ವಿಷಯಕ್ಕೆ ಹೋಗು

ಕ್ರಿಕೆಟ್‌‌ನಲ್ಲಿನ ಬಾಜಿ ಕಟ್ಟುವಿಕೆಯ ವಿವಾದಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂದ್ಯಗಳಲ್ಲಿನ ಬಾಜಿ ಕಟ್ಟುವಿಕೆಗೆ ಸಂಬಂಧಿಸಿದಂತೆ ಆಟಗಾರರು ತಾವೂ ಪಾತ್ರ ವಹಿಸಿರುವುದನ್ನು ಕುರಿತಂತೆ ಕ್ರಿಕೆಟ್‌‌ ಆಟ ಅನೇಕ ವಿವಾದಗಳಿಗೀಡಾಗಿದೆ. ನಿರ್ದಿಷ್ಟವಾಗಿ ಬಾಜಿವ್ಯವಹಾರಗಾರರು ಅನೇಕ ಆಟಗಾರರನ್ನು ಸಂಪರ್ಕಿಸಿ ಪಂದ್ಯಗಳನ್ನು ಕಳೆದುಕೊಳ್ಳಲು, ಪಂದ್ಯಗಳ ಅಂಶಗಳಲ್ಲಿ ಹಸ್ತಕ್ಷೇಪ ಮಾಡಲು (e.g. ಪಂದ್ಯದ ಟಾಸ್‌) ಅಥವಾ ಇತರೆ ಮಾಹಿತಿಗಳನ್ನು ನೀಡಲು ಅವರಿಗೆ ಲಂಚದ ಆಮಿಷ ಒಡ್ಡಿ ತಮ್ಮ ಕೆಲಸ ಮಾಡಿಸಿಕೊಂಡಿರುತ್ತಾರೆ.

೧೯೯೯-೨೦೦೦ರ ಭಾರತ-ದಕ್ಷಿಣ ಆಫ್ರಿಕಾ ಪಂದ್ಯದ ಮೋಸದಾಟದ ಹಗರಣ

[ಬದಲಾಯಿಸಿ]

