ಕೊಡಗಿನ ಹಾಕಿ ಆಟದ ವೀರರು

ವಿಕಿಪೀಡಿಯ ಇಂದ
Jump to navigation Jump to search

ಬ್ರೀಟಿಷರ ಆಳ್ವಿಕೆಯಲ್ಲಿ ಅನೇಕ ಕ್ರೀಡೆಗಳು ಈ ನಾಡಿನಲ್ಲಿ ಕಾಲಿಟ್ಟವು. ಹತ್ತಾರು ಕ್ರೀಡಾ ಕ್ಲಬ್ಗಳು ಇಲ್ಲಿ ಅಸ್ತಿತ್ವಕ್ಕೆ ಬಂದವು. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕನಾ‍ಟಕ್ಕೆ ಹೆಸರು ತಂದು ಕೊಟ್ಟ ಪ್ರತಿಷ್ಠಿತ ಕ್ರೀಡೆ ಹಾಕಿ. ೧೯೩೦ರಲ್ಲೆ ಹಾಕಿ ಇಲ್ಲಿ ಕಾಲಿಟ್ಟಿತು. ಸ್ಐನಿಕರ ನಾಡಾದ ಕೊಡಗಿನಲ್ಲಿ ಹಾಕಿ ಮನೆ ಮನೆಯ ಆಟವಾಯಿತು. ಬೆಂಗಳೂರಿನಲ್ಲಿದ್ದ ಮಿಲಿಟರಿ ಕ್ಯಾಂಪಿನಲ್ಲಿ ಹಾಕಿ ಪ್ರಮುಖ ಆಟ, ಶಾಲಾ ಕಾಲೇಜುಗಳಲ್ಲಿ ಹಾಕಿ ಜನಪ್ರಿಯ ಕ್ರೀಡೆ ದಸರಾ ಕ್ರಿಡೆಗಳಲ್ಲಿ ಪ್ರಾಧಾನ್ಯತೆ ಸಿಕ್ಕಿದೆ.

ಕೊಡಗಿನಲ್ಲಿ ಕೊಡವರ ಕುಟುಂಬಗಳೇ ಹಾಕಿ ಪಂದ್ಯಾವಳಿಗಳನ್ನು ವ್ಯವಸ್ಥೆ ಮಾಡುತ್ತಿರುವುದು ವ್ಐಶಿಷ್ಟ ಪೂಣ‍. ಈ ಪಂದ್ಯಗಳು ನಡೆಯುವಷ್ಟು ದಿನಗಳು ಹಬ್ಬದ ವಾತಾವರಣ ಸ್ಋಷ್ಟಿ ಮಾಡಿರುತ್ತದೆ. ಎಂ.ಪಿ.ಗಣೇಶ್ ಕನಾ‍ಟಕದ ಕೊಡಗಿನ ಕಲಿ. ಭಾರತವನ್ನು ಮೂರು ವಿಶ್ವಕಪ್ನಲ್ಲಿ ಪ್ರತಿನಿಧಿಸಿದ್ದಾರೆ. ೧೯೭೧ರಲ್ಲಿ ಬಾಸಿ‍ಲೋನದಲ್ಲಿ ಕಂಚು, ೧೯೭೩ರಲ್ಲಿ ಅಮ್ ಸ್ಟರ್ ಡ್ಯಾಮ್ ತಂಡದ ನಾಯಕರಾಗಿ ಬೆಳ್ಳಿ ಗೆದ್ದಿರುವರು, ೧೯೭೨ ಮ್ಯೂನಿಚ್ ಒಲಂಪಿಕ್ಸ್ ನಲ್ಲಿ ಕಂಚನ್ನು ಗೆದ್ದಿರುವರು.

೧೯೭೨ ವಿಶ್ವ ಇಲೆವನ್ ಗೆ ಆಯ್ಕೆಯಾಗಿ ೧೯೭೪ರ ತನಕ ಏಷ್ಯಾ ತಂಡಕ್ಕೆ ಆಡಿರುವರು. ೧೯೭೩ರಲ್ಲಿ ಅಜು‍ನ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ಭಾರತ ತಂಡದ ತರಬೇತುದಾರ, ೧೯೯೮ ಕಾಮನ್ ವೆಲ್ತ್ ಮತ್ತು ಬ್ಯಾಂಕಾಕ್ ಏಷ್ಯಾ ಕ್ರಿಢಾಕೂಟಗಳಿಗೆ ಇವರು ತರಬೇತಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು.

ಅಜು‍ನ್ ಹಾಲಪ್ಪ : ಕೊಡಗಿನ ಪುತ್ರ ಉತ್ತಮ ಆಟಗಾರ ಛಲದಿಂದ ಮುನ್ನುಗ್ಗುವ ಸಾಹಸಮಯಿ. ಜೂನಿನಿಯರ್ಸ್ ನಲ್ಲಿ ವಿಶ್ವ ಚಾಂಪಿಯನ್, ಒಲಂಪಿಕ್ಸ್ ನಲ್ಲೂ ಆಡಿದ ಪ್ರತಿಬಾನ್ವಿತ ಲೆಕ್ಕ ಮಾಡಲಾಗದಷ್ಟು ಪ್ರಶಸ್ತಿಗಳನ್ನು ಪಡೆದಿರುವರು. ಮ್ಯಾಚ್, ಟೂ‍ನ‌‍ಮೆಂಟ್ ಗಳಲ್ಲಿ, ರಾಷ್ಟ್ರ, ಹಾಕಿ ಆಟದಲ್ಲಿ ಇವರ ಕೊಡುಗೆ ಇವರ ಸೇವೆ ಅಪಾರ ಇವರ ಸೇವೆ ಮುಂದುವರೆಯಲಿ.

