ಕೈಗಾರಿಕಾ ಕ್ರ್ರಾಂತಿ
ಇಂಗ್ಲೆಂಡಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಅದ್ವಿತೀಯವಾದುದು (ಇಂಗ್ಲೆಂಡಿನ ಆರ್ಥಿಕ ಬೆಳೆವಣಿಗೆ). ಯಾಂತ್ರೀಕರಣದಿಂದ ಆರ್ಥಿಕ ಸ್ಥಿತಿ ಉತ್ತಮಗೊಂಡಿತು. ಸ್ಪಿನ್ನಿಂಗ್ ಜೆನ್ನಿ, ನೀರಿನ ಶಕ್ತಿಯಿಂದ ಚಲಿಸುವ ಯಂತ್ರ ಮುಂತಾದವುಗಳಿಂದ ಜವಳಿಕೈಗಾರಿಕೆ ಬೆಳೆಯಿತು. ಜೇಮ್ಸ್ ವಾಟನ ಹಬೆಯಂತ್ರ ಉಪಕಾರ ಮಾಡಿತು. ವಿಜ್ಞಾನದಿಂದ ಕೈಗಾರಿಕೆಗಷ್ಟೇ ಅಲ್ಲದೆ ವ್ಯವಸಾಯಕ್ಕೂ ಅನುಕೂಲವಾಯಿತು. ಹೊಸ ಹೊಸ ರಸ್ತೆಯ ನಿರ್ಮಾಣದಿಂದ ಸರಕು ಸಾಗಾಣಿಕೆ ಅನುಕೂಲವಾಯಿತು. ಹಡಗು ನಿರ್ಮಾಣವಾಯಿತು. ಸ್ಟೀನ್ಸನ್ ಉಗಿಬಂಡಿ ಮಾಂಚೆಸ್ಟರಿನಿಂದ ಲಿವರ್ಪುಲಿಗೆ ಓಡಿತು. ಕಬ್ಬಿಣದ ಉತ್ಪಾದನೆ ಹೆಚ್ಚಾಯಿತು. ಕಲ್ಲಿದ್ದಲು ಗಣಿಗಳು ಹೆಚ್ಚಿದವು. ಸೇಫ್ಟಿ ಲ್ಯಾಂಪನ್ನು ಹಂಫ್ರಿ ಡೇವಿ ಕಂಡುಹಿಡಿದ. ಕೈಗಾರಿಕಾಕ್ರಾಂತಿ ಇಂಗ್ಲೆಂಡ್ ಗೆ ಫಲದಾಯಕವಾಯಿತು. ಇನ್ನೊಂದು ದಿಕ್ಕಿನಲ್ಲಿ ಕೈಗಾರಿಕಾಕ್ರಾಂತಿ ಮನುಷ್ಯರನ್ನು ಕಡೆಗಣಿಸಿತು. ಭಾರತದಲ್ಲಿ ಕಾಲಾನುಕಾಲದಿಂದ ನಡೆದುಬಂದಿದ್ದ ಮಸ್ಲಿನ್ ಕೈಗಾರಿಕೆಯನ್ನು ಹಾಳುಮಾಡಲು ಇದೂ ಕಾರಣವಾಯಿತು. ಕಾರ್ಖಾನೆಗಳು ಹೆಚ್ಚಿ ಕಾರ್ಮಿಕರ ಸಮಸ್ಯೆ ಹೆಚ್ಚಿತು. ಕಾರ್ಮಿಕರ ಹಿತರಕ್ಷಣೆಗಾಗಿ ಅನೇಕ ಕಾಯಿದೆಗಳನ್ನು ಜಾರಿಯಲ್ಲಿ ತರಬೇಕಾಯಿತು. ಕಾರ್ಮಿಕರು ತಮ್ಮ ದುಃಸ್ಥಿತಿಯನ್ನು ನೆನೆದು ಕೋಪಿಸಿಕೊಳ್ಳುವುದರಲ್ಲಿ ಉಪಯೋಗವಿಲ್ಲವೆಂದೂ ಪಾರ್ಲಿಮೆಂಟಿನಲ್ಲಿ ಅವರು ಭಾಗವಹಿಸಿ ಸುಧಾರಣೆ ತರಬೇಕೆಂದೂ ಹಲವರು ಯೋಚಿಸಿದರು. 