ವಿಷಯಕ್ಕೆ ಹೋಗು

ಕೆ. ಪ್ರಹ್ಲಾದ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ. ಪ್ರಹ್ಲಾದ ರಾವ್
Born
ಪ್ರಹ್ಲಾದ ರಾವ್

೨೯, ಜನವರಿ, ೧೯೪೩,ಸಂಸಂದ್ರ, ಮುಳಬಾಗಿಲು ಜಿಲ್ಲೆ
Died೯, ಸೋಮವಾರ,ಅಕ್ಟೋಬರ್, ೨೦೨೩ (ಕೋಲಾರದಲ್ಲಿ)
Nationalityಭಾರತೀಯ
Occupation(s)ಪ್ರತಿಷ್ಠಿತ ಕೋಲಾರ ದಿನ ಪತ್ರಿಕೆಯ ಪ್ರಧಾನ ಸಂಪಾದಕರು ಲೇಖಕ, ಸಂಪಾದಕ,
Spouseಚಿ. ಸೌ.ವಾಣಿ.
Childrenಸುಹಾಸ್, ಇಂಜಿನಿಯರ್,, ಡಾ. ನರೇನ್, ಮಾನಸಿಕ ರೋಗ ತಜ್ಞರು,ಸುಮಾ, ಇಂಜಿನಿಯರ್, ಸುಚೇತಾ, ವೈದ್ಯರು, (ಮೊಮ್ಮಕ್ಕಳು : ಸುಮೇಧ್, ಅಧೃತ್, ಸುಹೃತ್ ),
Awards೧. ೧೯೯೭ ಕರ್ನಾಟಕ ಮಾಧ್ಯಮ ಅಕ್ಯಾಡೆಮಿಯ ಅಂದೊಳನ ಪ್ರಶಸ್ತಿ,

೨. ೨೦೦೨ ಮುಳಬಾಗಿಲಿನ ಶ್ರೀ ಶ್ರೀಪಾದರಾಜ ಮಠದ ಧ್ರುವ ಪ್ರಶಸ್ತಿ. ೩. ೨೦೦೪ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತು ಪ್ರಶಸ್ತಿ, ೪. ೨೦೦೬ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೀದರ್, ೫. ೨೦೦೦ ಜಿಲ್ಲಾ ಪತ್ರಕರ್ತರ ಸಂಘದ ಪುರಸ್ಕಾರ-೨೫ ವರ್ಷಗಳ ಸೇವೆಗಾಗಿ,

೬. ೨೦೦೩ ಕೋಲಾರ ರತ್ನ ಪ್ರಶಸ್ತಿ. ಕೋಲಾರ ಸಾಂಸ್ಕೃತಿಕ ಸಂಘದಿಂದ. ಇನ್ನೂ ಹಲವಾರು ಪ್ರಶಸ್ತಿಗಳು ಸಂದಿವೆ.

ಕೆ.ಪ್ರಹ್ಲಾದ ರಾವ್ಪ್ರತಿಷ್ಠಿತ ಕೋಲಾರ ಪತ್ರಿಕೆಯ ಸಂಪಾದಕರು. ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಈ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕೋಲಾರ ಜಿಲ್ಲೆಯ ಸಾಹಿತ್ಯ, ಸಂಗೀತ, ಹಬ್ಬ-ಹರಿದಿನಗಳು, ಮತ್ತು ಜನಪದ ಜೀವನಕ್ಕೆ ಅತ್ಯಂತ ಹತ್ತಿರದಲ್ಲಿ ಸ್ಪಂದಿಸುತ್ತಿದ್ದಾರೆ. ಪ್ರಾರಂಭಿಕಶಿಕ್ಷಣ ಮುಳಬಾಗಿಲಿನ ಕಸಬಾ ಬೀದಿಯ ಪ್ರೌಢಶಾಲೆಯಲ್ಲಿ ನಡೆಯಿತು. ಮುಂದಿನ ವಿದ್ಯಾಭ್ಯಾಸ ತಾಂತ್ರಿಕ ಶಿಕ್ಷಣ ವಲಯದಲ್ಲಿ ಪಡೆಯುವ ಆಶೆಯಿಂದ ಬೆಂಗಳೂರಿನ ಶೇಷಾದ್ರಿಪುರ ಉಪನಗರದಲ್ಲಿ ಬಡಗನಾಡು ಸಂಘ ಹಾಸ್ಟೆಲಿನಲ್ಲಿ ವಾಸ್ತವ್ಯ ಮಾಡಿದ್ದರು. ಡಿಪ್ಲೋಮ ಗಳಿಸುವ ದಿಕ್ಕಿನಲ್ಲಿ ಸಾಗಿದ ಅವರು ಪದವಿಯಕಡೆ ತಿರುಗಿ ಯಶಸ್ವಿಯಾದರು.

