ಕೆಂಪುತಾವರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆಂಪು ತಾವರೆ ಎಂದು ಕರೆಯುವ ಹೂವು ಇದಾದರು ಇದಕ್ಕೆ ಈ ಹೆಸರಲ್ಲದೆ ನೀಲಿ ಕಮಲ, ಕೆಂಪು ಕಮಲ, ನೀಲಿ ನಕ್ಷತ್ರ ಎಂದು ಹೆಸರಿನಿಂದ ಕರೆಯುತ್ತಾದೆ. ಮಧ್ಯಮ ಆಳದ ಸ್ಥಿರ ಅಥವಾ ನಿಧಾನವಾಗಿ ಹರಿಯುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇದನ್ನು ಭಾರತೀಯ ಆಯುರ್ವೇದ ಔಷಧದಲ್ಲಿ ಅಮೃತ ಹೆಸರಿನಲ್ಲಿ ಔಷಧಿ ಸಸ್ಯವೆಂದು ಪರಿಗಣಿಸಲಾಗಿದೆ' ಇದು ಮಾಜಿ ನಿಷ್ಕ್ರಿಯಗೊಂಡ ಹೈದರಾಬಾದ್ ರಾಜ್ಯದರಾಷ್ಟ್ರೀಯ ಪುಷ್ಪವಾಗಿತ್ತು. ನೀಲಿ ಬಣ್ಣದ ಹೂವುಳ್ಳ ಓ. ನೌಚಲಿ ಎಂಬುದು ಶ್ರೀಲಂಕಾದ ರಾಷ್ಟ್ರೀಯ ಹೂವಾಗಿತ್ತು. ಅಲ್ಲಿ ಇದನ್ನು ನೀಲ್ ಮಾನೆಲ್ ಅಥವಾ ನೀಲ್ ಮಹೇನೆಲ್ ಎಂದು ಕರೆಯಲಾಗುತ್ತಿದ್ದರು.

ಹಂಚಿಕೆ ಮತ್ತು ವಾಸಸಸ್ಥಾನ[ಬದಲಾಯಿಸಿ]

ಏಷ್ಯಾದ ದಕ್ಷಿಣ ಮತ್ತು ಪೂರ್ವ ಭಾಗಗಳಿಗೆ ಸ್ಥಳೀಯ ಮತ್ತು ಶ್ರೀಲಂಕಾ ಮತ್ತು ಬಾಂಗ್ಲಾದೇಶದ ರಾಷ್ಟ್ರೀಯ ಹೂವು ಇದಾಗಿದೆ. ವಿಶೇಷವಾಗಿ ಈ ಜಲ ಸಸ್ಯವು ಅಫ್ಘಾನಿಸ್ತಾನದಿಂದ , ಭಾರತೀಯ ಉಪಖಂಡದ ತನಕ, ತೈವಾನ್ , ಆಗ್ನೇಯ ಏಷ್ಯಾ, ಮತ್ತು ಆಸ್ಟ್ರೇಲಿಯಾದಿಂದ ವಿಶಾಲವಾದ ಪ್ರದೇಶದಲ್ಲಿ ಕಂಡುಬರುತ್ತದೆ.

ಹಿನ್ನಲೆ[ಬದಲಾಯಿಸಿ]

