ವಿಷಯಕ್ಕೆ ಹೋಗು

ಕ್ರೀಡಾ ಸಾಧಕರ ಪ್ರಶಸ್ತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಜುನ ಪ್ರಶಸ್ತಿ

[ಬದಲಾಯಿಸಿ]

೧೯೬೧ ರಲ್ಲಿ ಭಾರತ ಸರ್ಕಾರದ ರಾಷ್ಟ್ರದಲ್ಲಿನ ಉತ್ಕೃಷ್ಟ ಮಟ್ಟದ ಕ್ರೀಡಾ ಸಾಧನೆಗೈದವರನ್ನು ಗುರುತಿಸಲಿಕ್ಕಾಗಿ ಅರ್ಜುನ ಪ್ರಶಸ್ತಿಯನ್ನು ಅಸ್ತಿತ್ವಕ್ಕೆ ತಂದಿರುತ್ತದೆ.ಈ ಪ್ರಶಸ್ತಿ ಯು ಪ್ರಸ್ತುತ ಐದು ಲಕ್ಷ ನಗದು ,ಕಂಚಿನಿಂದ ನಿರ್ಮಿಸಿದ ಅರ್ಜುನನ ಮೂರ್ತಿ ಹಾಗೂ ಪ್ರಮಾಣ ಪತ್ರಗಳನ್ನು ಹೊಂದಿರುತ್ತದೆ.

ಪರಿಗಣನೆ

[ಬದಲಾಯಿಸಿ]

ಈ ಪ್ರಶಸ್ತಿಯನ್ನು ಪ್ರಧಾನ ಮಾಡುವಾಗ ಕ್ರೀಡಾಪಟುಗಳ ಪ್ರಸ್ತುತ ವರ್ಷದ ಹಾಗೂ ಮೂರು ವರ್ಷಗಳ ಅಂತರ್ ರಾಷ್ಟ್ರೀಯ ಮಟ್ಟದಲ್ಲಿನ ಸಾಧನೆಯನ್ನು ಪರಿಗಣಿಸಲಾಗುವದು.ಇದರೊಂದಿಗೆ ಕ್ರೀಡಾ ಪಟುವು ಅತ್ಯುತ್ತಮ ನಾಯಕತ್ವ ಗುಣಗಳನ್ನು ,ಕ್ರೀಡಾ ಮನೋಭಾವನೆಯನ್ನು ಹಾಗೂ ಶಿಸ್ತನ್ನು ತೋರ್ಪಡಿಸುವದುಅತ್ಯವಶ್ಯಕ.ಒಲಂಪಿಕ್ ಕ್ರೀಡೆಗಳು,ಏಷ್ಯನ್ ಕ್ರೀಡಾಕೂಟ,ಕಾಮನ್ವೆವೆಲ್ತ್ ಕ್ರೀಡಾಕೂಟ ,ವಿಶ್ವ ಕಪ್ ,ವಿಶ್ವ ಚಾಂಪಿಯನ್ ಶಿಪ್ ನಲ್ಲಿ ನಡೆಯುವಂತಹ ಕ್ರೀಡೆಗಳಲ್ಲಿ ಮತ್ತು ಕ್ರಿಕೆಟ್ ನ ಸಾಧನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವದು.ಭಾರತೀಯ ಕ್ರೀಡೆಗಳು ಹಾಗೂ ವಿಕಲ ಚೇತನರ ಕ್ರೀಡಾಕೂಟಗಳನ್ನು ಇತ್ತೀಚಿನ ದಿನಗಳಲ್ಲಿ ಸೇರ್ಪಡೆಗೊಳಿಸುತ್ತಾರೆ.

ದ್ರೋಣಚಾರ್ಯ ಪ್ರಶಸ್ತಿ

[ಬದಲಾಯಿಸಿ]

೧೯೮೫ ರಲ್ಲಿ ಭಾರತ ಸರ್ಕಾರವು ಕ್ರೀಡಾ ತರಭೇತಿಯಲ್ಲಿ ಉತ್ಕೃಷ್ಟ ಸಾಧನೆಯನ್ನು ಮಾಡಿರುವ ತರಭೇತುದಾರರಿಗೆ ದ್ರೋಣಚಾರ್ಯ ಪ್ರಶಸ್ತಿಯನ್ನು ಅಸ್ತಿತ್ವಕ್ಕೆ ತಂದಿರುತ್ತದೆ.ಈ ಪ್ರಶಸ್ತಿಯು ಪ್ರಸ್ತುತ ಐದು ಲಕ್ಷ ನಗದು ,ದ್ರೋಣಚಾರ್ಯ ಕಂಚಿನ ಮೂರ್ತಿ ಹಾಗೂ ಪ್ರಮಾಣ ಪತ್ರವನ್ನು ಹೊಂದಿರುತ್ತದೆ.

ಉದ್ದೇಶ

[ಬದಲಾಯಿಸಿ]

ಭಾರತದಲ್ಲಿ ಉತ್ತಮ ಕ್ರೀಡಾಪಟುಗಳನ್ನು ಸೃಷ್ಟಿಸುವಲ್ಲಿ ಕ್ರೀಡಾ ತರಭೇತುದಾರರಾಗಿ ಪ್ರೇರೆಪಣೆ ನೀಡುವದು ಹಾಗೂ ಭಾರತದ ಕ್ರೀಡಾ ಸಾಧನೆಯನ್ನು ಹೆಚ್ಚಿಸುವ ದು ಈ ಪ್ರಶಸ್ತಿಯ ಬಹುಮುಖ್ಯ ಉದ್ದೇಶವಾಗಿದೆ.

ಪ್ರಶಸ್ತಿ ನೀಡಲಾಗುವ ಹಿಂದಿನ ಮೂರು ವರ್ಷಗಳಲ್ಲಿ ಕ್ರೀಡಾ ತರಭೇತುದಾರರು ಗೆದ್ದಿರುವ ನಿರಂತರವಾದ ಸಾಧನೆಗಳನ್ನು ಇಲ್ಲಿ ಪರಿಗಣಿಲಾಗುತ್ತದೆ.ಭಾರತೀಯ ಕ್ರೀಡೆಯನ್ನು ಸುಧಾರಿಸುವಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವವರನ್ನು ಗುರುತಿಸಲು ಈ ಪ್ರಶಸ್ತಿ ಅತ್ಯಂತ ಸಮರ್ಪಕ.