ವಿಷಯಕ್ಕೆ ಹೋಗು

ಕೈಕೋಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೈಕೋಳವು (ಕೈಬೇಡಿ) ಒಬ್ಬ ವ್ಯಕ್ತಿಯ ಮಣಿಕಟ್ಟುಗಳನ್ನು ಒಂದಕ್ಕೊಂದಕ್ಕೆ ಹತ್ತಿರವಾಗಿರುವಂತೆ ಭದ್ರಪಡಿಸಲು ವಿನ್ಯಾಸಗೊಳಿಸಲಾದ ನಿಗ್ರಹ ಸಾಧನಗಳು.[] ಇವು ಎರಡು ಭಾಗಗಳನ್ನು ಹೊಂದಿದ್ದು, ಈ ಭಾಗಗಳು ಒಂದು ಸರಪಳಿ, ತಿರುಗಣೆ, ಅಥವಾ ಬಾಗದ ಪಟ್ಟಿಯಿಂದ ಒಟ್ಟಾಗಿ ಜೋಡಣೆಗೊಂಡಿರುತ್ತವೆ. ಪ್ರತಿ ಅರ್ಧವು ತಡೆಹಲ್ಲು ಸಾಲಿನೊಂದಿಗೆ ಜೋಡಣೆಗೊಳ್ಳುವ ಒಂದು ತಿರುಗುವ ತೋಳನ್ನು ಹೊಂದಿರುತ್ತದೆ. ಇದರಿಂದ ಇದನ್ನು ಒಮ್ಮೆ ವ್ಯಕ್ತಿಯ ಮಣಿಕಟ್ಟಿನ ಸುತ್ತ ಮುಚ್ಚಿದ ಮೇಲೆ ತೆಗೆಯಲು ಆಗುವುದಿಲ್ಲ. ಕೀಲಿ ಕೈ ಇಲ್ಲದೆಯೇ, ಕೈಕೋಳಗಳನ್ನು ತೆಗೆಯಲು ಆಗುವುದಿಲ್ಲ, ಮತ್ತು ಕೋಳ ತೊಟ್ಟಿರುವ ವ್ಯಕ್ತಿಯು ತನ್ನ ಮಣಿಕಟ್ಟುಗಳನ್ನು ಕೆಲವು ಸೆಂಟಿಮೀಟರ್ ಅಥವಾ ಅಂಗುಲಕ್ಕಿಂತ ಹೆಚ್ಚು ದೂರ ಚಲಿಸಲಾಗುವುದಿಲ್ಲ. ಹಾಗಾಗಿ, ಅನೇಕ ಕ್ರಿಯೆಗಳು ಕಷ್ಟಕರ ಅಥವಾ ಅಸಾಧ್ಯವಾಗುತ್ತವೆ. ಇವನ್ನು ವಿಶ್ವಾದ್ಯಂತ ಶಂಕಿತ ಅಪರಾಧಿಗಳು ಪೋಲಿಸ್ ಬಂಧನದಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು ಆಗಾಗ್ಗೆ ಬಳಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1.  Chisholm, Hugh, ed. (1911). "Fetters and Handcuffs" . Encyclopædia Britannica. Vol. 10 (11th ed.). Cambridge University Press. p. 296. {{cite encyclopedia}}: Cite has empty unknown parameters: |separator= and |HIDE_PARAMETER= (help)
"https://kn.wikipedia.org/w/index.php?title=ಕೈಕೋಳ&oldid=891761" ಇಂದ ಪಡೆಯಲ್ಪಟ್ಟಿದೆ