣಲಕ್ಷಣಗಳೊಂದಿಗೆ ಪವಿತ್ರ ತೈಲವನ್ನು ಫಲಪ್ರದವಾಗಿ ನಾವು ಬಳಸುತ್ತೇವೆ.
 • ಪ್ರಾರ್ಥನೆಯೊಂದಿಗೆ ರೋಗಿಯ ಶಿರದ ಮೇಲೆ ಕೈಗಳನ್ನಿಟ್ಟು ತೈಲಾಭ್ಯ್ಸಂಗವನ್ನು ಮಾಡುವ ಮೂಲಕ ಸ್ವ ಸ್ಥಪಡಿಸುವ ದೇವಶಕ್ತಿಯು ನಮ್ಮೊಳಗೆ ಹರಿಯುತ್ತದೆ. ಈ ಶಕ್ತಿಯು ಸ್ಪಷ್ಟ ಸಾಧನಗಳಾಗಲು, ದೇವರ ಉಪಕರಣಗಳಾಗಲು, ತನ್ಮೂಲಕ ಇದನ್ನು ಪಡೆಯಲು ನೀಡಿಲು ಇದು ನಮಗಾಗಿ ತೆರೆದು ಹಿಡಿಯಲಾಗಿದೆ. ಸ್ವಸ್ಥತೆಯು ಅನೇಕ ರೀತಿಯಲ್ಲಿ ನೆರವೇರುತ್ತದೆ ಹಾಗೂ, ಪ್ರಾರ್ಥನೆಯು ಪರಮೌಷಧವಾಗಿದೆ.
 • ನಾವು ಯಾವ ರೀತಿ ಸ್ವಸ್ಥತೆಯನ್ನು ಪಡೆಯಬೇಕೆನ್ನುವುದು ದೇವರ ಚಿತ್ತ ."ನಾವು ದೇವರ ಪರಿಪೂರ್ಣತೆಯಿಂದ ತುಂಬಿದವರಾದಾಗ........ನಮ್ಮಲ್ಲಿ ಕಾರ್ಯಸಾಧಿಸು ಹಾಗೂ ನಮ್ಮ ಆಸೆ ಆಕಾಂಕ್ಷೆಗಳಿಗಿಂತಲೂ ಅಧಿಕವಾದುದನ್ನು ಮಾಡಲು ದೇವರು ಶಕ್ತರಾಗುವರು".ಎಫೆಸಿಯರ ಪತ್ರ ೩:೧೯-೨೦ . ತನ್ನ ಅದ್ಬುತಕರವಾದ ಯೋಜನೆಗಳ ನೆರವೇರಿಕೆಯ ಹಂತಕ್ಕೆ ನಮ್ಮ ಜೀವನ ಪರಿಯಂತ ನಮ್ಮನ್ನು ಪರಿವರ್ತನೆಯಲ್ಲಿ ದೇವರು ನಡೆಸುವರು.

ಯಾಜಕಾಭೀಷೇಕ[ಬದಲಾಯಿಸಿ]

