ಕೆ. ಚಂದ್ರಶೇಖರ ಗಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಸಾಫ್ಟ್ವೇರ್ ಅಭಿಯಂತ', ಕೆ. ಚಂದ್ರಶೇಖರ ಗಟ್ಟಿಯವರ ನಿಜವಾದ ನಾಮಧೇಯ, ಕೊಂಡಾಣ ಚಂದ್ರಶೇಖರ ಗಟ್ಟಿ ಎಂದು. ತಮ್ಮ ಮನೆಯಲ್ಲಿ ವಂಶಪಾರಂಪರ್ಯವಾಗಿ ನಡೆದುಬಂದ ಕೃಷಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಇವರು, ಅದೇ ವಲಯದಲ್ಲಿ ಅನೇಕ ಹೊಸವಿಚಾರಗಳಿಗೆ ಗ್ರಾಸವಾಗಿ, 'ರಾಷ್ತ್ರೀಯ ಮನ್ನಣೆ'ಗೆ ಪಾತ್ರವಾಗುವಷ್ಟು ಮೇಲೆ ಬೆಳೆದಿದ್ದಾರೆ.

ಜನನ, ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ[ಬದಲಾಯಿಸಿ]

'ಮಂಗಳೂ'ರಿನ ಹೊರಆವರಣದಲ್ಲಿನ 'ಕೋಟೆಕಾರು ಬೀದಿ' ಸಮೀಪದ ಕೊಂಡಾಣದಲ್ಲಿ ಬೆಳೆದರು.ಅವರು ಆರಿಸಿಕೊಂಡವಿಷಯ 'ತೆಂಗುಬೆಳೆ'. ಅದರಲ್ಲೇ ತಮ್ಮ ಮನಸ್ಸನ್ನು ನಿಲ್ಲಿಸಿ ಕಾರ್ಯಥರಾದ ಚಂದ್ರಶೇಖರ್ ಒಬ್ಬ ಮಾದರಿ ವ್ಯಕ್ತಿಯಾಗಿ ಇಂದಿನ ಯುವ ಜನಾಂಗಕ್ಕೆ ಉದಾಹರಣೆಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. 'ಮಾಸ್ಟರ್ ಡಿಪ್ಲೊಮಾ ಇನ್ ಸಾಫ್ಟ್ವೇರ್ ಇಂಜಿನಿಯರಿಂ'ಗ್ ವ್ಯಾಸಂಗಮಾಡಿದ ಚಂದ್ರಶೇಖರ ಗಟ್ಟಿಯವರು,ಬೆಳೆ ಬೆಳೆಯುವ ಬಗ್ಗೆ ಅಪಾರ ಆಸಕ್ತಿಯನ್ನು ಬಾಲ್ಯದಿಂದಲೇ ಹೊಂದಿದ್ದರು. ೧೦ ನೆಯ ತರಗತಿಯಲ್ಲಿದ್ದಾಗ ತಮ್ಮ ವ್ಯಾಸಂಗವನ್ನು ಮೊಟಕುಗೊಳಿಸಿ,ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.ಆದರೆ ಕೆಲವು ಅನಿವಾರ್ಯಕಾರಣಗಳಿಂದಾಗಿ ತಮ್ಮ ಓದನ್ನು ಮುಂದುವರೆಸಿದರು.ಮುಂದೆ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ 'ವೈಟ್ ಕಾಲರ್ ಕೆಲಸ'ವನ್ನೂ ಗಿಟ್ಟಿಸಿಕೊಂಡು ಸುಮಾರು ೧೦ ವರ್ಷಗಳಕಾಲ ದುಡಿದರು. ಆದರೆ ಅವರ ಹೃದಯದಲ್ಲಿ ತಮ್ಮ 'ಜಮೀನು' ಮತ್ತು 'ಕೃಷಿ'ಯೇ ತುಂಬಿತ್ತು. ತೆಂಗು ಬೆಳೆಯಲ್ಲಿ ಅವರು ತಮ್ಮನ್ನು ಮೊದಲು ತೊಡಗಿಸಿಕೊಂಡರು.ವಿಶೇಷವಾಗಿ ಅವರು ಆರಿಸಿಕೊಂಡ ತೆಂಗಿನ 'ಕೆಂದಾಳಿ'ಯ ಹಲವಾರು ತಳಿಗಳನ್ನು 'ಸಾವಯವ ಗೊಬ್ಬರ' ಬಳಸಿ, ಬಹಳ ಉತ್ತಮ ಇಳುವರಿಯನ್ನು ಪಡೆದು ಕೈತುಂಬಾ ಹಣಗಳಿಸಿದರು. ಕೆಂದಾಳಿಯಲ್ಲಿನ ಹಲವು ವಿಧಗಳು :

  • ಚೌಗಟ್ ಆರೇಂಜ್ ಡ್ವಾರ್ಫ್,
  • ಮಲೇಶಿಯನ್ ಎಲ್ಲೋ ಡ್ವಾರ್ಫ್,
  • ಡಿಟಿ ಹೈಬ್ರಿಡ್,
  • ವೆಸ್ಟ್ ಕೋಸ್ಟ್ ಟೌತ್ ಮುಂತಾದವುಗಳು.