೨೦೦೦ನೇ ಇಸವಿಯಲ್ಲಿ ದೆಹಲಿಯ ಆರಕ್ಷಕ ಪಡೆ/ಪೋಲೀಸರು ಕಪ್ಪುಪಟ್ಟಿಗೆ ಸೇರಿಸಲಾಗಿದ್ದ ಬುಕೀ/ಬಾಜೀವಾಲ ಮತ್ತು ದಕ್ಷಿಣ ಆಫ್ರಿಕಾದ ಕ್ರಿಕೆಟ್‌‌ ತಂಡದ ನಾಯಕ ಹ್ಯಾನ್ಸೀ ಕ್ರೋನಿಯೇ ನಡುವಿನ ದೂರವಾಣಿ ಮಾತುಕತೆಯನ್ನು ಕದ್ದಾಲಿಸಿದಾಗ ತಿಳಿದುಬಂದ ಪ್ರಕಾರ ಕ್ರೋನಿಯೇರವರು ಪಂದ್ಯಗಳನ್ನು ಕಳೆದುಕೊಳ್ಳಲು ಹಣವನ್ನು ಪಡೆದಿದ್ದರು.[][] ದಕ್ಷಿಣ ಆಫ್ರಿಕಾದ ಸರ್ಕಾರವು ತನ್ನ ಯಾವುದೇ ಆಟಗಾರರನ್ನು ಭಾರತೀಯ ತನಿಖಾ ತಂಡದ ಮುಂದೆ ಹಾಜರಾಗುವುದಕ್ಕೆ ಅನುಮತಿ ನೀಡಲೊಪ್ಪಲಿಲ್ಲ. ತನಿಖೆಗಾಗಿ ನ್ಯಾಯಾಲಯವೊಂದನ್ನು ಸ್ಥಾಪಿಸಲಾಯಿತು ಹಾಗೂ ಅದರಲ್ಲಿ ಕ್ರೋನಿಯೇ ಪಂದ್ಯಗಳನ್ನು ಉದ್ದೇಶಪೂರ್ವಕವಾಗಿ ಕಳೆದುಕೊಂಡುದುದಾಗಿ ಒಪ್ಪಿಕೊಂಡರು. ತಕ್ಷಣವೇ ಕ್ರಿಕೆಟ್‌‌ ಪಂದ್ಯದ ಎಲ್ಲಾ ವಿಧಗಳಿಗೆ ಅನ್ವಯವಾಗುವಂತೆ ಅವರು ಆಡದಂತೆ ನಿಷೇಧ ಹೇರಲಾಯಿತು. ಅವರು ಸಲೀಮ್‌‌ ಮಲಿಕ್‌ (ಪಾಕಿಸ್ತಾನ), ಮೊಹಮ್ಮದ್‌‌ ಅಜರುದ್ದೀನ್‌‌ ಮತ್ತು ಅಜಯ್‌ ಜಡೇಜಾ(ಭಾರತ)ರವರುಗಳು ಕೂಡಾ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೆಸರಿಸಿದ್ದರು.[] ಜಡೇಜಾರ ಮೇಲೆ ೪ ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಅವರುಗಳೆಲ್ಲರ ಮೇಲೆ ಕೂಡಾ ಕ್ರಿಕೆಟ್‌‌ನ ಎಲ್ಲಾ ವಿಧಗಳಿಗೆ ಅನ್ವಯವಾಗುವಂತೆ ಅವರು ಆಡದಂತೆ ನಿಷೇಧ ಹೇರಲಾಯಿತು. ಓರ್ವ ಪ್ರಧಾನ ವ್ಯಕ್ತಿಯಾಗಿ, ಕ್ರೋನಿಯೇರವರು ಬಾಜಿ ಕಟ್ಟುವಿಕೆ ಪ್ರಕ್ರಿಯೆಯ ಕತ್ತಲ ಭಾಗವನ್ನು ಬಹಿರಂಗಗೊಳಿಸಿದ್ದರು, ಆದಾಗ್ಯೂ ೨೦೦೨ರಲ್ಲಿ ಆದ ಅವರ ಹಠಾತ್‌ ಮರಣವು, ಅವರ ಮೋಸದಾಟದ ಬಹುತೇಕ ಮೂಲವ್ಯಕ್ತಿಗಳು ಕಾನೂನು ಜಾರಿ ಸಂಸ್ಥೆಗಳ ಮುಷ್ಠಿಯಿಂದ ತಪ್ಪಿಸಿಕೊಳ್ಳುವಂತೆ ಮಾಡಿತು. ಇಬ್ಬರು ದಕ್ಷಿಣ ಆಫ್ರಿಕಾದ ಕ್ರಿಕೆಟ್‌‌ ಆಟಗಾರರಾದ ಹರ್ಷೇಲ್‌ ಗಿಬ್ಸ್‌‌ ಮತ್ತು ನಿಕಿ ಬೋಯೆರವರುಗಳನ್ನು ಕೂಡಾ ಮೋಸದಾಟದ ಕರ್ಮಕಾಂಡದಲ್ಲಿ ಅವರುಗಳು ವಹಿಸಿದ ಪಾತ್ರಕ್ಕಾಗಿ ದೆಹಲಿ ಆರಕ್ಷಕ ಪಡೆ/ಪೋಲೀಸರ ಅಪರಾಧಿಗಳು ಬೇಕಾಗಿದ್ದಾರೆ ಪಟ್ಟಿಯಲ್ಲಿ ಹೆಸರಿಸಲಾಗಿತ್ತು.

ಇತರೆ ವಿವಾದಗಳು

[ಬದಲಾಯಿಸಿ]

