ವಿಷಯಕ್ಕೆ ಹೋಗು

ಕ್ಯಾಸಿಯೊ ಕಂಪ್ಯೂಟರ್ ಲಿಮಿಟೆಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಯಾಸಿಯೊ ಲೋಗೋ
ಉತ್ಪನ್ನ

ಕ್ಯಾಸಿಯೊ ಕಂಪ್ಯೂಟರ್ ಕಂ. ಲಿಮಿಟೆಡ್ (カシオ計算機株式会社) ಇದು ಜಪಾನ್‌ನ ಶಿಬುಯಾ, ಟೋಕಿಯೊದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಜಪಾನಿನ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ನಿಗಮವಾಗಿದೆ. ಇದರ ಉತ್ಪನ್ನಗಳಲ್ಲಿ ಕ್ಯಾಲ್ಕುಲೇಟರ್‌ಗಳು, ಮೊಬೈಲ್ ಫೋನ್‌ಗಳು, ಡಿಜಿಟಲ್ ಕ್ಯಾಮೆರಾಗಳು, ಎಲೆಕ್ಟ್ರಾನಿಕ್ ಸಂಗೀತ ಉಪಕರಣಗಳು ಮತ್ತು ಡಿಜಿಟಲ್ ವಾಚ್‌ಗಳು ಸೇರಿವೆ. ಇದನ್ನು ೧೯೪೬ ರಲ್ಲಿ ಸ್ಥಾಪಿಸಲಾಯಿತು. ೧೯೫೭ರಲ್ಲಿ ಕಾಂಪ್ಯಾಕ್ಟ್ ಎಲೆಕ್ಟ್ರಾನಿಕ್ ಕ್ಯಾಲ್ಕುಲೇಟರ್ ಮತ್ತು ೧೯೮೦ರಲ್ಲಿ ಡಿಜಿಟಲ್ ಕ್ಯಾಮೆರಾವನ್ನು ಪರಿಚಯಿಸಿತು. ೧೯೯೦ರ ದಶಕದಲ್ಲಿ ಕಂಪನಿಯು ಸಂಗೀತಗಾರರಿಗೆ ಹಲವಾರು ಹೋಮ್ ಎಲೆಕ್ಟ್ರಾನಿಕ್ ಕೀಬೋರ್ಡ್‌ಗಳನ್ನು ಕೈಗೆಟುಕುವ ರೀತಿಯಲ್ಲಿ ಅಭಿವೃದ್ಧಿಪಡಿಸಿತು.

ಇತಿಹಾಸ[ಬದಲಾಯಿಸಿ]

ಕ್ಯಾಸಿಯೊವನ್ನು ಏಪ್ರಿಲ್ ೧೯೪೬ರಲ್ಲಿ ತಡಾವೊ ಕಾಶಿಯೊ(೧೯೧೭-೧೯೯೩) ಫ್ಯಾಬ್ರಿಕೇಶನ್ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಇಂಜಿನಿಯರ್‌ನಿಂದ ಇದನ್ನು ಕಾಶಿಯೊ ಸೀಸಾಕುಜೊ ಎಂದು ಸ್ಥಾಪಿಸಲಾಯಿತು. ಕಾಶಿಯೊದ ಮೊದಲ ಪ್ರಮುಖ ಉತ್ಪನ್ನವೆಂದರೆ ಯುಬಿವಾ ಪೈಪ್, ಇದು ಸಿಗರೆಟ್ ಅನ್ನು ಹಿಡಿದಿಟ್ಟುಕೊಳ್ಳುವ ಒಂದು ಉಪಕರಣವಾಗಿದೆ. ಈ ಉಪಕರಣವನ್ನು ಧರಿಸಿದವರ ಕೈ ಮುಕ್ತವಾಗಿ ಬಿಡುವುದರ ಜೊತೆಗೆ ಧರಿಸಿದವರಿಗೆ ಸಿಗರೇಟನ್ನು ಅದರ ತುದಿಯವರೆಗೆ ಸೇದಲು ಅನುವು ಮಾಡಿಕೊಡುತ್ತದೆ.[೧]

೧೯೪೯ ರಲ್ಲಿ ಟೋಕಿಯೊದ ಗಿಂಜಾದಲ್ಲಿ ನಡೆದ ಮೊದಲ ವ್ಯಾಪಾರ ಪ್ರದರ್ಶನದಲ್ಲಿ ಎಲೆಕ್ಟ್ರಿಕ್ ಕ್ಯಾಲ್ಕುಲೇಟರ್‌ಗಳನ್ನು ನೋಡಿದ ನಂತರ, ಕಾಶಿಯೊ ಮತ್ತು ಅವನ ಕಿರಿಯ ಸಹೋದರರು (ತೋಶಿಯೊ, ಕಜುವೊ ಮತ್ತು ಯುಕಿಯೊ) ತಮ್ಮ ಕ್ಯಾಲ್ಕುಲೇಟರ್‌ಗಳನ್ನು ಅಭಿವೃದ್ಧಿಪಡಿಸಲು ಯುಬಿವಾ ಪೈಪ್‌ನಿಂದಾದ ಲಾಭವನ್ನು ಬಳಸಿದರು.

ತೋಶಿಯೊ ಎಲೆಕ್ಟ್ರಾನಿಕ್ಸ್‌ನ ಕೆಲವು ಜ್ಞಾನವನ್ನು ಹೊಂದಿದ್ದರು ಇವರು ಸೊಲೆನಾಯ್ಡ್‌ಗಳನ್ನು ಬಳಸಿಕೊಂಡು ಕ್ಯಾಲ್ಕುಲೇಟರ್ ಮಾಡಲು ಹೊರಟರು. ಹತ್ತಾರು ಮೂಲಮಾದರಿಗಳನ್ನು ಪರೀಕ್ಷಿಸಿದ ನಂತರ, ಮೇಜಿನ ಗಾತ್ರದ ಕ್ಯಾಲ್ಕುಲೇಟರ್ ಅನ್ನು ೧೯೫೪ರಲ್ಲಿ ಕ್ಯಾಲ್ಕುಲೇಟರ್ ಅನ್ನು ಪೂರ್ಣಗೊಳಿಸಿದರು. ಇದು ಜಪಾನ್‌ನ ಮೊದಲ ಎಲೆಕ್ಟ್ರೋ-ಮೆಕಾನಿಕಲ್ ಕ್ಯಾಲ್ಕುಲೇಟರ್ ಆಗಿತ್ತು.[೨]

ಜೂನ್ ೧೯೫೭ರಲ್ಲಿ ಕ್ಯಾಸಿಯೊ ಕಂಪ್ಯೂಟರ್ ಕಂ. ಲಿಮಿಟೆಡ್ ಅನ್ನು ರಚಿಸಲಾಯಿತು.[೩] ಆ ವರ್ಷ, ಕ್ಯಾಸಿಯೊ ೪೮೫೦೦೦ ಯೆನ್‌ಗೆ ಮಾರಾಟವಾದ ೧೪-ಅ ಮಾಡೆಲ್ ಅನ್ನು ಬಿಡುಗಡೆ ಮಾಡಿತು.[೪] ಇದು ರಿಲೇ ತಂತ್ರಜ್ಞಾನವನ್ನು ಆಧರಿಸಿದ ಮೊದಲ ಆಲ್-ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಕ್ಯಾಲ್ಕುಲೇಟರ್.[೫]