3ನೆಯ ಜಾರ್ಜನ ಅಂತಿಮ ಕಾಲದಲ್ಲಿ ಸರ್ಕಾರ ಟೋರಿ ಗುಂಪಿನವರ ಕ್ಯೆಯಲ್ಲಿತ್ತು. ಲಾರ್ಡ್ ಕ್ಯಾಸಲ್ ರೇ ಇಂಗ್ಲೆಂಡಿನಲ್ಲಿ ರಾಜ್ಯಾಂಗಬದ್ಧ ಸರ್ಕಾರ ಸ್ಥಾಪಿಸಲು ಪ್ರಯತ್ನಿಸಿದ. ಕಾರ್ಮಿಕರ ವಿರುದ್ಧ ಅನೇಕ ಕಾನೂನುಗಳನ್ನು ಜಾರಿಗೆ ತರಲಾಯಿತು. ಲಾರ್ಡ್ ಕ್ಯಾಸಲ್ ರೇಯ ಮರಣಾನಂತರ ಜಾರ್ಜ್ ಕ್ಯಾನಿಂಗ್ ಪ್ರಧಾನಮಂತ್ರಿಯಾದ. ಭಾರತದ ಗೌರ್ನರ್ ಜನರಲ್ಲೂ ಆಗಿದ್ದ. ತನ್ನ ವಿದೇಶಾಂಗ ನೀತಿಯ ವ್ಯೆಶಿಷ್ಟ್ಯದ ಮೂಲಕ ಈತ ಪ್ರಸಿದ್ಧನಾದ.[೧]
ಟೋರಿ ಪಕ್ಷ ಕ್ರಮೇಣ ಕನ್ಸರ್ವೇಟಿವ್ ಪಕ್ಷ
[ಬದಲಾಯಿಸಿ]ಟೋರಿ ಪಕ್ಷ ಕ್ರಮೇಣ ಕನ್ಸರ್ವೇಟಿವ್ ಪಕ್ಷವಾಯಿತು. ಪೀಲ್ ಅದರ ನಾಯಕನಾದ. ಇವನ ಕಾಲದಲ್ಲಿ ಗೋದಿಗೆ ಕಾನೂನು ರಕ್ಷಣೆ ನೀಡಿದ್ದು ಬಹು ಮುಖ್ಯವಾದ ಘಟ್ಟ. 1844ರಲ್ಲಿ ಬ್ಯಾಂಕ್ ಕಾಯಿದೆಯೊಂದು ಜಾರಿಗೆ ಬಂತು. ನೋಟು ಚಲಾವಣೆಯನ್ನು ಕ್ರಮಗೊಳಿಸುವುದು ಇದರ ಒಂದು ಉದ್ದೇಶವಾಗಿತ್ತು. 1850ರವರೆಗೆ ಪೀಲ್ ಪಾರ್ಲಿಮೆಂಟಿನ ಸದಸ್ಯನಾಗಿದ್ದ. ಇವನ ಅನಂತರ ಬಂದವ ಪಾಮಸರ್ಟ್ನ್. ಇವನು ಟೋರಿ ಸಂಪ್ರದಾಯವಾದಿ. 1833ರಲ್ಲಿ ಪೋರ್ಚುಗಲ್ಲಿನ ರಾಣಿ ಇಸಬೆಲಳಿಗೂ ಮತ್ತು ಅವಳ ಚಿಕ್ಕಪ್ಪನಿಗೂ ರಾಜ್ಯಕ್ಕಾಗಿ ಜಗಳ ನಡೆದಾಗ ಪಾಮಸರ್ಟ್ನ್ನ್ ಅದನ್ನು ಬಗೆಹರಿಸಿ ಅವರು ತಮ್ಮ ತಮ್ಮ ದೇಶಗಳನ್ನೇ ಆಳುವಂತೆ ಮಾಡಿದ. ಬಾಲ್ಕನ್ ದ್ವೀಪ ತುರ್ಕಿಯ ಕ್ಯೆಯಲ್ಲಿತ್ತು. ಅಲ್ಲಿದ್ದ ಕ್ರೈಸ್ತ ಪ್ರಜೆಗಳು ಸ್ವಾತಂತ್ರ್ಯ ಬಯಸಿದರು. ಇಂಗ್ಲೆಂಡ್ ಈ ವಿಷಯದಲ್ಲಿ ಏನೂ ಮಾಡಲಾರದಾಗಿತ್ತು. ತುರ್ಕಿ ಆಗ ಯುರೋಪಿನ ಕಾಯಿಲೆ ಮನುಷ್ಯನೆನಿಸಿತ್ತು. ರಷ್ಯ ತುರ್ಕಿಯನ್ನು ಹಂಚಿಕೊಳ್ಳಲು ಹವಣಿಸಿತ್ತು. ರಷ್ಯದ ಸ್ನೇಹ ಬಯಸಿದರೆ ಬಾಲ್ಕನ್ ರಾಜ್ಯಗಳಲ್ಲಿ ರಷ್ಯದ ಕೈವಾಡ ಜಾಸ್ತಿಯಾಗುತ್ತದೆಂದು ಹೆದರಿ ಇಂಗ್ಲೆಂಡ್ ತುರ್ಕಿಯ ಕಡೆ ಸೇರಿತು. ರಷ್ಯ ತುರ್ಕಿಗೆ ಸೇರಿದ್ದ ಪಿಲಾಕಿಯ, ಮಾಲೇವಿಯಗಳನ್ನು ಅತಿಕ್ರಮಿಸಿದ್ದರ ಕಾರಣ ಯುದ್ಧ ಪ್ರಾರಂಭವಾಯಿತು. ಇದಕ್ಕೆ ಕ್ರಿಮಿಯನ್ ಯುದ್ಧವೆಂದು ಹೆಸರು. ತುರ್ಕಿಯೊಂದಿಗೆ ಫ್ರಾನ್ಸ್ ಸೇರಿತು. ಬಾಲಕ್ಲಾವ, ಇಂಕರ್ಮನ್ ಮುಂತಾದ ಕಡೆ ಯುದ್ಧ ನಡೆಯಿತು. ಇಂಗ್ಲಿಷರು ರಷ್ಯನ್ನರನ್ನು ಸೋಲಿಸಿದರು. ಆದರೆ ಇಂಗ್ಲಿಷರ ಸ್ಥಿತಿ ಚಿಂತಾಜನಕವಾಯಿತು. 1856ರಲ್ಲಿ ಪ್ಯಾರಿಸ್ ಕೌಲಿನಿಂದ ಯುದ್ಧ ಮುಕ್ತಾಯವಾಯಿತು. ತುರ್ಕಿ ಬದುಕಿತು. ಕ್ರಿಮಿಯನ್ ಯುದ್ಧದಿಂದ ಪಾಮಸರ್ಟ್ನ್ ತನ್ನ ಜೀವನಪರ್ಯಂತ ಪ್ರಧಾನಿಯಾಗುವ ಅವಕಾಶ ಪಡೆದುಕೊಂಡ. ಆದರೆ ಅವನು ಕಾಮನ್ಸ್ ಸಭೆಯ ಮುಂದೆ ಕಾನ್ಸ್ಪಿರೆಸಿ ಟು ಮರ್ಡರ್ ಬಿಲ್ ಎಂಬ ವಿಧೇಯಕ ತಂದಾಗ ಸೋತು ರಾಜೀನಾಮೆ ಕೊಟ್ಟ. ಸ್ವಲ್ಪಕಾಲ ಪಾಮಸರ್ಟ್ನ್ ಮತ್ತು ಗ್ಲ್ಲಾಡ್ಸ್ಟನ್ ಇಂಗ್ಲೆಂಡಿಗೆ ಮಾರ್ಗದರ್ಶನ ನೀಡಿದರು. ಫ್ರಾನ್ಸಿಗೆ ಮುಕ್ತ ವ್ಯಾಪಾರದಲ್ಲಿ ಇಚ್ಛೆ ಇದ್ದುದರಿಂದ ಇಂಗ್ಲೆಂಡ್ ಅದರೊಂದಿಗೆ ಒಪ್ಪಂದ ಮಾಡಿಕೊಂಡಿತು. ಫ್ರಾನ್ಸಿಗೆ ಕಬ್ಬಿಣ, ಇಂಗ್ಲೆಂಡಿಗೆ ರೇಷ್ಮೆ ದೊರಕುವಂತಾಯಿತು. ಪಾಮಸರ್ಟ್ನ್ 60 ವರ್ಷ ಪಾರ್ಲಿಮೆಂಟ್ ಸದಸ್ಯನಾಗಿದ್ದ. 1865ರಲ್ಲಿ ಕಾಲವಾದ.
