ಕೇಟೀ ಜಾರ್ಜ್
ಕೇಟೀ ಲೂಯಿಸ್ ಜಾರ್ಜ್ (ಜನನ 7 ಏಪ್ರಿಲ್ 1999) ಒಬ್ಬ ಇಂಗ್ಲಿಷ್ ಕ್ರಿಕೆಟ್ ಆಟಗಾರ್ತಿ. ಅವರು ಹ್ಯಾಂಪ್ಶೈರ್, ಸೆಂಟ್ರಲ್ ಸ್ಪಾರ್ಕ್ಸ್ ಮತ್ತು ಮ್ಯಾಂಚೆಸ್ಟರ್ ಒರಿಜಿನಲ್ಸ್ ಪರ ಆಡುತ್ತಾರೆ. ಬಲಗೈ ಬ್ಯಾಟರ್ ಮತ್ತು ಎಡಗೈ ವೇಗದ ಬೌಲರ್ ಆಗಿದ್ದಾರೆ. ಅವರು 2013 ರಲ್ಲಿ ಹ್ಯಾಂಪ್ಶೈರ್ ಗೆ ಪಾದಾರ್ಪಣೆ ಮಾಡಿದರು. ಅವರು ಇಂಗ್ಲೆಂಡ್ ಪರ 2018 ರಲ್ಲಿ 5 ಟಿ20 ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ.[೧]
ಆರಂಭಿಕ ಜೀವನ
[ಬದಲಾಯಿಸಿ]ಜಾರ್ಜ್ ಅವರು 7 ಏಪ್ರಿಲ್ 1999 ರಂದು ವೆಸ್ಟ್ ಸಸೆಕ್ಸ್ ನ ಹೇವರ್ಡ್ಸ್ ಹೀತ್ ನಲ್ಲಿ ಜನಿಸಿದರು.
ದೇಶೀಯ ವೃತ್ತಿಜೀವನ
[ಬದಲಾಯಿಸಿ]ಜಾರ್ಜ್ ಅವರು ಹ್ಯಾಂಪ್ಶೈರ್ ಪರ 2013ರ ಮಹಿಳಾ ಕೌಂಟಿ ಚಾಂಪಿಯನ್ಶಿಪ್ ನಲ್ಲಿ ಆಕ್ಸ್ಫರ್ಡ್ಶೈರ್ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ಆಕೆ ಎರಡು ವಿಕೆಟ್ ಗಳನ್ನು ಪಡೆದು 18 ರನ್ ಗಳಿಸಿ ತನ್ನ ತಂಡವನ್ನು 5 ವಿಕೆಟ್ ಗಳಿಂದ ಗೆದ್ದುಕೊಂಡರು.[೨] ಅವರು 2015 ರವರೆಗೆ ಮತ್ತೆ ಆಡಲಿಲ್ಲ. ಆದರೆ ಕೌಂಟಿ ಚಾಂಪಿಯನ್ಶಿಪ್ ಮತ್ತು ಟ್ವೆಂಟಿ-20 ಕಪ್ ಎರಡರಲ್ಲೂ ಅನುಕ್ರಮವಾಗಿ 8 ಮತ್ತು 7 ವಿಕೆಟ್ ಗಳನ್ನು ಪಡೆದು ಯಶಸ್ವಿ ಋತುವನ್ನು ಹೊಂದಿದ್ದರು.[೩][೪] ಜಾರ್ಜ್ ನಂತರ ಹ್ಯಾಂಪ್ಶೈರ್ ತಂಡದಲ್ಲಿ ನಿಯಮಿತರಾಗಿದ್ದರು ಮತ್ತು 2018 ರಲ್ಲಿ ತಮ್ಮ ಚಾಂಪಿಯನ್ಶಿಪ್ ಗೆಲುವಿನ ಋತುವಿನಲ್ಲಿ ಅವರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದರು.[೫][೬]
ಜಾರ್ಜ್ ಅವರು 2016 ಮತ್ತು 2018ರ ನಡುವೆ ನಡೆದ ಮಹಿಳಾ ಕ್ರಿಕೆಟ್ ಸೂಪರ್ ಲೀಗ್ ಸದರ್ನ್ ವೈಪರ್ಸ್ ತಂಡದ ಭಾಗವಾಗಿದ್ದರು. ಅವರೊಂದಿಗೆ 2016ರಲ್ಲಿ ಪಂದ್ಯಾವಳಿಯನ್ನು ಗೆದ್ದರು.[೭] 2019 ರಲ್ಲಿ, ಅವರು ಯಾರ್ಕ್ಷೈರ್ ಡೈಮಂಡ್ಸ್ ಪರ ಆಡಿದ್ದರು ಮತ್ತು 6.85 ರ ಎಕಾನಮಿಯೊಂದಿಗೆ 4 ವಿಕೆಟ್ ಗಳನ್ನು ಪಡೆದರು.[೮]
ಅಂತಾರಾಷ್ಟ್ರೀಯ ವೃತ್ತಿಜೀವನ
[ಬದಲಾಯಿಸಿ]ಮಾರ್ಚ್ 2018 ರಲ್ಲಿ, ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ತ್ರಿಕೋನ ಸರಣಿ ಗೆ ಜಾರ್ಜ್ ಅವರನ್ನು ಇಂಗ್ಲೆಂಡ್ ತಂಡದಲ್ಲಿ ಹೆಸರಿಸಲಾಯಿತು.[೯] ಸರಣಿಗೆ ಮುಂಚಿನ ಅಭ್ಯಾಸ ಪಂದ್ಯದಲ್ಲಿ, ಅವರು ಭಾರತ ಎ ಮಹಿಳಾ ವಿರುದ್ಧ ಹ್ಯಾಟ್ರಿಕ್ ಪಡೆದರು.[೧೦] ಅವರು ತ್ರಿಕೋನ ಸರಣಿಯಲ್ಲಿ ಮೂರು ಪಂದ್ಯಗಳನ್ನು ಆಡಿದರು, ಆದರೆ ಪ್ರಭಾವ ಬೀರಲು ವಿಫಲರಾದರು.[೧೧]
ಜೂನ್ 2018 ರಲ್ಲಿ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಇಂಗ್ಲೆಂಡ್ ನ ತ್ರಿಕೋನ ಸರಣಿ ಭಾಗವಾಗಿ ಜಾರ್ಜ್ ಅವರನ್ನು ತಂಡದಲ್ಲಿ ಹೆಸರಿಸಲಾಯಿತು.[೧೨] ಅವರು ಎರಡು ಪಂದ್ಯಗಳನ್ನು ಆಡಿದರು ಮತ್ತು ಎರಡು ವಿಕೆಟ್ ಗಳನ್ನು ಪಡೆದರು. ಇದರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಮಿ ಸ್ಯಾಟರ್ಥ್ವೈಟ್ ಅವರ ಮೊದಲ ವಿಕೆಟ್ ಕೂಡ ಸೇರಿದೆ.[೧೩][೧೪]
ಅವರು 7 ಜುಲೈ 2018 ರಂದು ನ್ಯೂಜಿಲೆಂಡ್ ಮಹಿಳೆಯರ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್ ಮಹಿಳಾ ತಂಡಕ್ಕಾಗಿ ಮಹಿಳಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು ಮತ್ತು ಒಂದು ವಿಕೆಟ್ ಪಡೆದರು.[೧೫] ಸರಣಿಯ ಎರಡನೇ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರು, ಅವರು 7 ಓವರ್ಗಳಿಂದ 3/36 ತೆಗೆದುಕೊಂಡ ಕಾರಣ "ಸ್ಟ್ಯಾಂಡ್-ಔಟ್" ಬೌಲರ್ ಹಳಲ್ಲಿ ಒಬ್ಬರಾಗಿದ್ದರು.[೧೬]