ಮನೆಯ ಪರಿಸರ

[ಬದಲಾಯಿಸಿ]

ಬಾಲಕ ಪ್ರಹ್ಲಾದನ ತಂದೆ ನರಸಿಂಗರಾಯರು. ಸಂಸಂದ್ರ, ಮುಳಬಾಗಿಲು ತಾಲ್ಲೂಕಿನ ಮಾಜಿ ಶ್ಯಾನುಭೋಗರು. ತಾಯಿ ಸಾಧ್ವಿ ಭಾಗೀರಥಮ್ಮ. ಸಂಪ್ರದಾಯಸ್ಥರ ಕುಟುಂಬ. ೬ ನೆಯ ಮಗ ೨೯, ಜನವರಿ, ೧೯೪೩ ರಲ್ಲಿ ಜನನ. ಪ್ರೌಢ ಶಾಲೆಯಯ ನಂತರ ಬೆಂಗಳೂರಿಗೆ/ ಬಡಗನಾಡು ಸಂಘ ಹಾಸ್ಟೆಲ್ ನಲ್ಲಿ ವಾಸ್ತವ್ಯ. ೧೯೭೭ ರಲ್ಲಿ ವಾಣಿಯವರನ್ನು ಲಗ್ನವಾದರು ಕನ್ನಡ ಸಾಹಿತ್ಯದಲ್ಲಿ ಅಪಾರ ಒಲವು. ಕೋಲಾರ ಪತ್ರಿಕೆಯ ಆರಂಭ, ೧೯೭೫ ರಲ್ಲಿ ವಾರ್ತಾ ಸಚಿವ ಗುಂಡೂರಾಯರು ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಹಾಸನದ 'ಜನಮಿತ್ರ ಪತ್ರಿಕೆ'ಯಲ್ಲಿ ಕೆಲಸಮಾಡಿದ ಅನುಭವ ಬಹಳ ಸಹಕಾರಿಯಾಯಿತು. ಕೋಲಾರ ಬಹಳ ಹಿಂದುಳಿದ ಪ್ರದೇಶ. ಇಂಟರ್ಮಿಡಿಯೇಟ್ ಕಾಲೇಜ್ ಸ್ಥಾಪನೆಯಾದದ್ದು ೧೯೪೮ ರಲ್ಲಿ.ಇಂತಹ ಸ್ಥಳದಲ್ಲಿ ಪತ್ರಿಕೆಯೊಂದನ್ನು ಹುಟ್ಟುಹಾಕಿ ನಡೆಸಿಕೊಂಡುಬರುವುದು ಒಂದು ಸವಾಲಾಗಿತ್ತು. ೧೯೯೫ ರಲ್ಲಿ ಪ್ರಹ್ಲಾದರ ತಾಯಿಯವರು ನಿಧನರಾದರು.

ಇತರ ಪತ್ರಿಕೆಗಳು

[ಬದಲಾಯಿಸಿ]