ಸುನಿಲ್.ಎಸ್.ವಿ : ಬಡವನಾದರು ಹಾಕಿ ಆಡಲು ಶಕ್ತಿಯ ಬಡತನವಿರಲಿಲ್ಲ ಸ್ಟಿಕ್ ತೆಗೆದುಕೊಳ್ಳಲು ಆಗದೆ ಸೇವೆಯಿಂದ ಹಾಕಿ ಸ್ಟಿಕ್ ಮಾಡಿಕೊಂಡು ಆಡಿ ಇಂದು ಅಂತರಾಷ್ಟ್ರೀಯ ಮಟ್ಟದ ಹಾಕಿ ಪಟು ಆಗಿದ್ದಾರೆ. ಈ ೧೦ ವಷ‌‍ ಗಳಲ್ಲಿ ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಹಾಕಿಯಲ್ಲಿ ನೂರಾರು ಗೋಲು ಗಳಿಸಿರುವ ಇವರನ್ನು ಸಕಾ‍ರ ಗುರುತಿಸಿ ಪ್ರೀತ್ಸಾಹ ನೀಡಲಿ ಎಂಬುದು ನಮ್ಮೆಲ್ಲರ ಹಾರ್ಐಕೆಯಾಗಿದೆ. ಇವರ ಹಾಕಿ ಆಟದ ಕೊಡುಗೆ ಅಪಾರ. ಇವರ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ.

ಎ.ಬಿ. ಸುಬ್ಬಯ್ಯ : ಅತ್ಯುತ್ತಮ ಗೋಲ್ಕೀಪರ್ ಎಂಬುದಾಗಿ ಹೆಸರುವಾಸಿ ಆಗಿದ್ದಾರೆ. ಹಲವು ವಷ‍ ನಮ್ಮ ಭಾರತ ತಂಡದ ಗೋಲ್ ಕೀಪರ್ ಆಗಿದ್ದು ಅಂತರಾಷ್ಟ್ರೀಯ ಮಟ್ಟದ ಆಟಗಾರರಾಗಿರುತ್ತಾರೆ. ಭಾರತದ ಮಹಿಳಾ ಕೋಚ್ ಆಗಿದ್ದಾರೆ. ಇವರ ಸೇವೆ ನಮ್ಮ ಭಾರತ ತಂಡಕ್ಕೆ ಅತ್ಯಮೂಲ್ಯ. ಹೊಸ ತಾರೆ ಶ್ರೀಮಾನ್ ಉತ್ತಪ್ಪನವರ ಸೇಪ‍ಡೆ ನಮಗೆ ಆಶಾದಾಯಕವಾಗಿದೆ. ಹಾಗು ಕೊಡಗಿಗೆ ಮತ್ತೊಂದು ಗರಿ ಮೂಡಿದೆ. ರಘುನಾಥ್ ಅವರು ಉತ್ತಮ ಹಾಕಿ ಪಟು. ಮಾಂತ್ರಕನಂತೆ ಆಡಿ ಗೋಲು ಹೊಡೆಯುವುದರಲ್ಲಿ ಎತ್ತಿದ ಕ್ಐ. ಇಂಥ ಹಲವು ಹಾಕಿ ತಾರೆಗಳನ್ನು ನಮ್ಮ ನಾಡು ಕೊಡಗು ನೀಡಲಿ. ಬರೇ ಪುರುಷರ ಹಾಕಿ ಮಾತ್ರವಲ್ಲ ಮಹಿಳೆಯರ ಹಾಕಿಯಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿದೆ. ಒಂದಲ್ಲ ಒಂದು ದಿನ ಇವರು ವಿಶ್ವ ಚಾಂಪಿಯನ್ ಆಗಬಹುದು ಮಹಿಳೆಯರ ಹಾಕಿಯಲ್ಲಿ ನಮ್ಮ ಕೊಡಗಿನ ಪೊನ್ನಮ್ಮ ಆಡುತ್ತಿರುವುದು ಕೊಡಗಿಗೆ ಹೆಮ್ಮೆ ತಂದುಕೊಟ್ಟಿರುತ್ತಾರೆ. ಕೊಡಗಿನ ಎಸ್.ವಿ .ಸುನಿಲ್, ಉತ್ತಪ್ಪ, ರಘುನಾಥ್ ಇವರು ಭಾರತದ ಹಾಕಿ ತಂಡದಲ್ಲಿರುವುದರಿಂದ ಪಾದರಸದಂತೆ ಆಡಲು ಬಲಿಷ್ಟರಾಗಿದ್ದಾರೆ. ಈಗ ಭಾರತದ ಹಾಕಿ ತಂಡ ಈ ಹಿಂದಿನ ವ್ಐಭವ ಮರುಕಳಿಸಲಿದೆ.