ಫೆಬ್ರವರಿ 2019 ರಲ್ಲಿ, ಜಾರ್ಜ್ ಅವರಿಗೆ 2019 ರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ರೂಕಿ ಒಪ್ಪಂದವನ್ನು ನೀಡಿತು. ಮತ್ತು 2020 ರಲ್ಲಿ COVID-19 ಸಾಂಕ್ರಾಮಿಕ ರೋಗದ ನಂತರ ತರಬೇತಿಯನ್ನು ಪ್ರಾರಂಭಿಸಲು 24 ಆಟಗಾರರ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. ಆದರೆ ಅವರು ಇನ್ನೂ ಇಂಗ್ಲೆಂಡ್ ಪರ ಮತ್ತೊಂದು ಪಂದ್ಯವನ್ನು ಆಡಿಲ್ಲ.[೧೭][೧೮]
ಉಲ್ಲೇಖಗಳು
[ಬದಲಾಯಿಸಿ]- ↑ "2nd match, India Tri-Nation Women's T20 Series at Mumbai, Mar 23 2018". ESPN Cricinfo. Retrieved 23 March 2018.
- ↑ "Hampshire Women v Oxfordshire Women, 1 Sep 2013". Cricket Archive. Retrieved 7 February 2021.
- ↑ "Royal London Women's One-Day Cup 2015/Hampshire Women Bowling". Cricket Archive. Retrieved 7 February 2021.
- ↑ "NatWest Women's Twenty20 Cup/Hamsphire Women Bowling". Cricket Archive. Retrieved 7 February 2021.
- ↑ "ECB Women's County Championship". Play-Cricket. Retrieved 7 February 2021.
- ↑ "Royal London Women's One-Day Cup 2018/Hampshire Women Bowling". Cricket Archive. Retrieved 7 February 2021.
- ↑ "Katie George T20 Matches". Cricket Archive. Retrieved 7 February 2021.
- ↑ "Kia Super League 2019/Yorkshire Diamonds Bowling". Cricket Archive. Retrieved 7 February 2021.
- ↑ "Three new players included in England Women's squad". England and Wales Cricket Board. Retrieved 6 February 2021.
- ↑ "Katie George takes hat-trick as England's women win warm-ups against India A". BBC Sport. Retrieved 23 March 2018.
- ↑ "Katie George T20I Matches". Cricket Archive. Retrieved 7 February 2021.
- ↑ "England name Vitality IT20 Tri-Series squad". England and Wales Cricket Board. Retrieved 7 February 2021.
- ↑ "RECORDS / ENGLAND TRI-NATION T20 WOMEN'S SERIES, 2018 - ENGLAND WOMEN / BATTING AND BOWLING AVERAGES". ESPN Cricinfo. Retrieved 7 February 2021.
- ↑ "6th Match, England Tri-Nation T20 Women's Series, Jun 28 2018". ESPN Cricinfo. Retrieved 7 February 2021.
- ↑ "1st ODI, ICC Women's Championship at Leeds, Jul 7 2018". ESPN Cricinfo. Retrieved 7 July 2018.
- ↑ "England seal series in style as New Zealand succumb to Sophie Ecclestone and Katie George". ESPN Cricinfo. Retrieved 7 February 2021.
- ↑ "Freya Davies awarded England Women contract ahead of India tour". ESPN Cricinfo. Retrieved 6 February 2019.
- ↑ "England Women confirm back to training plans". England and Wales Cricket Board. Retrieved 18 June 2020.