ವಿಷಯಕ್ಕೆ ಹೋಗು

ಕೊಚ್ಚಿ ಕೋಟೆ ಪ್ರದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಚ್ಚಿ ಕೋಟೆ ಪ್ರದೇಶ (ಫ಼ೋರ್ಟ್ ಕೋಚಿ) ಕೇರಳ ರಾಜ್ಯದ ಕೊಚ್ಚಿ ನಗರದಲ್ಲಿನ ಒಂದು ಪ್ರದೇಶವಾಗಿದೆ.[] ಇದು ಮುಖ್ಯ ಕೊಚ್ಚಿ ನಗರದ ನೈಋತ್ಯದ ಕಡೆ ಇರುವ ಕೆಲವು ಜಲಬದ್ಧ ಪ್ರದೇಶಗಳ ಭಾಗವಾಗಿದೆ. ಇವನ್ನು ಒಟ್ಟಾಗಿ ಹಳೆ ಕೊಚ್ಚಿ ಅಥವಾ ಪಶ್ಚಿಮ ಕೊಚ್ಚಿ ಎಂದು ಕರೆಯಲಾಗುತ್ತದೆ.

ಕೊಚ್ಚಿ ಕೋಟೆ ಪ್ರದೇಶಕ್ಕೆ ಎರ್ನಾಕುಲಂನಿಂದ ರಸ್ತೆಗಳು ಮತ್ತು ಜಲಮಾರ್ಗಗಳ ಮೂಲಕ ಪ್ರವೇಶ ಮಾಡಬಹುದು. ನಗರದ ವಿಭಿನ್ನ ಭಾಗಗಳಿಂದ ಫ಼ೋರ್ಟ್ ಕೋಚಿಗೆ ಖಾಸಗಿ ಬಸ್ಸುಗಳು ಮತ್ತು ಸರ್ಕಾರಿ ಸಂಚಾರ ಬಸ್ಸುಗಳು ಪ್ರಯಾಣಿಸುತ್ತವೆ.

ಕೊಚ್ಚಿಯ ರಾಜನು ಈ ಪ್ರದೇಶವನ್ನು ಪೋರ್ಜುಗೀಸರಿಗೆ ೧೫೦೩ರಲ್ಲಿ ದಾನವಾಗಿ ಕೊಟ್ಟನು. ರಾಜನು ಅವರಿಗೆ ಎಮ್ಯಾನುಯೆಲ್ ಕೋಟೆಯನ್ನು (ಫ಼ೋರ್ಟ್ ಎಮ್ಯಾನುಯೆಲ್) ಕಟ್ಟಲು ಅನುಮತಿಯನ್ನು ಕೂಡ ಕೊಟ್ಟನು. ಹಾಗಾಗಿ ಇದಕ್ಕೆ ಫ಼ೋರ್ಟ್ ಕೋಚಿ ಎಂಬ ಹೆಸರು ಬಂದಿತು. ನಂತರ ಈ ಕೋಟೆಯನ್ನು ಡಚ್ಚರು ಧ್ವಂಸಗೊಳಿಸಿದರು.

ಮುಖ್ಯ ಪ್ರವಾಸಿ ಆಕರ್ಷಣೆಗಳು

[ಬದಲಾಯಿಸಿ]
ಫ಼ೋರ್ಟ್ ಕೋಚಿ ಬೀಚ್‍ನಲ್ಲಿ ಸ್ಟೀಮ್ ಬಾಯ್ಲರ್‌ಗಳು
ಫ಼ೋರ್ಟ್ ಕೋಚಿ ಬೀಚ್‍ನ ನಡೆದಾರಿ
  • ಇಂಡೊ ಪೋರ್ಚುಗೀಸ್ ಸಂಗ್ರಹಾಲಯ
  • ಚೀನಿ ಮೀನುಗಾರಿಕಾ ಬಲೆಗಳು
  • ಫ಼ೋರ್ಟ್ ಕೋಚಿ ಬೀಚ್
  • ತಾಜಾ ಸಮುದ್ರದ ಗಾಳಿ ಬರುವ ವಿಹಾರಪಥ
  • ಡಚ್ ಸಮಾಧಿ ಭೂಮಿ
  • ದಕ್ಷಿಣ ನೇವಲ್ ಕಮಾಂಡ್ ಕಡಲ ಸಂಗ್ರಹಾಲಯ
  • ಕೊಚ್ಚಿ ತಿರುಮಲ ದೇವಸ್ವೊಮ್
  • ಶ್ರೀ ಗೋಪಾಲಕೃಷ್ಣ ದೇವಸ್ವೊಮ್ ದೇವಾಲಯ
  • ಕೂನನ್ ಕುರಿಶ್ ಹಳೆ ಸಿರಿಯನ್ ಚರ್ಚ್
  • ಸೇಂಟ್ ಫ಼್ರಾನ್ಸಿಸ್ ಚರ್ಚ್
  • ಸ್ಯಾಂಟಾ ಕ್ರೂಜ಼್ ಬ್ಯಾಸಿಲಿಕಾ
  • ಬಿಷಪ್‍ನ ಮನೆ
  • ಎಮ್ಯಾನುಯೆಲ್ ಕೋಟೆ
  • ಯಹೂದೀ ಸಿನಗಾಗ್
  • ಮಟನ್‍ಚೆರಿ ಅರಮನೆ
  • ಜೈನ ದೇವಸ್ಥಾನ
  • ಕೋಚಿ-ಮುಜ಼ಿರಿಸ್ ಬಿಯನೇಲ್

ಉಲ್ಲೇಖಗಳು

[ಬದಲಾಯಿಸಿ]
  1. "THE MELTING POT OF CULTURES". Kimansion. Archived from the original on 15 ಮಾರ್ಚ್ 2016. Retrieved 25 June 2016.

ಹೊರಗಿನ ಕೊಂಡಿಗಳು

[ಬದಲಾಯಿಸಿ]