ಡಿಸ್ರೇಲಿಯ ಸರ್ಕಾರ
[ಬದಲಾಯಿಸಿ]1874ರಲ್ಲಿ ಬ್ರಿಟನ್ನಿನ ಪ್ರಧಾನಿಯಾದ ಡಿಸ್ರೇಲಿಯ ಸರ್ಕಾರದಲ್ಲಿ ಜನಸಾಮಾನ್ಯಕ್ಕೆ ಉಪಯುಕ್ತವಾದ ಅನೇಕ ಕಾನೂನುಗಳು ಜಾರಿಗೆ ಬಂದವು. ಡಿಸ್ರೇಲಿಯ ವಿದೇಶಾಂಗ ನೀತಿ ಅತ್ಯಂತ ಸ್ಪಷ್ಟವಾಗಿತ್ತು. ಈತ ಇಂಗ್ಲೆಂಡಿಗೆ ಹೊರದೇಶಗಳಲ್ಲಿ ಪ್ರತಿಷ್ಠೆ ದೊರಕಿಸಿಕೊಟ್ಟ. ಈ ವೇಳೆಗೆ ಭಾರತ ಬ್ರಿಟಿಷ್ ಸಾಮ್ರಾಜ್ಯದ ಮುಖ್ಯ ಅಂಗವಾಗಿತ್ತು. ಪೂರ್ವದೊಂದಿಗೆ ವ್ಯಾಪಾರಕ್ಕಾಗಿಯೂ ಸಾಮ್ರಾಜ್ಯದ ನಿರ್ವಹಣೆಗಾಗಿಯೂ ಸೂಯೆಜ್ ಕಾಲುವೆಯ ಮೇಲೆ ಹತೋಟಿ ಹೊಂದುವುದು ಅವಶ್ಯವಾಗಿತ್ತು. ಅದಕ್ಕಾಗಿ ಈತ 1875ರಲ್ಲಿ ಈಜಿಪ್ಟಿನ ದೊರೆಯಿಂದ ಸೂಯೆಜ್ ಕಾಲುವೆಯ ಷೇರುಗಳನ್ನು ಕೊಂಡ. ರಷ್ಯದ ಬಗ್ಗೆ ಈತನಿಗೆ ಭೀತಿಯಿತ್ತು. ರಷ್ಯ ಪ್ರಬಲವಾಗುವುದು ಈತನಿಗೆ ಇಷ್ಟವಿರಲಿಲ್ಲ. ಈತನ ಕಾಲದಲ್ಲೇ (1877) ವಿಕ್ಟೋರಿಯಾ ರಾಣಿ ಭಾರತದ ಚಕ್ರವರ್ತಿನಿಯೆನಿಸಿಕೊಂಡಳು. 1876ರಲ್ಲಿ ತುರ್ಕಿಯ ವಿರುದ್ಧ ನಡೆದ ಬಾಲ್ಕನ್ ದಂಗೆಯಿಂದಾಗಿ ರಷ್ಯಕ್ಕೂ ತುರ್ಕಿಗೂ ಯುದ್ಧವಾಯಿತು.ಡಿಸ್ರೇಲಿ ಅನಂತರ ಪ್ರಧಾನಮಂತ್ರಿಯಾದ ಗ್ಲ್ಲಾಡ್ಸ್ಟನ್ ಐಶ್ಚರ್ಯವಂತ, ಸುಶಿಕ್ಷಿತ. ಟೋರಿ ರಾಬರ್ಟ್ ಪೀಲ್ ಗೋದಿಯ ಕಾನೂನನ್ನು ರದ್ದುಮಾಡಲು ಹೋರಾಡಿದಾಗ ಗ್ಲ್ಲಾಡ್ಸ್ಟನ್ ಆತನಿಗೆ ಸಹಾಯಕನಾಗಿದ್ದ. ಪೀಲ್ ಸರ್ಕಾರದಲ್ಲಿ ಈತ ವಾಣಿಜ್ಯ ಸಮಿತಿಯ ಅಧ್ಯಕ್ಷನಾಗಿದ್ದು ಪಾಮಸರ್ಟ್ನ್ನನ ಜೊತೆಯಲ್ಲಿ ಅರ್ಥಸಚಿವನಾದ. ಈತ ಕಾರ್ಮಿಕರ ಪುರೋಭಿವೃದ್ಧಿಗಾಗಿ ಹೊಡೆದಾಡಿದ. ಇಂಗ್ಲೆಂಡಿನ ರಕ್ಷಣೆಯೇ ಈತನ ಆಸಕ್ತಿಯಾಗಿತ್ತು. ಈತ 1906ರಲ್ಲಿ ಬೋಯರ್ ಜನಾಂಗಕ್ಕೆ ಸ್ವಯಮಾಡಳಿತ ದೊರಕಿಸಿಕೊಟ್ಟ.1901ರಲ್ಲಿ ವಿಕ್ಟೋರಿಯ ರಾಣಿ ಗತಿಸಿದಾಗ 7ನೆಯ ಎಡ್ವರ್ಡ್ ಚಕ್ರವರ್ತಿಯಾದ. ಸಾಮ್ಯವಾದ ಇಂಗ್ಲೆಂಡಿನಲ್ಲಿ ಇಣುಕಿತು. ಕಾರ್ಲ್ಮಾಕ್ರ್ಸ್ನ ದಾಸ್ ಕ್ಯಾಪಿಟಲ್ ಪ್ರಚಾರವಾಯಿತು. ಸುಪ್ರಸಿದ್ಧ ನಾಟಕಕಾರ ಬರ್ನಾಡ್ ಷಾ ಮುಂತಾದವರು ಅದಕ್ಕೆ ಇಂಬು ಕೊಟ್ಟರು. ಕೇಲ್ ಹಾರ್ಡಿ ಎಂಬುವನಿಂದ 1906ರಲ್ಲಿ ಲೇಬರ್ ಪಕ್ಷ ಜನ್ಮ ತಳೆಯಿತು. ಈ ಪಕ್ಷ 1906ರ ವೇಳೆಗೆ ಸಾಕಷ್ಟು ಪ್ರತಿಷ್ಠೆ ಗಳಿಸಿತು. ಕಾರ್ಮಿಕ ಪರಿಹಾರದ ಕಾಯಿದೆ, ಔದ್ಯೋಗಿಕ ಸಂಘಗಳ ಕಾಯಿದೆ, ಶಾಲಾ ಮಕ್ಕಳಿಗೆ ನಡುಹಗಲ ಆಹಾರ ಒದಗಿಸುವ ಕಾಯಿದೆ, ವೃದ್ಧಾಪ್ಯ ವೇತನದ ಕಾಯಿದೆ-ಮುಂತಾದುವುಗಳು 7ನೆಯ ಎಡ್ವರ್ಡನ ಕಾಲದಲ್ಲಿ ಜಾರಿಗೆ ಬಂದುವು. ಹೀಗೆ ಸುಮಾರು ಸಾವಿರ ವರ್ಷಗಳ ದೀರ್ಘಕಾಲದಲ್ಲಿ ಇಂಗ್ಲೆಂಡಿನ ಇತಿಹಾಸ ಕ್ರಮಕ್ರಮವಾಗಿ ಬೆಳೆಯಿತು ವೇಲ್ಸ್, ಸ್ಕಾಟ್ಲೆಂಡ್, ಉತ್ತರ ಐರ್ಲೆಂಡ್ ಇವುಗಳಿಂದ ಕೂಡಿದ ಸಂಯುಕ್ತ ಪ್ರಭುತ್ವದ ಆವಿಷ್ಕಾರವಾಯಿತು (ಇಂಗ್ಲೆಂಡಿನ ಈಚಿನ ಇತಿಹಾಸಕ್ಕೆ .