ಕುಲಾಂತರಿ ಬದನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
BT Brinjal Protest Bangalore India Go Home Monsanto

ಸಸ್ಯಶಾಸ್ತ್ರ ಹಾಗು ಜೈವಿಕ ತಂತ್ರಜ್ಞಾನದ ಹೊಸ ಆವಿಷ್ಕಾರ ಕುಲಾಂತರಿ ಬದನೆ. ಬದನೆಕಾಯಿಯ ಅನೇಕ ತಳಿಗಳ ವಂಶವಾಹಿಗಳ ಬದಲಾವಣೆಯ ಮುಖಾಂತರ ಈ ಕುಲಾಂತರಿಯನ್ನು ಸೃಷ್ಠಿಸಲಾಗುತ್ತದೆ. ಕುಲಾಂತರಿ ಬದನೆಯನ್ನು ಮಣ್ಣಿನಲ್ಲಿರುವ Bacillus thurinjensis ಎಂಬ ಸೂಕ್ಷ್ಮಾಣು ಜೀವಿಯ ವಂಶವಾಹಿಯನ್ನು ಬದನೆಯ ಕೋಶದೊಳಗೆ ಸೇರಿಸುವುದರ ಮೂಲಕ ಸೃಷ್ಠಿಸಲಾಗುತ್ತದೆ. ಕುಲಾಂತರಿ ಬದನೆಯನ್ನು ಮುಖ್ಯವಾಗಿ Lepidopteron ಎಂಬ ಕೀಟದ ವಿರುದ್ಧ ನಿರೋಧಕ ಶಕ್ತಿಯನ್ನು ನೀಡುವ ಕಾರಣಕ್ಕಾಗಿ ಸೃಷ್ಠಿಸಲಾಯಿತು. ಜಲ್ನಾ ಹಾಗು ಮಹಾರಾಷ್ಟ್ರದಲ್ಲಿರುವ ಭಾರತೀಯ ಮಹೈಕೋ ಬೀಜ ಉತ್ಪಾದನಾ ಸಂಸ್ಥೆ ಕುಲಾಂತರಿ ಬದನೆಯನ್ನು ರೂಪಿಸಿತು. ಈ ಯೋಜನೆಗೆ EE 1 ಎಂದು ಹೆಸರಿಸಲಾಯಿತು. ಮಹೈಕಾ ಸಂಸ್ಥೆ ಎರಡು ಮಿಶ್ರತಳಿಗಳ (ಸಂಕರಜಾತೀಯ) ಸೃಷ್ಠಿಗಾಗಿ ಅರ್ಜಿ ಸಲ್ಲಿಸಿತ್ತು. ಈ EE 1 ಯೋಜನೆಯನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ ತಮಿಳುನಾಡು ಹಾಗೂ ಕೊಯಂಬತ್ತೂರ್ ವಿಶ್ವವಿದ್ಯಾಲಯಗಳು ಅಳವಡಿಸಿಕೊಂಡು ವಿವಿಧ ತಳಿಗಳ ಸಸ್ಯಗಳನ್ನು ಬೆಳೆಸಲು ಆರಂಭಿಸಿದವು. ಅವುಗಳಲ್ಲಿ ಕೆಲವು ತಳಿಗಳು ಹೀಗಿವೆ: ಮಲಪುರ್ ಲೋಕಲ್,ಮಂಜರಿ ಗೋಟಾ, ಕುಡಾಚಿ ಲೋಕಲ್, ಉಡುಪಿ ಲೋಕಲ್, ೧೧೨ ಗೋ ಹಾಗೂ ಪಬ್ಕವಿ ಲೋಕಲ್. ಭಾರತದಲ್ಲಿ ಕುಲಾಂತರಿ ಬದನೆಯನ್ನು ವ್ಯವಹಾರಿಕವಾಗಿ ಬಳಸಲು ೨೦೦೯ ರಲ್ಲಿ ಅನುಮತಿ ನೀಡಲಾಯಿತು. ಆದರೆ ನಂತರದ ಸಾರ್ವಜನಿಕರ, ವೈಜ್ಞಾನಿಕ ಸಂಸ್ಥೆಗಳ ಹಾಗೂ ಸಮಾಜ ಸೇವಾ ಗುಂಪುಗಳ ಆರೋಪ ಹಾಗು ವಿವಾದಗಳಿಂದಾಗಿ ಭಾರತದ ಪರಿಸರ ಸಚೀವ ಜಯರಾಮ್ ರಮೇಶ್ ಕುಲಾಂತರಿ ಬದನೆಯ ಬೆಳೆಯನ್ನು ಮುಂದಿನ ಸಂಶೋಧನೆ ಮತ್ತು ಅದರ ಸಮಸ್ಯೆಗಳ ಪರಿಹಾರ ದೊರೆಯುವವರೆಗೂ ತಡೆಹಿಡಿದಿದ್ದಾರೆ.

