ಕೊಬ್ಬರಿ ದಹನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆಯಲ್ಲಿ ಭಕ್ತರು ಒಣಕೊಬ್ಬರಿ ಸುಟ್ಟು ವಿಭೂತಿಯಂತೆ ಬಳಸುವ ಆಚರಣೆ. ನಾಯಕನಹಟ್ಟಿ ಚಿಕ್ಕ ಊರು. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ನಡೆಯುವ ತಿಪ್ಪೇಸ್ವಾಮಿ ಜಾತ್ರೆಗೆ ಸುಮಾರು ಹತ್ತರಿಂದ ಹದಿನೈದು ಲಕ್ಷ ಭಕ್ತರು ಸೇರುತ್ತಾರೆ ಜನಜಾತ್ರೆಗೆ ಬಂಡಿಗಳಲ್ಲಿ ಬರುವುದು ಇಲ್ಲಿನ ವಿಶೇಷ. ಬಂಡಿಗಳಲ್ಲಿ ಸವಾರಿ ಹೊರಟ ಭಕ್ತರು ಎತ್ತಿನ ಕೊರಳಿನ ಗೆಜ್ಜೆಯ ಘಲ್ ಘಲ್ ನಾದಕ್ಕೆ ಹೊಂದಿಸಿ ಹಾಡುಗಳನ್ನು ಹೇಳುತ್ತಾ ಬಂಡಿಗಳನ್ನು ನಡೆಸುತ್ತಾರೆ. “ಹಟ್ಟಿ ಜಾತ್ರೆ ಬಂತು, ಹಬ್ಬದ ದಿನ ಬಂತು, ರೊಟ್ಟಿ ಬುತ್ತಿಯ ಕಟ್ಟಿ, ಹೊರಡಿ ಜೋಡಿತ್ತಿನ ಗಾಡಿಕಟ್ಟಿ, ಜಾತ್ರೆಗೆ ಜೋಡೆತ್ತಿನ ಗಾಡಿ ಕಟ್ಟಿ, ಶರಣು ತಿಪ್ಪೇಶನೇ......ಸ್ವಾಮಿ",

ನೂರಾರು ಜನಪದ ಕಲಾತಂಡಗಳು ತಮ್ಮ ಪ್ರದರ್ಶನದ ಮೂಲಕ ಭಕ್ತಿಯನ್ನು ತೋರುತ್ತಾರೆ. ಮುಗಿಲೆತ್ತರಕ್ಕೆ ನಿಂತ ಅತಿ ದೊಡ್ಡ ರಥ, ಬಣ್ಣದ ಬಾವುಟ, ಹೂಹಾರಗಳಿಂದ ಸರ್ವಾಲಂಕೃತಗೊಂಡುದನ್ನು ಕಂಡು ಭಕ್ತರು ಹಾಡುಗಳಿಂದ ಹೊಗಳಿ ಸಂತಸಪಡುತ್ತಾರೆ. “ಎಷ್ಟು ಎತ್ತರ ನೋಡ ಬನ್ನಿರೋ, ಆಕಾಶದೆತ್ತರ ತೇರಿದು, ಅಣ್ಣ ತಮ್ಮ ಎಲ್ಲ ಬನ್ನಿರೋ, ಈ ತೇರನೆಳೆವ ಭಾಗ್ಯ ನಮ್ಮದು'; ರಥದ ಮೇಲೆ ಬಾಳೆಹಣ್ಣು, ಬೆಲ್ಲ-ಮೆಣಸು, ಮಂಡಕ್ಕಿ ಎಸೆಯುವುದು ವಾಡಿಕೆ. ಮೇಲೆ ಎಸೆದ ಪದಾರ್ಥಗಳನ್ನು ಹಿಡಿದು ಪ್ರಸಾದವೆಂದು ಸ್ವೀಕರಿಸುತ್ತಾರೆ. “ತಿಪ್ಪೇಸ್ವಾಮಿ ಪರಿಸೆಗೆ ತಿಪ್ಪೆಗುಂಡೇಲೆಲ್ಲ ನೀರು” ಎನ್ನುವ ಮಾತು ಭಕ್ತರ ಮನಸಲ್ಲಿ

ಜಾತ್ರೆ ಜೀವಂತವಾಗಿರುವುದಕ್ಕೆ ಸಾಕ್ಷಿ ನೀಡುತ್ತದೆ. ಆ ವರ್ಷ ಹೊಸದಾಗಿ ಮದುವೆಯಾದ ಜೋಡಿಗಳು 'ಹಟ್ಟಿ ಪರಿಸೆ ತೇರಿನ ಕಳಸ' ನೋಡಲೇಬೇಕು ಎನ್ನುವ ಸಂಪ್ರದಾಯವಿದೆ. ದೊಡ್ಡ ರಥ ನಡೆದ ರಮೇಶ್ನಂ ತರ ಮರಿ ಪರಿಸೆ ನಡೆಯುತ್ತದೆ. ಮಧ್ಯ ಕರ್ನಾಟಕದಿಂದ ಪೂರ್ವದಂಚಿನ ಪ್ರದೇಶದವರೆಗೂ ಜಾತ್ಯಾತೀತವಾಗಿ ತಿಪ್ಪೇಸ್ವಾಮಿ ಆವರಿಸಿಕೊಂಡಿದ್ದಾನೆ.


ಆಧಾರ: ಕರ್ನಾಟಕದ ಜನಪದ ಆಚರಣೆಗಳು, ಡಾ. ಸ. ಚಿ. ರಮೇಶ್