"ಬಾಜಿವ್ಯವಹಾರಗಾರ ಜಾನ್‌"ನಿಗೆ ವಾತಾವರಣ ಹಾಗೂ ಮೈದಾನದ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದುದಕ್ಕಾಗಿ ಮಾರ್ಕ್‌ ವಾ ಮತ್ತು ಷೇನ್‌ ವಾರ್ನೆಯವರುಗಳ ಮೇಲೆ ಆಸ್ಟ್ರೇಲಿಯಾದ ಕ್ರಿಕೆಟ್‌‌ ಮಂಡಳಿಯು ದಂಡಗಳನ್ನು ವಿಧಿಸಿದ್ದ ಹಗರಣಗಳೂ ಇಂತಹಾ ಹಗರಣಗಳ ಪಟ್ಟಿಯಲ್ಲಿ ಸೇರಿವೆ.[] ರಾಬ್‌ O'ರೇಗನ್‌ QC ತಂಡದವರು ನೀಡಿದ ವರದಿಯಲ್ಲಿ, ಕ್ರಿಕೆಟ್‌‌ ಆಟಗಾರರಿಗೆ ಬಾಜಿವ್ಯವಹಾರಗಾರರೊಂದಿಗೆ ವ್ಯವಹರಿಸುವುದರ ಅಪಾಯಗಳ ಬಗ್ಗೆ ಅರಿವಿರಲಿಲ್ಲ ವಾ ಅಥವಾ ವಾರ್ನೆಯವರಿಗೆ ಇನ್ನೂ ಹೆಚ್ಚಿನ ದಂಡನೆಗಳನ್ನು ನೀಡಲು ಸಾಧ್ಯವಿಲ್ಲವಾದರೂ, ಭವಿಷ್ಯದಲ್ಲಿ ಆಟಗಾರರು ಕೇವಲ ದಂಡಗಳ ಮೂಲಕ ಮಾತ್ರವಲ್ಲ ಬದಲಿಗೆ ಅಮಾನತ್ತಿನಲ್ಲಿಡುವ ಮೂಲಕ ಕೂಡಾ ದಂಡಿಸಬಹುದಾಗಿದೆ ಎಂದು ಅಂತಿಮವಾಗಿ ಹೇಳಲಾಗಿತ್ತು.[]

ICC ಸಮಿತಿಯು ಪ್ರತಿಕ್ರಿಯೆ ನೀಡುವುದರಲ್ಲಿ ನಿಧಾನ ಮಾಡಿದರೂ, ಅಂತಿಮವಾಗಿ ೨೦೦೦ರಲ್ಲಿ ಲಂಡನ್‌'ನ ಮಹಾನಗರ ಆರಕ್ಷಕ ಪಡೆ/ಮೆಟ್ರೋಪಾಲಿಟನ್‌ ಪೊಲೀಸ್‌ನ ಮಾಜಿ ಮುಖ್ಯಸ್ಥರಾದ ಸರ್‌ ಪಾಲ್‌ ಕಾಂಡನ್‌ರ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಹಾಗೂ ಸಂರಕ್ಷಣಾ ಘಟಕವೊಂದನ್ನು ರಚಿಸುವುದರ ಮೂಲಕ ಪ್ರತಿಕ್ರಿಯೆ ತೋರಿತು. ಕ್ರಿಕೆಟ್‌‌ನಲ್ಲಿನ ಭ್ರಷ್ಟಾಚಾರವನ್ನು 'ಕನಿಷ್ಟವಾಗಿ ಕಡಿಮೆ ಮಾಡಬಹುದಷ್ಟು ಪ್ರಮಾಣಕ್ಕೆ' ಕಡಿಮೆ ಮಾಡಿರುವುದಾಗಿ ಅದು ಹೇಳಿಕೊಂಡಿದೆ.

೨೦೧೦ರ ಇಂಗ್ಲೆಂಡ್‌ ಕೈಗೊಂಡ ಪಾಕಿಸ್ತಾನದ ಪ್ರವಾಸದ ೪ನೆಯ ಟೆಸ್ಟ್‌ ಪಂದ್ಯದ ಅವಧಿಯಲ್ಲಿ, ನ್ಯೂಸ್‌ ಆಫ್‌ ವರ್ಲ್ಡ್‌ ಎಂಬ ಆಂಗ್ಲ ಸುದ್ದಿ/ವಾರ್ತಾಪತ್ರಿಕೆಯು ಮಝಾರ್‌ ಮಜೀದ್‌ ಮತ್ತು ಪಾಕಿಸ್ತಾನಿ ಆಟಗಾರರಲ್ಲಿ ಕೆಲವರು ಸ್ಥಳದಲ್ಲಿಯೇ ಮೋಸದಾಟ/ಸ್ಪಾಟ್‌ ಫಿಕ್ಸಿಂಗ್‌ದ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಆರೋಪಿಸಿ ವರದಿಯೊಂದನ್ನು ಪ್ರಕಟಿಸಿತು.[][]