ಅಭಿವೃದ್ಧಿ[ಬದಲಾಯಿಸಿ]

ಮಹೈಕೋ ಸಂಸ್ಥೆಯು cry1Ac ವಂಶವಾಹಿ ಹಾಗೂ Monsanto ದಿಂದ ಪಡೆದ ಇತರೆ ಎರಡು ವಂಶವಾಹಿಗಳನ್ನು ಬಳಸಲು ಸನ್ನದು ಪಡೆದುಕೊಂಡಿತು. cry1Ac ವಂಶವಾಹಿಯನ್ನು cauliflower mosaic virus 35S (CaMV35S) ಮೂಲಕ ಅಭಿವೃದ್ಧಿಪಡಿಸಿ ಬದನೆಯ ಕೋಶಗಳಿಗೆ ಸೇರಿಸಲಾಯಿತು, ಇದು ಮಚ್ಚೆಗಳನ್ನು ತೋರ್ಪಡಿಸುವ ಗುಣವನ್ನು ಹೊಂದಿರುವುದರಿಂದ ಪ್ರತಿಯೊಂದು ಬದನೆಯ ಕೋಶದಲ್ಲಿ ಹೊಸ ವಂಶವಾಹಿಯ ಇರುವಿಕೆ ಹಾಗೂ ಬೆಳವಣಿಗೆಯನ್ನು ಖಚಿತಪಡಿಸಲು ಸಹಾಯವಾಗುತ್ತದೆ. ಇದಲ್ಲದೇ ಇನ್ನೂ ಎರಡು ಆಯ್ದ ವಂಶವಾಹಿಗಳನ್ನು ಬಳಸಿಕೊಳ್ಳಲಾಗಿದೆ. 'NptII' ಮತ್ತು 'aad' ಇವುಗಳಲ್ಲಿ 'NptII' ವಂಶವಾಹಿಯು ಬದಲಾದ ಹೊಸ ಬದನೆ ಸಸ್ಯಗಳು ಹಾಗೂ ಹಳೆಯ ಬದನೆ ಸಸ್ಯಗಳು ಎಂದು ಗುರುತಿಸಲು ಸಹಾಯವಾಗುತ್ತದೆ. ಮತ್ತು 'aad' ವಂಶವಾಹಿಯು ಬದನೆಯ ಬೆಳವಣಿಗೆಯ ಹಂತಗಳಲ್ಲಿ ಬಳಸಲಾದ ಬ್ಯಾಕ್ಟೀರಿಯಾದ ಬದಲಾವಣೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಪರಿಪೂರ್ಣವಾದ ವಂಶವಾಹಿಗಳನ್ನು Agrobacterium ತಂತ್ರಜ್ಞಾನದ ಮೂಲಕ ಎಳೆಯ ಬದನೆ ಬೀಜದಳಗಳಲ್ಲಿ ಅಳವಡಿಸಲಾಗುತ್ತದೆ. Agrobacterium ತಂತ್ರಜ್ಞಾನವು ವಂಶತಂತುಗಳನ್ನು ನೈಸರ್ಗಿಕವಾಗಿ ಸಸ್ಯಗದೊಳಗೆ ಸೇರಿಸುತ್ತವೆ, ಹೀಗಾಗಿಯೇ ವಿಜ್ಞಾನಿಗಳು ಅನೇಕ ಸಸ್ಯಗಳ ಮೇಲೆ ಪ್ರಯೋಗ ನಡೆಸಲು ಈ ತಂತ್ರಜ್ಞಾನವನ್ನು ಬಳಸಿಕೊಂಡರು. ಹೊಸ ಸಸ್ಯಗಳಲ್ಲಿ ವಂಶವಾಹಿಗಳ ಇರುವಿಕೆಯನ್ನು ತಿಳಿಯಲು 'ಸದರ್ನ್ ಬ್ಲಾಟಿಂಗ್' ಪದ್ಧತಿಯನ್ನು ಬಳಸಿ ಪರೀಕ್ಷಿಸಲಾಯಿತು.