ಮಾಲೂರು ನಾರಾಯಣಸ್ವಾಮಿಯವರ ಪೌರವಾಣಿ, ಕೆ.ಜಿ.ಎಫ್ ನ ನಿಯತಕಾಲಿಕೆಗಳಾಗಿ ಪ್ರಚಾರದಲ್ಲಿದ್ದವು. ಪ್ರಜಾರಾಜ್ಯ ವಾರಪತ್ರಿಕೆಯನ್ನು ಆಗಿನ ಪುರಸಭಾಧ್ಯಕ್ಷ ಚಂದ್ರಯ್ಯನವರು ತಂದರು. ಪ್ರತಿನಿಧಿ ೧೯೬೨ ರಲ್ಲಿ ಹಾಸನಜಿಲ್ಲೆಯ ಪ್ರಥಮ ಪತ್ರಿಕೆ. ೧೯೬೨ ರ ದಿಸೆಂಬರ್ ೬ ರಂದು, ರಾಜ್ಯಪ್ರಶಸ್ತಿ ಪತ್ರಿಕಾ ಅಕ್ಯಾಡೆಮಿ ಪ್ರಶಸ್ತಿವಿಜೇತ,ಕೃ.ನ.ಮೂರ್ತಿಯವರ ಜನಮಿತ್ರಗೆ ಪ್ರಹ್ಲಾದರಾಯರು ಪ್ರವೇಶಮಾಡಿದರು.ಮಿತಭಾಷಿ, ಕಹ್ಟಸಹಿಷ್ಣು,ತೀಷ್ಣವಾದ ಜ್ಞಾಪಕ ಶಕ್ತಿಯನ್ನು ಹೊಂದಿದ್ದ ಪ್ರಹ್ಲಾದರಾವ್. ಮೈಸೂರು ವಿಶ್ವವ್ಯಾಲಯದ ಪದವೀಧರರು. ಪತ್ರಿಕೋದ್ಯಮದ ಸರ್ಟಿಫಿಕೇಟ್ ಸಹಿತ ಗಳಿಸಿದ್ದಾರೆ.

ಮದುವೆ

[ಬದಲಾಯಿಸಿ]

ಕೋಣನೂರು ನಂಜಪ್ಪ, ಸಾವಿತ್ರಮ್ಮನವರ ಕಿರಿಯಮಗಳು ಚಿ.ಸೌ.ವಾಣಿಯವರನ್ನು ೧೯೭೭ ಮೇ ೧೨ ರಂದು ಲಗ್ನವಾದರು. ಮಕ್ಕಳು : ಸುಹಾಸ್ ಇಂಜಿನಿಯರ್, ಡಾ. ನರೇನ್ ಮಾನಸಿಕರೋಗ ತಜ್ಞರು. ಸುಮಾ ಇಂಜಿನಿಯರ್, ಸುಚೇತಾ ಡಾಕ್ಟರ್, ಸುಮೇಧ ಮೊಮ್ಮಗ.

ಅನುಭವ

[ಬದಲಾಯಿಸಿ]
  1. ೧೯೬೩ ರಿಂದ ೧೯೭೧ ರವರೆಗೆ ಹಾಸನದ ಜನಮಿತ್ರ ಪತ್ರಿಕೆಯ ಉಪ ಸಂಪಾಕರಾಗಿ,
  2. ೧೯೭೫ ರಿಂದ ೧೯೭೫ ರವರೆಗೆ ಜನಮಿತ್ರ ಪತ್ರಿಕೆಯ ಚಿಕ್ಕಮಗಳೂರು,ದಾವಣಗೆರೆ, ನಗರವಾಣಿ ಪತ್ರಿಕೆಯ ಸ್ಥಾನೀಯ ಸಂಪಾದಕರಾಗಿ,
  3. ೧೯೭೫ ರ ಏಪ್ರಿಲ್ ೫ ರಿಂದ ಕೋಲಾರ ಜಿಲ್ಲೆಯ ಪ್ರಥಮ ದೈನಿಕದ ಕೋಲಾರಪತ್ರಿಕೆಯ ಪ್ರಕಾಶಕರಾಗಿ,
  4. ೧೯೭೩ ರಲ್ಲಿ ಹಾಸನದಲ್ಲಿ ಜರುಗಿದ ರಾಜ್ಯ ಪ್ರಪ್ರಥಮ ಗ್ರಾಮಾಂತರ ಪದವೀಧರರ ತರಬೇತಿ ಶಿಬಿರದ ಪ್ರತಿನಿಧಿಯಾಗಿ,

