ಕೊಡಗಿನ ಕಬ್ಬಿಣ ಸೇತುವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗಿನ ಸೋಮವಾರಪೇಟೆಯಿಂದ ಮದಾಪುರ ಮಾಗ‍ವಾಗಿ ಮಡಿಕೇರಿಗೆ ಹೋಗುವಾಗ ಕಬ್ಬಿಣ ಸೇತುವೆ ಎಂಬ ಊರು ಸಿಗುತ್ತದೆ. ಸುಮಾರು ೨೦೦ ಮನೆಗಳಿರುವ ಈ ಊರಿಗೆ ಅಂತಹ ವಿಶೇಷವೆನು ಇಲ್ಲ. ಹೆಸರೇ ಹೇಳುವಂತೆ ಇಲ್ಲೊಂದು ಪುರಾತನ ಸೇತುವೆಯಿದೆ. ಜಾರನ ಹೊಳೆಗೆ ಅಡ್ಡವಾಗಿ ಕಟ್ಟಿರುವ ಈ ಸೇತುವೆ ಲಾಗಾಯ್ತಿನಿಂದ ಯಾವುದೇ ರೀತಿಯ ರಿಪೇರಿಯನ್ನು ಕೇಲಿಕೊಂಡಿಲ್ಲ ಲೋಕೋಪಯೋಗಿ ಇಲಾಖೆಯವರು ಆಗೊಮ್ಮೆ ಈಗೊಮ್ಮೆ ಬಣ್ಣ ಬಳಿದು ಫಳಪಳಿಸುವುದನ್ನು ಬಿಟ್ಟರೆ ಈ ಸೇತುವೆ ಯಾವುದೇ ರೀತಿಯ ದುರಸ್ತಿಗೆ ಒಟ್ಟಿಕೊಂಡಿಲ್ಲ ಬ್ರಿಟೀಷರ ಕಾಲದಲ್ಲಿ ಕಟ್ಟಿಸಲಾದ ಕೊಡಗಿನ ಗಟ್ಟಿಮುಟ್ಟಾದ ಸೇತುವೆಗಳ ಪ್ಐಕಿ ಇದೂ ಒಂದು ಮಳೆಗಾಲದಲ್ಲೂ ಚಾರನ ಹೊಳೆಯ ಹರಿವು ಸೇತುವೆಯನ್ನು ಮುಟ್ಟುವುದಿಲ್ಲ. ಕಬ್ಬಿಣ ಸೇತುವೆಯ ಸುತ್ತಮುತ್ತ ಕಾಫಿ ತೋಟಗಳೇ ತುಂಬಿವೆ. ಕೆಳಗಳ್ಳಿ ಡಿ.ಬಿ.ಡಿ ಕಿರಗಂದೂರು, ಐಗೂರು, ಕಾಜೂರು, ಹೊಸತೋಟ, ಕಿಬಿರಿಬೆಟ್ಟ ಮುಂತಾದ ಸಣ್ಣ ಊರುಗಳಿಗೆ ಕಬ್ಬಿಣ ಸೇತುವೆಯೆ ರಾಜದಾನಿ. ಕಾಫಿ ತೋಟಗಳಲ್ಲಿ ದುಡಿಯುವ ಕೂಲಿ ಕಾಮಿ‍ಕರು, ತುಳು, ತಮಿಳು, ಮಲಯಾಳಂ, ಕನ್ನಡ ಭಾಷೆಗಳನ್ನು ಮಾತನಾಡುತ್ತಾಋಎ. ಈ ಮಂದಿಯೆಲ್ಲ ಕಬ್ಬಿಣ ಸೇತುವೆ ಎಂಬ ಹೆಸರನ್ನು ತಮ್ಮ ಮಾತ್ಬಾಷೆಗೆ ಪರಿವತಿ‍ಸಲಾಗಿದೆ. ದಕ್ಷಿಣ ಕನ್ನಡದ ತುಳು ಮಾತನಾಡುವವರು ಇದನ್ನು ಕಬ‍ಸೇತ್ಮೆ, ತಮಿಳರು ಮತ್ತು ಮಲಯಾಳಿಗಳು ಇರುಂಬ್ ಪಾಲಂ ಎಂದು ಕರೆಯುತ್ತಾರೆ. ಕೆಲವು ಆಂಗ್ಲ ವ್ಯಾಮೋಹಿಗಳು ಕಬ್ಬೀನ ಸೇತುವೆಯನ್ನು ಐರನ್ ಬ್ರಿಡ್ಜ್ ಎಂದು ಕರೆದು ಕಾಲರನ್ನು ಸರಿಪಡಿಸಿಕೊಳ್ಳುತ್ತಾರೆ. ಯಾವುದೇ ಕನ್ನಡ ಅಭಿಮಾನಿಯು ಇದನೆಲ್ಲಾ ಕೇಲಿ ಅಡ್ಡಿ ಪಡಿಸಿಲ್ಲ ಯಾವುದೇ ಭಾಷೆಯಲ್ಲಿ ಹೇಳಿದರು ಕಂಡಕ್ಟರ್ ಸರಿಯಾದ ಮೌಲ್ಯದ ಟಿಕಟನ್ನೆ ಹರಿಯುತ್ತಾರೆ. ನಾಮಪದವನ್ನೇ ಭಾಷಾಂತರಿಸಿ ತಮ್ಮ ಮಾತ್ಋಬಾಷೆಯನ್ನು ಶ್ರೀಮಂತಗೊಳಿಸಿದ ಹೆಮ್ಮೆ ಈ ಊರಿನ ಅನ್ಯಭಾಷಿಗರಿಗಿದೆಯೋ ತಿಳಿಯದು. ಭಾಷಾ ಸಮನ್ವಯಕ್ಕೂ ಇದೊಂದು ಉದಾಹರಣೆಯೆನ್ನಬಹುದೇನೋ. ಹಾಗೆ ನೋಡಿದರೆ ಈ ಊರಿನಲ್ಲಿ ನೋಡುವಂತಹದು ಏನು ಇಲ್ಲ. ಕೇಳುವಂತದ್ದಿದೆ-ಅದೇ ಈ ಊರಿನ ಹೆಸರು