ವಿಷಯಕ್ಕೆ ಹೋಗು

ಕೂರ್ಗ್ ರಾಜ್ಯ

ನಿರ್ದೇಶಾಂಕಗಳು: 12°25′15″N 75°44′23″E / 12.4208°N 75.7397°E / 12.4208; 75.7397
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕೂರ್ಗ್ ರಾಜ್ಯ
(ಹಿಂದೆ ಕೂರ್ಗ್ ಪ್ರಾಂತ್ಯ)
ಭಾರತದ ರಾಜ್ಯ

1950–1956
Location of Kodagu Rajya
Location of Kodagu Rajya
Location of Coorg in India
Capital ಮರ್ಕರಾ (ಮಡಿಕೇರಿ))
Chief Minister
 •  6 years C. M. ಪೂನಚಾ
History
 •  ಕೂರ್ಗ್ ಪ್ರಾಂತ್ಯದಿಂದ ಕೂಗರ್ ರಾಜ್ಯವು ರೂಪುಗೊಂಡಿತು 26 January 1950
 •  ಮೈಸೂರು ರಾಜ್ಯಕ್ಕೆ ವಿಲೀನಗೊಂಡಿದೆ 1 November 1956
States of India since 1947

ಭಾರತ ಒಕ್ಕೂಟದಲ್ಲಿ 1950 ರಿಂದ 1956 ರವರೆಗೂ ಅಸ್ತಿತ್ವದಲ್ಲಿದ್ದ ಕೂರ್ಗ್ (ಕೊಡಗು) ರಾಜ್ಯವು ಪಾರ್ಟ್ -ಸಿ ರಾಜ್ಯವಾಗಿತ್ತು.1950 ರ ಜನವರಿ 26 ರಂದು ಭಾರತದ ಸಂವಿಧಾನವು ಜಾರಿಗೆ ಬಂದಾಗ, ಅಸ್ತಿತ್ವದಲ್ಲಿರುವ ಬಹುತೇಕ ಪ್ರಾಂತ್ಯಗಳು ರಾಜ್ಯಗಳಾಗಿ ಪುನರ್ನಿರ್ಮಿಸಲ್ಪಟ್ಟವು.ಹೀಗಾಗಿ, ಕೂರ್ಗ್ ಪ್ರಾಂತ್ಯವು ಕೂರ್ಗ್ ರಾಜ್ಯವಾಯಿತು. ಕೂರ್ಗ್ ರಾಜ್ಯವನ್ನು ಮುಖ್ಯ ಕಮಿಷನರ್ ಆಳಿದರು ಇದರ ರಾಜಧಾನಿ ಮರ್ಕರಾವಾಗಿತ್ತು. ಸರ್ಕಾರದ ಮುಖ್ಯಸ್ಥರು ಮುಖ್ಯಮಂತ್ರಿಯಾಗಿದ್ದರು.1956 ರ ನವೆಂಬರ್ 1 ರಂದು ರಾಜ್ಯ ಮರುಸಂಘಟನೆ ಕಾಯಿದೆ ಪ್ರಕಾರ ಕೂರ್ಗ್ ರಾಜ್ಯವನ್ನು ರದ್ದುಪಡಿಸಲಾಯಿತು ಮತ್ತು ಅದರ ಪ್ರದೇಶವನ್ನು ಮೈಸೂರು ರಾಜ್ಯದೊಂದಿಗೆ ವಿಲೀನಗೊಳಿಸಲಾಯಿತು (ನಂತರ 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು). ಪ್ರಸ್ತುತ, ಕೊಡಗು ಕರ್ನಾಟಕ ರಾಜ್ಯದ ಜಿಲ್ಲೆಯಾಗಿದೆ.[]

ಇತಿಹಾಸ

[ಬದಲಾಯಿಸಿ]
Map of Southern India before the States Reorganisation Act of 1956 with Coorg State in dark green