ಆಹ್ವಾನಿತ ಗೌರವ ಪ್ರತಿನಿಧಿ

[ಬದಲಾಯಿಸಿ]
  1. ೧೯೮೧ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನಾ ವಿಭಾಗವು ಏರ್ಪಡಿಸಿದ್ದ ಗ್ರಾಮಾಂತರ ಪತ್ರಕರ್ತರ ಜವಾಬ್ದಾರಿ ಕುರಿತ ಪ್ರಾದೇಶಿಕ ವಿಚಾರಗೋಷ್ಠಿಯಲ್ಲಿ,
  2. ೧೯೮೪ ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರ ರಾಷ್ಟೀಯ ಮಕ್ಕಳ ಚಲನ ಚಿತ್ರೋತ್ಸವದ ಜಿಲ್ಲಾ ಪ್ರಾತಿನಿಧಿಕ ವರದಿಗಾರ,
  3. ೧೯೯೯ ಗ್ರಾಮೀಣ ಅಭಿವೃದ್ಧಿ ಕುರಿತು ಕೇಂದ್ರದ ಪತ್ರ ಸೂಚನಾ ಕಾರ್ಯಾಲಯ ಏರ್ಪಡಿಸಿದ್ದ ಮಾಧ್ಯಮ ಕಾರ್ಯಾಗಾರ,
  4. ೨೦೦೦ ಪತ್ರಿಕಾ ಅಕ್ಯಾಡೆಮಿ ಹುಬ್ಬಳ್ಳಿಯಲ್ಲಿ ವ್ಯವಸ್ಥೆಗೊಳಿಸಿದ್ದ ಕರ್ನಾಟಕ ಪರಂಪರೆ ಕುರಿತ ೩ ದಿನಗಳ ಕಾರ್ಯಾಗಾರ,
  5. ೨೦೦೨ ಒಣಭೂಮಿ ಅಭಿವೃದ್ಧಿ ಮಂಡಳಿ ಆಯೋಜಿಸಿದ ಸವಳು ಭೂಮಿ ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ,
  6. ೨೦೦೪ ಪತ್ರ ಸೂಚನಾ ಕಾರ್ಯಾಲಯ ರೂಪಿಸಿದ್ದ ಮಾದಕವಸ್ತು ನಿಷೇಧ ಕುರಿತ ಮಾಧ್ಯಮ ಕಾರ್ಯಾಗಾರ,

ಸಂಪನ್ಮೂಲ ವ್ಯಕ್ತಿಯಾಗಿ

[ಬದಲಾಯಿಸಿ]
  • ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗ,
  • ಭಾರತೀಯ ವಿದ್ಯಾಭವನ,
  • ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ,
  • ಕುಪ್ಪಾಯಂದ ದ್ರಾವಿಡ ವಿಶ್ವವಿದ್ಯಾನಿಲಯದ ಪತ್ರಿಕೋಧ್ಯಮ ವಿದ್ಯಾರ್ಥಿಗಳಿಗೆ ಮಾಹಿತಿ-ಸಂಪನ್ಮೂಲ ವ್ಯಕ್ತಿಯಾಗಿ, ಹಲವಾರು ಪ್ರಬಂಧ ಸಂಶೋಧನೆಗಳಿಗೆ ಪ್ರೇರಣೆ,ಸಹಾಯ,ಸಹಕಾರ,ಮಾರ್ಗದರ್ಶನ,
  • ಕೋಲಾರ ಪ್ರತ್ರಿಕೆ ಕಾರ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ, ಮಾಹಿತಿ,ಚಿತ್ರ,ದಾಖಲೆಗಳ ಪೂರೈಕೆಮಾಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಿರ್ವಹಿಸಿದ ಹುದ್ದೆಗಳು

[ಬದಲಾಯಿಸಿ]
  1. ಜಿಲ್ಲಾ ಕನ್ನಡ ಸಾಹಿತ್ಯಪರಷಿತ್ತನ ಅಧ್ಯಕ್ಷ,
  2. ಕರ್ನಾಟಕ ಗೆಜ಼ೆಟಿಯರ್ ವಿಶೇಷ ಸದಸ್ಯ,
  3. ಕರ್ನಾಟಕ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ,
  4. ಸರ್ಕಾರದ ಪತ್ರಿಕಾ ಮಾನ್ಯತಾ ಸಮಿತಿ ಸದಸ್ಯ,
  5. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ,
  6. ಜಿಲ್ಲಾ ಭಾರತ ಸೇವಾದಳದ ಪ್ರಧಾನ ಕಾರ್ಯದರ್ಶಿ,
  7. ಡಿವಿಜಿ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ,
  8. ಕಮಲಾ ನೆಹರೂ ಸ್ಯಾನಿಟೋರಿಯಂ ಸಂದರ್ಶಕ ಸಮಿತಿ ಸದಸ್ಯ,
  9. ಶ್ರೀ ಟಿ.ಚೆನ್ನಯ್ಯ ರಂಗಮಂದಿರದ ನಿರ್ಮಾಣ ಸಮಿತಿಯಲ್ಲಿ,
  10. ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಸದಸ್ಯ,
  11. ಜಿಲ್ಲೆ ರೆಡ್ ಕ್ರಾಸ್ ಸಂಸ್ಥೆ ಸದಸ್ಯ,
  12. ದ್ರಾವಿಡ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಲಹಾ ಸಮಿತಿ ಸದಸ್ಯ,

