ವಿಷಯಕ್ಕೆ ಹೋಗು

ಕ್ರಿಸ್‌ಮಸ್‌ ಕೇಕ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರಿಸ್‌ಮಸ್‌ ಟ್ರೀ

ಕ್ರಿಸ್‌ಮಸ್‌ ಪುಡ್ಡಿಂಗ್‌[ಬದಲಾಯಿಸಿ]

ಕ್ರಿಸ್‌ಮಸ್‌ ಪುಡ್ಡಿಂಗ್‌
  • ಡಿಸೆಂಬರ್ ಅಂತ್ಯದಲ್ಲಿ ೨೫ನೇದಿನಾಂಕದಂದು ಬರುವ ಕ್ರಿಸ್‌ಮಸ್‌ ಮುಂಚಿನ ದಿನ ಉಪವಾಸ ಮಾಡುವ ಪದ್ಧತಿ ಕ್ರಿಶ್ಚಿಯನ್‌ರಲ್ಲಿದೆ. ಹೀಗೆ ಉಪವಾಸದಿಂದ ಬಳಲಿದ ಹೊಟ್ಟೆಗೆ ಗಂಜಿ (ಪೊರಿಡ್ಜ್‌) ಸೇವನೆಮಾಡಿ ಹೊಟ್ಟೆಗೆ ಸಾಂತ್ವನ ನೀಡುತ್ತಾರೆ.
  • ಮೊದಮೊದಲು ಇದಕ್ಕೆ ಒಣಹಣ್ಣು, ಮಸಾಲೆ, ಜೇನುತುಪ್ಪಗಳನ್ನು ಸೇರಿಸಿ ಸೇವಿಸುತ್ತಿದ್ದರು. ಕ್ರಮೇಣ ಈ ಆಹಾರ ಪದ್ಧತಿ ಕ್ರಿಸ್‌ಮಸ್‌ ಪುಡ್ಡಿಂಗ್‌ ರೂಪ ತಾಳಿತು. 16ನೇ ಶತಮಾನದ ಸುಮಾರಿಗೆ ಈ ಸಾಮಾನ್ಯ ಆಹಾರ ಪದ್ಧತಿ ಬಿಟ್ಟು ತುಪ್ಪ, ಮೊಟ್ಟೆ, ಗೋಧಿ ಹಿಟ್ಟುಗಳನ್ನು ಸೇರಿಸಿ ವಿಶೇಷ ಖಾದ್ಯ ತಯಾರಿಸಲಾರಂಭಿಸಿದರು. ಆಂಗ್ಲರ ಸಂಪ್ರದಾಯದಲ್ಲಿ ಕ್ರಿಸ್‌ಮಸ್‌ ಕೇಕ್‌ ಎನ್ನುವ ಪರಿಕಲ್ಪನೆ ದಟ್ಟವಾಯಿತು. ಇದು ನಿಧಾನವಾಗಿ ಪ್ಲಮ್‌ ಕೇಕ್‌ ರೂಪ ತಾಳೀತು. ಶ್ರೀಮಂತ ಮನೆತನದವರು ಓವನ್‌ನ ಸಹಾಯದಿಂದ ಬದಾಮಿ, ಆಲ್ಮಂಡ್‌ ಶುಗರ್‌ ಪೇಸ್ಟ್‌, ಈಸ್ಟರ್‌ಗಳನ್ನು ಸೇರಿಸಿದ ಫ್ರುಟ್‌ ಕೇಕ್‌ ಮಾಡಿಕೊಂಡರು. ನಂತರ ಕ್ರಿಸ್‌ಮಸ್‌ಗೆ ಕೇಕ್‌ ಮಾಡುವುದು ರೂಢಿಯಾಯಿತು. ಒಣಹಣ್ಣುಗಳಿಂದ ರೂಪುಗೊಳ್ಳುತ್ತಿದ್ದ ಕೇಕ್‌ ನಿಧಾನವಾಗಿ ಆಕಾರ, ಬಣ್ಣ, ಗಾತ್ರದಲ್ಲಿಯೂ ವೈವಿಧ್ಯ ಹೊಂದಿತು. ತಿಳಿ/ಗಾಢ ಬಣ್ಣ, ತೇವ, ಒಣಗಿದ, ಭಾರದ, ಸ್ಪಾಂಜಿ, ಹುಳಿ ಹೀಗೆ ವಿಭಿನ್ನ ರೂಪು ಪಡೆಯಿತು.[೧]

