ಕ್ಯಾಪ್ಟನ್ ಜಿ.ಆರ್. ಗೋಪಿನಾಥ್
ಕ್ಯಾಪ್ಟನ್ ಜಿ. ಆರ್ . ಗೋಪಿನಾಥ್ ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆಯ ಸಂಸ್ಥಾಪಕರು.[೧][೨][೩] ಇವರು ಭಾರತೀಯ ವಿಮಾನಯಾನ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಾದೇಶಿಕ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ ಉಡಾನ್ ಯೋಜನೆಯಲ್ಲಿ ಗೋಪಿನಾಥ್ ಅವರೂ ಕೆಲಸ ಮಾಡುತ್ತಿದ್ದಾರೆ. ಇವರ ಆತ್ಮಕಥನ 'ಸಿಂಪ್ಲಿ ಫ್ಲೈ’ ('Simply fly’) ಪುಸ್ತಕವನ್ನು ಉದಯಭಾನು ಸುವರ್ಣ ಪುಸ್ತಕಮಾಲೆ ಪ್ರಕಟಿಸಿದೆ.
ಪರಿಚಯ
[ಬದಲಾಯಿಸಿ]ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನ ಶಾಲಾ ಶಿಕ್ಷಕರೊಬ್ಬರ ಪುತ್ರ. ಕನ್ನಡ ಮಾಧ್ಯಮದಲ್ಲಿ ಓದಿ, ಸೈನ್ಯಕ್ಕೆ ಸೇರಿ ಕ್ಯಾಪ್ಟನ್ ಆದರು. ಆ ನಂತರ 'ಏರ್ ಡೆಕ್ಕನ್' ವಿಮಾನಯಾನ ಸಂಸ್ಥೆಯ ಹುಟ್ಟುಹಾಕಿದರು. ಕಡಿಮೆ ಹಣದಲ್ಲಿ ವಿಮಾನಯಾನ ಇದರ ಉದ್ದೇಶ. ಗೋಪಿನಾಥರ ಜೀವನವನ್ನು ಆಧರಿಸಿ ತಮಿಳು ಭಾಷೆಯಲ್ಲಿ ಸಿನಿಮಾ ತಯಾರಾಗಿದೆ.
ಇತಿವೃತ್ತ
[ಬದಲಾಯಿಸಿ]ಮೊದಲು ಏರ್ ಡೆಕ್ಕನ್ ನ್ನು ಡೆಕ್ಕನ್ ಏವಿಯೇಶನ್ ಕಂಪನಿ ನಡೆಸುತಿತ್ತು. ಈ ಸಂಸ್ಥೆಯನ್ನು ಕ್ಯಾಪ್ಟನ್ ಜಿ.ಆರ್ .ಗೋಪಿನಾಥ್ ಅವರು ಪ್ರಾರಂಭಿಸಿದರು. ಇದರ ಮೊದಲ ವಿಮಾನ ಪ್ರಯಾಣವು 2003,ಆಗಸ್ಟ್ 23 ರಂದು ಹೈದ್ರಾಬಾದ್ ನಿಂದ ವಿಜಯವಾಡಾದವರೆಗೆ ನಿಗದಿಯಾಗಿತ್ತು. ಇದು ಜನಸಾಮಾನ್ಯನ ವಿಮಾನಯಾನ ಸೌಲಭ್ಯ ಎಂದು ಜನಪ್ರಿಯವಾಗಿತ್ತು.