ಕೋಲಾರ ಪತ್ರಿಕೆ ಪ್ರಕಾಶನದ ಡಿವಿಜಿ ಪ್ರತಿಷ್ಠಾನದ ಪ್ರಕಟಣೆಗಳು

[ಬದಲಾಯಿಸಿ]
  1. ೧೯೮೮ ಮತ್ತು ೨೦೧೫, ಡಿವಿಜಿ ಸಮಗ್ರ ಕೃತಿ ಪರಿಶೀಲನೆ
  2. ೨೦೦೫ ಕೆರೆಯ ಹಾರ (ಜಿಲ್ಲೆಯ ಕೆರೆಗಳನ್ನು ಕುರಿತ ಸಂಗ್ರಹ ಯೋಗ್ಯ ಕೃತಿ)
  3. ೧೯೮೩ ಕೋಲಾರ ಸುತ್ತಮುತ್ತಲಿನ ದೇವಾಲಯಗಳು
  4. ೧೯೮೫ ಶ್ರೀ ವೆಂಕಟರಮಣಸ್ವಾಮಿ ಮತ್ತಿತರ ದೇವಾಲಯಗಳು
  5. ೧೯೯೮ ಶ್ರೀಕರ (ಶ್ರೀ ಉಡುಪರ ಅಭಿನಂದನಾ ಗ್ರಂಥ)
  6. ೨೦೦೦ 'ನೂರು ವರ್ಷ ನೂರು ಮುಖ', ಜಿಲ್ಲೆಯ ಪ್ರಸಿದ್ಧರ ಪರಿಚಯ
  7. ೨೦೦೦ ನರಸಿಂಹ ಸ್ತೋತ್ರಗಳ ಪದಾರ್ಥ ಭಾಗ- ೧, ಭಾಗ- ೨
  8. ೧೯೯೨ ಪ್ರೇಮದ ಮೊಗ್ಗು
  9. ೨೦೧೪ ಶಾಸನಗಳ ಹಿನ್ನೆಲೆಯಲ್ಲಿ ಕೋಲಾರಮ್ಮ ದೇವಾಲಯ
  10. ೨೦೧೩, ೨೦೧೫ ಕುರುಡುಮಲೆ ವಿನಾಯಕ
  11. ೨೦೦೫ ವಿಧಾನ ಮಂಡಲ ಗ್ರಂಥಾಲಯ ಸಮಿತಿಗಾಗಿ ಸಿ.ಭೈರೇಗೌಡ

ಕೋಲಾರ ಪತ್ರಿಕೆಯ ವಿಶೇಷಾಂಕಗಳು

[ಬದಲಾಯಿಸಿ]
  • ಶೃಂಗ,
  • ಕಿಶೋರ,
  • ಸುಹಾಸ,
  • ವಿಕಾಸ,
  • ಪ್ರಬುದ್ಧ,
  • ಸ್ವರ್ಣ,
  • ಸ್ವಾತಂತ್ರ್ಯ,
  • ಬೆಳ್ಳಿ ಬೆಳಗು,
  • ಚಿಲುಮೆ,
  • ಸಹಕಾರ ಸೇತು,
  • ಜಿಲ್ಲೆಯ ಹಸಿರು ಪುಟಗಳು,
  • ವಜ್ರ ಕರ್ನಾಟಕ,