ಶ್ರೀಲಂಕಾದಲ್ಲಿ ಈ ಸಸ್ಯವನ್ನು ಸಾಮಾನ್ಯವಾಗಿ ಎಮ್ಮೆ ಕೊಳಗಳಲ್ಲಿ ಮತ್ತು ನೈಸರ್ಗಿಕ ಪ್ರದೇಶಗಳಲ್ಲಿ ಬೆಳೆಯುತ್ತಿದ್ದರು. ಈ ಹೂಗಳ ಕುರಿತು ಸಂಸ್ಕೃತ, ಪಾಲಿ, ಮತ್ತು ಸಿಂಹಳ ಸಾಹಿತ್ಯ ಕೃತಿಗಳಲ್ಲಿ ಮಾಹಿ ಇದ್ದು, ಪುರಾತನ ಕಾಲದಿಂದಲೂ ಕುವಾಲಯ, ಇಂಧಿವಾರಾ, ನಿಲುಪ್ಪಾಲಾ, ನಿಲೋತ್ಪಾಲಾ, ಮತ್ತು ನೀಲುಪುಲ್ ಎಂಬ ಹೆಸರಿನ ಸದ್ಗುಣ ಶಿಸ್ತು, ಮತ್ತು ಪರಿಶುದ್ಧತೆಯ ಸಂಕೇತವೆಂದು ಉಲ್ಲೇಖಿಸಲಾಗಿದೆ, ಈ ಸುಂದರ ಜಲ ಹೂವು . ಶ್ರೀಲಂಕಾದಲ್ಲಿನ ಬೌದ್ಧ ಧರ್ಮದಪಂಥವು ರಾಜಕುಮಾರ ಸಿದ್ಧಾರ್ಥ ಅವರ ಹೆಜ್ಜೆಗುರುತನ್ನು ಕಂಡುಕೊಂಡ 108 ಮಂಗಳಕರ ಚಿಹ್ನೆಗಳಲ್ಲಿ ಒಂದಾಗಿದೆ ಎಂದು ಹೇಳುತ್ತದೆ ಇದರ ಬೇರುಗಳು ಮತ್ತು ಕಾಂಡಗಳು ನೀರಿನಲ್ಲಿ ಸದಾ ಮುಳುಗಿರುತ್ತದೆ, ಆದರು ದಿನ-ಹೂಬಿಡುವ ಸಸ್ಯ ಇದಾಗಿದೆ. ನೀರಿಗಿಂತ ಸ್ವಲ್ಪ ಮೇಲಕ್ಕೆ ಏರುವ ಹೂವು ಇದಾಗಿದ್ದು . ಎಲೆಗಳ ಸುತ್ತಿನ ಹಸಿರು ಬಣ್ಣದಲ್ಲಿರುತ್ತವೆ. ಅವು ಸಾಮಾನ್ಯವಾಗಿ ಗಾಢವಾದ ಕೆಳಭಾಗವನ್ನು ಹೊಂದಿರುತ್ತವೆ. ತೇಲುವ ಎಲೆಗಳು ತಂತಿಗಳಂತೆ ಕಾಣಿಸುವ ಅಂಚುಗಳನ್ನು ಹೊಂದಿರುತ್ತವೆ. ಅವುಗಳ ಗಾತ್ರವು ಸುಮಾರು 20-23 ಸೆಂ.ಮೀ ಮತ್ತು ಅದರ ಹರಡುವಿಕೆ 0.9 ರಿಂದ 1.8 ಮೀ ಇರುತ್ತದೆ, ಇದು ಸಾಮಾನ್ಯವಾಗಿ ಕೆಂಪು ನೇರಳೆ ಅಂಚುಗಳೊಂದಿಗೆ ನೇರಳೆ ನೀಲಿ ಬಣ್ಣದಲ್ಲಿರುತ್ತದೆ. ಕೆಲವು ಪ್ರಭೇದಗಳು ಬಿಳಿ, ಕೆನ್ನೇರಳೆ,ಅಥವಾ ಫ್ಯೂಷಿಯ ಬಣ್ಣದ ಹೂವುಗಳನ್ನು ಹೊಂದಿರುತ್ತವೆ, ಆದ್ದರಿಂದ ಅದರ ಹೆಸರು ಕೆಂಪು ಮತ್ತು ನೀಲಿ ನೀರು ಹೂವು ಆಗಿದೆ. ಅದು ಕೋನೀಯ ನೋಟವನ್ನು ಹೊಂದಿರುತ್ತದೆ, ಆದ್ದರಿಂದ ಹೂವಿನ ನೋಟವು ನಕ್ಷತ್ರದ ಆಕಾರದಲ್ಲಿದೆ.


ಉಪಯೊಗಗಳು[ಬದಲಾಯಿಸಿ]

  1. ಉದ್ಯಾನಗಳನ್ನು ಅಲಂಕರಿಸಲು ಈ ಹೂವನ್ನು ದೀರ್ಘಕಾಲ ಬಳಸಲಾಗುತ್ತದೆ.
  2. ಶ್ರೀಲಂಕಾದಲ್ಲಿ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಉತ್ಸವಗಳಿಗೆ ಸಾಮಾನ್ಯವಾಗಿ ಇದನ್ನು ಬಳಸುತ್ತಾರೆ.
  3. ಕಮಲದಂತೆ ಕಾಣುವ ಹೂವು ಇದಾಗಿದ್ದು ಇದರ ಗೆಡ್ಡೆಗಳು ಮತ್ತು ಧಾನ್ಯಗಳು ಆಹಾರ ಪದಾರ್ಥಗಳಾಗಿ ಬಳಸಬಹುದು.
  4. ಸಾಮಾನ್ಯವಾಗಿ ಬೇಯಿಸಿದ ಅಥವಾ ಹುರಿದ ತಿನ್ನಲಾಗುತ್ತದೆ, ಅದರ ಕೋಮಲ ಎಲೆಗಳು ಮತ್ತು ಹೂವನ್ನು ಕೂಡ ಆಹಾರವೆಂದು ಪರಿಗಣಿಸಲ್ಪಟ್ಟಿದೆ.
  5. ಸಸ್ಯವನ್ನು ಕೊಳಗಳು, ಟ್ಯಾಂಕುಗಳಲ್ಲಿ ಸಂಗ್ರಹಿಸಲಾಗುತ್ತದೆ, ಮತ್ತು ಭಾರತದ ಪ್ರಾಣಿಗಳ ಮೇವು ಎಂದು ಬಳಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

https://www.flowersofindia.net/catalog/slides/Pink%20Water%20Lily.html https://indiabiodiversity.org/species/show/230504 http://www.efloras.org/florataxon.aspx?flora_id=5&taxon_id=242334156 https://indiabiodiversity.org/species/show/230504