ಅದರ ಸಂಸ್ಥೆಯ ಚಿನ್ಹೆಯಲ್ಲಿ ಎರಡು ಹಸ್ತಗಳು ಸೇರಿಸಿ ಪಕ್ಷಿಯೊಂದು ಹಾರುತ್ತಿರುವುದನ್ನು ಸಂಕೇತಿಸಲಾಗಿತ್ತು. ಈ ವಿಮಾನಯಾನದ ಏರ್ ಲೈನ್ ಕಂಪನಿಯ ಘೋಷಣಾ ಫಲಕವು "ಸಿಂಪ್ಲಿ-ಫ್ಲೈ" ಎಂದು ಜನಸಾಮಾನ್ಯನಿಗೂ ಈಗ ವಿಮಾನ ಪ್ರಯಾಣ ಸಾಧ್ಯವೆಂದು ಸಾರುತ್ತಿತ್ತು. "ಪ್ರತಿಯೊಬ್ಬ ಭಾರತೀಯನೂ ಜೀವನದಲ್ಲಿ ಒಂದು ಬಾರಿಯಾದರೂ ವಿಮಾನ ಪ್ರಯಾಣ ಮಾಡಲಿ"ಎಂಬ ಕ್ಯಾಪ್ಟನ್ ಗೋಪಿನಾಥ್ ಅವರ ಕನಸು ಸಾಕಾರಗೊಂಡಿತ್ತು. ಭಾರತದ ಎರಡನೆಯ ದರ್ಜೆಯ ನಗರಗಳಾದ ಹುಬ್ಬಳ್ಳಿ,ಮಂಗಳೂರ್,ಮಧುರೈ ಮತ್ತು ವಿಶಾಖಪಟ್ಟನಮ್ ಮತ್ತು ಬೆಂಗಳೂರು ಮತ್ತು ಚೆನ್ನೈ ನ ಮೆಟ್ರೊಪಾಲಿಟಿನ್ ಪ್ರದೇಶಗಳಲ್ಲಿ ಈ ಏರ್ ಡೆಕ್ಕನ್ ತನ್ನ ಮೊಅಲ ವಿಮಾನಯಾನವನ್ನು ಆರಂಭಿಸಿತು.
ಸಿನಿಮಾವಾಗಿ
[ಬದಲಾಯಿಸಿ]- ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಜೀವನ ಸಿನಿಮಾ ಆಗಿ ತೆರೆ ಮೇಲೆ ಬರುತ್ತಿದೆ. ಕನ್ನಡಿಗರೊಬ್ಬರ ಜೀವನ ತಮಿಳಿನಲ್ಲಿ ಸಿನಿಮಾ ಆಗಿ ತೆರೆ ಬರುತ್ತಿರುವುದು ಹೆಮ್ಮೆಯ ವಿಚಾರ. ತಮಿಳಿನಲ್ಲಿ ತಯಾರಾಗುತ್ತಿರುವ 'ಸೂರರೈ ಪೊಟ್ರು' ಸಿನಿಮಾ ಕನ್ನಡಕ್ಕು ಡಬ್ ಆಗಿ ರಿಲೀಸ್ ಆಗಿದೆ. ಸೂರರೈ ಪೊಟ್ರು ಚಿತ್ರದಲ್ಲಿ ನಾಯಕನಾಗಿ ಸೂರ್ಯ ಕಾಣಿಸಿಕೊಂಡಿದ್ದಾರೆ.
- ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಪಾತ್ರದಲ್ಲಿ ನಟ ಸೂರ್ಯ ಮಿಂಚಿದ್ದಾರೆ. ಚಿತ್ರಕ್ಕೆ ಸುಧಾ ಕೊಂಗಾರ ಆಕ್ಷನ್ ಕಟ್ ಹೇಳಿದ್ದಾರೆ. ನೆಡುಮಾರನ್ ರಾಜಾಂಗಮ್ (ಸೂರ್ಯ) ಓರ್ವ ಶಿಕ್ಷಕನ ಮಗ. ಸೇನೆಯಲ್ಲಿದ್ದ ಆತನಿಗೆ, ವಿಮಾನ ಪ್ರಯಾಣದರ ದುಬಾರಿ ಇದ್ದ ಕಾರಣ, ಹಾಸಿಗೆ ಹಿಡಿದಿದ್ದ ತನ್ನ ತಂದೆಯನ್ನು ಸಕಾಲದಲ್ಲಿ ಬಂದು ನೋಡಲಾಗುವುದಿಲ್ಲ. ಆ ಕೊರಗು ಆತನನ್ನು ಬಹಳ ಕಾಡುತ್ತದೆ. ವಿಮಾನಯಾನವನ್ನು ಸಾಮಾನ್ಯ ಜನರ ಕೈಗೆಟುಕುವಂತೆ ಮಾಡಬೇಕೆಂದು ಪಣತೊಟ್ಟ ಆತ ನಿರಂತರ ಹೋರಾಡುತ್ತಾನೆ.