ಕೇಕ್‌‍ನ ಆಕಾರಗಳು[ಬದಲಾಯಿಸಿ]

ಸಾಂತಾಕ್ಲಾಸ್‌
  • ಕಲಾವಿದನ ಸೃಜನ ಶೀಲತೆ ಹಾಗೂ ಜನರ ಅಭಿರುಚಿಗೆ ತಕ್ಕಂತೆ ಸಾವಿರಾರು ಬಗೆಯಲ್ಲಿ ಕೇಕ್‌ ವಿನ್ಯಾಸ ಮಾಡಬಹುದು. ಪ್ರತಿ ಕೇಕ್‌ ನಿರ್ಮಾಣದಲ್ಲೂ ಮೊದಲೇ ಥೀಂ ನಿರ್ಧರಿಸಿಕೊಳ್ಳಬೇಕು ಎನ್ನುವುದು ತಜ್ಞರ ಸಲಹೆ. ಅಂದಹಾಗೆ ಕ್ರಿಸ್‌ಮಸ್‌ ಸಂದರ್ಭದಲ್ಲಿಯೂ ಬಗೆಬಗೆ ಥೀಂ ಉಳ್ಳ ಕೇಕ್‌ ಮಾಡಬಹುದು. ಸಾಂತಾಕ್ಲಾಸ್‌, ಕ್ರಿಸ್‌ಮಸ್‌ ಟ್ರೀ, ಗೋದಲಿ, ಮನೆ, ಹೂವು, ಉಡುಗೊರೆಗಳು, ಬಗೆಬಗೆಯ ಸಾಂತಾ ಕ್ರಿಸ್‌ಮಸ್‌ ಕೇಕ್‌, ಸ್ಲೆಡ್ಜ್‌ ವಿತ್‌ ಸ್ನೋ, ಕ್ರಿಸ್‌ಮಸ್‌ ವೆಡಿಂಗ್‌ ಕೇಕ್‌, ಹಿಮಸಾರಂಗ ಕೇಕ್‌, ಪೆಂಗ್ವಿನ್‌ ಹಾಗೂ ಜಿಂಜರ್‌ ಬ್ರೆಡ್‌, ಸ್ಟ್ರಾಬೆರಿ ಅಂಡ್‌ ಕ್ರೀಂ ಕೇಕ್‌ ವಿತ್‌ ಸ್ಮೈಲೀಸ್‌, ಕ್ಯಾಂಡಲ್‌, ಇತ್ಯಾದಿ[೨]

ನಾನಾ ಬಗೆಯ ಕೇಕ್‌ಗಳು[ಬದಲಾಯಿಸಿ]

  • ಪ್ಲಮ್‌ ಕೇಕ್‌, ಸ್ಟೊಲೆನ್‌ ಕೇಕ್‌, ಚಾರ್ಬೆಲಿ, ಸ್ಪೆಕ್ಯುಲೂಸ್‌, ವೆನಿಲಾ ಕಿಪ್‌ಫೆರ್ಲ್‌, ಬಸ್ಲೆ ರ್‌ ಬ್ರುನ್ಸ್ಲಿ, ಸ್ಪಿಟ್ಸ್‌ಬುಬೆನ್‌, ಯೂಲೆ ಲಾಗ್ಸ್‌, ಮಿನ್ಸ್‌ ಪೀಸ್‌, ಕ್ಯಾಡಿಂಡ್‌ ಸ್ಟೋಲ ನ್‌ ಬ್ರೆಡ್‌, ಜಿಂಜರ್‌ ಹೌಸ್‌, ಸ್ಟೀಮ್ಡ್‌ ಪ್ಲಮ್‌ ಪಡ್ಡಿಂಗ್‌, ಆ್ಯಪಲ್‌ ಕ್ರೀಂ ಕೇಕ್‌.[ [೩]

ಕೇಕ್ ಚಿತ್ರದ ಗ್ಯಾಲರಿ[ಬದಲಾಯಿಸಿ]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. pp.149–150. Greenwood Publishing Group, 2007[ಶಾಶ್ವತವಾಗಿ ಮಡಿದ ಕೊಂಡಿ]
  2. Seward, Pat; Lal, Sunandini Arora (2006). Netherlands. Marshall Cavendish. p. 116.
  3. Christmas Cake Recipes