ಕೀಟಗಳ ವಿರುದ್ಧ ಶಕ್ತಿಶಾಲಿ[ಬದಲಾಯಿಸಿ]

Fruit and shoot borer ಎಂಬ ಲಾರ್ವಾ ಕುಲಾಂತರಿ ಬದನೆಯನ್ನು ತಿಂದಾಗ ಸಸ್ಯಕೋಶಗಳ ಜೊತೆಗೆ cry1Ac ವಂಶವಾಹಿಯೂ ಸಹ ಕಿಟಾಣುವಿನ ಹೊಟ್ಟೆ ಸೇರುತ್ತದೆ. ಕಿಟಾಣುವಿನ ಕರುಳಿನಲ್ಲಿ ಈ ಪ್ರೊಟೀನ್ ದ್ರವೀಕರಣಗೊಂಡು ಕರುಳು proteases ನಿಂದಾಗಿ ಚಟುವಟಿಕೆಯನ್ನು ಪಡೆಯುತ್ತದೆ. cry1Ac ಕಿಟಾಣುವಿನ ಕರುಳಿನ ಪೊರೆಯಲ್ಲಿರುವ ಗ್ರಾಹಿ ಪ್ರೊಟೀನ್ ಗಳ ಜೊತೆ ಸೇರಿಕೊಳ್ಳುತ್ತದೆ, ಆ ಮೂಲಕ ಪೊರೆಯಲ್ಲಿ ರಂಧ್ರಗಳನ್ನುಂಟುಮಾಡುತ್ತದೆ. ಇದರಿಂದಾಗಿ ಕಿಟಾಣುವಿನ ಜೀರ್ಣಕ್ರಿಯೆಯಲ್ಲಿ ಏರು ಪೇರು ಹಾಗೂ ನಿಶ್ಚೇಷ್ಟತೆ ಉಂಟಾಗುತ್ತದೆ. ಕೊನೆಗೆ fruit and shoot borer ಲಾರ್ವಾ ಕಿಟಾಣು ಸತ್ತುಹೋಗುತ್ತದೆ.

ಕುಲಾಂತರಿ ಬದನೆಯ ವ್ಯವಹಾರಿಕ ಬಳಕೆ[ಬದಲಾಯಿಸಿ]

