ಕೆ. ವಿ. ಸುಬ್ಬಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕೆ. ವಿ. ಸುಬ್ಬಣ್ಣ ನವರು ನಾಟಕಕಾರರಾಗಿ, ಚಿ0ತಕರಾಗಿ, ನೀನಾಸ0ನ ಸ್ಥಾಪಕರಾಗಿ ಸುಪರಿಚಿತರು. ಸಾಗರ ತಾಲೂಕಿನ ಹೆಗ್ಗೋಡು ಎ0ಬ ಪುಟ್ಟ ಗ್ರಾಮದಲ್ಲಿ ಇವರು ನಡೆಸುತ್ತಿದ್ದ ರ0ಗ ತರಬೇತಿ ಯೋಜನೆಗಳು, ಸಂಸ್ಕೃತಿ ಶಿಬಿರಗಳು ಸಾಕಷ್ಟು ಪ್ರಖ್ಯಾತಿ ಗಳಿಸಿವೆ. ಲೋಹಿಯಾವಾದದಿ0ದ ಪ್ರೇರಣೆ ಪಡೆದಿದ್ದ ಸುಬ್ಬಣ್ಣ ಹಲವು ಲೇಖನಗಳನ್ನೂ ಬರೆದಿದ್ದಾರೆ. ಮು0ದೆ ಅದು 'ಕೆ. ವಿ. ಸುಬ್ಬಣ್ಣ ಅವರ ಆಯ್ದ ಬರಗಳು' ಸ0ಕಲನ ರೂಪದಲ್ಲಿ ಪ್ರಕಟವಾದುವು. ಅಕ್ಷರ ಪ್ರಕಾಶನವನ್ನು ಹುಟ್ಟುಹಾಕಿ ಹಲವಾರು ಮಹತ್ವದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಬರೆದ ಪುಸ್ತಕಗಳು[ಬದಲಾಯಿಸಿ]

ಕಾಳಿದಾಸ, ಶೇಕ್ಸ್ ಪಿಯರ್ ,ಬ್ರೆಕ್ಟ್ ಮು0ತಾದವರ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ರ0ಗ ಕಾಣುವ0ತೆ ಮಾಡಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಇವರ 'ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು' ಕೃತಿಗೆ ಕೇ0ದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ದೊರಕಿದೆ. ಸ0ಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರಿ ಪುರಸ್ಕಾರಗಳಲ್ಲದೆ ೧೯೯೧ ಪ್ರತಿಷ್ಠಿತ ಮ್ಯಾಗಸೇಸೆ ಪುರಸ್ಕಾರವೂ ಇವರಿಗೆ ಸ0ದಿದೆ.

ಇತ್ತೀಚೆಗೆ ಇವರ ಲೇಖನಗಳ ಇ0ಗ್ಲಿಷ್ ಆವೃತ್ತಿಯು Community and Culture ಎ0ಬ ಹೆಸರಿನಲ್ಲಿ ಪ್ರಕಟವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

ಪೊಮ್ಮಾಲೆ, ಪ್ರಸಾರಂಗ ಮಂಗಳೂರು ವಿಶ್ವವಿದ್ಯಾಲಯ