- ಒಬ್ಬ ಯುವ ಉದ್ಯಮಿಗೆ ಎದುರಾಗುವ ಸವಾಲುಗಳು, ಆರ್ಥಿಕ ಮುಗ್ಗಟ್ಟು ಉದ್ಯಮದೊಳಗಿನ ಪೈಪೋಟಿ ಎಲ್ಲವನ್ನು ಮೆಟ್ಟಿನಿಂತು ಪರಿಸ್ಥಿತಿಯನ್ನು ನಿಭಾಯಿಸುವ ರೀತಿ ಮೆಚ್ಚುವಂತಿದೆ.
- ಪತಿಗೆ ಸಾಥ್ ಕೊಡುವ ಪತ್ನಿ - ಪುರುಷನ ಏಳಿಗೆಯ ಹಿಂದೆ ಹೆಣ್ಣು ಇರುತ್ತಾಳೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತದೆ.
- ನಮ್ಮ ದೇಶದಲ್ಲಿ ಅನೇಕ ಸೌಲಭ್ಯಗಳು ಕೇವಲ ಶ್ರೀಮಂತರಿಗೆ- ನಗರವಾಸಿಗಳಿಗೆ ಮಾತ್ರ ಸೀಮಿತವಾಗಿವೆ. ಈ ಸೌಲಭ್ಯಗಳು ಸಾಮಾನ್ಯ ಜನರಿಗೆ ಅದರಲ್ಲೂ ಗ್ರಾಮೀಣ ಜನರಿಗೂ ಧಕ್ಕುವಂತಾಗಬೇಕು ಎಂಬ ಸಂದೇಶ ಚಿತ್ರದಲ್ಲಿದೆ.
- "ಮಣ್ಣುಂಡೆಯ ಮೇಲೆ ಮನುಷ್ಯರ ಆಟ ನೋಡು..." ಎಂಬ ಹಾಡು ಅರ್ಥಗರ್ಭಿತವಾಗಿದೆ. ('ಭೂಮಿಯೆಂಬ ಮಣ್ಣಿನ ಉಂಡೆಯ ಮೇಲೆ ಮನುಷ್ಯರು ಆಡುವ ಆಟವೇ ಬದುಕು' ಎಂಬುದು ಒಳ್ಳೆಯ ಕಲ್ಪನೆ). ಚಿತ್ರದ ನಿರ್ದೇಶಕರು ಸುಧಾ ಕೊಂಗರ ಎಂಬ ಮಹಿಳೆ ಎನ್ನುವುದು ಗಮನಾರ್ಹ.
- ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಕನ್ನಡ ಅವತರಣಿಕೆ ಸದ್ಯದಲ್ಲೇ ಬರಲಿದೆ. ಕನ್ನಡಿಗರಾದ ಪ್ರಕಾಶ್ ಬೆಳವಾಡಿ, ಅಚ್ಯುತ ರಾವ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿಜಕ್ಕೂ ಇದು ಯುವಜನರಲ್ಲಿ ಕನಸುಗಳನ್ನು ಬಿತ್ತುವ ಉತ್ತಮ ಚಿತ್ರ.
ಉಲ್ಲೇಖಗಳು
[ಬದಲಾಯಿಸಿ]- ↑ https://www.udayavani.com/supplements/kids/air-deccan-founder-g-r-gopinath
- ↑ https://kannada.goodreturns.in/news/2019/02/12/mallya-loan-fraud-case-air-deccan-founder-gr-gopinath-under-lens-003875.html
- ↑ https://www.facebook.com/hashtag/%E0%B2%95%E0%B3%8D%E0%B2%AF%E0%B2%BE%E0%B2%AA%E0%B3%8D%E0%B2%9F%E0%B2%A8%E0%B3%8D_%E0%B2%97%E0%B3%8B%E0%B2%AA%E0%B2%BF%E0%B2%A8%E0%B2%BE%E0%B2%A5%E0%B3%8D