ಕೃಷಿ ಇಲಾಖೆಯ ವತಿಯಿಂದ ಹೋದವರ್ಷ ೨೦೧೦ ರಲ್ಲಿ, ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದಾಗ, ಚಂದ್ರಶೇಖರರೂ ಅರ್ಜಿ ಸಲ್ಲಿಸಿದ್ದರು.ಜಿಲ್ಲಾ ರಾಜ್ಯಮಟ್ಟದ ತೋಟಗಾರಿಕೆ ಇಲಾಖೆಯ ತಂಡ ಅಧ್ಯಯನ ನಡೆಸಿ 'ಚಂದ್ರಶೇಖರ ಗಟ್ಟಿ'ಯವರ ಹೆಸರನ್ನು 'ರಾಷ್ಟ್ರೀಯ ಪ್ರಶಸ್ತಿ'ಗೆ ಶಿಫಾರಿಸು ಮಾಡಿತು.'ಕೇಂದ್ರ ಸರ್ಕಾರದ ತೆಂಗುಅಭಿವೃದ್ಧಿಮಂಡಳಿ ತಂಡ' ಅಂತಿಮ ಸುತ್ತಿನ ಆಯ್ಕೆಗಾಗಿ ನಡೆಸಿದ ಪರೀಕ್ಷೆಯಲ್ಲೂ ಆಯ್ಕೆಯಾದರು.

ಬಾಗಲಕೋಟೆ ಕೃಷಿವಿಶ್ವವಿದ್ಯಾಲಯ[ಬದಲಾಯಿಸಿ]

ಇವರ ತೋಟಕ್ಕೆ ಭೇಟಿನೀಡಿದ ಬಾಗಲಕೋಟೆ ಕೃಷಿವಿಶ್ವವಿದ್ಯಾಲಯದ ತಜ್ಞರು ಅವರ ಕೆಲಸವನ್ನು ಮೆಚ್ಚಿ ೫ ಗಿಡಗಳ ಮಾದರಿಯನ್ನು ಡಿ.ಎನ್.ಎ ಪರೀಕ್ಷೆಗೆ ಕೊಂಡೊಯ್ದಿದ್ದಾರೆ. ಈ ಮೌಲಿಕ ಕೆಲಸ ತೆಂಗು ಬೆಳೆಯಲ್ಲಿ ಮತ್ತಷ್ಟು ಸಂಶೋಧನೆಗೆ ಎಡೆಮಾಡಿಕೊಟ್ಟಿದೆ.

'ಕೆಂದಾಳಿ ಎಳನೀರಿನ ವೈಶಿಷ್ಟ್ಯತೆ'[ಬದಲಾಯಿಸಿ]

ಮನೆಯ ಮದ್ದಾಗಿ ಉಪಯೋಗದಲ್ಲಿರುವ ಈ ತಳಿಯಲ್ಲಿ 'ಔಷಧೀಯ ಮಹತ್ವವುಳ್ಳ ಖನಿಜಾಂಶ'ಗಳು ಹೇರಳವಾಗಿ ಉಪಲಭ್ದವಿವೆ. ಆದ್ದರಿಂದ ಇದನ್ನು ಕೆಳಗೆ ಕಂಡ ವ್ಯಾಧಿಗಳನ್ನು ಗುಣಪಡಿಸಲು ಬಳಸುತ್ತಾರೆ.

  • ಸರ್ಪ ಸುತ್ತು,
  • ಚಿಕನ್ ಪಾಕ್ಸ್,
  • ಚರ್ಮವ್ಯಾಧಿ,
  • ಹೆಂಗಸರ ಮುಟ್ಟು ಸಮಸ್ಯೆ,
  • ಮಕ್ಕಳಾಗದಿರುವಿಕೆ,
  • ನರದೌರ್ಬಲ್ಯ,

ಮೊದಲಾದ ಕಾಯಿಲೆಗಳಿಗೆ ಉಪಯೋಗಕಾರಿಯಾಗಿದೆ.'ಧಾರ್ಮಿಕ ಕಾರ್ಯ'ಗಳಿಗೂ ಇದು ಹೆಚ್ಚು ಉಪಯೋಗಕಾರಿಯೆಂದು ಸಾಬೀತಾಗಿದೆ.

ಮನ್ನಣೆ,ಪ್ರಶಸ್ತಿಗಳು[ಬದಲಾಯಿಸಿ]

  • ಕೃಷಿ ವಲಯದಲ್ಲಿ, ಅದರಲ್ಲೂ ತೆಂಗಿನ ಫಸಲಿನ ಉನ್ನತಿಯ ಬಗ್ಗೆ ಹೆಚ್ಚು ಹೆಚ್ಚು ಕಾರ್ಯಮಾಡಿ, ಅದರಲ್ಲೇ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡ, ಕೆ.ಚಂದ್ರಶೇಖರ ಗಟ್ಟಿಯವರಿಗೆ 'ರಾಷ್ಟ್ರೀಯ ಮನ್ನಣೆಯ ಪುರಸ್ಕಾರ' ದೊರೆತಿದೆ.