ಸಂಪಾದನೆಗಳು

[ಬದಲಾಯಿಸಿ]
  • ಸಿರಿನಂದಿ,
  • ಮೂಡಲ ಕಿರಣ,
  • ಹೊಸಪಥ,
  • ಮುಂಗೋಳಿ ಕೂಗಿತು

ಅಭಿನಂದನಾ ಸಮಾರಂಭ

[ಬದಲಾಯಿಸಿ]
  1. ಪತ್ರಿಕಾ ಶ್ರಮಜೀವಿ ಕೆ.ಪ್ರಹ್ಲಾದರಾವ್ ಅಭಿನಂದನ ಗ್ರಂಥ.-ಸಂಪಾದಕ ಮಂಡಳಿ : ಬಿ.ಎನ್.ಶ್ರೀನಿವಾಸನ್,ಕೆ.ಎಸ್.ನಾಗರಾಜ,ಬಿ.ಎನ್.ವಾಸುದೇವ ಮೂರ್ತಿ,ಎಚ್.ಕೆ.ರಾಘವೇಂದ್ರ
  2. ೨೦೧೩ 'ಪತ್ರಿಕಾ ಶ್ರಮಜೀವಿ' (ಕೆ. ಪ್ರಹ್ಲಾದರಾವ್ ಕುರಿತು ಅಭಿಮಾನಿಗಳ ಸಮಿತಿಯಿಂದ)

ವಜ್ರಮಹೋತ್ಸವದ ವಿಶೇಷ ಪತ್ರಿಕೆ

[ಬದಲಾಯಿಸಿ]
  1. ಕರ್ನಾಟಕ ಏಕೀಕರಣ [] ವಜ್ರಮಹೋತ್ಸವ ವಿಶೇಷ ಸಂಚಿಕೆ, ವಜ್ರ ಕರ್ನಾಟಕ, ೧೯೫೬-೨೦೧೬, ಕೋಲಾರ ಪತ್ರಿಕೆ ೬೧ ನೆಯ ರಾಜ್ಯೋತ್ಸವ ವಿಶೇಷಾಂಕ,-೨೦೧೬

ಕೋಲಾರ ಪತ್ರಿಕೆಯ ಹಲವು ಪ್ರಕಟಿತ ಪುಸ್ತಕಗಳು

[ಬದಲಾಯಿಸಿ]
  1. ಡಿವಿಜಿ ಸಮಗ್ರೆಕೃತಿ ಪರಿಶೀಲನ, ಡಿ.ವಿ.ಜಿ.ಪ್ರತಿಷ್ಠಾನ, ಆಶ್ರಯ, ಕೋಲಾರ ಪತ್ರಿಕೆ, ಗೌರಿ ಪೇಟೆ,ಕೋಲಾರ,-೫೬೩೧೦೧, ೨೦೧೪
  2. ಕೋಲಾರ ಪತ್ರಿಕೆ ಚಿಲುಮೆ, ನಲವತ್ತರ ಸಂಭ್ರಮದ ವಿಶೇಷಾಂಕ, []
  3. ಹರಿ ಭಕ್ತಿ ಸಾಹಿತ್ಯ-ಧಾರ್ಮಿಕ ಪುಸ್ತಕಗಳ ಅವಲೋಕನ,ರಾಘವೇಂದ್ರ,ಎಚ್.ಕೆ.ಡಿ.ವಿ.ಜಿ.ಪ್ರತಿಹ್ಟಾನ-೨೦೧೬
  4. ಗೃಹಸ್ನೇಹ,ಪ್ರೊ.ಎಂ.ಆರ್.ನಾಗರಾಜು, ಡಿ.ವಿ.ಜಿ.ಪ್ರತಿಷ್ಠಾನ ೨೦೧೬

