ಕೆ. ಎಮ್. ಕರಿಯಪ್ಪ

ವಿಕಿಪೀಡಿಯ ಇಂದ
Jump to navigation Jump to search

ಫೀಲ್ಡ್ ಮಾರ್ಶಲ್ ಕೊಡವ ಕನ್ನಡ: "ಕೊಂಡದೆರ ಮಾದಪ್ಪ ಕರಿಯಪ್ಪ" (೨೮ ಜನವರಿ ೧೮೯೯ - ೧೫ ಮೇ ೧೯೯೩)

ಇವರು ಭಾರತದ ಸೇನೆಯ ಪ್ರಧಾನ ವ್ಯಕ್ತಿ ಆಗಿದ್ದರು. ಫೀಲ್ಡ್ ಮಾರ್ಶಲ್ ಸ್ಥಾನ ಪಡೆದವರಲ್ಲಿ ಇವರು ಒಬ್ಬರಾಗಿದ್ದರು, ಮೊದಲನೆಯವರು ಫೀಲ್ಡ್ ಮಾರ್ಶಲ್ ಸ್ಯಾಮ್ ಮನಕೇಶವ. ೧೯೪೯ ರಲ್ಲಿ ಭಾರತದ ಸೇನಗೆ ಮೊದಲನೆಯದಾಗಿ ಇವರು ಕಮಂಡರ್-ಇನ್-ಚೀಫ್ ಆಗಿ ಆಯ್ಕೆಯಾದರು.

ಜೀವನ ಮತ್ತು ವಿದ್ಯಾಭ್ಯಾಸ

ಕರಿಯಪ್ಪ ಅವರ ಜನನ ಬ್ರಿಟಿಷರ ಕಾಲದಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ನಡೆಯಿತು. ಅವರ ವಿಧ್ಯಾಭ್ಯಾಸ ಕೊಡಗಿನ ಸೆಂಟ್ರಲ್ ಸ್ಕೂಲ್ ನಲ್ಲಿ, ನಂತರ ಚೆನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆಯಿತು. ಅಲ್ಲಿ ಅವರು ಹೆಚ್ಚಿನ ಉತ್ಸಹ ಪುಸ್ತಕ ಮತ್ತು ಆಟದಲ್ಲಿತ್ತು ಆಗೂ ಅವರು ಉತ್ತಮ ಹಾಕಿ ಮತ್ತು ಟೆನ್ನಿಸ್ ಆಟಗಾರರು ಆಗಿದ್ದರು ಹಾಗು ಸಂಗೀತದಲ್ಲಿ ಆಸಕ್ತಿ ಇತ್ತು.

ಮಿಲಿಟರಿ ಅನುಭವ ೧೯೧೮ರ ವಿಶ್ವ ಯುದ್ದದ ನಂತರ ಭಾರತದಲ್ಲಿ ಸೇನೆಯ ಭರ್ತಿಗಾಗಿ ಕರೆ ನೀಡಲಾಯಿತು ಆಗ ಕೆಲವರಲ್ಲಿ ಕರಿಯಪ್ಪನವರು ಕೊಡ ಭರ್ತಿಯಾದರು. ಕಿಂಗ್ಸ್ ಕಮಿಷನ್ಡ್ ಇಂಡಿಯನ್ ಆಫೀಸರ್ ಆಗಿ ಆಯ್ಕೆಯಾದರು. ಕರಿಯಪ್ಪ ಅವರು ೧೯೪೧-೧೯೪೨ರಲ್ಲಿ ಇರಾಕ್,ಸೈರಿಯ,ಇರಾನ್ ನಲ್ಲಿ ಮತ್ತು ೧೯೪೩-೧೯೪೪ರಲ್ಲಿ ಮಾಯನ್ಮರ್ ನಲ್ಲಿ ಹಾಗೂ ಸೇನೆಯ ಅಧಿಕ ಸೇವೆ ವಝಿರಿಸ್ಥಾನ್ ನಲ್ಲಿ ಮಾಡಿದರು.