ವಿಷಯಕ್ಕೆ ಹೋಗು

ಕೇದಾರನಾಥ್ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇದಾರನಾಥ್ ಸಿಂಗ್
ಕೇದಾರನಾಥ್ ಸಿಂಗ್
ಜನನ(೧೯೩೪-೦೭-೦೭)೭ ಜುಲೈ ೧೯೩೪
ರಾಷ್ಟ್ರೀಯತೆಭಾರತೀಯ
ವೃತ್ತಿಕವಿ


ಕೇದಾರನಾಥ ಸಿಂಗ್ ( ಹುಟ್ಟು- ೧೯೩೪ ) ಹಿಂದಿಯ ಪ್ರಮುಖ ಆಧುನಿಕ ಕವಿಗಳಲ್ಲಿ ಒಬ್ಬರು. ಅವರು ಉತ್ಕೃಷ್ಟ ವಿಮರ್ಶಕ ಮತ್ತು ಪ್ರಬಂಧಕಾರರು ಆಗಿದ್ದಾರೆ. ಹಿಂದಿಯಲ್ಲಿನ ತಮ್ಮ ಕವನ ಸಂಗ್ರಹ ಅಕಾಲ್ ಮೆ ಸರಸ್ ಗಾಗಿ ೧೯೮೯ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಯನ್ನು ಪಡೆದರು. ಅವರಿಗೆ ೨೦೧೩ ರ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.

ಜೀವನ[ಬದಲಾಯಿಸಿ]

ಅವರು ಪೂರ್ವದ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಚಕಿಯಾ ಗ್ರಾಮದಲ್ಲಿ ೭ ಜುಲೈ ೧೯೩೪ ರಂದು ಜನಿಸಿದರು. ಅವರು ವಾರಣಾಸಿ ಯ ಉದಯ್ ಪ್ರತಾಪ್ ಕಾಲೇಜಿನಲ್ಲಿ ಪದವಿ ಪಡೆದು ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. ತೇರ್ಗಡೆಯಾದರು. ಮತ್ತು ಅದೇ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಮಾಡಿದರು. ಗೋರಖಪುರದಲ್ಲಿ ಹಿಂದಿ ಶಿಕ್ಷಕನಾಗಿ ಕೆಲ ಕಾಲ ಸೇವೆ ಸಲ್ಲಿಸಿ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಭಾರತೀಯ ಭಾಷೆಗಳ ಕೇಂದ್ರದಲ್ಲಿ ಹಿಂದಿ ಭಾಷಾ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ಅವರು ದಹಲಿಯಲ್ಲಿ ನೆಲೆಸಿದ್ದಾರೆ.

ಪ್ರಮುಖ ಕೃತಿಗಳು[ಬದಲಾಯಿಸಿ]

ಕವನ ಸಂಕಲನಗಳು: ಅಭಿ ಬಿಲ್ಕುಲ್ ಅಭೀ , ಜಮೀನ್ ಪಕ್ ರಹೀ ಹೈ , ಯಹಾಂ ಸೆ ದೇಖೋ , ಅಕಾಲ್ ಮೆ ಸಾರಸ್ , ಬಾಘ್ , ಟಾಲ್ ಸ್ಟಾ ಯ್ ಔರ್ ಸೈಕಲ್

ಪ್ರಬಂಧಗಳು ಮತ್ತು ಕತೆಗಳು : ಮೇರೆ ಸಮತಯ್ ಕೀ ಶಾದಿ , ಕಲ್ಪನಾ ಔರ್ ಛಾಯಾವಾದ್ , ಹಿಂದಿ ಕವಿತಾ ಮೆ ಬಿಂಬವಿಧಾನ್ , ಕಬ್ರಿಸ್ತಾನ್ ಮೆ ಪಂಚಾಯತ್

ಇತರ : ತಾನಾಬಾನಾ