ಕ್ಯಾ ಸು
ಕ್ಯಾ ಸು ಬರ್ಮಾ ದೇಶದ ಖ್ಯಾತ ಚಲನಚಿತ್ರ ಮತ್ತು ಟಿವಿ ನಟ ಮತ್ತು ಗಾಯಕ.[೧]
ಬಾಲ್ಯ
[ಬದಲಾಯಿಸಿ]ಕ್ಯಾ ಸು ೧೯೮೭ರ ಡಿಸೆಂಬರ್ ೧೨ ರಂದು ಬರ್ಮಾ ದೇಶದ ಬಾಗೋ ಪ್ರಾಂತ್ಯದ ತವುಂಗೋ ಎಂಬಲ್ಲಿ ಜನಿಸಿದರು. ಇವರ ತಾಯಿ ಆಯೆ ಆಯೆ ಖೇಂಗ್. ಇವರ ತಂದೆ ತೇಯಿನ್ ಆಂಗ್. ಇವರ ಅಣ್ಣ ಖ್ಯಾತ ಗಾಯಕ ಮತ್ತು ಕವಿ ಹಿವಾನ್ ಪೇಂಗ್. ಕ್ಯಾ ಸು ೨೦೦೨ರವರೆಗೆ ತವುಂಗೋನಲ್ಲಿನ ಬಿ ಇ ಹೆಚ್ ಎಸ್ ಶಾಲೆಯಲ್ಲಿ ಕಲಿತರು. ೨೦೦೮ರಲ್ಲಿ ತವುಂಗೋ ವಿಶ್ವವಿದ್ಯಾಲಯದಲ್ಲಿ ಪ್ರಾಣಿ ಶಾಸ್ತ್ರ ವಿಷಯದಲ್ಲಿ ಬೆ ಎಸ್ಸಿ ಪದವಿ ಪಡೆದರು. ವಿಜ್ಞಾನ ವಿಷಯದಲ್ಲಿ ಪದವಿ ಪಡೆದಾಗಿಯೂ, ನಟನೆಗೆ ಇಳಿದ ಹಿರಿಮೆ ಕ್ಯಾ ಸು ರದ್ದು.
ವೃತ್ತಿ
[ಬದಲಾಯಿಸಿ]೨೦೧೨ರಲ್ಲಿ ಕ್ಯಾ ಸು ನಟನಾ ತರಬೇತಿ ಪಡೆದು ಫಾರ್ ಎವೆರ್ ಸಂಸ್ಥೆಗೆ ಸೇರಿದರು. ೨೦೧೪ರಲ್ಲಿ ಎಂ ಆರ್ ಟಿ ವಿ ಚಾನೆಲ್ಲಿನಲ್ಲಿ ಪ್ರಸಾರವಾದ ಫಾರ್ ಎವೆರ್ ಮಂಡಾಲೇ ಎಂಬ ಚಿತ್ರದಲ್ಲಿ ನಟಿಸಿದರು. https://en.m.wikipedia.org/wiki/Forever_Mandalay ಮಂಡಾಲೇ ಜೈಲಿಗೆ ಹೆಸರುವಾಸಿ ಆಗಿರುವ ಜಾಗದ ಹೆಸರು ಹೊಂದಿದ್ದ ಈ ಸರಣಿಯು, ವೃದ್ಧ ದಂಪತಿಯ ಬಗ್ಗೆ ಸರ್ವಕಾಲೀನ ಪ್ರೀತಿಯನ್ನು ಸಾರಿತು. ೩೦ ಭಾಗಗಳ ಈ ಟಿವಿ ಸರಣಿ [೨] ಇದರ ಬೆನ್ನಲ್ಲೇ ಕ್ಯಾ ಸು ಹಲವು ಟಿವಿ ಸರಣಿಯಲ್ಲಿ ಅವಕಾಶ ಗಿಟ್ಟಿಸಿದರು. ಹ್ಯಾಪಿ ಬೀಚ್ ಎಂಬ ಹಾಸ್ಯ ಸರಣಿಯಲ್ಲಿ ನಟಿಸಿ ಕ್ಯಾ ಸು ಬಲು ಜನಪ್ರಿಯತೆ ಗಳಿಸಿದರು. ಅದೇ ವರ್ಷ ಕ್ಯಿ ಜ಼್ಾವ್ ಟೆಟ್ ಜೊತೆಗೆ ಪ್ಲವರ್ಸ್ ಅಂಡ್ ಬಟರ್ ಫ್ಲೈಸ್ ಎಂಬ ಇನ್ನೊಂದು ಹಾಸ್ಯ ಸರಣಿಯಲ್ಲಿ ನಟಿಸಿ ಕ್ಯಾ ಸು ಹೆಸರು ಮಾಡಿದರು.
