ಕೆ. ಎಸ್. ಪೂರ್ಣಿಮಾ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
'ಹೆಗ್ಗೋಡಿನ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕಿ'ಯಾಗಿ, 'ಸಾಗರದ ಲಾಲ್ ಬಹದೂರ್ ಕಾಲೇಜಿನ ಇಂಗ್ಲೀಷ್ ಪ್ರೊಫೆಸರ್ 'ಆಗಿ ,'ಜರ್ಮನ್ ರಂಗ ನಿರ್ದೇಶಕ ಫ್ರಿಟ್ಸ್ ಬೆನಟ್ಟ್ ರ ಸಹಾಯಕಿ'ಯಾಗಿ, ಕೆಲಸ ಮಾಡಿದ, ಕೆ. ಎಸ್. ಪೂರ್ಣಿಮಾ, ಬಹುಮುಖ ಪ್ರತಿಭೆಯ ಉತ್ಸಾಹಿ ಮಹಿಳೆ. ಬೋಧನೆ, ರಂಗ ನಿರ್ದೇಶನ ,ಕಾವ್ಯ ರಚನೆ, ವಿಮರ್ಶೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ರಂಗಕೃಷಿಮಾಡಿದವರು.
ಪರಿವಾರ
[ಬದಲಾಯಿಸಿ]ಪತಿ. ಟಿಪಿ ಅಶೋಕ್. ಮಗ ಸಾರಂಗ .
ವ್ಯಕ್ತಿತ್ವ
[ಬದಲಾಯಿಸಿ]ಪೂರ್ಣಿಮಾರವರ ಕಣ್ಣುಗಳಲ್ಲಿ ಅಪಾರ ಕಾಂತಿ ಇರುತ್ತಿತ್ತು. ನಗೆ ಮರೆಯದ ಮುಖ. ಹೊಂಬಣ್ಣ ಎತ್ತರದ ವ್ಯಕ್ತಿತ್ವ. ಒಳ್ಳೆಯ ಮೈಕಟ್ಟು ,ಆರೋಗ್ಯವಂತ ಕಳೆಯ ಚೆಲುವೆಯಾಗಿದ್ದರು. ಆಂತರ್ಯದಲ್ಲೂ ಹೊರಗಡೆಯೂ ಅವರು ಪರಿಣಾಮಕಾರಿಯಾದ ಬೆಳದಿಂಗಳ ವ್ಯಕ್ತಿತ್ವವನ್ನು ಹೊಂದಿದ್ದರು. ಜನರ ಭೇಟಿ, ಸ್ನೇಹ, ತಿರುಗಾಟ, ಅವರಿಗೆ ಬಲುಪ್ರಿಯ. ಗೃಹವನ್ನು ಸಜ್ಜು ಗೊಳಿಸುವಿಕೆ, ಊಟ-ತಿಂಡಿ-ಉಪಚಾರಗಳು, ಮತ್ತು ತೋಟಗಾರಿಕೆಗಳಲ್ಲಿ ಅಪಾರ ಆಸಕ್ತಿ. ಒಳ್ಳೆಯ ಕವಯಿತ್ರಿ, ಸೊಗಸುಗಾತಿ, ಕನಸುಗಾತಿ, ಸಾಹಿತ್ಯ-ಸಂಗೀತ ಪ್ರಿಯೆ ವಿದ್ಯಾರ್ಥಿಗಳೊಂದಿಗೆ ಅಪೂರ್ವ ಸಖ್ಯ ಸಾಧಿಸಿದ ಪ್ರಾಧ್ಯಾಪಕಿ. ಸ್ವತಃ ಬರೆಯಲು ಇಷ್ಟಪಟ್ಟರೂ, ಹೆಚ್ಚು ಬರೆಯದೆ ಬರೆಸುವಿಕೆಯಲ್ಲಿ ತೃಪ್ತಿ ಹೊಂದಿದ ಉಪನ್ಯಾಸಕಿ. ಯಾರನ್ನೂ ಖಂಡಿಸುವುದು, ಅವಹೇಳನಮಾಡುವುದು ಅವರಿಗೆ ಒಗ್ಗದು. ಬದಲಾಗಿ ವಿಶ್ಲೇಷಣೆಯ ಸ್ವಭಾವದವರು.
ನಿಧನ
[ಬದಲಾಯಿಸಿ]ಸ್ವಲ್ಪಕಾಲ ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದ ಕೆ.ಎಸ್.ಪೂರ್ಣಿಮಾರವರು, ಸನ್. ೨೦೧೨ ರ ಜುಲೈ ೨೪ ರಂದು ನಿಧನರಾದರು.