ಕುಲಾಂತರಿ ಬದನೆಯ ಸೃಷ್ಠಿಗಾಗಿ ಮೊದಲ ಒಪ್ಪಂದವು ಭಾರತದ ಪ್ರಸಿದ್ಧ ಬೀಜ ಉತ್ಪಾದನಾ ಸಂಸ್ಥೆಗಳಾದ, ಮಹಾರಾಷ್ಟ್ರದ ಮಿಶ್ರತಳಿ ಬೀಜ ಉತ್ಪಾದನಾ ಸಂಸ್ಥೆ (ಮಹೈಕೋ), ಕೃಷಿ ವಿಶ್ವವಿದ್ಯಾಲಯಗಳಾದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಯು.ಎಸ್.ಎ) ಧಾರವಾಡ ಹಾಗೂ ತಮಿಳುನಾಡು ಮತ್ತು ಕೃಷಿ ವಿಶ್ವವಿದ್ಯಾಲಯ ಕೊಯಂಬತ್ತೂರ್ ಗಳ ನಡುವೆ ೨೦೦೫ ನಡೆಯಿತು. ಮಹೈಕೋದಿಂದ ಮಂಡಿಸಲಾದ ಜೈವಿಕ ಸುರಕ್ಷತೆಯ ದತ್ತಾಂಶಗಳನ್ನು ಪರೀಕ್ಷಿಸಲು ೨೦೦೬ ರಲ್ಲಿ ತಜ್ಞರ ಮಂಡಳಿಯೊಂದನ್ನು ಸೃಷ್ಟಿಸಲಾಯಿತು. ಈ ಮಂಡಳಿಯು ಪ್ರಸ್ತುತ ದತ್ತಾಂಶದ ಪ್ರಕಾರ ಕುಲಾಂತರಿ ಬದನೆಯು ಸುರಕ್ಷಿತವಾಗಿದ್ದು ಮಾಮೂಲಿ ಬದನೆಯಂತೆಯೆ ಇದೆ ಎಂದು ಹೇಳಿಕೆ ನೀಡಿತ್ತು. ಜೊತೆಗೆ ಈ ಹೇಳಿಕೆಗಳನ್ನು ಮರು ಧೃಡೀಕರಿಸಲು ಇನ್ನೂ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯಬೇಕು, ಕುಲಾಂತರಿ ಬದನೆಯ ಉಪಯುಕ್ತತೆ ಹಾಗೂ ಕೀಟನಿರ್ವಹಣೆ ಮತ್ತು ಕೀಟನಾಶಕಗಳ ಮಿತಬಳಕೆಯಲ್ಲಿ ಹೊಸ ಸೃಷ್ಠಿಯ ಪಾತ್ರದ ಬಗೆಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕೆಂದು ಶಿಫಾರಸು ಮಾಡಿದೆ. ಈ ಮಂಡಳಿಯು ಹೆಚ್ಚಿನ ಸಂಖ್ಯೆಯ ಪ್ರಯೋಗಗಳನ್ನು ಮಾಡಬೇಕೆಂದು ಶಿಫಾರಸು ಮಾಡಿತ್ತು. ೨೦೦೯ ರಲ್ಲಿ ಎರಡನೇ ತಜ್ಞರ ತಂಡವು ಈ ಪ್ರಯೋಗಗಳ ದತ್ತಾಂಶಗಳನ್ನು ಪರೀಕ್ಷಿಸಿತು. ಅನೇಕ ಸುರಕ್ಷತಾ ಪರೀಕ್ಷೆಗಳನ್ನು ನಡೆಸಲಾಗಿದ್ದು ಫಲಿತಾಂಶವಾಗಿ "ಕುಲಾಂತರಿ ಬದನೆಯು ನಿರೀಕ್ಷಿತ ತೊಂದರೆಗಳಿಂದ ದೂರವಿದ್ದು ಅನೇಕ ಉಪಯುಕ್ತತೆಗಳನ್ನು ಒಳಗೊಂಡಿದೆ, ಮಹೈಕೋದ EE-I ಯೋಜನೆಯು ಸಮಾಜ ಸ್ನೇಹಿಯಾಗಿದೆ" ಎಂದು ಈ ತಂಡವು ಹೇಳಿಕೆ ನೀಡಿತು. ಹಾಗೂ ಕುಲಾಂತರಿ ಬದನೆಯನ್ನು ವ್ಯಾವಹಾರಿಕವಾಗಿ ಬಳಸಲು ಅನುಮತಿ ನೀಡುವಂತೆ ಸಂಸ್ಥೆಗೆ ಶಿಫಾರಸು ನೀಡಿತು.

೨೦೦೯ ಅಕ್ಟೋಬರ್ ೧೪ ರಂದು GEAC ಸಂಸ್ಥೆ ಕುಲಾಂತರಿ ಬದನೆಯ ವ್ಯಾವಹಾರಿಕ ಬಳಕೆಗೆ ಸಮ್ಮತಿ ನೀಡಿತು. ಆದರೆ ನಂತರವೇ ಅನೇಕ ವಿಜ್ಞಾನಿಗಳು, ಕೃಷಿಕರು ಅಂದಿನ ಪರಿಸರ ಸಚೀವ ಜಯರಾಮ್ ರಮೇಶ್ ಅವರಿಗೆ ಕುಲಾಂತರಿ ಬದನೆಯನ್ನು ವಾಣಿಜ್ಯ ಬಳಕೆಗೆ ತರಲು ಇನ್ನೂ ಸಾಕಷ್ಟು ಸಮಯವಿದ್ದು ಇಂತಹ ವಿಷಗಳಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳದೇ ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ನಂತರವೇ ಒಪ್ಪಿಗೆ ನೀಡಬೇಕೆಂದು ಮನವಿ ಮಾಡಿದರು. ೨೦೧೦ ಫೆಬ್ರುವರಿ ೧೦ ರಂದು ತಾತ್ಕಾಲಿಕವಾಗಿ ಕುಲಾಂತರಿ ಬದನೆಯನ್ನು ತಡೆಹಿಡಿಯಲಾಗಿದೆ ಎಂದರು, ಹಾಗೂ ಎಲ್ಲಾ ವೈಜ್ಞಾನಿಕ, ಸಾಮಾಜಿಕ ತೊಡಕುಗಳು ಪರಿಹಾರವಾಗುವವರೆಗೂ ಮಾತ್ರವೇ ಈ ತಡೆ ಜಾರಿಯಲ್ಲಿರುತ್ತದೆ ಎಂದರು. ಮಿಶ್ರತಳಿ ಬದನೆಯ ಬೀಜಗಳಿರುವ ಸಂಸ್ಥೆಗಳು ಸರಕಾರಿ ಹಾಗೂ National Bureau of Plant Genetic Resources (NBPGR) ಯಲ್ಲಿ ಹೆಸರು ನೊಂದಾಯಿಸಬೇಕು ಎಂದು ಹೇಳಿದರು. ರಾಷ್ಟ್ರೀಯ ಜೀವ ವೈವಿಧ್ಯ ಸಂಸ್ಥೆಗೆ ಪರಿಸರ ಸಂರಕ್ಷಣಾ ಸಂಘ ಬೆಂಗಳೂರು ದಿಂದ ಅನೇಕ ಕಡೆಗಳಲ್ಲಿ ಸರ್ಕಾರಿ ನಿಯಮ ಉಲ್ಲಂಘನೆಯಾಗುತ್ತಿರುವ ವಿಷಯ ತಿಳಿದಿದೆ. ಭಾರತದಲ್ಲಿ ಮಹೈಕೋ ಸಂಸ್ಥೆ ಈ ರೀತಿಯ ನಿಯಮ ಉಲ್ಲಂಗನೆಯಲ್ಲಿ ಮೊದಲನೆಯದಾಗಿದೆ.