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]
  1. ೧೯೯೭ ಕರ್ನಾಟಕ ಮಾಧ್ಯಮ ಅಕ್ಯಾಡೆಮಿಯ ಅಂದೊಳನ ಪ್ರಶಸ್ತಿ
  2. ೨೦೦೨ ಮುಳಬಾಗಿಲಿನ ಶ್ರೀ ಶ್ರೀಪಾದರಾಜ ಮಠದ ಧ್ರುವ ಪ್ರಶಸ್ತಿ.
  3. ೨೦೦೪ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತು ಪ್ರಶಸ್ತಿ
  4. ೨೦೦೬ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೀದರ್
  5. ೨೦೦೦ ಜಿಲ್ಲಾ ಪತ್ರಕರ್ತರ ಸಂಘದ ಪುರಸ್ಕಾರ-೨೫ ವರ್ಷಗಳ ಸೇವೆಗಾಗಿ
  6. ೨೦೦೩ ಕೋಲಾರ ರತ್ನ ಪ್ರಶಸ್ತಿ. ಕೋಲಾರ ಸಾಂಸ್ಕೃತಿಕ ಸಂಘದಿಂದ
  7. ೧೯೯೩ ಜಿಲ್ಲಾ ಳನ್ನಾದ ಸಾಹಿತ್ಯ ಪರಿಷತ್ತು
  8. ೧೯೯೬ ಭಾರತ ಸೇವಾದಳದ ಪುರಸ್ಕಾರ
  9. ೨೦೧೫-೧೬ ರಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ,ಶ್ರೀ.ಪ್ರಹ್ಲಾದರಾಯರಿಗೆ,ಪ್ರಶಸ್ತಿ ಪ್ರದಾನಮಾಡಲಾಯಿತು.[]
  10. ೨೦೧೦ ಸುರ್ವೆ ಪ್ರತಿಷ್ಹಾನದ ವಿಶ್ವೇಶ್ವರಯ್ಯ ಪ್ರಶಸ್ತಿ
  11. ೨೦೧೫ ಜಿ.ನಾರಾಯಣಸ್ವಾಮಿ ಪ್ರಶಸ್ತಿ,
  12. ೨೦೧೫ ಮಾಧ್ಯಮ ಆಕ್ಯಾಡೆಮಿ ಪ್ರಶಸ್ತಿ ೨೦೧೫
  13. ಗೂಳೂರಿನ ಡಾ. ಜಚನಿ ಮಾನವ ಧರ್ಮ ಪೀಠ,
  14. ಕೋಲಾರದ ರೋಟರಿ,#* ಲೈಯನ್ಸ್ ಕ್ಲಬ್
  15. ವಾಸವಿ ಕ್ಲಬ್ ಗಳು,
  16. ಚಿಂತಾಮಣಿ ಸಾಹಿತ್ಯಕೂಟ,
  17. ಗಟ್ಟ ಹಳ್ಳಿಅಂಜನಪ್ಪಸ್ವಾಮಿ ಆಶ್ರಮ,
  18. ಬೆಂಗಳೂರಿನ ಕೋಲಾರ ಮಿತ್ರರು, ಮೊದಲಾದ
  19. ಓದುಗರ ವೇದಿಕೆಗಳಿಂದ, ಸಾರ್ಥಕಸೇವೆಗಳಿಗಾಗಿ ಮೆಚ್ಚುಗೆಯ ಗರಿ.

ಪ್ರಹ್ಲಾದರಾಯರು (೮೩) ೯ ಸೋಮವಾರ, ಅಕ್ಟೋಬರ್, ೨೦೨೩ ರಂದು ನಿಧನರಾದರು. []

ಪ್ರಸ್ತುತ ಕಾರ್ಯ ಚಟುವಟಿಕೆಗಳು

[ಬದಲಾಯಿಸಿ]
  1. ಕೋಲಾರ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ
  2. ಡಾ.ಡಿ.ವಿ.ಜಿ.ಪ್ರತಿಷ್ಠಾನದ ಸದಸ್ಯ
  3. ಭಾರತ್ ಸಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಜಿಲ್ಲಾ ಖಜಾಂಚಿ
  4. ಶ್ರೀ ಬಾಲಾಜಿ ಪ್ರಾರ್ಥನಾ ಮಂದಿರದ ಸಂಚಾಲಕ
  5. ಅರಸು ವೈದ್ಯಕೀಯಕಾಲೇಜಿನ ಎಥಿಕಲ್ ಸಮಿತಿ ಅಧ್ಯಕ್ಷ
  6. ತಿರುಮಲ ತಿರುಪತಿ ದೇವಸ್ಥಾನಗಳ ಪ್ರಕಾಶನದ ಪರಿಣಿತರ ಸಮಿತಿ ಸದಸ್ಯ.

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯಸಂಪರ್ಕಗಳು

[ಬದಲಾಯಿಸಿ]