ವಿಷಯಕ್ಕೆ ಹೋಗು

ಕೊಂಡೇಲ್ತಾಯ ದೈವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಂಡೇಲ್ತಾಯ ದೈವಸ್ಥಾನ

ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ದೈವಾರಾಧನೆಗೆ ಮಹತ್ವ ನೀಡಲಾಗಿದೆ, ದೇವರನ್ನು ನಂಬಿದಷ್ಟೇ ದೈವಗಳ ಪ್ರತಿ ಅಳವಡಿಕೆ ಇದೆ. ಇಲ್ಲಿ ಪ್ರತಿಯೊಂದು ಊರು, ಕೇರಿ, ಬೀದಿಗಳಲ್ಲೂ ದೈವಾರಾಧನೆಯ ಪ್ರಾಧಾನ್ಯವನ್ನು ಕಾಣಬಹುದು. ಪ್ರತಿ ಊರಿಗೂ ಅದಕ್ಕೆ ಸಂಬಂಧಿಸಿದ ದೈವವಿದೆ, ಉದಾಹರಣೆಗೆ ಜಾರಂದಾಯ, ಕೊಡಮಣಿತ್ತಾಯ, ಬಂಗಾಡಿತ್ತಾಯ, ಕನಪಾಡಿತ್ತಾಯ, ಬನ್ನಡ್ಕತ್ತಾಯ, ಕಾಂತೇರಿ ಜುಮಾದಿ ಇತ್ಯಾದಿ. ಇದೇ ರೀತಿಯ ಮತ್ತೊಂದು ಊರು ಕಟೀಲಿನ ಹತ್ತಿರದ ಕೊಂಡೇಲ ಮತ್ತು ಅಲ್ಲಿ ಆರಾಧಿಸುವ ದೈವವೇ ಕೊಂಡೇಲ್ತಾಯ.

ಈ ದೈವಸ್ಥಾನವು ಕಟೀಲು ಸಮೀಪದಲ್ಲಿರುವ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ನಡುವೆ ಇರುವ ಕೋಂಡೇಲ ಅನ್ನುವ ಸ‍್ಥಳದಲ್ಲಿದೆ. ಇಲ್ಲಿ ಕೊಂಡೇಲ್ತಾಯ ದೈವದ ನೆಲೆ ಇದೆ, ಮತ್ತು ಇವು ಸಾಂಸ್ಕೃತಿಕ ಹಾಗೂ ದೈವಿಕ ಮಹತ್ವವನ್ನು ಹೊಂದಿದೆ. ದೈವದ ನೆನಪಿಗಾಗಿ ವರ್ಷಕ್ಕೊಮ್ಮೆ ನೆಮ್ಮದಿಯ ನೇಮವನ್ನು ಆಚರಿಸಲಾಗುತ್ತದೆ. ದೈವಸ್ಥಾನದ ಪುನಃಜೀರ್ಣೋದ್ಧಾರವು ಶಿಲಾಮೂರ್ತಿ ಪತ್ತೆಯಾದ ಬಳಿಕ ಮತ್ತಷ್ಟು ಮಹತ್ವ ಪಡೆದಿದ್ದು, ಸ್ಥಳೀಯ ಜನರಿಗೆ ದೈವದ ಬಲ ಮತ್ತು ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ.[]

ಇತಿಹಾಸ

[ಬದಲಾಯಿಸಿ]

ಕಟೀಲು ಸಮೀಪದ ಅತ್ತೂರು-ಕೊಡೆತ್ತೂರು ಕುಂಜಿರಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮದ ವೇಳೆ ಕೊಂಡೇಲ್ತಾಯ ದೈವದ ನೇಮವು ಸಾಂಕೇತಿಕವಾಗಿ ಮಾತ್ರ ನಡೆಯುತ್ತದೆ. ಆದರೆ, ಸಂಪೂರ್ಣ ಪ್ರಮಾಣದಲ್ಲಿ ಕೊಂಡೇಲ್ತಾಯ ದೈವದ ನೇಮ ಕಂಡವರು ಯಾರೂ ಇಲ್ಲ. ನೇಮ ನಡೆದಿರುವ ಬಗ್ಗೆ ಯಾವುದೇ ಪುರಾವೆಗಳು ಅಥವಾ ಸಾಕ್ಷಿಗಳು ಲಭ್ಯವಿಲ್ಲ. ಇತ್ತೀಚಿನಕಾಲದಲ್ಲಿ ದೈವಜ್ಞರ ಪ್ರಶ್ನಾಚಿಂತನೆಗಾಗಿಯೂ ಜೀರ್ಣೋದ್ದಾರದ ಸಮಯದಲ್ಲಿಯೂ ಕೊಂಡೇಲ್ತಾಯ ದೈವದ ಮಾನವರೂಪದ ಶಿಲಾಮೂರ್ತಿ ಪತ್ತೆಯಾಯಿತು. ಈ ಅನ್ವೇಷಣೆಯ ಬಳಿಕ, ಕೊಂಡೇಲ್ತಾಯ ದೈವಸ್ಥಾನವು ಸುಂದರವಾಗಿ ಜೀರ್ಣೋದ್ಧಾರಗೊಂಡಿದ್ದು, ಸುಮಾರು ನಾಲ್ಕು ನೂರು ವರ್ಷಗಳ ನಂತರ ಕೊಂಡೇಲ್ತಾಯ ದೈವದ ನೇಮ ನಡೆದಿದೆ.[]

ನೇಮದ ಆಯಾಮ

[ಬದಲಾಯಿಸಿ]

ಕೊಂಡೇಲ್ತಾಯ ದೈವದ ನೇಮಕ್ಕೆ ಒಂದು ವಿಶಿಷ್ಟ ಆಯಾಮವನ್ನು ನೀಡಲಾಗಿದೆ. ಕೊಡಮಣಿತ್ತಾಯ ಮತ್ತು ಕುಂಜಿರಾಯ ದೈವಗಳಿಗೆ ಕಟ್ಟಿ ಶೃಂಗಾರ ಮಾಡುವುದರಲ್ಲಿ ಹಾಗೆಯೇ, ಕೊಂಡೇಲ್ತಾಯ ದೈವಕ್ಕೂ ಮುಖವರ್ಣಿಕೆ ಬಳಕೆಯಾಗಿದೆ. ದೈವಕ್ಕೆ ಬೃಹತ್ ಗಾತ್ರದ ಅಲಂಕಾರ, ವಸ್ತ್ರದ ಪತಾಕೆ ಮತ್ತು ಮುಗವನ್ನು ಧರಿಸಿ, ಮುಗ ಇಳಿಸಿದ ನಂತರ ಮುಂಡಾಸು ಧರಿಸಿ, ಬಿಲ್ಲು ಮತ್ತು ಕಡ್ತಲೆ ಸಹಿತ ಸಂಧಿ ಆಧರಿತ ರೀತಿಯಲ್ಲಿ ದೈವದ ನೇಮವನ್ನು ರೂಪಿಸಲಾಗಿದೆ. ಈ ವೇಳೆ ಆರಂಭದಲ್ಲಿ "ಮಾನೆಚ್ಚಿಡ್" (ದರ್ಶನ), ನಂತರ ಅಲಂಕಾರ ಮಾಡಿದ ಮೇಲೆ "ನಡು ಮಾನೆಚ್ಚಿಡ್," ಬಲಿ, ಬದಿಕರದ ಬಲಿ, ಮತ್ತು ಸಂಧಿಯ ಆಧಾರದ ಮೇಲೆ ಪಾರಿ-ನುಡಿಗಟ್ಟು ಎಲ್ಲವನ್ನು ನಿರೂಪಿಸಲಾಗುತ್ತದೆ. ಪರವ ಸಮುದಾಯದ ನಿಗದಿತ ಮನೆತನದವರು ಈ ನೇಮದ ಕರ್ತವ್ಯವನ್ನು ನಿರ್ವಹಿಸುತ್ತಾರೆ. [] ಕೊಂಡೇಲ್ತಾಯ ದೈವ ಮಾಯಾವಾಗಿರುವ ಮಾನವ ರೂಪದ ಕಲ್ಲು ಮತ್ತು ವಿಶೇಷ ಗುಣವುಳ್ಳ ಸಿರಿಗೋಳಿ ಮರವೊಂದು ಇದ್ದು ಬರುವ ಭಕ್ತರಿಗೆ ಇತಿಹಾಸದ ಕಥೆಯನ್ನು ಹೇಳುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ "Dakshina Kannada News: ದಕ್ಷಿಣ ಕನ್ನಡದಲ್ಲಿ 400 ವರ್ಷಗಳ ಬಳಿಕ ದೈವಕ್ಕೆ ನೇಮೋತ್ಸವ!". News18 ಕನ್ನಡ. 3 March 2024.
  2. "400 ವರ್ಷಗಳ ಬಳಿಕ ದೈವ ನೇಮ: ಕಟೀಲು ಕೊಂಡೇಲದಲ್ಲಿ ಶಿಲಾಮೂರ್ತಿ ಪತ್ತೆ".