ವಿವಾದ[ಬದಲಾಯಿಸಿ]

ಮಾನವ ಸಂರಕ್ಷಣೆ, ಪರಿಸರ ಪರಿಣಾಮ, ಆಹಾರ ಸರಬರಾಜು ಹಾಗೂ ಅನೇಕ ಕಾರಣಗಳಿಗಾಗಿ ಜೈವಿಕ ತಂತ್ರಜ್ಞಾನದ ಬಳಕೆಯಿಂದ ತಯಾರಿಸಲಾದ ಆಹಾರ ಪದಾರ್ಥಗಳ ಬಗ್ಗೆ ಅನೇಕ ಬಾರಿ ವಿವಾದಗಳೂ ನಡೆದಿವೆ. ಬದನೆಯು ಭಾರತದ ಪ್ರಮುಖ ಆಹಾರ ಬೆಳೆ ಆದ್ದರಿಂದ ಕುಲಾಂತರಿ ಬದನೆಯ ವ್ಯಾವಹಾರಿಕ ಬಳಕೆಗೆ ಬೇಗನೆ ಅನುಮತಿ ದೊರೆಯಿತು. ಬದನೆ ಭಾರತದ ಪ್ರಮುಖ ಬೆಳೆಯಾಗಿದ್ದರೂ fruit and shoot borer ಕೀಟದ ಬಾಧೆಯಿಂದ ಇತರೆ ಹಣ್ಣು ತರಕಾರಿಗಳಿಗಿಂತ ಬದನೆಯ ಬೆಳೆ ಕಡಿಮಡಯಾಗಿತ್ತು. ತಂತ್ರಜ್ಞಾನದ ಬೆಳವಣಿಗೆಯ ಮೂಲಕ ಕುಲಾಂತರಿ ಬದನೆಯು ಭಾರತದ ಆರ್ಥಿಕ ಸ್ಥಿತಿ ಹಾಗೂ ಕೃಷಿಕರ ದೃಷ್ಠಿಯಿಂದ ಧನಾತ್ಮಕ ಪರಿಣಾಮಗಳನ್ನು ಬೀರಲಿದೆ ಎಂದು ನಂಬಿದ್ದರು. ಮಹೈಕೋ ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನಡೆಸಿದ ಪ್ರಯೋಗಗಳಲ್ಲಿ ಕುಲಾಂತರಿ ಬದನೆಯು ಶೇಕಡಾ ೪೨ ರಷ್ಟು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ಎರಡರಷ್ಟು ಇಳುವರಿಯನ್ನು ನೀಡುತ್ತದೆ. ಫ್ರೆಂಚ್ ವಿಜ್ಞಾನಿಯಾದ Gilles-Eric Seralini ಅವರು ಕುಲಾಂತರಿ ಹಾಗೂ ಇತರೆ ಬದನೆಗಳ ನಡುವಿನ ವ್ಯತ್ಯಾಸ ಗುರುತಿಸಲು ಅನೇಕ ಪ್ರಯೋಗಗಳನ್ನು ನಡೆಸಿದರು. Gilles-Eric Seralini ಹಾಗೂ ಇತರೆ ವಿಜ್ಞಾನಿಗಳ ಹೇಳೀಕೆಗಳಿಗೆ ಹೆಚ್ಚಿನ ಜನರು ಹಾಗೂ EC-II ಸ್ಪಂದಿಸಿದವು. ಈ ಹೇಳಿಕೆಗಳ ಪ್ರಕಾರ ಕುಲಾಂತರಿ ಬದನೆಯನ್ನು ಸೇವಿಸಿದ ಇಲಿಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ.