೧೯೭೪ರಲ್ಲಿ, ಕ್ಯಾಸಿಯೊ ತಮ್ಮ ಮೊದಲ ಡಿಜಿಟಲ್ ಕೈಗಡಿಯಾರವನ್ನು ಬಿಡುಗಡೆ ಮಾಡಿತು ಇದನ್ನು ಕ್ಯಾಸಿಯೋಟ್ರಾನ್ ಎಂದು ಕರೆಯಲಾಯಿತು. ಇದು ಸ್ವಯಂಚಾಲಿತ ಕ್ಯಾಲೆಂಡರ್ ಕಾರ್ಯವನ್ನು ಒಳಗೊಂಡಿರುವ ವಿಶ್ವದ ಮೊದಲ ಕೈಗಡಿಯಾರವಾಗಿದೆ.[೬] ೧೯೭೭ರಲ್ಲಿ ಎಫ್೧೦೦ ಎಂಬ ರೆಟ್ರೊ-ಫ್ಯೂಚರಿಸ್ಟಿಕ್ ಕೈಗಡಿಯಾರವನ್ನು ಬಿಡುಗಡೆ ಮಾಡಿತು.[೭] ೧೯೮೯ರಲ್ಲಿ, ಕ್ಯಾಸಿಯೊ ಮತ್ತೊಂದು ಪ್ರಮುಖ ಕೈಗಡಿಯಾರವನ್ನು ಬಿಡುಗಡೆ ಮಾಡಿತು. ಇದು ವಾರ್ಷಿಕ ೩ ಮಿಲಿಯನ್ ಯೂನಿಟ್‌ಗಳ ಉತ್ಪಾದನೆಯೊಂದಿಗೆ ಪ್ರಪಂಚದಲ್ಲಿ ಅತಿ ಹೆಚ್ಚು ಮಾರಾಟವಾದ ಕೈಗಡಿಯಾರವಾಗಿದೆ.[೮]

ಉತ್ಪನ್ನಗಳು[ಬದಲಾಯಿಸಿ]

ಕ್ಯಾಸಿಯೊ ಉತ್ಪನ್ನಗಳಲ್ಲಿ ಕೈಗಡಿಯಾರಗಳು, ಕ್ಯಾಲ್ಕುಲೇಟರ್‌ಗಳು, ಎಲೆಕ್ಟ್ರಾನಿಕ್ ಕೀಬೋರ್ಡ್‌ಗಳು ಮತ್ತು ಡಿಜಿಟಲ್ ಕ್ಯಾಮೆರಾಗಳು (ಎಕ್ಸಿಲಿಮ್ ಸರಣಿ), ಫಿಲ್ಮ್ ಕ್ಯಾಮೆರಾಗಳು, ನಗದು ರೆಜಿಸ್ಟರ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸಬ್-ನೋಟ್‌ಬುಕ್ ಕಂಪ್ಯೂಟರ್‌ಗಳು, ಮೊಬೈಲ್ ಫೋನ್‌ಗಳು, ಪಿಡಿಎಗಳು (ಇ-ಡೇಟಾ ಬ್ಯಾಂಕ್) ಮತ್ತು ಎಲೆಕ್ಟ್ರಾನಿಕ್ ಡಿಕ್ಷನರಿ ಇವು ಕ್ಯಾಸಿಯೊದ ಪ್ರಮುಖ ಡಿಜಿಟಲ್ ಉತ್ಪನ್ನಗಳು.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "CASIO Corporate History 1954". CASIO-Europe. CASIO Europe GmbH. Archived from the original on 19 February 2016. Retrieved 13 February 2016.
  2. "Tadao Kashio Biography: History of Casio Computer Company". 13 May 2015.
  3. "History". Casio Computer Co., Ltd. Retrieved 30 April 2012.
  4. Casio desktop calculator Archived 12 January 2008 ವೇಬ್ಯಾಕ್ ಮೆಷಿನ್ ನಲ್ಲಿ. by Dentaku Museum.
  5. Houston, Keith (2023). Empire of the Sum: The Rise and Reign of the Pocket Calculator. Norton. ISBN 978-0-393-88214-8.
  6. "The History of Casio Watches". 23 March 2022.
  7. "This Casio is Inspired by the One from 'Alien'". 12 August 2021.
  8. "Casio F-91W – the classic quartz digital watch - ICON Magazine". 19 August 2011.

ಬಾಹ್ಯ ಕೊಂಡಿಗಳು[ಬದಲಾಯಿಸಿ]