೨೦೧೫ರಲ್ಲಿ ಪಾನ್ ನು ಥ್ವೇ ಎಂಬ ಟಿವಿ ಸರಣಿಯಲ್ಲಿ ಮ್ಯಾಟ್ ಥು ಕ್ಯಾ ಜೊತೆಗೆ ಕ್ಯಾ ಸು ನಟಿಸಿದರು. ೨೦೧೬ರಲ್ಲಿ ಲು ಯೀ ಚುನ್ ಎಂಬ ನಾಟಕ ಸರಣಿಯಲ್ಲಿ ಗಂಭೀರ ಪಾತ್ರ ನಿರ್ವಹಿಸಿ ಹೆಸರು ಮಾಡಿದರು. ಇದರ ನಂತರ, ಕ್ಯಾ ಸು ರಿಗೆ ಅಭಿನಯಕ್ಕೆ ಒತ್ತು ನೀಡುವ ಪಾತ್ರಗಳು ಹೆಚ್ಚು ಸಿಕ್ಕವು.
ಊ ಯಿನ್ ಮ್ಹು ಫಿಟ್ ಫು ಚಿನ್ ಥೇ ಎಂಬ ಧಾರಾವಾಹಿಯಲ್ಲಿ ಹೈನ್ ಟೆಟ್ ಜೊತೆ ನಟಿಸಿದ ಕ್ಯಾ ಸು, ದೊಡ್ಡ ಹೆಸರು ಮಾಡಿದರು.
೨೦೧೮ರಲ್ಲಿ ಕ್ಯಾ ಸು, ಫಾಯ್ ಶ್ವಿನ್ ಚಿನ್ ವಿಟ್ ನ್ಯಿನ್ ಎಂಬ ಸರಣಿಯಲ್ಲಿ ನಟಿಸಿದರು. ಈ ಸರಣಿಯಲ್ಲಿ ಜನಪ್ರಿಯ ನಟ ಯಮೋನೇ ನಾಯಿಂಗ್ ಜೊತೆ ನಟಿಸುವ ಅವಕಾಶ ಕ್ಯಾ ಸು ರಿಗೆ ದೊರಕಿತು. ಅದೇ ವರ್ಷ ಶೆವ್ ಫೋ ಸಾರ್ ಸೊನೆ ಯಾತ್ ಮ್ಯಾಯ್ ಧಾರಾವಾಹಿಯಲ್ಲಿ ಚ್ಯು ಲೇಯ್ ಜೊತೆ ನಟಿಸಿದರು. ವರ್ಷದ ಕಡೆಯಲ್ಲಿ ಟಾಕ್ಸಿಕ್ ಎಂಬ ಸಾಹಸಮಯ ಧಾರಾವಾಹಿಯಲ್ಲಿ ಸಾಹಸ ಭರಿತ ದೃಶ್ಯಗಳಲ್ಲಿ ನಟಿಸಿ, ಹೆಸರುವಾಸಿ ಆದರು.
೨೦೧೮ರಲ್ಲಿ ಹಾಸ್ಯ ಟಿವಿ ಸರಣಿ ಪ್ಯಾವ್ ಶ್ವಿನ್ ವಿಟ್ ನ್ಯಿನ್ ನಲ್ಲಿ ವಿಂಟ್ ಯಮೋನೆ ನಾಯಿಂಗ್ https://www.instagram.com/wintyamonenaing/ ಜೊತೆ ನಟಿಸಿ ಹೆಸರು ಗಳಿಸಿದರು. ೨೦೧೯ರ ಜನಪ್ರಿಯ ಸಾಹಸಮಯ ಧಾರಾವಾಹಿ ರೂಂ ನಂಬರ್ ನಲ್ಲಿ ನಟಿಸಿದ ಕ್ಯಾ ಸು, ೨೦೨೦ರಲ್ಲಿ ಮಿಲಿಟರಿ ಹಿನ್ನೆಲೆ ಉಳ್ಳ ಲೆಜೆಂಡ್ಸ್ ಆಫ್ ವಾರಿಯರ್ಸ್ ಎಂಬ ಟಿವಿ ಸರಣಿಯಲ್ಲಿ ಯೋಧನ ಪಾತ್ರ ಮಾಡಿದರು.[೩] ಕರೋನಾ ಮುಂಚೆ ಸಿದ್ಧವಾದ ಈ ಟಿವಿ ಸರಣಿ ಬಲು ಜನಪ್ರಿಯ ಆಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ https://www.facebook.com/kyawhsu2020
- ↑ "ಆರ್ಕೈವ್ ನಕಲು". Archived from the original on 2020-06-11. Retrieved 2020-12-01.
- ↑ https://en.m.wikipedia.org/wiki/Legends_of_Warriors