 • ಪವಿತ್ರ ಬಲಿಪೂಜೆಯನ್ನು ಅರ್ಪಿಸುವುದಕ್ಕೂ, ಸಂಸ್ಕಾರಗಳ ಮೂಲಕ ದೈವೀಕ ಜೀವವನ್ನು ಜನರಿಗೆ ಕೂಡುವುದಕ್ಕೂ, ದೇವರ ವಾಕ್ಯವನ್ನು ಸಾರುವುದಕ್ಕೂ,ದೇವರ ಆಶಿರ್ವಾದವನ್ನು ದಯಪಾಲಿಸುವುದಕ್ಕೂ, ಅಧಿಕಾರ ಕೊಡುವ ಸಂಸ್ಕಾರವೇ ಯಾಜಕಾಭೀಷೇಕ. ಯೇಸು ದೈವಜನತೆಯ ಪೌರೋಹಿತ್ಯಕ್ಕಾಗಿ ತನ್ನ ನಿಯೋಗಿಯನ್ನು ಪವಿತ್ರಗೊಳಿಸಿ ಅಭಿಷೇಕಿಸುತ್ತಾರೆ.
 • "ನೀವೂ ಸಹ ಸಜೀವ ಶಿಲೆಗಳಾಗಿದ್ದೀರಿ;ಆಧ್ಯಾತ್ಮಿಕ ದೇವಾಲಯವನ್ನು ನಿರ್ಮಿಸಲು ನಿಮ್ಮನ್ನೇ ಅರ್ಪಿಸಿಕೊಳ್ಳಿರಿ. ಆ ದೇವಾಲಯದಲ್ಲೇ ಯೇಸು ಕ್ರಿಸ್ತರ ಮುಖಾಂತರ ದೇವರಿಗೆ ಮೆಚ್ಚುಗೆಯಾಗಿರುವ ಆಧ್ಯಾತ್ಮಿಕ ಬಲಿಗಳನ್ನು ಸಮರ್ಪಿಸುವ ಪವಿತ್ರ ಯಾಜಕ ವರ್ಗದವರು ನೀವಾಗಿರುವಿರಿ"೧ಪೇತ್ರ ೨:೫
 • "ನೀವು ದೇವರು ಆಯ್ದುಕೊಂಡ ಜನಾಂಗ; ರಾಜ ಪುರೋಹಿತರು, ಪವಿತ್ರ ಪ್ರಜೆ, ದೇವರ ಸ್ವಕೀಯ ಜನ; ಅವರ ಅದ್ಬುತಕಾರ್ಯಗಳನ್ನು ಪ್ರಚುರ ಪಡಿಸುವುದಕ್ಕಾಗಿಯೇ ಆಯ್ಕೆಯಾದರು; ಕಾರ್ಗತ್ತಲಿನಿಂದ ತಮ್ಮ ಅದ್ಬುತಕರವಾದ ಬೆಳಕಿಗೆ ನಿಮ್ಮನ್ನು ಕರೆತಂದವರು ಅವರೇ"೧ ಪೇತ್ರ ೨:೯
 • ಓ ಕ್ರಿಸ್ತರೇ ನಿಮ್ಮ ಪ್ರೀತಿಯನ್ನು, ಶಕ್ತಿಯನ್ನೂ,ಕರುಣಿಸಿರಿ. ನಿಮ್ಮ ಪೌರೋಹಿತ್ಯವನ್ನು ಪೂರ್ಣತೆಯಲ್ಲಿ ಹಂಚಿಕೊಳ್ಳಲು, ದೇವರನ್ನು ಲೋಕದಾದ್ಯಂತ ಪ್ರಕಟಪಡಿಸಲು, ಹಾಗೂ ಲೋಕವನ್ನು ದೇವರಲ್ಲಿಗೆ ತರಲು ನೆರವಾಗಲು.

ವಿವಾಹ[ಬದಲಾಯಿಸಿ]

