ಕೇಂದ್ರೀಯ ಲೋಕೋಪಯೋಗಿ ಇಲಾಖೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ಕೇಂದ್ರೀಯ ಲೋಕೋಪಯೋಗಿ ಇಲಾಖೆಯು (ಸಿಪಿಡಬ್ಲ್ಯುಡಿ) ಸಾರ್ವಜನಿಕ ಕಾಮಗಾರಿಗೆ ಜವಾಬ್ದಾರವಾದ ಕೇಂದ್ರ ಸರ್ಕಾರದ ಪ್ರಧಾನ ಸಂಸ್ಥೆಯಾಗಿದೆ.[೧] ನಗರಾಭಿವೃದ್ಧಿ ಸಚಿವಾಲಯದ (ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ) ಅಡಿಯಲ್ಲಿ, ಕೇಂದ್ರೀಯ ಲೋಕೋಪಯೋಗಿ ಇಲಾಖೆಯು ಕಟ್ಟಡಗಳು, ರಸ್ತೆಗಳು, ಸೇತುವೆಗಳು, ಮೇಲ್ಸೇತುವೆಗಳು, ಕ್ರೀಡಾಂಗಣಗಳು, ಸಭಾಂಗಣಗಳು, ಪ್ರಯೋಗಾಲಯಗಳು, ರಕ್ಷಣಾ ತಡೆಗಳು, ಗಡಿ ಬೇಲಿ, ಗಡಿ ರಸ್ತೆಗಳಂತಹ (ಬೆಟ್ಟದ ರಸ್ತೆಗಳು) ಸಂಕೀರ್ಣ ರಚನೆಗಳು, ಇತ್ಯಾದಿಗಳನ್ನು ನಿಭಾಯಿಸುತ್ತದೆ. ಸಿಪಿಡಬ್ಲ್ಯುಡಿ ಜುಲೈ ೧೮೫೪ ರಲ್ಲಿ ಲಾರ್ಡ್ ಡಾಲ್‍ಹೌಸಿ ಸಾರ್ವಜನಿಕ ಕಾಮಗಾರಿಯ ನಿರ್ವಹಣೆಗೆ ಕೇಂದ್ರೀಯ ಸಂಸ್ಥೆಯನ್ನು ಸ್ಥಾಪಿಸಿ ಅಜ್ಮೇರ್ ಪ್ರಾಂತೀಯ ವಿಭಾಗವನ್ನು ಸ್ಥಾಪಿಸಿದಾಗ ಅಸ್ತಿತ್ವಕ್ಕೆ ಬಂದಿತು. ಈಗ ಇದು ಸಮಗ್ರ ನಿರ್ಮಾಣ ನಿರ್ವಹಣಾ ಇಲಾಖೆಯಾಗಿ ಬೆಳೆದಿದೆ, ಮತ್ತು ಯೋಜನಾ ಪರಿಕಲ್ಪನೆಯಿಂದ ಹಿಡಿದು ಮುಕ್ತಾಯದವರೆಗಿನ ಸೇವೆಗಳನ್ನು, ಸಂರಕ್ಷಣಾ ನಿರ್ವಹಣೆಯನ್ನು ಒದಗಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "ಕೇಂದ್ರೀಯ ಲೋಕೋಪಯೋಗಿ ಇಲಾಖೆ". Archived from the original on 2019-05-31. Retrieved 2019-05-22.