ಜನಪ್ರಿಯ ಸಂಸ್ಕೃತಿಯಲ್ಲಿ

[ಬದಲಾಯಿಸಿ]
  • ಕುನಾಲ್‌ ಖೇಮು, ಬೊಮ್ಮನ್‌ ಇರಾನಿ, ಸೋಹಾ ಅಲಿ ಖಾನ್‌ ಮತ್ತು ಸೈರಸ್‌ ಬ್ರೊವಾಚಾ/ಬರೂಚಾರವರುಗಳು ನಟಿಸಿದ್ದ ೧೯೯೯ನೇ ಇಸವಿಯಲ್ಲಿ ಚಿತ್ರೀಕರಣ ಆರಂಭಗೊಂಡಿದ್ದ/ಸೆಟ್ಟೇರಿದ್ದ ೨೦೦೯ರ ೯೯ ಎಂಬ ಹೆಸರಿಹಿಂದಿ ಚಲನಚಿತ್ರವು ಭಾರತ-ದಕ್ಷಿಣ ಆಫ್ರಿಕಾ ಪಂದ್ಯಗಳ ಮೋಸದಾಟದ ವಿವಾದವನ್ನು ಕಥಾಹಂದರವನ್ನಾಗಿ ಹೊಂದಿತ್ತು.
  • ೨೦೦೮ರ ಕುನಾಲ್‌ ದೇಶ್‌ಮುಖ್‌ರ ನಿರ್ದೇಶನದ ಇಮ್ರಾನ್‌ ಹಷ್ಮಿ, ಸೋನಲ್‌ ಚೌಹಾಣ್‌ ಮತ್ತು ಜಾವೆದ್‌ ಷೇಕ್‌ರವರುಗಳು ನಟಿಸಿದ್ದ ಜನ್ನತ್‌‌ ಹಿಂದಿ ಚಲನಚಿತ್ರವು ಕೂಡಾ ಮೋಸದಾಟದ ಮೇಲೆಯೇ ಆಧಾರಿತವಾಗಿತ್ತು.

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಮೋಸದಾಟದಲ್ಲಿ ಭಾಗಿಯಾದುದಕ್ಕೆ ನಿಷೇಧಕ್ಕೊಳಗಾದ ಕ್ರಿಕೆಟ್‌‌ ಆಟಗಾರರ ಪಟ್ಟಿ
  • ಪಾಕಿಸ್ತಾನ ಕ್ರಿಕೆಟ್‌‌ನ ಸ್ಥಳದಲ್ಲಿಯೇ ಮೋಸದಾಟ/ಸ್ಪಾಟ್‌ ಫಿಕ್ಸಿಂಗ್‌ ವಿವಾದ

ಉಲ್ಲೇಖಗಳು‌

[ಬದಲಾಯಿಸಿ]
  1. "ಇದು ಖಂಡಿತಾ ಕ್ರಿಕೆಟ್‌ ಆಟ ಅಲ್ಲ". Archived from the original on 2010-09-08. Retrieved 2011-03-06.
  2. "ಇನ್ನೂ ಇಬ್ಬರು ಕ್ರಿಕೆಟ್‌‌ ಬುಕೀ/ಬಾಜೀವಾಲರು ದಾಳಿಯ ನಂತರ ತಪ್ಪಿಸಿಕೊಂಡಿದ್ದಾರೆ". Archived from the original on 2012-10-10. Retrieved 2011-03-06.
  3. 'ಅಜರುದ್ದೀನ್‌ ಬುಕೀ/ಬಾಜೀವಾಲ M K ಗುಪ್ತಾರಿಗಾಗಿ ಪಂದ್ಯಗಳ ಮೋಸದಾಟ ನಡೆಸಿದ್ದರು...'
  4. "Findings of the O'Regan Player Conduct Inquiry". February 24, 1999. Retrieved 2006-11-09.
  5. "ACB Player Conduct Inquiry Report". Archived from the original on 2007-02-21. Retrieved 2006-11-09.
  6. "Our team will throw two ODIs".
  7. "'Pak players were in touch with bookies during T20 WC'". Archived from the original on 2010-08-31. Retrieved 2011-03-06.

ಟೆಂಪ್ಲೇಟು:Cricket-history-stub