ಭಾರತದ ಸಂವಿಧಾನದ ಪ್ರಕಾರ 26 ಜನವರಿ 1950 ರಂದು ಕೂರ್ಗ್ ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಸಂವಿಧಾನದ ಜಾರಿಗೆ ಮುಂಚಿತವಾಗಿ, ಕೂರ್ಗ್ ಭಾರತದ ಡೊಮಿನಿಯನ್ ಪ್ರಾಂತ್ಯವಾಗಿತ್ತು. ಕೂರ್ಗ್ ಅಲ್ಲಿ ಮೊದಲ ಶಾಸಕಾಂಗ ಚುನಾವಣೆಯನ್ನು 1952 ರಲ್ಲಿ ನಡೆಸಲಾಯಿತು. ಸಿ.ಎಂ. ಪೂನಚಾ ಮತ್ತು ಗಾಂಧಿಯನ್ ಪಾಂಡ್ಯಂದ ಬೆಲ್ಲಿಯಪ್ಪ ನೇತೃತ್ವದ ತಕ್ಕಾದಿ ಪಕ್ಷ ಮುಖ್ಯವಾಗಿ ಸ್ಪರ್ಧಿಸಿದವು . ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ತಕ್ಕದಡಿ ಪಕ್ಷವು ಉಳಿದ ಒಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿತು.

ಕೂರ್ಗ್ ರಾಜ್ಯ ಆಯುಕ್ತರು

[ಬದಲಾಯಿಸಿ]
  • ದಿವಾನ್ ಬಹದ್ದೂರ್ ಕೆಟೋಲಿರಾ ಚೆಂಗಪ್ಪ ಅವರು 1947-1949ರ ಮೊದಲ ಮುಖ್ಯ ಆಯುಕ್ತರಾಗಿದ್ದರು
  • ಸಿ.ಟಿ. ಮುದಲಿಯಾರ್ 1949 ರಿಂದ 1950 ರವರೆಗೆ ಮುಖ್ಯ ಆಯುಕ್ತರಾಗಿದ್ದರು
  • ಕನ್ವಾರ್ ಬಾಬಾ ದಯಾ ಸಿಂಗ್ ಬೇಡಿ, 1950 ರಿಂದ 1956 ರ ಮುಖ್ಯ ಕಮಿಷನರ್

ಮುಖ್ಯಮಂತ್ರಿ

[ಬದಲಾಯಿಸಿ]

ಚೆಪುಡಿರ ಮುತ್ತಣ್ಣ ಪೂಣಚ್ಚ1950 ರಿಂದ 1956 ರವರೆಗೂ ಕೂರ್ಗ್ ರಾಜ್ಯದ ಮೊದಲ ಮತ್ತು ಕೊನೆಯ ಮುಖ್ಯಮಂತ್ರಿಯಾಗಿದ್ದರು. 1 ನವೆಂಬರ್ 1956 ರ ರಾಜ್ಯ ಮರುಸಂಘಟನೆ ಕಾಯಿದೆಯ ಪರಿಣಾಮವಾಗಿ, ಭಾರತದ ರಾಜ್ಯ ಗಡಿಗಳನ್ನು ಮರುಸಂಘಟಿಸಿದಾಗ, ಕೂರ್ಗ್ ರಾಜ್ಯವು ಮೈಸೂರು ರಾಜ್ಯದ ಜಿಲ್ಲೆಗಳಲ್ಲೊಂದಾಯಿತು.ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಕೊಡಗಿನ ಐತಿಹಾಸಿಕ ಪ್ರದೇಶದ ಭಾಗವಾಗಿ ಈಗ ಕರ್ನಾಟಕದ ಕೊಡಗು ಜಿಲ್ಲೆಯನ್ನು ರೂಪಿಸಿದೆ.[][][][]

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Coorg State : Chief Commissioners
  2. Development of Mysore state, 1940-56 by M. B. Gayathri
  3. Karnataka government and politics By Harish Ramaswamy, S. S. Patagundi, Shankaragouda Hanamantagouda Patil
  4. Muthanna, I M. Coorg Memoirs (The story of the Kodavas).


ಬಾಹ್ಯ ಕೊಂಡಿಗಳು

[ಬದಲಾಯಿಸಿ]