ಕೆರೆ ತೊಣ್ಣೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೊಂಡನೂರು -ಕೆರೆ ತೋಣ್ಣೂರು ಎಂದೇ ಪ್ರಸಿದ್ದಿಯಾಗಿದೆ . ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ ಮೇಲುಕೋಟೆ (ತಿರುನಾರಯಣಪುರ)ದ ಸಮೀಪವಿದೆ, ಈ ಕಣ್ ಮನ ಸೂರೆಗೊಳ್ಳುವ ಒಂದು ಐತಿಹಾಸಿಕ ಪ್ರವಾಸಿ ತಾಣ ೧೧ ನೆ ಶತಮಾನದಲ್ಲಿ ತಮಿಳು ನಾಡಿನ ಕ್ರಿಮಿಕಾಂತ ನೆಂಬ ಕ್ರೂರ ರಾಜ ಅದ್ವೈತ ಪ್ರಚಾರಕರಿಗೆ ತೊಂದರೆ ಕೊಡುತ್ತಿದ್ದ , ಅದನ್ನು ಕಂಡು ಮನನೊಂದ ರಾಮಾನುಜಾಚಾರ್ಯರು, ತೊಂಡನೂರಿನ ಇನ್ನೊಬ್ಬ ಆಚಾರ್ಯರ ಕೋರಿಕೆಯ ಮೇರೆಗೆ ಇಲ್ಲಿಗೆ ಬಂದು ನೆಲಸಿದರು ಎನ್ನಲಾಗಿದೆ. ಆ ಪ್ರಾಂತ್ಯವನ್ನು ಆಳುತ್ತಿದ್ದ ಬಿಟ್ಟಿರಾಜನ ಮಗಳಿಗೆ ವಿಚಿತ್ರ ಖಾಯಿಲೆಯೊಂದು ಭಾದಿಸುತ್ತಿತ್ತು , ಬಿಟ್ಟಿರಾಜನು ಎಲ್ಲಾ ವೈದ್ಯರಿಗೆ ಹಾಗು ಜೈನ ಪಂಡಿತರಬಳಿ ಹೋಗಿ ತನ್ನ ಮಗಳ ಖಾಯಿಲೆವಾಸಿ ಮಾಡುವಂತೆ ಬೇಡುತ್ತಿದ್ದ , ಆ ವೇಳೆಗೆ ರಾಮಾನುಜಾಚಾರ್ಯರ ಪವಾಡಗಳ ಬಗ್ಗೆ ಕೆಲವರು ಆಡುತ್ತಿದ ಮಾತುಗಳನ್ನು ಆಲಿಸಿದ ರಾಜನು ತನ್ನ ಮಗಳನ್ನು ಕರೆದುಕೊಂಡು ರಾಮಾನುಜಾಚಾರ್ಯರ ಬಳಿ ಬಂದು ತನ್ನ ಕಷ್ಟ ಹೇಳಿಕೊಂಡ. ಆಗ ಯತಿಗಳು ಒಮ್ಮೆ ರಾಜನ ಮಗಳ ಕಡೆ ನಗುತ್ತಾ ನೋಡಿದರು. ಕ್ಷಣರ್ದದಲ್ಲೇ ಆಕೆಯನ್ನು ಭಾದಿಸುತ್ತಿದ್ದ ರೋಗ ಮಂಗಮಾಯವಾಗಿತು. ಬಿಟ್ಟಿರಾಜನು ಇದರಿಂದ ಬಹಳ ಸಂತೋಷಗೊಂಡು ಅಂದಿನಿಂದ ರಾಮಾನುಜಾಚಾರ್ಯರ ಭಕ್ತನಾದ ವೈಷ್ಣವ ಧರ್ಮದ ಪ್ರಚಾರಕನಾದ ಹಾಗು ವಿಷ್ಣುವರ್ಧನನೆಂದು ಪ್ರಸಿದ್ದಿಯಾದ.ನಂತರದ ದಿನಗಳಲ್ಲಿ ಆಚಾರ್ಯರು ತಿರುನಾರಾಯಣ (ಮೇಲುಕೋಟೆ ),ನಂಬಿ ನಾರಾಯಣ( ತೊಂಡನೂರು),ಕೀರ್ತಿನಾರಾಯಣ (ತಲಕಾಡು) ವಿಜಯ ನಾರಾಯಣ (ಬೇಲೂರು) ವೀರ ನಾರಾಯಣ (ಗದಗ) ಇಲ್ಲಿ ಪಂಚ ನಾರಾಯಣರನ್ನು ಪ್ರತಿಸ್ಥಾಪಿಸಿದರು ಎನ್ನ ಲಾಗಿದೆ. ಒಮ್ಮೆ ರಾಮಾನುಜಾಚಾರ್ಯರು ದೇವರ ಪೂಜೆ ಮಾಡುತ್ತಿದ್ದ ಸಮಯದಲ್ಲಿ ಸಾವಿರ ಜನ ಜೈನಪಂಡಿತರು ಆಗಮಿಸಿದರು , ಆಸಮಯದಲ್ಲಿ ಆಚಾರ್ಯರು ಪೂಜೆಮಾಡುತ್ತಿದ್ದ ಮಂದಿರದ ಬಳಿ ಒಂದು ಬಿಳಿ ವಸ್ತ್ರವನ್ನು ಅಡ್ಡವಾಗಿ ಬಿಡಲಾಗಿತ್ತು, ಆಚಾರ್ಯರನ್ನು ಅವಮಾನ ಮಾಡಲೆಂದು ಬಂದಿದ್ದ ಸಾವಿರ ಮಂದಿ ಒಟ್ಟಿಗೆ ಪ್ರಶ್ನೆಗಳ ಸುರಿಮಳೆ ಆರಂಭಿಸಿದರು. ಆಗ ಆ ಬಿಳಿವಸ್ಥ್ರದ ಹಿಂಬದಿಯಿಂದ ಸಾವಿರಜನಕೇಳುತ್ತಿದ್ದ ಪ್ರಶ್ನೆಗಳಿಗೆ ಏಕಕಾಲಕ್ಕೆ ಉತ್ತರ ಬರುತ್ತಿತ್ತು, ಆಶ್ಚರ್ಯದಿಂದ ಆ ಬಿಳಿ ವಸ್ತ್ರ ಸರಿಸಿ ನೋಡಲಾಗಿ ಸಾವಿರ ಹೆಡೆಯ ಆದಿಶೇಷ ಉತ್ತರ ನೀಡುತ್ತಿದ್ದ.ಆ ಸಾವಿರ ಮಂದಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ಅಂದಿನಿಂದ ಅವರ ಭಕ್ತರಾದರು ಯೆನ್ನಲಾಗುತ್ತೆ ..ಇಲ್ಲಿ ಮಂತ್ರಧoಡ ಸಹಿತನಾಗಿ ಯೋಗಾನರಸಿಂಹ , ಯಾದವನಾಯಕಿ , ಪ್ರಹ್ಲಾದರ ಮೂರ್ತಿಯಿದೆ, ಬರುವ ಭಕ್ತರತಲೆಯಮೇಲೆ ಈ ಮಂತ್ರಧoಡವನ್ನು ಇರಿಸಲಾಗುತ್ತೆ ಇದರಿಂದ ದುಷ್ಟ ಶಕ್ತಿಗಳ ಕಾಟ, ಶಂಕೆ ದೂರವಾಗುತ್ತೆ ಅನ್ನುತಾರೆ.