ಕೋಶಿಕಾ

ವಿಕಿಪೀಡಿಯ ಇಂದ
Jump to navigation Jump to search

ಸಾಂಸ್ಕೃತಿಕ ಸಂಘಟನೆ ಮಕ್ಕಳ ರಂಗಭೂಮಿಯ ಬಗ್ಗೆ[ಬದಲಾಯಿಸಿ]

ಕೋಶಿಕಾ ಸಾಂಸ್ಕೃತಿಕ ಸಂಘಟನೆಯು ಉಡುಪಿ ಜಿಲ್ಲೆಯ ಚೇರ್ಕಾಡಿ ಎಂಬ ಅತ್ಯಂತ ಹಿಂದುಳಿದ ಗ್ರಾಮದಲ್ಲಿ ಕಳೆದ ೧೫ ವರ್ಷಗಳಿಂದ ಮಕ್ಕಳಿಗಾಗಿ 

ಬೇಸಿಗೆ ಶಿಬಿರಗಳನ್ನು ನಡೆಸಿ ಆ ಮೂಲಕ ಮಕ್ಕಳಲ್ಲಿ ರಂಗಜಾಗೃತಿ ಉಂಟಾಗಲು ಶ್ರಮಿಸುತ್ತಿದೆ. ಇದು ಕೇವಲ ಮಕ್ಕಳ ನಾಟಕಗಳನ್ನೇ ಆಯ್ಕೆ ಮಾಡಿ
ಮಕ್ಕಳಿಂದಲೇ ಆಡಿಸುತ್ತಿದೆ. ಕೋಶಿಕ ತಂಡ ಇದುವರೆಗೆ ಆಲೀಬಾಬ ಮತ್ತು ನಲವತ್ತು ಕಳ್ಳರು, ಪುಷ್ಪರಾಣಿ, ಅಪಕಾರಿಯ ಕತೆ, ಪಂಜರಶಾಲೆ, ಅಜ್ಜಿ ಕತೆ,
ಗಿಡ್ಡೂ ಟೇಲರನ ಸಾಹಸಗಳು, ಹೆಡ್ಡಾಯನ ಮುಂತಾದ ನಾಟಕಗಳನ್ನು ಸಿದ್ಧಪಡಿಸಿ ರಾಜ್ಯದಲ್ಲೆಡೆ ಪ್ರದರ್ಶಿಸಿದ್ದು ಮಾತ್ರವಲ್ಲದೆ ಕೇರಳ, ಮತ್ತು ತಮಿಳುನಾಡು
ರಾಜ್ಯಗಳಲ್ಲೂ ಪ್ರದರ್ಶಿಸಿ ರಂಗಾಸಕ್ತರ ಮೆಚ್ಚಿಗೆ ಗಳಿಸಿದೆ.

"https://kn.wikipedia.org/w/index.php?title=ಕೋಶಿಕಾ&oldid=658624" ಇಂದ ಪಡೆಯಲ್ಪಟ್ಟಿದೆ