ಕೋಶದ ಮುಪ್ಪು,ಮರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವರಲ್ಲಿ ೩೦ ವರ್ಷ ಪ್ರಾಯದ ಅನಂತರ ಮುಪ್ಪು ಪ್ರಾರಂಭವಾಗುತ್ತದೆ.ಕಾರ್ಯಕ್ಷಮತೆಯ ತುತ್ತತುದಿಯ ಹಂತದಿಂದ ಜೀವಕೋಶಗಳು ಕುಂದಲು ಪ್ರಾರಂಭಗೊಳ್ಳುತ್ತದೆ.ಕ್ರಮೇಣ-ಸ್ನಾಯುಗಳ ಬಲ ಕಡಿಮೆಯಾಗುವುದು;ಉಸಿರಾಟ,ಪರಿಚಲನೆಗಳ ದಕ್ಷತೆ ಕುಂಠಿತವಾಗುವುದು.ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತಾ ಹೋಗುತ್ತದೆ.ಚರ್ಮದ ಸ್ಥಿತಿಸ್ಥಾಪಕತೆ ಕಡಿಮೆಯಾಗುತ್ತಾ ಸುಕ್ಕುಗಟ್ಟತೊಡಗುವುದು. ಮುಪ್ಪಿಗೆ ಕಾರಣಗಳೇನು?ಕೆಲವು ವಿಜ್ಞಾನಿಗಳ ಪ್ರಕಾರ ಮುಪ್ಪು ಮತ್ತು ಮರಣಕ್ಕೆ ಕೋಶಗಳ ಜೀನ್ ಗಳಲ್ಲೇ ಒಂದು ವೇಳಾಪಟ್ಟಿಯಿದೆ.ಇದು ಪೂರ್ವನಿರ್ಧರಿತ.ಅಂಗಗಳ ಅಭಿವರ್ಧನೆಯನ್ನು ಕೆಲವು ಜೀನ್ ಗಳು ನಿಯಂತ್ರಿಸುವಂತೆ,ಕೆಲವು ಜೀನ್ ಗಳು ಮುಪ್ಪು ಮತ್ತು ಕೋಶ ಮರಣವನ್ನು ನಿಯಂತ್ರಿಸುತ್ತವೆ.ಮಾನವ ಮಗುವಿನ ಚರ್ಮದ ಕೋಶಗಳು ೫೦ ಸಲ ವಿಭಜಿಸಿ ತಮ್ಮ ವಿಭಜನೆ ನಿಲ್ಲಿಸುತ್ತವೆ;೯೦ ವರ್ಷ ವಯಸ್ಸಿನ ಮಾನವರಲ್ಲಿ ಇಂತಹುದೇ ಕೋಶಗಳು ಐದು ಸಲ ಮಾತ್ರ ವಿಭಜಿಸಬಲ್ಲವು.ಇದು ಬಹುಶ:'ಮುಪ್ಪಿನ ಜೀನ್'ಗಳಿಂದಾಗಿರಬಹುದು.೩೦ವರ್ಷದ ಅನಂತರ ಪ್ರತಿವರ್ಷವೂ ವಿವಿಧ ಅಂಗಗಳ ಕಾರ್ಯಕ್ಷಮತೆಯ ಗರಿಷ್ಠ ಕ್ಷಮತೆಯ ಶೇಕಡ ಒಂದರಷ್ಟು ಕಡಿತವಾಗುತ್ತಾ ಹೋಗುವುದು.ಶ್ವಾಸಕೋಶದ ಸಾಮರ್ಥ್ಯ, ಹೃದಯದಿಂದ ರಕ್ತವನ್ನು ಪಂಪ್ ಮಾಡುವ ಪ್ರಮಾಣ, ಸ್ನಾಯುಗಳ ಶಕ್ತಿ ಹಾಗೂ ಪರಸ್ಪರ ಹೊಂದಾಣಿಕೆ,ಮೂತ್ರಪಿಂಡಗಳ ಶುದ್ಧೀಕರಣ ಕ್ರಿಯೆ,ಕಿವಿಗಳ ಗ್ರಹಣ ಶಕ್ತಿ ಇವು ಕುಂಠಿತವಾಗುತ್ತವೆ. ಪ್ರೋಜೀರಿಯ-ಸಣ್ಣ ಮಕ್ಕಳಲ್ಲಿ ಕಂಡುಬರುವ ಒಂದು ಕಾಯಿಲೆ.ಇದರಲ್ಲಿ ೫-೬ ವರ್ಷದ ಮಗುವಿನಲ್ಲಿ ಮುಪ್ಪಿನ ಕೆಲವು ಲಕ್ಷಣಗಳು-ಕೂದಲು ಉದುರುವುದು,ಚರ್ಮ ಸುಕ್ಕುಗಟ್ಟುವುದು,ಹೃದಯಾಘಾತ,ಸಂಧಿನೋವು-ಕಂಡುಬರುವುವು.ಆದರೆ ವೃದ್ಧಾಪ್ಯದ ಎಲ್ಲ ಲಕ್ಷಣಗಳೂ ಇಲ್ಲ. ಇದು ಜೀನ್ ನಿಯಂತ್ರಿತ ವೇಳಾಪಟ್ಟಿಯ ಪರಿಣಾಮವಾಗಿರಬಹುದು. ಉತ್ತಮ ಹವ್ಯಾಸಗಳು ದೀರ್ಘ ಆಯಸ್ಸನ್ನು ಕೊಡಬಲ್ಲುವು ಎಂದು ಗೊತ್ತಾಗಿದೆ. ಸರಿಯಾದ ಆಹಾರಾಭ್ಯಾಸ,ನಿಯಮಿತ ವ್ಯಾಯಾಮ,ಬೇಕಾದಷ್ಟು ನಿದ್ರೆ,ಯುಕ್ತವಾದ ದೇಹ ತೂಕ,ಧೂಮಪಾನ ಹಾಗೂ ಮದ್ಯಪಾನಗಳನ್ನು ದೂರ ಇಡುವುದು-ಇವೆಲ್ಲ ಆಯುಸ್ಸನ್ನು ಹೆಚ್ಛಿಸಬಲ್ಲುದು.