Seven Sacraments - Marriage II (1647-1648) Nicolas Poussin
 • ಮದುಮಕ್ಕಳನ್ನು ಒಂದುಗೂಡಿಸಿ ಅವರ ಸಂಸಾರ ಜೀವವನ್ನು ಪವಿತ್ರಗೂಳಿಸುವುದಕ್ಕೂ ಅವರ ಮಕ್ಕಳನ್ನು ಯೋಗ್ಯ ರೀತಿಯಲ್ಲಿ ಸಾಕಿ ಸಲಹುದಕ್ಕೂ ಬೇಕಾದ ದೈವ ಕೃಪೆಯನ್ನು ಕೊಡುವ ಸಂಸ್ಕಾರವೇ ವಿವಾಹ. ಸಂತಾನ ಪಡೆದು ಅವರನ್ನು ಕಥೋಲಿಕ ವಿಶ್ವಾಸದಲ್ಲಿ ಬೆಳಸಲು, ಪುರುಷ ಮತ್ತು ಸ್ತ್ರೀಯಲ್ಲಿ ಪರಸ್ಪರ ಪ್ರೀತಿ ಹಾಗೂ ಬೆಂಬಲಗಳಲ್ಲಿ ವಿಭಜಿಸಲಾಗದ ಐಕ್ಯತೆಯನ್ನು ಕ್ರಿಸ್ತರು ಪವಿತ್ರಿಕರಿಸುತ್ತಾರೆ.
 • "ಪ್ರಭು,ನಿಮ್ಮಲ್ಲಿ ಪ್ರೀತಿಯನ್ನು ಬಲಪಡಿಸುವ ಮುದ್ರೆಯಾಗಲೆಂದು ನೀವು ಜೊತೆಯಾಗಿ ಈ ಧರ್ಮಸಭೆಯಲ್ಲಿ ಬಂದಿದ್ದೀರಿ" ವಿವಾಹ ಶಾಸ್ತ್ರವಿಧಿಯ ಮೊದಲು ಮಾತುಗಳು ಇವು. ತನ್ನ ತುಂಬಿಹರಿಯುವ ಪ್ರೀತಿಯನ್ನು ನಾವು ಹಂಚಿಕೊಳ್ಳಲು ಬಯಸುವ ದೇವರು ಪುರುಷ ಹಾಗೂ ಸ್ತ್ರೀಯನ್ನು ಸೃಷಿಸಿದರು.ಇಬ್ಬರೂ ತಮ್ಮ ಪರಸ್ಪರರಿಗಾಗಿರುವ ಪ್ರೀತಿಯಿಂದ ದೇವರ ಬಳಿ ತಂದಾಗ,ಅವರ ಮಾನುಷಿಕ ಪ್ರೀತಿಯು ಅದರ ಮೂಲವಾದ ದೇವರಲ್ಲಿ ವಿಲೀನವಾತ್ತದೆ.
 • "ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ಅದರ ಮೂಲವಾದ ದೇವರಲ್ಲಿ ನೆಲೆಸಿದ್ದಾನೆ.ದೇವರೂ ಅವನಲ್ಲಿ ನೆಲೆಸಿರುತ್ತಾರೆ"ಯೋವಾನ್ನ ೪:೧೬ ದೇವರು ತುಂಬು ಪ್ರೀತಿಯ ವಿವಾಹ ಸಂಸ್ಕಾರದಲ್ಲಿ ಇಳಿದು ಬರುತ್ತದೆ. ಸಂಗಾತಿಯಲ್ಲಿರುವ ಪೂರ್ಣಪ್ರೀತಿಯು ಸ್ವತಃ ದೇವರು ತನ್ನನ್ನೇ ಅರ್ಪಿಸಿಕೊಳ್ಳುವುದರಲ್ಲಿ ಬಂಧಿತವಾಗಿರುತ್ತದೆ.
 • ಪರಮ ತ್ರಿತ್ವದ ಆ ದೈವೀಕವಾದ ಸಂಬಂಧಕ್ಕೆ ಇದು ಸೇರುತ್ತದೆ. ವಿವಾಹದಲ್ಲಿ, ಪೂರ್ಣವಾದ ಪರಸ್ಪರರಿಗಾಗಿರುವ ಅರ್ಪಣೆಯ ಪ್ರೀತಿಯು ಈ ಪರ್ಯಾಲೋಚನೆಗೊಳಗಾಗುತ್ತದೆ."ಪುರುಷ ಹಾಗೂ ಸ್ತ್ರೀಯ ಪ್ರೀತಿಯು ಈ ವಿವಾಹದ ಸಂಸ್ಕಾರದಲ್ಲಿ ಪವಿತ್ರೀಕರಿಸಲ್ಪಡುತ್ತದೆ, ಅವರ ನಿಮ್ಮ ನಿತ್ಯ ಪ್ರೀತಿಯ ಕನ್ನಡಿಯಾಗುತ್ತದೆ.

ಉಲ್ಲೇಖ[ಬದಲಾಯಿಸಿ]

 1. https://en.wikipedia.org/wiki/Sacraments_of_the_Catholic_Church
 2. http://www.catholic.org/clife/prayers/sacrament.php