Genetic Engineering Appraisal Committee (GEAC) ಸಂಸ್ಥೆಯಲ್ಲಿನ ಕುಲಾಂತರಿ ಆಹಾರ ತಯಾರಿಕೆಯಲ್ಲಿ ತೊಡಗಿರುವ ವಿಜ್ಞಾನಿಗಳಲ್ಲಿ ಮುಂಬರುವ ವಿವಾದಗಳ ಕುರಿತು ಚರ್ಚೆ ಆರಂಭವಾಯಿತು. ಅದೇ ಸಮಯದಲ್ಲಿ ಕೆಲವು ವಿಜ್ಞಾನಿಗಳೂ ಕುಲಾಂತರಿ ಬದನೆಯ ಮೇಲಿನ ತಡೆಗೆ ಯಾವುದೇ ವೈಜ್ಞಾನಿಕ ಸಾಕ್ಷಿಗಳಿಲ್ಲ ಹಾಗೂ ಭಾರತೀಯ ಜೈವಿಕ ತಂತ್ರಜ್ಞಾನದ ಹಿನ್ನಡೆಗೆ ಈ ರೀತಿಯ ನಿರ್ಧಾರಗಳೇ ಕಾರಣ ಎಂದರು. ಅನೇಕರು ಅಭಿಪ್ರಾಯಪಡುವಂತೆ ಇದು ಕೇವಲ ಜೈವಿಕ ತಂತ್ರಜ್ಞಾನದ ಕಾರಣವಲ್ಲದೇ ಭಾರತೀಯ ಆಹಾರ ಸಂರಕ್ಷಣಾ ಮಂಡಳಿಯು ಈ ಬದನೆಯ ವ್ಯಾವಹಾರಿಕ ಬಳಕೆಗೆ ತಡೆ ಉಂಟುಮಾಡಿದೆ. ಭಾರತೀಯ ಜೀವವೈವಿಧ್ಯ ಸಂಸ್ಥೆಯು ಕುಲಾಂತರಿ ಬದನೆಯ ತಯಾರಿಕೆಯಲ್ಲಿ ತೊಡಗಿದ ವಿಜ್ಞಾನಿಗಳು ಅನುಮತಿಯಿಲ್ಲದೇ ಸ್ಥಳಿಯ ತಳಿಗಳು ಹಾಗೂ ಅಂತರಾಷ್ಟ್ರೀಯ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ ಹಾಗೂ ಜೀವವೈವಿಧ್ಯ ಕಾಯಿದೆ ೨೦೦೨ ನ್ನು ಮೀರಿದ್ದಾರೆ ಎಂದು ಆರೋಪಿಸಿದೆ. ಜೊತೆಗೆ ಪರಿಪೂರ್ಣವಾದ ಪ್ರಯೋಗಗಳಿಲ್ಲದೇ ಕುಲಾಂತರಿ ಬದನೆಗೆ ಅನುಮತಿ ಹೇಗೆ ನೀಡಿತು ಎಂದು ಸಹ ಅಧ್ಯಯನ ನಡೆಸುತ್ತಿದೆ. ಮಹಾರಾಷ್ಟ್ರ ಸರ್ಕಾರವು ಮಹೈಕೋ ಸಂಸ್ಥೆಯ ಕುಲಾಂತರಿ ಹತ್ತಿಯ ಮಾರಾಟದ ಸನ್ನದನ್ನು ನಿಷೇಧಿಸಿದ ನಂತರವೇ ಈ ವರದಿಗಳು ಬೆಳಕಿಗೆ ಬಂದವು.